KN/Prabhupada 1069 - ಧರ್ಮ ನಂಬಿಕೆ ಎಂಬ ಅರ್ಥವನ್ನು ನೀಡುತ್ತದೆ. ನಂಬಿಕೆ ಬದಲಾಗಬಹುದು, ಸನಾತನ ಧರ್ಮವಲ್ಲ

Revision as of 04:14, 12 July 2019 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


660219-20 - Lecture BG Introduction - New York

ಆದ್ದರಿಂದ ಸನಾತನ ಧರ್ಮ ಅಂದರೆ ಮೇಲೆ ಹೇಳಿದಂತೆ ಪರಮ ಪುರುಷ ಸನಾತನ ಮತ್ತು ಆಧ್ಯಾತ್ಮಿಕ ಆಕಾಶಾದಾಚೆ ಇರುವ ಅವನ ಆಧ್ಯಾತ್ಮಿಕ ಧಾಮವು ಕೂಡ ಸನಾತನ ಮತ್ತು ಜೀವರಾಶಿ ಅವರು ಕೂಡ ಸನಾತನ ಆದ್ದರಿಂದ ಶಾಶ್ವತವಾದ ಜೀವರಾಶಿಗಳು ಶಾಶ್ವತವಾದ ಧಾಮದಲ್ಲಿ ಶಾಶ್ವತವಾದ ಭಗವಂತನ ಸಂಗದಲ್ಲಿರುವುದೇ ಮಾನವ ಜನ್ಮದ ಅಂತಿಮ ಗುರಿಯಾಗಿದೆ. ಭಗವಂತನಿಗೆ ಜೀವಿಗಳ ಮೇಲೆ ಅಪಾರ ಕೃಪೆ ಇದೆ. ಏಕೆಂದರೆ ಜೀವರಾಶಿಗಳು ಪರಮ ಪುರುಷನ ಮಕ್ಕಳಾಗಿದ್ದಾರೆ. ಭಗವಂತ ಭಗವದ್ಗೀತೆಯಲ್ಲಿ ಈ ರೀತಿ ಘೋಷಿಸಿದ್ದಾನೆ. ಸರ್ವ ಯೋನೀಶು ಕೌಂತೇಯ ಸಂಭವಂತಿ ಮೂರ್ತಯೋ ಯಃ (ಭ ಗೀತೆ 14.4). ಎಲ್ಲಾ ರೀತಿಯ ಜೀವರಾಶಿಗಳು ಅವರವರ ಕರ್ಮಾನುಸಾರವಾಗಿ ಬೇರೆ ಬೇರೆ ರೀತಿಯ ಜೀವರಾಶಿಗಳಿವೆ. ಆದರೆ ಭಗವಂತ ಎಲ್ಲಾ ಜೀವರಾಶಿಗಳಿಗೂ ನಾನೇ ತಂದೆ ಎಂದು ಘೋಷಿಸುತ್ತಾನೆ. ಆದ್ದರಿಂದ ಭಗವಂತ ಬದ್ಧಾತ್ಮರಾಗಿರುವ ಜೀವಾತ್ಮರನ್ನು ಮರಳಿ ಸನಾತನ ಆಕಾಶದಲ್ಲಿರುವ ಸನಾತನ ಧಾಮಕ್ಕೆ ಕರೆದೊಯ್ಯಲು ಕೆಳಗೆ ಇಳಿದು ಬರುತ್ತಾನೆ. ಸನಾತನವಾದ ಜೀವಿಯು ತನ್ನ ಸನಾತನ ಸ್ಥಿತಿಯನ್ನು, ಭಗವಂತನೊಂದಿಗೆ ಶಾಶ್ವತವಾದ ಸಂಗವನ್ನು ಪುನಃ ಸ್ಥಾಪನೆ ಮಾಡಲೆಂದು ಭಗವಂತ ಬೇರೆ ಬೇರೆ ಅವತಾರಗಳಲ್ಲಿ ಬರುತ್ತಾನೆ. ಅವನು ತನ್ನ ಗೌಪ್ಯ ಸೇವಕರನ್ನು, ಮಕ್ಕಳನ್ನು, ಸಹವರ್ತಿಯರನ್ನು, ಆಚಾರ್ಯರನ್ನು ಬದ್ಧಾತ್ಮರನ್ನು ಕರೆದುಕೊಂಡು ಹೋಗಲು ಕಳುಹಿಸುತ್ತಾನೆ ಆದ್ದರಿಂದ ಸನಾತನ ಧರ್ಮವೆಂದರೆ ಯಾವುದೇ ಧರ್ಮದ ಪಂಥವಲ್ಲ ಅದು ಶಾಶ್ವತ ಜೀವಿಯು ಶಾಶ್ವತ ಭಗವಂತನ ಸಂಭಂದದಲ್ಲಿ ಮಾಡುವ ಶಾಶ್ವತ ಕಾರ್ಯ ಸನಾತನ ಧರ್ಮ ಎಂದರೆ ಶಾಶ್ವತ ವೃತ್ತಿ ಶ್ರೀಪಾದ ರಾಮಾನುಜಾಚಾರ್ಯರು ಸನಾತನ ಎಂದರೆ "ಯಾವುದಕ್ಕೆ ಆದಿ ಅಥವಾ ಅಂತ್ಯ ಇಲ್ಲವೋ ಅದು" ಎಂದು ವಿವರಿಸಿದ್ದಾರೆ. ನಾವು ಯಾವಾಗ ಸನಾತನ ಧರ್ಮದ ಬಗ್ಗೆ ಮಾತನಾಡುತ್ತೇವೋ ಆಗ ಶ್ರೀಪಾದ ರಾಮಾನುಜಾಚಾರ್ಯರು ಹೇಳಿರುವಂತೆ ಯಾವುದಕ್ಕೆ ಆದಿ ಹಾಗೂ ಅಂತ್ಯವಿಲ್ಲವೋ ಅದು ಎಂದು ತೆಗೆದುಕೊಳ್ಳಬೇಕು ಧರ್ಮ ಎನ್ನುವ ಶಬ್ದವು ಸನಾತನ ಧರ್ಮಕ್ಕಿಂತ ಸ್ವಲ್ಪ ಭಿನ್ನವಾದುದು ಧರ್ಮ ನಂಬಿಕೆ ಎನ್ನುವುದನ್ನು ತಿಳಿಸುತ್ತದೆ, ನಂಬಿಕೆ ಬದಲಾಗಬಹುದು ಒಬ್ಬರಿಗೆ ಒಂದು ನಿರ್ದಿಷ್ಟ ಪ್ರಕ್ರಿಯೆಯ ಮೇಲೆ ನಂಬಿಕೆ ಇರಬಹುದು, ನಂತರ ಅದನ್ನು ಬದಲಾಯಿಸಿ ಬೇರೆ ನಂಬಿಕೆಯನ್ನು ಅಳವಡಿಸಿಕೊಳ್ಳಬಹುದು ಆದರೆ ಸನಾತನ ಧರ್ಮವೆಂದರೆ ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲ, ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲ, ಹೇಗೆ ನೀರು ಮತ್ತು ದ್ರವ್ಯತೆ. ದ್ರವ್ಯತೆಯನ್ನು ನೀರಿನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಶಾಖ ಮತ್ತು ಬೆಂಕಿ. ಶಾಖವನ್ನು ಬೆಂಕಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ಶಾಶ್ವತ ಜೀವಿಯ ಶಾಶ್ವತ ಕಾರ್ಯವೆಂದರೆ ಸನಾತನ ಧರ್ಮ, ಅದನ್ನು