KN/Prabhupada 0010 - ಕೃಷ್ಣನನ್ನು ಅನುಕರಿಸಬೇಡಿ

The printable version is no longer supported and may have rendering errors. Please update your browser bookmarks and please use the default browser print function instead.


Lecture on SB 7.9.9 -- Mayapur, February 16, 1976

ಕೃಷ್ಣ...... ಈ ಹದಿನಾರು ಸಾವಿರ ಪತ್ನಿಯರು, ಹೇಗೆ ಅವರ ಪತ್ನಿಯರಾದರು? ನಿಮ್ಮಗೆ ಈ ಕಥೆ ಗೊತ್ತ, ಅಷ್ಟೊಂದು ಸುಂದರಿಯರು,ಹದಿನಾರು ಸಾವಿರ ಸುಂದರಿಯರು, ನಾನು ಹೇಳುವ ಅರ್ಥ, ಒಬ್ಬ ಅಸುರ ರಾಜನ ಪುತ್ರಿಯರನ್ನು ಅಪಹರಿಸಿದ. ಆ ಅಸುರನ ಹೆಸರೇನು? ಭೌಮಾಸುರ, ಇಲ್ಲ? ಹೌದು ಆಗ ಅವರು ಕೃಷ್ಣನ ಹೀಗೆ ಪ್ರಾರ್ಥಿಸಿದರು "ನಾವು ಬಹಳ ನರಳುತ್ತಿದ್ದೆವೆ, ಈ ಅಯೋಗ್ಯನಿಂದ ಅಪಹರಿಸಲ್ಪಟ್ಟು. ದಯವಿಟ್ಟು ನಮ್ಮನು ಕಾಪಾಡು." ಎಂದು ಆಗ ಅವರನ್ನು ಕಾಪಾಡಲು ಕೃಷ್ಣನು ಬಂದ ಮತ್ತು ಆ ಭೌಮಾಸುರನ ಕೊಂದು ಮತ್ತು ಎಲ್ಲ ಹುಡುಗಿಯರನ್ನು ಸ್ವತಂತ್ರ ಮಾಡಿದ. ಆದರೂ ಅವರು ಸ್ವತಂತ್ರದ ನಂತರ ಅಲ್ಲಿಯೆ ನಿಂತ್ತಿದ್ದರು. ಆಗ ಕಷ್ಣನು ಅವರನ್ನು ಕೇಳಿದ, "ಈಗ ನೀವು ನಿಮ್ಮ ತಂದೆಯ ಬಳಿ ಮನೆಗೆ ಹೋಗ ಬಹುದು." ಅವರು ಹೇಳಿದರು "ನಮ್ಮನು ಅಪಹರಿಸಲಾಗಿತ್ತು, ಮತ್ತು ನಾವು ಮದುವೆಯಾಗಲು ಸಾಧ್ಯವಿಲ್ಲ." ಈಗಲು ಭಾರತದಲ್ಲಿ ಈ ನಿಯಮ ಇದೆ. ಒಂದು ಹೆಣ್ಣು, ಯುವತಿ, ಮನೆಯಿಂದ ಒಂದು ಅಥವ ಎರಡು ದಿನಗಳು ಹೊರಹೋದರೆ, ಯಾರು ಅವಳನ್ನು ಮದುವೆಯಾಗುವುದಿಲ್ಲ ಯಾರು ಅವಳನ್ನು ಮದುವೆಯಾಗುವುದ್ದಿಲ್ಲ. ಅವಳು ಹಾಳಾಗಿದ್ದಾಳೆ ಎಂದು ಪರಿಗಣಿಸುತ್ತರೆ. ಇದು ಇನ್ನು ಭಾರತದ ಪದ್ಧತಿ. ಅದ್ದರಿಂದ ಅವರನ್ನು ಅನೇಕ ದಿನಗಳು ಅಥವ ಹಲವು ವರುಷಗಳು ಅಪಹರಿಸಲಾಗಿತ್ತು, ಆದ್ದರಿಂದ ಅವರು ಕಷ್ಣನನ್ನು ಮನವಿ ಮಾಡಿಕೊಂಡರು "ನಮ್ಮ ತಂದೆಯು ನಮ್ಮನು ಸ್ವೀಕರಿಸುವುದ್ದಿಲ್ಲ, ಅಥವ ನಮ್ಮನು ಯಾರು ವಿವಾಹ ಮಾಡಿಕೊಳ್ಳುವುದಿಲ್ಲ." ನಂತರ ಕಷ್ಣನಿಗೆ ಅರ್ಥವಾಯಿತು "ಇವರ ಸ್ಥಾನ ಅನಿಶ್ಚಿತ. ಎಂದು ಅವರು ಬಿಡುಗಡೆ ಆದರೂ, ಅವರು ಎಲ್ಲಾದರೂ ಹೋಗಲು ಸಾಧ್ಯವಿಲ್ಲ. " ನಂತರ ಕಷ್ಣ....... ಅವನು ಬಹಳ ಕರುಣಾಶಲಿ, ಭಕ್ತ-ವತ್ಸಲ ಅವನು ವಿಚಾರಿಸಿದ, "ನಿಮ್ಮಗೆ ಏನು ಬೇಕು?" ಅದು........ ಅವರು ಹೇಳಿದರು "ನೀನು ನಮ್ಮನು ಸ್ವೀಕರಿಸು. ಇಲ್ಲದಿದ್ದರೆ ನಾವು ಉಳಿಯಲು ಬೇರೆ ಯಾವುದೇ ದಾರಿಯಿಲ್ಲ." ಕಷ್ಣ ತಕ್ಷಣವೇ: "ಹೌದು, ಬನ್ನಿ." ಇದು ಕಷ್ಣ. ಮತ್ತು ಅವರ ಹದಿನಾರು ಸಾವಿರ ಹೆಂಡತಿಯರು ಒಂದು ಶಿಬಿರದಲ್ಲಿ ಕೇಂದ್ರೀಕರಿಸಲಾಯಿತು ಎಂದು ಅಲ್ಲ. ಅವನು ಆ ತಕ್ಷಣವೇ ಹದಿನಾರು ಸಾವಿರ ಅರಮನೆಗಳನ್ನು ಕಟ್ಟಿಸಿದ. ಅವನು ಅವಳನ್ನು ಪತ್ನಿಯಂದು ಸ್ವೀಕರಿಸಿದ ಕಾರಣ, ಅವಳನ್ನು ತನ್ನ ಪತ್ನಿಯಂತೆ ನಿರ್ವಹಣೆ ಮಾಡಬೇಕು, ಅವನ ರಾಣಿಯ ತರಹ, "ಅವರಿಗೆ ಬೇರೆ ಯಾವ ದಾರಿ ಇಲ್ಲ, ಅವರು ನನ್ನ ಆಶ್ರಯಕ್ಕೆ ಬಂದಿದ್ದರೆ. ಎಂದು ಅಲ್ಲ ನಾನು ಅವರನ್ನು ಹೇಗಾದರು ಇರಿಸಿಕೊಳ್ಳಬಹುದು." ಇಲ್ಲ. ಬಹಳ ಗೌರವದಿಂದ ರಾಣಿಯಂತೆ, ಕಷ್ಣನ ರಾಣಿಯಂತೆ. ಮತ್ತೆ ಯೋಚಿಸಿದ "ಹದಿನಾರು ಸಾವಿರ ಪತ್ನಿಯರು...... ಎಂದು ನಾನು ಮಾತ್ರ ಒಬ್ಬನೆ ಇದ್ದರೆ, ಒಂದು ವ್ಯಕ್ತಿ, ಆಗ ನನ್ನ ಪತ್ನಿಯರಿಗೆ ನನನ್ನು ಸಂಪರ್ಕಿಸಲು ಸಾದ್ಯವಿಲ್ಲ. ಆಗ ಎಲ್ಲರು ಹದಿನಾರು ಸಾವಿರ ದಿನಗಳು ಕಾಯಬೇಕು ತಮ್ಮ ಪತಿಯನ್ನು ನೋಡಲು. ಇಲ್ಲ." ಆಗ ಅವನು ಅವನನ್ನೆ ಹದಿನಾರು ಸಾವಿರ ಕಷ್ಣನಾಗಿ ವಿಸ್ತರಿಸಿಕೊಂಡ. ಇದು ಕಷ್ಣ ಆ ಅಯೋಗ್ಯರು, ಕಷ್ಣನನ್ನು ಮಹಿಳೆಯರ ಬೇಟೆಗಾರ ಎಂದು ದೂರುತ್ತರೆ. ಅವನು ನಿಮ್ಮ ತರಹ ಅಲ್ಲ. ನಿಮಗೆ ಒಂದು ಹೆಂಡತಿಯನ್ನು ನಿರ್ವಹಿಸಲು ಸಾದ್ಯವಿಲ್ಲ, ಆದರೆ ಅವನು ಹದಿನಾರು ಸಾವಿರ ಪತ್ನಿಯರನ್ನು ಹದಿನಾರು ಸಾವಿರ ಅರಮನೆಗಳಲ್ಲಿ ನಿರ್ವಹಿಸಿದ ಮತ್ತು ಹದಿನಾರು ಸಾವಿರ ರೂಪ ವಿಸ್ತರಣೆಯಲ್ಲಿ. ಪ್ರತಿಯೊಬ್ಬರಿಗೂ ಸಂತಸವಾಯಿತು. ಇದು ಕೃಷ್ಣ. ಕೃಷ್ಣ ಯಾರೆಂದು ನಾವು ಅರ್ಥ ಮಾಡಿಕೊಳ್ಳ ಬೇಕು. ಕೃಷ್ಣನನ್ನು ಅನುಕರಿಸಲು ಪ್ರಯತ್ನಿಸಬೇಡಿ. ಎಲ್ಲಕಿಂತ ಮೊದಲ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.