KN/Prabhupada 0056 - ಶಾಸ್ತ್ರಗಳಲ್ಲಿ ಹನ್ನೆರಡು ಆಚಾರ್ಯರ ಉಲ್ಲೇಖವಿದೆ

The printable version is no longer supported and may have rendering errors. Please update your browser bookmarks and please use the default browser print function instead.


Lecture on SB 7.6.1 -- Madras, January 2, 1976

ಪ್ರಭುಪಾದ:

ಶ್ರೀ ಪ್ರಹ್ಲಾದ ಉವಾಚ:
ಕೌಮಾರ ಆಚರೇತ್ ಪ್ರಾಜ್ಞೋ
ಧರ್ಮಾನ್ ಭಾಗವತಾನಿಹ
ದುರ್ಲಭಂ ಮಾನುಷಂ ಜನ್ಮ
ತದ್ ಅಪಿ ಅಧ್ರುವಮ್ ಅರ್ಥದಮ್
(ಶ್ರೀ.ಭಾ 7.6.1).

ಇದು ಪ್ರಹ್ಲಾದ ಮಹಾರಾಜರು. ಕೃಷ್ಣಪ್ರಜ್ಞ ಆಚಾರ್ಯರಲ್ಲಿ ಇವರೂ ಒಬ್ಬರು. ಶಾಸ್ತ್ರಗಳಲ್ಲಿ ಹನ್ನೆರಡು ಆಚಾರ್ಯರ ಉಲ್ಲೇಖವಿದೆ:

ಸ್ವಯಂಭೂರ್ ನಾರದಃ ಶಂಭುಃ
ಕುಮಾರಃ ಕಪಿಲೊ ಮನುಃ
ಪ್ರಹ್ಲಾದೋ ಜನಕೋ ಭೀಷ್ಮೋ
ಬಲಿರ್ ವೈಯಾಸಕಿರ್ ವಯಮ್
(ಶ್ರೀ.ಭಾ 6.3.20)

ಇದು ಧರ್ಮಾಧಿಕಾರಿಗಳ ಬಗ್ಗೆ ಯಮರಾಜರು ನೀಡಿರುವ ಹೇಳಿಕೆ. ಧರ್ಮ ಎಂದರೆ ಭಾಗವತ-ಧರ್ಮ. ನಾನು ನೆನ್ನೆ ರಾತ್ರಿ ವಿವರಣೆ ಕೊಡುತ್ತಿದ್ದೇ, ಧರ್ಮ ಎಂದರೆ ಭಾಗವತ. ಧರ್ಮಮ್ ತು ಸಾಕ್ಷಾದ್ ಭಗವತ್-ಪ್ರಣೀತಮ್ (ಶ್ರೀ.ಭಾ 6.3.19). ನಮ್ಮ ಮುಖ್ಯ ನ್ಯಾಯಾಧೀಶರು ಕಾನೂನಿನ ಆಧಾರದ ಮೇಲೆ ತೀರ್ಪು ನೀಡುವ ಹಾಗೆ, ಆದ್ದರಿಂದ ಕಾನೂನನ್ನು ಯಾರು ಸಾರ್ವಜನಿಕರು ಅಥವ ವ್ಯಾಪಾರಿಗಳು ತಯಾರಿಸಲಾಗುವುದಿಲ್ಲ. ಇಲ್ಲ. ಕೇವಲ ಸರ್ಕಾರವು ಕಾನೂನನ್ನು ರಚಿಸಬಲ್ಲದು. ಯಾರೂ ತಯಾರಿಸಲಾರರು. ಆದು ಆಗದು… ಉಚ್ಚನ್ಯಾಯಾಲಯದಲ್ಲಿ ಯಾರಾದರು ವಾದಿಸಿದರೆ, “ಅಯ್ಯ, ನನಗೆ ನನ್ನ ಸ್ವಂತ ಕಾನೂನಿದೆ”, ಆಗ ಮುಖ್ಯನ್ಯಾಯಾಧೀಶರು ಅದಕ್ಕೆ ಒಪ್ಪುವುದಿಲ್ಲ. ಅಂತೇಯೇ, ಧರ್ಮವನ್ನು ನೀವು ತಯಾರಿಸಲಾಗುವುದಿಲ್ಲ. ನೀವು ಒಬ್ಬ ಬಹಳ ಗಣ್ಯ ವ್ಯಕ್ತಿಯಾದರು… ಮುಖ್ಯ ನ್ಯಾಯಾಧೀಶರು ಕೂಡ ಕಾನೂನನ್ನು ರಚಿಸಲಾಗುವುದ್ದಿಲ್ಲ. ರಾಜ್ಯವು ಕಾನೂನನ್ನು ರಚಿಸುತ್ತದೆ. ಅಂತೇಯೇ, ಧರ್ಮ ಎಂದರೆ ಭಾಗವತ-ಧರ್ಮ, ಹಾಗು ಬೇರೆ ಹೆಸರಿಗೆ ಮಾತ್ರ ಧರ್ಮವೆನ್ನಿಸಿಕೊಳ್ಳುವ ಧರ್ಮಗಳು, ಧರ್ಮಗಳಲ್ಲ. ಅವುಗಳನ್ನು ಸ್ವೀಕರಿಸಲಾಗುವುದಿಲ್ಲ. ಹಾಗೆಯೇ, ನಿಮ್ಮ ಮನೆಯಲ್ಲಿ ತಯಾರಿಸಿದ ಕಾನೂನನ್ನು ಸ್ವೀಕರಿಸಲಾಗುವುದಿಲ್ಲ. ಅದ್ದರಿಂದ ಧರ್ಮಮ್ ತು ಸಾಕ್ಷಾದ್ ಭಗವತ್-ಪ್ರಣೀತಮ್ (ಶ್ರೀ. ಭಾ 6.3.19).

ಭಗವತ್-ಪ್ರಣೀತಮ್ ಧರ್ಮ ಎಂದರೇನು? ಇದನ್ನು ಭಗವದ್-ಗೀತೆಯಲ್ಲಿ ಹೇಳಲಾಗಿದೆ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಅವನು ಬಂದ, ಕೃಷ್ಣನು ಬಂದ. ಧರ್ಮ-ಸಂಸ್ಥಾಪನಾರ್ತಾಯವೇ ಅವನ ಉದ್ದಿಷ್ಟಕಾರ್ಯ, ಧಾರ್ಮಿಕ ನೀತಿಗಳನ್ನು ಸ್ಥಾಪಿಸಲು, ಅಥವ ಪುನಃ ಸ್ಥಾಪಿಸಲು. ಧರ್ಮಸ್ಯ ಗ್ಲಾನಿರ್ ಭವತಿ ಭಾರತ. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ ಭಾರತ (ಭ.ಗೀ 4.7). ಕೆಲವೊಮ್ಮೆ ಗ್ಲಾನಿ ಇರುತ್ತದೆ, ಅಂದರೆ ಧರ್ಮನೀತಿಗಳ ನಿರ್ವಹಣೆಯ ವಿಷಯದಲ್ಲಿ ಅಸಂಮಜಸತೆ ಕಾಣಿಸಿಕೊಳ್ಳುತ್ತದೆ. ಆಗ ಕೃಷ್ಣನು ಆಗಮಿಸುತ್ತಾನೆ. ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್ (ಭ.ಗೀ 4.8). ಯುಗೇ ಯುಗೇ ಸಂಭವಾಮಿ. ಆದ್ದರಿಂದ ಈ ಧರ್ಮವನ್ನು… ಕೃಷ್ಣನು ಈ ಹೆಸರಿಗೆಮಾತ್ರ ಧರ್ಮಗಳೆನಿಸಿಕೊಳ್ಳುವ ಧರ್ಮಗಳ್ಳನ್ನು ಮರುಸಂಘಟಿಸಲು ಬರಲಿಲ್ಲ – ಹಿಂದು ಧರ್ಮ, ಮುಸ್ಲಿಮ್ ಧರ್ಮ, ಕ್ರೈಸ್ತ ಧರ್ಮ, ಬುದ್ಧನ ಧರ್ಮ – ಇಲ್ಲ. ಶ್ರೀಮದ್ ಭಾಗವತದ ಪ್ರಕಾರ, ಧರ್ಮಃ ಪ್ರೊಜ್ಜ್ಹಿತ-ಕೈತವೊ (ಶ್ರೀ. ಭಾ 1.1.2). ಯಾವ ಧರ್ಮವು ಒಂದು ರೀತಿಯ ವಂಚನೆಯೋ, ಆ ತರಹದ ಧರ್ಮವು ಪ್ರೊಜ್ಜ್ಹಿತ. ಪ್ರಕೃಷ್ಠ-ರೂಪೆಣ ಉಜ್ಜ್ಹಿತ, ಅಂದರೆ ತೆಗೆದು ಬಿಸಾಡಬೇಕು, ಒದ್ದು ಹೊರಗಾಕಬೇಕು. ನಿಜವಾದ ಧರ್ಮವೆಂದರೆ ಭಾಗವತ ಧರ್ಮ, ವಾಸ್ತವಿಕ ಧರ್ಮ. ಆದ್ದರಿಂದ ಪ್ರಹ್ಲಾದ ಮಹಾರಾಜ ಹೇಳಿದರು, ಕೌಮಾರ ಆಚರೇತ್ ಪ್ರಾಜ್ಞೋ ಧರ್ಮಾನ್ ಭಾಗವಾತಾನಿಹ (ಶ್ರೀ. ಭಾ 7.6.1). ವಾಸ್ತವಿಕವಾಗಿ ಧರ್ಮವೆಂದರೆ ಭಗವಂತ, ಭಗವಂತನ ಜೊತೆ ನಮ್ಮ ಸಂಬಂಧ, ಹಾಗು ಮೂಲ ಜೀವನೋದ್ದೇಶವನ್ನು ಸಾಧಿಸಲು ಈ ಸಂಬಂಧದ ಪ್ರಕಾರ ನಡೆದುಕೊಳ್ಳುವುದು ಅದುವೇ ಧರ್ಮ.