KN/Prabhupada 0117 - ಉಚಿತ ಭೋಜನಾಲಯ ಮತ್ತು ಉಚಿತ ವಸತಿ



Lecture on SB 7.9.24 -- Mayapur, March 2, 1976

ದಾಸನಾಗುವುದು, ಮತ್ತು ದಾಸಿಯಾಗುವುದು, ಇದುವೇ ಉದ್ದೇಶ. ಇದುವೇ ಮಾನವ ನಾಗರಿಕತೆಯ ಆದರ್ಶವಾಗಿದೆ. ಪ್ರತಿಯೊಬ್ಬ ಮಹಿಳೆ ತನ್ನ ಗಂಡನ ದಾಸಿಯಾಗಲು ಪ್ರಯತ್ನಿಸಬೇಕು, ಮತ್ತು ಪ್ರತಿಯೊಬ್ಬ ಪುರುಷನು ನೂರು ಪಟ್ಟು ಹೆಚ್ಚು ಕೃಷ್ಣನ ಸೇವಕನಾಗಲು ಪ್ರಯತ್ನಿಸಬೇಕು. ಇದು ಭಾರತೀಯ ನಾಗರಿಕತೆ, "ಗಂಡ ಮತ್ತು ಹೆಂಡತಿ, ನಮಗೆ ಸಮಾನ ಹಕ್ಕುಗಳಿವೆ" ಎಂದು ಅಲ್ಲ. ಯುರೋಪ್, ಅಮೆರಿಕಾದಲ್ಲಿ, "ಸಮಾನ ಹಕ್ಕುಗಳು" ಎಂಬ ಚಳುವಳಿ ನಡೆಯುತ್ತಿದೆ. ಅದು ವೈದಿಕ ನಾಗರಿಕತೆಯಲ್ಲ. ವೈದಿಕ ನಾಗರಿಕತೆಯೆಂದರೆ ಗಂಡನು ಕೃಷ್ಣನ ಪ್ರಾಮಾಣಿಕ ಸೇವಕನಾಗಿರಬೇಕು, ಮತ್ತು ಹೆಂಡತಿ ಗಂಡನ ಪ್ರಾಮಾಣಿಕ ಸೇವಕಿಯಾಗಿರಬೇಕು.

