KN/Prabhupada 0109 - ನಾವು ಸೋಮಾರಿಗಳನ್ನು ಅನುಮತಿಸುವುದಿಲ್ಲ



Lecture on SB 1.7.24 -- Vrndavana, September 21, 1976

ನಿಮ್ಮ ಕರ್ತವ್ಯವನ್ನು ನೀವು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ನಿಮ್ಮ ಧರ್ಮ ಎಂದರೆ ನಿಮ್ಮ ವೃತ್ತಿಪರ ಕರ್ತವ್ಯ. ನೀವು ಇಂಜಿನಿಯರ್ ಎಂದು ಭಾವಿಸೋಣ. ನೀವು ಕರ್ತವ್ಯವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಅಥವಾ ವೈದ್ಯಕೀಯ ವ್ಯಕ್ತಿ, ಅಥವಾ ಉದ್ಯಮಿ, ಅಥವಾ ಯಾರಾದರೂ - ಎಲ್ಲರೂ ಏನನ್ನಾದರು ಮಾಡಬೇಕು. ನೀವು ಸುಮ್ಮನೆ ಕುಳಿತುಕೊಂಡು ಜೀವನೋಪಾಯವನ್ನು ಪಡೆಯಲಾಗುವುದಿಲ್ಲ. ನೀವು ಸಿಂಹವಾಗಿದ್ದರೂ ಕೆಲಸ ಮಾಡಲೇಬೇಕು. ನಾ ಹಿ ಸುಪ್ತಸ್ಯ ಸಿಂಹಸ್ಯ ಪ್ರವೀಶಂತಿ ಮುಖೇ ಮೃಗಾಃ. ಇದು... ಭೌತಿಕ ಜಗತ್ತು ಹಾಗೆನೇ. ನೀವು ಸಿಂಹದಂತೆ ಶಕ್ತಿಶಾಲಿಯಾಗಿದ್ದರೂ ಸುಮ್ಮನೆ ನಿದ್ದೆ ಮಾಡಲು ಸಾಧ್ಯವಿಲ್ಲ. ಅದು ಆಲೋಚಿಸಿದರೆ, "ನಾನು ಸಿಂಹ, ನಾನು ಕಾಡಿನ ರಾಜ. ನಾನು ಮಲಗುತ್ತೇನೆ, ಪ್ರಾಣಿ ಬಂದು ನನ್ನ ಬಾಯೊಳಗೆ ಪ್ರವೇಶಿಸುತ್ತದೆ", ಎಂದು, ಇಲ್ಲ, ಅದು ಸಾಧ್ಯವಿಲ್ಲ. ನೀನು ಪ್ರಾಣಿಯಾದರು, ಬೇರೆ ಪ್ರಾಣಿಯನ್ನು ಹಿಡಿಯಬೇಕು. ಆಗ ತಿನ್ನಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನೀನು ಹಸಿವಿನಿಂದ ಬಳಲುತ್ತಿಯ. ಆದ್ದರಿಂದ ಕೃಷ್ಣ ಹೇಳುತ್ತಾನೆ, ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹಿ ಅಕರ್ಮಣಃ (ಭ.ಗೀ 3.8). "ನೀವು ನಿಮ್ಮ ಕರ್ತವ್ಯವನ್ನು ಮಾಡಬೇಕು.” ಶರೀರ-ಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇದ್ ಅಕರ್ಮಣಃ. ಯೋಚಿಸಬೇಡಿ... ದೂರ್ತರು ಹೇಳುತ್ತಾರೆ “ಕೃಷ್ಣ ಪ್ರಜ್ಞೆ ಚಳುವಳಿ ಜನರಿಗೆ ತಪ್ಪಿಸಿಕೊಳ್ಳಲು ಕಲಿಸುತ್ತಿದೆ, ಅವರು...”