KN/Prabhupada 0005 - ಶ್ರೀಲ ಪ್ರಭುಪಾದರ ಜೀವನ 3 ನಿಮಿಷಗಳಲ್ಲಿ

The printable version is no longer supported and may have rendering errors. Please update your browser bookmarks and please use the default browser print function instead.


Interview -- September 24, 1968, Seattle

ಸಂದರ್ಶಕ: ನೀವು ನಿಮ್ಮ ಹಿನ್ನೆಲೆ ಬಗ್ಗೆ ಸ್ವಲ್ಪ ತಿಳಿಸುತ್ತಿರಾ? ಏನೆಂದರೆ, ನೀವು ಓದಿದ್ದು ಎಲ್ಲಿ, ಹೇಗೆ ನೀವು ಕೃಷ್ಣನ ಶಿಷ್ಯರಾದಿರಿ.

ಪ್ರಭುಪಾದ: ನಾನು ಹುಟ್ಟಿದ್ದು ಮತ್ತು ಓದಿದ್ದು ಕಲ್ಕತ್ತದಲ್ಲಿ. ಕಲ್ಕತ್ತ ನನ್ನ ಮೂಲ ಸ್ಥಾನ. ನಾನು ಹುಟ್ಟಿದ್ದು ೧೮೯೬ರಲ್ಲಿ, ಮತ್ತು ನಾನು ನಮ್ಮ ತಂದೆಯ ಮುದ್ದಿನ ಮಗ, ಆದ್ದರಿಂದ ನನ್ನ ವಿದ್ಯಾಭ್ಯಸ ಸ್ವಲ್ಪ ತಡವಾಗಿ ಶೂರುವಾಯಿತು ಮತ್ತು ಇನ್ನೂ, ನಾನು ಎಂಟು ವರ್ಷಗಳ ಹೈಯರ್ ಸೆಕೆಂಡರಿ, ಪ್ರೌಢಶಾಲಾ ಶಿಕ್ಷಣವನ್ನು ಪಡೆದೆ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ವರ್ಷಗಳಲ್ಲಿ, ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ, ಎಂಟು ವರ್ಷಗಳ, ಕಾಲೇಜಿನಲ್ಲಿ, ನಾಲ್ಕು ವರ್ಷಗಳ. ನಂತರ ನಾನು ಗಾಂಧಿ ಚಳುವಳಿ, ರಾಷ್ಟ್ರೀಯ ಚಳುವಳಿಗೆ ಸೇರಿದೆ. ಆದರೆ ಉತ್ತಮ ಆಕಸ್ಮಿಕವಾಗಿ ನಾನು ೧೯೨೨ರಲ್ಲಿ ನನ್ನ ಗುರು ಮಹಾರಾಜ, ನನ್ನ ಆಧ್ಯಾತ್ಮಿಕ ಗುರುಗಳನ್ನು ಭೇಟಿಮಾಡಿದೆ. ಮತ್ತು ನಂತರ ನಾನು ಈ ಸಾಲಿನಲ್ಲಿ ಆಕರ್ಷಿತನಾದೆ, ಮತ್ತು ಕ್ರಮೇಣವಾಗಿ ನನ್ನ ಗೃಹಸ್ತ ಜೀವನವನ್ನು ತ್ಯಜಿಸಿದೆ ನಾನು ಇನ್ನೂ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ, ೧೯೧೮ರಲ್ಲಿ ನನ್ನ ಮದುವೆಯಾಯಿತು. ಇದ್ದರಿಂದ ನನಗೆ ಮಕ್ಕಳು ಆದವು ನಾನು ವ್ಯಾಪಾರ ಮಾಡುತ್ತಿದೆ. ನಂತರ ನಾನು ೧೯೫೪ರಲ್ಲಿ ನನ್ನ ಗೃಹಸ್ತ ಜೀವನದಿಂದ ನಿವೃತ್ತಿಯಾದೆ. ನಾಲ್ಕು ವರ್ಷಗಳ ಕಾಲ ನಾನು ಯಾವುದೇ ಕುಟುಂಬ ಇಲ್ಲದೆ, ಒಂಟಿಯಾಗಿದ್ದೆ. ಆಮೇಲೆ ನಾನು ೧೯೫೯ ರಲ್ಲಿ ಕ್ರಮವಾಗಿ ಸನ್ಯಾಸಿ ಜೀವನ ಅಳವಡಿಸಿಕೊಂಡೆ. ನಂತರ ಪುಸ್ತಕಗಳು ಬರೆಯಲು ನಾನು, ನನ್ನನೆ ಮೀಸಲಿಟ್ಟೆ ನನ್ನ ಮೊದಲ ಪ್ರಕಟಣೆ ೧೯೬೨ ರಲ್ಲಿ ಹೊರಬಂತು, ಮತ್ತು ಮೂರು ಪುಸ್ತಕಗಳಾದ ನಂತರ, ನಂತರ ನಾನು ೧೯೬೫ ರಲ್ಲಿ ನಿಮ್ಮ ದೇಶಕ್ಕೆ ಪ್ರಯಾಣ ಪ್ರಾರಂಭಿಸಿದೆ ಮತ್ತು ನಾನು ಸೆಪ್ಟೆಂಬರ್, ೧೯೬೫ ರಲ್ಲಿ ಇಲ್ಲಿ ತಲುಪಿದೆ. ಅಂದಿನಿಂದ, ನಾನು ಯುರೋಪಿಯನ್ ದೇಶಗಳಲ್ಲಿ ಅಮೇರಿಕಾ, ಕೆನಡಾದಲ್ಲಿ, ಈ ಕೃಷ್ಣ ಪ್ರಜ್ಞೆಯನ್ನು ಬೋಧಿಸಲು ಪ್ರಯತ್ನಿಸುತ್ತಿದ್ದೇನೆ. ಮತ್ತು ಕ್ರಮೇಣವಾಗಿ ಕೇಂದ್ರಗಳು ಅಭಿವೃದ್ಧಿಯಾಗುತ್ತಿವೆ. ಶಿಷ್ಯರು ಸಹ ಹೆಚ್ಚಾಗುತ್ತಿದಾರೆ. ನೋಡೋಣ ಏನು ಮಾಡಲಾಗುತ್ತದೆ ಎಂಬುದನ್ನು.

ಸಂದರ್ಶಕ: ಹೇಗೆ ನೀವು ಶಿಷ್ಯರಾದಿರಿ ? ನೀವು ಏನಾಗಿದ್ದಿರಿ, ಅಥವ ನೀವು ಶಿಷ್ಯರಾಗುವ ಮೊದಲು ಏನು ಅನುಸರಿಸುತ್ತಿದ್ದಿರಿ?

ಪ್ರಭುಪಾದ: ನಾನು ಹೇಳಿದ ಅದೇ ತತ್ವವನ್ನು, ನಂಬಿಕೆ ಒಬ್ಬ ನನ್ನ ಸೇಹಿತ, ನನ್ನನು ಬಲವಂತದಿಂದ ನನ್ನ ಆಧ್ಯಾತ್ಮಿಕ ಗುರುಗಳ ಬಳಿಗೆ ಕರೆಕೊಂಡು ಹೋದರು ಮತ್ತು ಯಾವಾಗ ನಾನು ನನ್ನ ಆಧ್ಯಾತ್ಮಿಕ ಗುರುಗಳ ಜೊತೆ ಮಾತನಾಡಿದೆ, ನಾನು ಪ್ರೇರಿತನಾದೆ. ಅಲ್ಲಿಂದೀಚೆಗೆ ಮೊಳಕೆ ಆರಂಭವಾಯಿತು.