ಆದ್ದರಿಂದ ಇಲ್ಲಿ ಹೇಳಲಾಗಿದೆ, ಉಪನಾಯ ಮಾಂ ನಿಜ-ಭೃತ್ಯ-ಪಾರ್ಶ್ವಮ್ (ಶ್ರೀ.ಭಾ 7.9.24). ಇದು ಅತ್ಯುತ್ತಮ ಸಂಘ. ಪುರುಷ ಹೇಗೆ ವರ್ತಿಸಬೇಕು, ಮಹಿಳೆ ಹೇಗೆ ವರ್ತಿಸಬೇಕು ಎಂದು ನಾರದ ಮುನಿ ವಿವರಿಸುತ್ತಿರುವಾಗ... ನಾವು ಈಗ ನಮ್ಮ ಟೇಪ್ ಡಿಕ್ಟಾಫೋನ್‌ನಲ್ಲಿ ಚರ್ಚಿಸುತ್ತಿದ್ದೇವೆ. ನೀವು ಅದನ್ನು ಕೇಳುವಿರಿ. ‘ಯಜಮಾನ’ ಎಂದು ಯಾರೂ ಇಲ್ಲ. ಇದು ನಿಷ್ಪ್ರಯೋಜಕವಾಗಿದೆ. ನೀವು ಯಜಮಾನ ಆಗಲು ಸಾಧ್ಯವಿಲ್ಲ. ಅಹಂಕಾರ-ವಿಮೂಢಾತ್ಮ ಕರ್ತಾಹಮ್ ಇತಿ ಮಾನ್ಯತೇ (ಭ.ಗೀ 3.27). ನೀವು ಯಜಮಾನನಾಗಲು ಸಾಧ್ಯವಿಲ್ಲ. ಜೀವೇರ ಸ್ವರೂಪ ಹಯ ನಿತ್ಯ ಕೃಷ್ಣ ದಾಸ (ಚೈ.ಚ ಮಧ್ಯ 20.108-109). ಪುರುಷ ಅಥವಾ ಮಹಿಳೆ, ಎಲ್ಲರೂ ಕೃಷ್ಣನ ದಾಸರು. ಆ ಮಟ್ಟದಲ್ಲಿ ನಾವು ತರಬೇತಿ ಪಡೆಯಬೇಕು, ಉತ್ತಮ ದಾಸನಾಗುವುದು ಹೇಗೆ, ನೇರವಾದ ದಾಸನು ಮಾತ್ರವಲ್ಲ, ದಾಸಾನುದಾಸ. ಇದನ್ನು ಪ್ಯರಂಪರಾ ದಾಸ್ಯ ಎಂದು ಕರೆಯಲಾಗುತ್ತದೆ. ನನ್ನ ಆಧ್ಯಾತ್ಮಿಕ ಗುರುವು ಅವರ ಆಧ್ಯಾತ್ಮಿಕ ಗುರುವಿನ ದಾಸ, ಮತ್ತು ನಾನು ನನ್ನ ಆಧ್ಯಾತ್ಮಿಕ ಗುರುವಿನ ದಾಸನು. ಅಂತೆಯೇ, ನಾವು "ದಾಸಾನುದಾಸ" ಎಂದು ಭಾವಿಸುತ್ತೇವೆ. ಯಜಮಾನ ಆಗುವ ಪ್ರಶ್ನೆಯೇ ಇಲ್ಲ. ಇದು ಭೌತಿಕ ರೋಗ (ಚೈ.ಚ ಮಧ್ಯ 13.80).

ಕೃಷ್ಣ ಭುಲಿಯ ಜೀವ ಭೋಗ ವಾಂಚಾ ಕಾರೆ
ಪಾಸತೇ ಮಾಯಾ ತಾರೆ ಜಾಪತೀಯಾ ಧಾರೆ

ನಮಗೆ ದುರಭಿಮಾನ ಬಂದ ತಕ್ಷಣ - "ಈಗ ನಾನು ಯಜಮಾನನಾಗುತ್ತೇನೆ. ನಾನು ಕೇವಲ ಆದೇಶಿಸುತ್ತೇನೆ. ನಾನು ಯಾರನ್ನೂ ಅನುಸರಿಸುವುದಿಲ್ಲ", - ಅದೇ ಮಾಯೆ.