. ಅಲ್ಲ, ಅದು ಕಷ್ಣನ ಆದೇಶಯಲ್ಲ. ನಾವು ಯಾವುದೇ ಸೋಮಾರಿಯಾದ ಮನುಷ್ಯನನ್ನು ಅನುಮತಿಸುವುದಿಲ್ಲ. ಅವನು ಕೆಲಸದಲ್ಲಿ ತೊಡಗಿರಬೇಕು. ಅದೇ ಕೃಷ್ಣ ಪ್ರಜ್ಞೆ ಚಳುವಳಿ. ಅದು ಕೃಷ್ಣನ ಆದೇಶ. ನಿಯತಂ ಕುರು ಕರ್ಮ. ಅರ್ಜುನನು ಹೋರಾಡಲು ನಿರಾಕರಿಸುತ್ತಿದ್ದ. ಅವನು ಅಹಿಂಸಾತ್ಮಕ ಸಂಭಾವಿತ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ. ಕೃಷ್ಣ ಅವನನ್ನು ಅನುಮತಿಸಲಿಲ್ಲ. "ಇಲ್ಲ, ಇಲ್ಲ, ನೀನು ಹಾಗೆ ಮಾಡಬಾರದು. ಅದು ನಿನ್ನ ದೌರ್ಬಲ್ಯ." ಕುತಸ್ ತ್ವಾ ಕಶ್ಮಲಮ್ ಇದಂ ವಿಷಮೇ ಸಮುಪಸ್ಥಿತಮ್ (ಭ.ಗೀ 2.2): "ನೀನು ದೂರ್ತನೆಂದು ಸಾಬೀತುಪಡಿಸುತ್ತಿದ್ದೀಯ. ಇದು ಅನಾರ್ಯ-ಜುಷ್ಟಮ್. ಈ ರೀತಿಯ ಪ್ರಸ್ತಾಪವು ಅನಾರ್ಯ, ಅನಾಗರಿಕ ಮನುಷ್ಯನದ್ದು. ಅದನ್ನು ಮಾಡಬೇಡ.” ಅದು ಕೃಷ್ಣನ... ಆದ್ದರಿಂದ ಕೃಷ್ಣ ಪ್ರಜ್ಞೆ ಚಳುವಳಿ, ಕೃಷ್ಣ ಪ್ರಜ್ಞೆಯಲ್ಲಿ ಇರುವವರು, ಸೋಮಾರಿಯಾಗುತ್ತಾರೆ, ಮತ್ತು ಹರಿದಾಸ ಠಾಕುರವನ್ನು ಅನುಕರಿಸುತ್ತಾರೆ ಎಂದು ಯೋಚಿಸಬೇಡಿ. ಅದು ಕೃಷ್ಣ ಪ್ರಜ್ಞೆ ಅಲ್ಲ. ಕೃಷ್ಣ ಪ್ರಜ್ಞೆ ಎಂದರೆ ಕೃಷ್ಣ ಸೂಚಿಸಿದಂತೆ, ನೀವು ಇಪ್ಪತ್ನಾಲ್ಕು ಗಂಟೆಗಳೂ ಅಧಿಕವಾಗಿ ಕಾರ್ಯನಿರತರಾಗಿರಬೇಕು. ಅದು ಕೃಷ್ಣ ಪ್ರಜ್ಞೆ. ಕೇವಲ ತಿನ್ನಿವ, ನಿದ್ರಿಸುವ ಸೋಮಾರಿಯಾಗಬಾರದು. ಇಲ್ಲ.

ಆದ್ದರಿಂದ ಇದು ಧರ್ಮಸ್ಯ ಗ್ಲಾನಿಃ. ನಿಮ್ಮ ದೃಷ್ಟಿ ಕೋನವನ್ನು ಬದಲಾಯಿಸಬೇಕು. ಐಹಿಕ ಬದ್ಧ ಜೀವನದಲ್ಲಿ ನಿಮ್ಮ ಇಂದ್ರಿಯ ತೃಪ್ತಿಯೇ ನಿಮ್ಮ ಗುರಿ. ಮತ್ತು ಕೃಷ್ಣ ಪ್ರಜ್ಞೆ ಎಂದರೆ ನೀವು ಅದೇ ಮನೋಭಾವದಿಂದ, ಅದೇ ಚೈತನ್ಯದಿಂದ ಕೆಲಸ ಮಾಡಬೇಕು, ಆದರೆ ನೀವು ಕೃಷ್ಣನನ್ನು ತೃಪ್ತಿಪಡಿಸಬೇಕು. ಅದೇ ಆಧ್ಯಾತ್ಮಿಕ ಜೀವನ. ಸೋಮಾರಿಯಾಗುವುದಲ್ಲ. ವ್ಯತ್ಯಾಸವೆಂದರೆ, ಲೇಖಕ ಕೃಷ್ಣದಾಸರು ಹೇಳಿರುವಂತೆ, ಆತ್ಮೇಂದ್ರಿಯ-ಪ್ರೀತಿ-ವಾಂಚಾ-ತಾರೆ ಬಲಿ ‘ಕಾಮ (ಚೈ.