KN/Prabhupada 1067 - ನಾವು ಭಗವದ್ಗೀತೆಯನ್ನು ಯಾವುದನ್ನೂ ಬಿಡದೆ ಮನಸೋ ಇಚ್ಛೆ ಅರ್ಥಮಾಡದೆ ಸ್ವೀಕರಿಸಬೇಕು

The printable version is no longer supported and may have rendering errors. Please update your browser bookmarks and please use the default browser print function instead.


660219-20 - Lecture BG Introduction - New York

ಕಿರುಪೂರ್ಣ ಗಟಕಗಳಾದ ಜೀವಿಗಳಿಗೆ ಪೂರ್ಣತ್ವವನ್ನು ಸಾಕ್ಷಾತ್ಕಾರಿಸಿಕೊಳ್ಳಲು ಎಲ್ಲಾ ಅವಕಾಶವಿದೆ. ಪೂರ್ಣತ್ವದ ಅಪರಿಪೂರ್ಣ ತಿಳುವಳಿಕೆಯಿಂದ ಅಪರಿಪೂರ್ಣದ ಅನುಭವವಾಗುತ್ತದೆ. ವೈದಿಕ ಜ್ಞಾನ ಪರಿಪೂರ್ಣವಾಗಿ ಭಗವದ್ಗೀತೆಯಲ್ಲಿದೆ. ವೈದಿಕ ಜ್ಞಾನದಲ್ಲಿ ತಪ್ಪಿರಲು ಸಾಧ್ಯವಿಲ್ಲ. ಇದಕ್ಕೆ ಹಲವಾರು ಉದಾಹರಣೆಗಳು ಇವೆ. ಹಿಂದೂಗಳು ವೈದಿಕ ಜ್ಞಾನವನ್ನು ಪರಿಪೂರ್ಣವಾಗಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಸಗಣಿ. ಸಗಣಿ ಒಂದು ಪ್ರಾಣಿಯ ಮಲ. ಸ್ಮೃತಿ ಅಥವಾ ವೈದಿಕ ಜ್ಞಾನದ ಪ್ರಕಾರ ಯಾರಾದರೂ ಪ್ರಾಣಿಯ ಮಲವನ್ನು ಮುಟ್ಟಿದರೆ ಸ್ನಾನಮಾಡಿ ಶುದ್ಧಮಾಡಿಕೊಳ್ಳಬೇಕು. ಆದರೆ ವೈದಿಕ ಶಾಸ್ತ್ರಗಳು ಸಗಣಿಯನ್ನು ಶುದ್ಧವೆಂದು ಪರಿಗಣಿಸಿದೆ. ಅಶುದ್ಧ ಸ್ಥಳ ಅಥವಾ ಅಶುದ್ಧ ವಸ್ತುವನ್ನು ಸಗಣಿಯಿಂದ ಮುಟ್ಟಿ ಶುದ್ಧಿಗೊಳಿಸುತ್ತಾರೆ. ಈಗ ಯಾರಾದರೂ ಒಂದು ಜಾಗದಲ್ಲಿ ಪ್ರಾಣಿಯ ಮಲವನ್ನು ಅಶುದ್ದವೆಂದೂ, ಇನ್ನೊಂದು ಕಡೆ ಪ್ರಾಣಿಯ ಮಲವಾದ ಸಗಣಿಯನ್ನು