ಬೇರೆ ಮಾಡಲು ಸಾಧ್ಯವಿಲ್ಲ ಅದನ್ನು ಬೇರೆ ಮಾಡುಲು ಸಾಧ್ಯವೇ ಇಲ್ಲ. ನಾವು ಶಾಶ್ವತ ಜೀವಿಯ ಶಾಶ್ವತ ಕಾರ್ಯವೇನು ಎಂದು ತಿಳಿಯಬೇಕು. ನಾವು ಯಾವಾಗ ಸನಾತನ ಧರ್ಮದ ಬಗ್ಗೆ ಮಾತನಾಡುತ್ತೇವೋ ಆಗ ಶ್ರೀಪಾದ ರಾಮಾನುಜಾಚಾರ್ಯರು ಹೇಳಿರುವಂತೆ ಯಾವುದಕ್ಕೆ ಆದಿ ಹಾಗೂ ಅಂತ್ಯವಿಲ್ಲವೋ ಅದು ಎಂದು ತೆಗೆದುಕೊಳ್ಳಬೇಕು ಯಾವುದಕ್ಕೆ ಅಂತ್ಯ ಹಾಗೂ ಆದಿ ಇಲ್ಲವೋ ಅದು ಯಾವುದೇ ಪಂಥಕ್ಕೆ ಅಥವಾ ಯಾವುದೇ ಗಡಿಗೆ ಸೀಮಿತವಾಗಿರುವುದಿಲ್ಲ ನಾವು ಸನಾತನ ಧರ್ಮದ ಸಭೆಯನ್ನು ಏರ್ಪಡಿಸಿದಾಗ ಅಶಾಶ್ವತ ಧರ್ಮಕ್ಕೆ ಸೇರಿರುವ ಜನರು ನಾವು ಒಂದು ಪಂಥದ ಬಗ್ಗೆ ಹೇಳುತ್ತಿದ್ದೇವೆಂದು ತಪ್ಪಾಗಿ ಗ್ರಹಿಸಬಹುದು. ಆದರೆ ನಾವು ಈ ವಿಷಯವನ್ನು ಆಳವಾಗಿ ತೆಗೆದುಕೊಂಡು ಆಧುನಿಕ ವಿಜ್ಞಾನದ ಬೆಳಕಿನಲ್ಲಿ ನೋಡಿದಾಗ ಸನಾತನ ಧರ್ಮವನ್ನು ಪ್ರಪಂಚದ ಎಲ್ಲಾ ಜನರ, ಬ್ರಹ್ಮಾಂಡದ ಎಲ್ಲಾ ಜೀವರಾಶಿಗಳ ವೃತ್ತಿ ಎಂದು ನೋಡಬಹುದು. ಅಸನಾತನ ಧರ್ಮದ ನಂಬಿಕೆಗೆ ಮಾನವ ಸಮಾಜದ ಇತಿಹಾಸದಲ್ಲಿ ಆರಂಭವಿರಬಹುದು, ಆದರೆ ಸನಾತನ ಧರ್ಮದ ಇತಿಹಾಸವಿರಲು ಸಾಧ್ಯವಿಲ್ಲ ಏಕೆಂದರೆ ಅದು ಜೀವಿಯ ಇತಿಹಾಸದ ಜೊತೆ ಮುಂದುವರೆಯುತ್ತದೆ. ಇನ್ನೂ ಜೀವಿಗಳ ಬಗ್ಗೆ ಹೇಳುವುದಾದರೆ ಜೀವಿಗಳಿಗೆ ಕೂಡ ಜನನ ಹಾಗೂ ಮರಣವಿಲ್ಲವೆಂದು ನಮಗೆ ಶಾಸ್ತ್ರಗಳಿಂದ ತಿಳಿದುಬರುತ್ತದೆ. ಭಗವದ್ಗೀತೆಯಲ್ಲಿ ಜೀವಿಯು ಎಂದಿಗೂ ಜನಿಸಿಲ್ಲ, ಎಂದಿಗೂ ಮರಣಿಸುವುದೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅವನು ಶಾಶ್ವತ, ಅವಿನಾಶಿ, ಮತ್ತು ತಾತ್ಕಾಲಿಕ ಭೌತಿಕ ದೇಹದ ನಾಶವಾದ ನಂತರ ಕೂಡ ಹಾಗೆಯೇ ಇರುತ್ತಾನೆ.