KN/Prabhupada 0066 - ನಾವು ಕೃಷ್ಣನ ಇಚ್ಚೆಗಳಿಗೆ ಸಮ್ಮತಿಸಬೇಕು

The printable version is no longer supported and may have rendering errors. Please update your browser bookmarks and please use the default browser print function instead.


Lecture on BG 16.4 -- Hawaii, January 30, 1975

ಅದು ನಮ್ಮ ಆಯ್ಕೆ. ನಾವು ಭಕ್ತರಾಗಬೇಕೋ ಅಥವ ನಾವು ರಾಕ್ಷಸರಾಗಿ ಉಳಿಯಬೇಕೋ. ಅದು ನನ್ನ ಆಯ್ಕೆ. ಕೃಷ್ಣನು ಹೇಳುತ್ತಾನೆ, “ನೀನು ಈ ರಾಕ್ಷಸ ಕೆಲಸಗಳನ್ನು ಬಿಟ್ಟು ನನ್ನಲ್ಲಿ ಶರಣಾಗತನಾಗು.” ಅದುವೇ ಕೃಷ್ಣನ ಇಚ್ಚೆ. ಆದರೆ ನೀನು ಕೃಷ್ಣನ ಇಚ್ಚೆಗೆ ಸಮ್ಮತಿಸದಿದ್ದರೆ, ನಿನ್ನ ಸ್ವಂತ ಬಯಕೆಗಳನ್ನು ಅನುಭವಿಸಬೇಕೆಂದು ಕೊಂಡರೆ ಆಗಲೂ ಕೂಡ ಕೃಷ್ಣ ಸಂತುಷ್ಟನಾಗುತ್ತಾನೆ, ಹಾಗು ಎಲ್ಲ ವಸತಿಗಳನ್ನು ಒದಗಿಸುತ್ತಾನೆ. ಆದರೆ ಅದು ಒಳ್ಳೆಯದಲ್ಲ. ನಾವು ಕೃಷ್ಣನ ಇಚ್ಚೆಗಳಿಗೆ ಸಮ್ಮತಿಸಬೇಕು. ನಾವು ನಮ್ಮ ಬಯಕೆಗಳನ್ನು, ರಾಕ್ಷಸ ಬಯಕೆಗಳನ್ನು, ಬೆಳೆಯಲು ಬಿಡಬಾರದು. ಅದನ್ನೇ ತಪಸ್ಯ ಎನ್ನುತ್ತಾರೆ. ನಮ್ಮ ಬಯಕೆಗಳನ್ನು ಬಿಟ್ಟು ಬಿಡಬೇಕು. ಅದನ್ನೇ ತ್ಯಾಗ ಎನ್ನುತ್ತಾರೆ. ನಾವು ಕೇವಲ ಕೃಷ್ಣನ ಇಚ್ಚೆಗಳಿಗೆ ಸಮ್ಮತಿಸಬೇಕು. ಅದವೇ ಭಗವದ್ಗೀತೆಯ ಆದೇಶವಾಗಿದೆ. ಅರ್ಜುನನಿಗೆ ಯುದ್ಧಮಾಡುವ ಇಚ್ಚೆಯಿರಲಿಲ್ಲ. ಆದೆರ ಅದಕ್ಕೆ ವಿರುದ್ದವಾಗಿ ಕೃಷ್ಣನಿಗೆ ಯುದ್ದಮಾಡಲು ಇಚ್ಚೆಯಿತ್ತು. ಕೊನೆಗೆ ಅರ್ಜುನನು ಕೃಷ್ಣನ ಇಚ್ಚೆಗೆ ಒಪ್ಪಿಕೊಂಡನು, “ಸರಿ, ಕರಿಷ್ಯೇ ವಚನಂ ತವ (ಭ.ಗೀ 18.73) – ನಾನು ನಿನ್ನ ಇಚ್ಚೆಯೆಂತೆಯೆ ನಡೆದುಕೊಳ್ಳುವೆ.” ಅದುವೇ ಭಕ್ತಿ.

ಇದುವೇ ಭಕ್ತಿಗು ಮತ್ತು ಕರ್ಮಕ್ಕು ಇರುವ ವ್ಯತ್ಯಾಸ. ಕರ್ಮವೆಂದರೆ ನನ್ನ ಇಚ್ಛಾಪೂರ್ತಿಯು; ಭಕ್ತಿಯೆಂದರೆ ಕೃಷ್ಣನ ಇಚ್ಛಾಪೂರ್ತಿಯು. ಅದು ವ್ಯತ್ಯಾಸ. ಈಗ ನೀನು ಆಯ್ಕೆಮಾಡು, ನೀನು ನಿನ್ನ ಇಚ್ಛಾಪೂರ್ತಿ ಮಾಡಿಕೊಳ್ಳುವೆಯೋ ಅಥವ ಕೃಷ್ಣನ ಇಚ್ಛಾಪೂರ್ತಿ ಮಾಡುವೆಯೋ. ಕೃಷ್ಣನ ಇಚ್ಛಾಪೂರ್ತಿಯೇ ನಿನ್ನ ನಿರ್ಣಯವಾದರೆ ಆಗ ನಿನ್ನ ಜೀವನ ಸಫಲವಾಯಿತು. ಅದು ನಮ್ಮ ಕೃಷ್ಣ ಪ್ರಜ್ಞಾಯುತ ಜೀವನ. ಕೃಷ್ಣನು ಇಚ್ಚಿಸಿದ್ದಾನೆ; ನಾನು ಮಾಡಬೇಕು. ನನಗೋಸ್ಕರ ಏನೂ ಮಾಡಿಕೊಳ್ಳುವುದಿಲ್ಲ. ಅದುವೇ ವೃಂದಾವನ. ವೃಂದಾವನವಾಸಿಗಳೆಲ್ಲರು ಕೃಷ್ಣನ ಇಚ್ಛಾಪೂರ್ತಿಗೆಂದು ಪ್ರಯತ್ನಿಸುತ್ತಿರುತ್ತಾರೆ. ಗೊಲ್ಲರು, ಕರುಗಳು, ಹಸುಗಳು, ಮರಗಳು, ಹೂಗಳು, ನೀರು, ಗೋಪಿಯರು, ವೃದ್ಧರು, ಯಶೋದ ಮಾತೆ, ನಂದ, ಎಲ್ಲರು ಕೃಷ್ಣನ ಇಚ್ಛಾಪೂರ್ತಿಯಲ್ಲಿ ತೊಡಗಿದ್ದಾರೆ. ಅದುವೇ ವೃಂದಾವನ. ಹಾಗೆಯೆ ನಾವು ಈ ಭೌತಿಕ ಜಗತ್ತನ್ನು ವೃಂದಾವನವಾಗಿ ಬದಲಾಯಿಸ ಬಹುದು, ಆದರೆ ಕೃಷ್ಣನ ಇಚ್ಛಾಪೂರ್ತಿಗೆ ನಾವು ಸಮ್ಮತಿಸುವ ಪಕ್ಷದಲ್ಲಿ. ಅದುವೇ ವೃಂದಾವನ. ಹಾಗು ನೀನು ನಿನ್ನ ಇಚ್ಛಾಪೂರ್ತಿಯಾಗಬೇಕು ಅಂದುಕೊಂಡರೆ, ಅದು ಭೌತಿಕ. ಭೌತಿಕ ಹಾಗು ಆಧ್ಯಾತ್ಮಿಕದ ನಡುವೆ ಇರುವ ವ್ಯತ್ಯಾಸವದು.