ಶುದ್ಧ ಎಂದು ಹೇಳಿದೆ ಎಂದು ವಾದ ಮಾಡ ಬಹುದು. ಇದು ವಿರೋದಾಭಾಸವೆಂಬಂತೆ ಕಾಣಬಹುದು. ಆದರೆ ಇದು ವೈದಿಕ ವಿಧಿಯಾದ್ದರಿಂದ ನಾವು ಇದನ್ನು ಒಪ್ಪುತ್ತೇವೆ. ಮತ್ತು ಇದನ್ನು ಒಪ್ಪುವುದರಿಂದ ನಾವು ಯಾವುದೇ ತಪ್ಪನ್ನು ಮಾಡುತ್ತಿಲ್ಲ. ಈಗಿನ ಆಧುನಿಕ ವಿಜ್ಞಾನವು, ಡಾ|| ಲಾಲ್ ಮೋಹನ್ ಗೋಸಾಲ್ ಸಗಣಿಯನ್ನು ಸೂಕ್ಷ್ಮವಾಗಿ ಸಂಶೋದಿಸಿ ಸಗಣಿ ಕ್ರಿಮಿನಾಶಕವೆಂದು ಕಂಡು ಹಿಡಿದಿದ್ದಾರೆ. ಅದೇ ರೀತಿ ಅವರು ಗಂಗೆಯ ನೀರನ್ನು ಕೂಡ ಸಂಶೋದಿಸಿದ್ದಾರೆ. ವೇದಜ್ನಾನವು ಸಂದೇಹ ಮತ್ತು ದೋಷಗಳಿಗೆ ಹೊರತಾಗಿರುವುದರಿಂದ ಪರಿಪೂರ್ಣವಾದದ್ದು. ಭಗವದ್ಗೀತೇ ವೇದಜ್ನಾನದ ಸಾರವಾಗಿದೆ. ಆದ್ದರಿಂದ ವೈದಿಕ ಜ್ಞಾನದಲ್ಲಿ ತಪ್ಪಿಲ್ಲ. ಇದು ಪರಿಪೂರ್ಣ ಗುರುಶಿಷ್ಯ ಪರಂಪರೆಯಲ್ಲಿ ಇಳಿದು ಬಂದಿದೆ. ಆದ್ದರಿಂದ ವೈದಿಕ ಜ್ಞಾನ ಸಂಶೋದನೆಯ ವಸ್ತುವಲ್ಲ. ನಮ್ಮ ಸಂಶೋದನೆ ಅಪರಿಪೂರ್ಣ ಏಕೆಂದರೆ ನಾವು ಅಪರಿಪೂರ್ಣ ಇಂದ್ರಿಯಗಳಿಂದ ಸಂಶೋದನೆ ಮಾಡುತ್ತೇವೆ. ಆದ್ದರಿಂದ ನಮ್ಮ ಸಂಶೋದನೆಯ ಫಲವೂ ಕೂಡ ಅಪರಿಪೂರ್ಣ. ಅದು ಪೂರ್ಣವಾಗಿರಲು ಸಾಧ್ಯವಿಲ್ಲ. ಈಗ ನಾವು ಭಗವದ್ಗೀತೇ ಹೇಳುವಂತೆ ಪರಿಪೂರ್ಣ ಜ್ಞಾನವನ್ನು ಪಡೆಯಬೇಕು. ಏವಂ ಪರಂಪರಾ ಪ್ರಾಪ್ತಂ ಇಮಂ ರಾಜರ್ಷ್ಯಯೋ ವಿದುಃ (ಭ ಗೀತೆ 4.2) ಭಗವಂತನಿಂದಲೇ ಪ್ರಾರಂಭವಾಗಿ ಗುರುಶಿಷ್ಯರ ಪರಂಪರೆಯಲ್ಲಿ ಯೋಗ್ಯ ಮೂಲದಿಂದ ಬರುವ ಜ್ಞಾನವನ್ನು ನಾವು ಸ್ವೀಕರಿಸಬೇಕು. ಭಗವದ್ಗೀತೆಯನ್ನು ಭಗವಂತನೇ ಹೇಳಿರುವುದು. ಮತ್ತು ಅರ್ಜುನ ಇದರ ವಿದ್ಯಾರ್ಥಿ. ಮತ್ತು