ಚ ಆದಿ 4.165). ಕಾಮ ಎಂದರೇನು? ಕಾಮ ಎಂದರೆ ಒಬ್ಬನು ತನ್ನ ಸ್ವಂತ ಇಂದ್ರಿಯಗಳ ತೃಪ್ತಿ ಬಯಸುವುದು. ಅದು ಕಾಮ. ಕೃಷ್ಣೇಂದ್ರಿಯ-ಪ್ರೀತಿ-ಇಚ್ಛಾ ಧರೆ ‘ಪ್ರೇಮ’ ನಾಮ. ಪ್ರೇಮ ಎಂದರೇನು? ಪ್ರೇಮ ಎಂದರೆ ಕೃಷ್ಣನ ಇಂದ್ರಿಯ ತೃಪ್ತಿಗಾಗಿ ನಿಮ್ಮನು ತೊಡಗಿಸಿಕೊಳ್ಳುವುದು. ಗೋಪಿಗಳನ್ನು ಏಕೆ ಉನ್ನತೀಕರಿಸಲಾಗಿದೆ? ಏಕೆಂದರೆ ಅವರ ಏಕೈಕ ಪ್ರಯತ್ನವೆಂದರೆ ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸುವುದು. ಆದ್ದರಿಂದ ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ರಮ್ಯಾ ಕಾಚಿದ್ ಉಪಾಸನಾ ವ್ರಜ-ವಧೂ-ವರ್ಗೇಣ ಯಾ ಕಲ್ಪಿತಾ. ಅವರಿಗೆ ಬೇರೆ ವ್ಯವಹಾರವಿರಲಿಲ್ಲ. ವೃಂದಾವನ ಎಂದರೆ, ವೃಂದಾವನದಲ್ಲಿರುವವರು... ಅವರು ನಿಜವಾಗಿಯೂ ವೃಂದಾವನದಲ್ಲಿ ವಾಸಿಸಲು ಬಯಸಿದರೆ, ಅವರ ವ್ಯವಹಾರವು ಕೃಷ್ಣನ ಇಂದ್ರಿಯ ತೃಪ್ತಿ ಆಗಿರಬೇಕು. ಅದೇ ವೃಂದಾವನ. "ನಾನು ವೃಂದಾವನದಲ್ಲಿ ವಾಸಿಸುತ್ತಿದ್ದೇನೆ, ಮತ್ತು ನನ್ನ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದೇನೆ", ಎಂದು ಅಲ್ಲ. ಅದು ವೃಂದಾವನ-ವಾಸೀ ಅಲ್ಲ. ಆ ರೀತಿಯ ಜೀವನವೆಂದರೆ... ತುಂಬಾ ಕೋತಿಗಳು, ನಾಯಿಗಳು ಮತ್ತು ಹಂದಿಗಳೂ ಇವೆ; ಅವು ಕೂಡ ವೃಂದಾವನದಲ್ಲಿವೆ. ಅವು ವೃಂದಾವನದಲ್ಲಿ ವಾಸಿಸುತ್ತಿವೆ ಎಂದರ್ಥವೇ? ಇಲ್ಲ. ವೃಂದಾವನದಲ್ಲಿ ಇಂದ್ರಿಯ ತೃಪ್ತಿಗಾಗಿ ಯಾರು ಬಯಸುವರೋ, ಅವರ ಮುಂದಿನ ಜನ್ಮ ನಾಯಿಗಳು, ಹಂದಿಗಳು ಮತ್ತು ಕೋತಿಗಳಾಗಿ. ನೀವು ಅದನ್ನು ತಿಳಿದಿರಬೇಕು. ಆದ್ದರಿಂದ ವೃಂದಾವನದಲ್ಲಿ ಇಂದ್ರಿಯ ತೃಪ್ತಿಗಾಗಿ ಪ್ರಯತ್ನಿಸಬಾರದು. ಅದು ದೊಡ್ಡ ಪಾಪ. ಕೇವಲ ಕೃಷ್ಣನ ಇಂದ್ರಿಯ ತೃಪ್ತಿಗಾಗಿ ಪ್ರಯತ್ನಿಸಿ.