ಆದ್ದರಿಂದ, ಆ ರೋಗವು ಬ್ರಹ್ಮನಿಂದ ಹಿಡಿದು ಇರುವೆವರೆಗು ಇದೆ. ಪ್ರಹ್ಲಾದ ಮಹಾರಾಜರು ಯಜಮಾನ ಆಗುವ ಈ ನಾಮಮಾತ್ರದ, ಸುಳ್ಳು ಪ್ರತಿಷ್ಠಿತ ಸ್ಥಾನವನ್ನು ಅರ್ಥಮಾಡಿಕೊಂಡಿದ್ದಾರೆ. "ಈ ಸುಳ್ಳು ವಿಷಯದ ಬಗ್ಗೆ ನನಗೆ ಸಾಕಷ್ಟು ತಿಳಿದಿದೆ. ದಯವಿಟ್ಟು ನನ್ನನ್ನು ತೊಡಗಿಸಿಕೊಳ್ಳಿ..." ನಿಜ-ಭೃತ್ಯ-ಪಾರ್ಶ್ವಮ್. ನಿಜ-ಭೃತ್ಯ-ಪಾರ್ಶ್ವಮ್ ಎಂದರೆ ಅಭ್ಯಾಸಿಯಂತೆ. ಅಭ್ಯಾಸಿ, ಒಬ್ಬ ಅಭ್ಯಾಸಿಯನ್ನು ಒಬ್ಬ ತಜ್ಞನೊಂದಿಗೆ ಕೆಲಸದಲ್ಲಿ ತೊಡಗಿಸುತ್ತಾರೆ. ಕ್ರಮೇಣ, ಅಭ್ಯಾಸಿ ಕೆಲಸಗಳನ್ನು ಹೇಗೆ ಮಾಡಬೇಕೆಂದು ಕಲಿಯುತ್ತಾನೆ. ಆದ್ದರಿಂದ ಅವರು ಹೇಳುತ್ತಾರೆ, ನಿಜ-ಭೃತ್ಯ-ಪಾರ್ಶ್ವಮ್. "ತಕ್ಷಣ ನಾನು ಬಹಳ ಪರಿಣಿತ ಸೇವಕನಾಗುತ್ತೇನೆ ಎಂದಲ್ಲ, ಆದರೆ ನನಗೆ ಅವಕಾಶ ಮಾಡಿಕೊಡಿ..." ನಮ್ಮ ಈ ಸಂಸ್ಥೆ ಅದೇ ಉದ್ದೇಶಕ್ಕಾಗಿ ಇರುವುದು. ಉಚಿತ ಭೋಜನಾಲಯ, ಮತ್ತು ಉಚಿತ ಮಲಗುವ ವಸತಿಗೆಂದು ಯಾರಾದರೂ ಇಲ್ಲಿಗೆ ಬಂದರೆ, ಆಗ ಅವರು ಈ ಸಂಘಕ್ಕೆ ಬರುವುದು ನಿಷ್ಪ್ರಯೋಜಕವು. ಸೇವೆ ಮಾಡುವುದು ಹೇಗೆಂದು ಅವನು ಕಲಿಯಬೇಕು. ನಿಜ-ಭೃತ್ಯ-ಪಾರ್ಶ್ವಮ್. ಸೇವೆ ಸಲ್ಲಿಸುತ್ತಿರುವವರು, ಅವರು… ಇಪ್ಪತ್ನಾಲ್ಕು ಗಂಟೆಗಳ ಕಾಲ ಹೇಗೆ ಸೇವೆ ಸಲ್ಲಿಸುತ್ತಿದ್ದಾನೆಂದು ಅವನಿಂದ ಕಲಿಯಬೇಕು; ಆಗ ನಾವು ಈ ಸಂಸ್ಥೆಗೆ ಸೇರಿದ ಉದ್ದೇಶ ಸಫಲವಾಗುತ್ತದೆ. ಆದರೆ, "ಇದು ನಮಗೆ ಉಚಿತ ಭೋಜನಾಲಯ, ಉಚಿತ ವಸತಿ, ಮತ್ತು ಉಚಿತ ಇಂದ್ರಿಯತೃಪ್ತಿ ಒದಗಿಸುವ ಸಂಸ್ಥೆ", ಅಂದುಕೊಂಡರೆ ಇಡೀ ಸಂಸ್ಥೆ ಹಾಳಾಗುತ್ತದೆ. ಜಾಗರೂಕರಾಗಿರಿ. ಎಲ್ಲಾ ಜಿ.ಬಿ.ಸಿಯವರು, ಈ ಮನಸ್ಥಿತಿ ಹೆಚ್ಚಾಗದಂತೆ ಅವರು ಜಾಗರೂಕರಾಗಿರಬೇಕು. ಪ್ರತಿಯೊಬ್ಬರೂ ಸೇವೆ ಮಾಡಲು ತುಂಬಾ ಉತ್ಸುಕರಾಗಿರಬೇಕು, ಹೇಗೆ ಸೇವೆ ಮಾಡಬೇಕೆಂದು ಕಲಿಯಬೇಕು. ನಿಜ-ಭೃತ್ಯ-ಪಾರ್ಶ್ವಮ್. ಆಗ ಜೀವನ ಯಶಸ್ವಿಯಾಗುತ್ತದೆ.

ತುಂಬ ಧನ್ಯವಾದಗಳು.