ಯಥಾರೂಪದಲ್ಲಿ ಹೇಳಿರುವುದನ್ನೆಲ್ಲಾ ಯಾವುದನ್ನೂ ಬಿಡದೆ ಒಪ್ಪಿಕೊಂಡನು. ನಾವು ಭಗವದ್ಗೀತೆಯ ಒಂದು ಭಾಗವನು ಸ್ವೀಕರಿಸಿ ಇನ್ನೊಂದು ಭಾಗವನ್ನು ಸ್ವೀಕರಿಸದೇ ಇರಲು ಸಾಧ್ಯವಿಲ್ಲ. ನಾವು ಏನನ್ನೂ ಬಿಡದೆ, ಮನಸ್ಸೋ ಇಚ್ಛೆ ಅರ್ಥ ಮಾಡದೆ ಭಗವದ್ಗೀತೆಯನ್ನು ಯಥಾರೂಪದಲ್ಲಿ ಸ್ವೀಕರಿಸಬೇಕು. ನಮ್ಮ ಮನಸ್ಸಿನ ಹುಚ್ಚಾಟಿಕೆಯನ್ನು ಬಿಡಬೇಕು. ಇದನ್ನು ಪರಿಪೂರ್ಣವಾದ ವೈದಿಕ ಜ್ಞಾನವೆಂದು ಸೀಕರಿಸಬೇಕು. ವೈದಿಕ ಜ್ಞಾನವು ಅಲೌಕಿಕ ಮೂಲಗಳಿಂದ ಬರುತ್ತದೆ ಏಕೆಂದರೆ ಇದರ ಪ್ರಾರಂಬದ ಮಾತುಗಳನ್ನು ಭಗವಂತನೇ ನುಡಿದಿದ್ದಾನೆ. ಭಗವಂತನ ಮಾತುಗಳಿಗೆ ಅಪೌರುಷೇಯ ಎಂದು ಹೆಸರು. ಅಥವಾ ಇಹಲೋಕದ ನಾಲ್ಕುದೋಷಗಳಿಂದ ಕೂಡಿದ ಯಾವುದೇ ವ್ಯಕ್ತಿಯ ಮಾತುಗಳಿಂದ ಭಿನ್ನವಾದವು ಎಂದರ್ಥ. ಭೌತಿಕ ಪ್ರಪಂಚದಲ್ಲಿ ಜೀವಿಗಳಿಗೆ ನಾಲ್ಕು ರೀತಿಯ ದೋಷಗಳಿರುತ್ತವೆ. 1. ಅವನು ಖಂಡಿತವಾಗಿಯೂ ತಪ್ಪುಗಳನ್ನು ಮಾಡುತ್ತಾನೆ. 2. ಬ್ರಮೆಗೆ ಒಳಗಾಗುತ್ತಾನೆ. 3. ಮೋಸ ಮಾಡುವ ಪ್ರವೃತ್ತಿಯುಳ್ಳವನಾಗಿರುತ್ತಾನೆ. ಮತ್ತು 4. ಅಪರಿಪೂರ್ಣ ಇಂದ್ರಿಯಗಳಿಂದ ಕೂಡಿರುತ್ತಾನೆ. ಈ ನಾಲ್ಕು ದೋಷಗಳ ಕಾರಣ ಮನುಷ್ಯನಾದವನು ಸರ್ವವ್ಯಾಪಿಯಾದ ಜ್ಞಾನವನ್ನು ಕುರಿತು ಪೂರ್ಣ ತಿಳುವಳಿಕೆಯನ್ನು ನೀಡಲಾರ. ಆದರೆ ವೇದಗಳು ಹಾಗಲ್ಲ. ಈ ಜ್ಞಾನವನ್ನು ಪ್ರಥಮ ಜೀವಿ ಬ್ರಹ್ಮನಿಗೆ ಹೃದಯದಲ್ಲಿ ನೀಡಲಾಯಿತು. ಬ್ರಹ್ಮನು ಈ ಜ್ಞಾನವನ್ನು ತನ್ನ ಮಕ್ಕಳಿಗೆ ಮತ್ತು ಶಿಷ್ಯರಿಗೆ ತಾನು ಭಗವಂತನಿಂದ ಪಡೆದುಕೊಂಡ ರೀತಿಯಲ್ಲೇ ನೀಡಿದನು.