KN/Prabhupada 0020 - ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ವಿಷಯವೇನಲ್ಲ: Difference between revisions

m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
No edit summary
 
Line 31: Line 31:


<!-- BEGIN TRANSLATED TEXT -->
<!-- BEGIN TRANSLATED TEXT -->
ಕೃಷ್ಣನನ್ನು  ಅರ್ಥ  ಮಾಡಿಕೊಳ್ಳುವುದು ಸುಲಭದ ವಿಷಯವಲ್ಲ. ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ
ಕೃಷ್ಣನನ್ನು  ಅರ್ಥ  ಮಾಡಿಕೊಳ್ಳುವುದು ಸುಲಭದ ವಿಷಯವಲ್ಲ.  
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ವತಃ ||3||([[Vanisource:BG 7.3 (1972)|ಭ ಗೀ .]]) ಎಷ್ಟೊ ಸಾವಿರ, ಲಕ್ಷ ಜನರಲ್ಲಿ, ಒಬ್ಬ ತನ್ನ ಜೀವನ ಸಾರ್ಥಕಗೊಳಿಸಲು ಕಾತುರನಾಗಿರುತ್ತಾನೆ. ಯಾರಿಗು ಆಸಕ್ತಿ ಇಲ್ಲ. ವಾಸ್ತವವಾಗಿ ಅವರಿಗೆ ಜೀವನದ ನಿಜವಾದ ಯಶಸ್ಸು ಏನೆಂದು ತಿಳಿದಿಲ್ಲ. ಆಧುನಿಕ ನಾಗರೀಕತೆಯಲ್ಲಿ ಪ್ರತಿಯೊಬ್ಬನೂ ಯೋಚಿಸುತ್ತಿದ್ದಾನೆ, "ನನಗೆ ಒಂದು ಒಳ್ಳೆಯ ಹೆಂಡತಿ, ಕಾರು ಮತ್ತು ಮನೆ ಸಿಕ್ಕಿದರೆ ನನ್ನ ಜೀವನ ಯಶಸ್ವಿಯಾಗುತ್ತದೆ". ಅದು ಯಶಸ್ಸಲ್ಲ. ಅದು ತಾತ್ಕಾಲಿಕ. ಮಾಯೆಯ ಹಿಡಿತದಿಂದ ತಪ್ಪಿಸಿಕೊಳ್ಳುವುದೇ ನಿಜವಾದ ಯಶಸ್ಸು. ಈ ಭೌತಿಕ ಜೀವನವು ಜನ್ಮ, ಮೃತ್ಯು, ಮುಪ್ಪು ಮತ್ತು ರೋಗಗಳಿಂದ ಕೂಡಿದೆ. ನಾವು ಅನೇಕ ವಿಧದ ಜನ್ಮಗಳನ್ನು ಪಡೆದಿದ್ದೇವೆ. ಮತ್ತು ಈ ಮನುಷ್ಯ ಜನ್ಮವು ಜನನ ಮರಣ ಚಕ್ರದಿಂದ ಪಾರಾಗಲು ಒಂದು ಉತ್ತಮವಾದ ಅವಕಾಶ. ಜೀವಾತ್ಮನು ಭಗವಂತನಾದ ಶ್ರೀ ಕೃಷ್ಣನ ಒಂದು ಭಾಗವಾಗಿರುವ ಕಾರಣ, ಅದು ಶಾಶ್ವತ ಮತ್ತು ಸದಾ ಆನಂದದಿಂದ ಇರುತ್ತದೆ. ಸತ್-ಚಿತ್-ಆನಂದ, ಶಾಶ್ವತ, ಆನಂದ ಮತ್ತು ಸಂಪುರ್ಣ ಜ್ಞಾನ. ದುರದೃಷ್ಟವಶಾತ್, ಈ ಭೌತಿಕ ಬದ್ಧ ಜೀವನದಲ್ಲಿ ನಾವು ಅನೇಕ ಶರೀರಗಳನ್ನು ಬದಲಾಯಿಸುತ್ತೇವೆ. ಆದರೆ, ಜನ್ಮ, ಮೃತ್ಯುಗಳು ಇಲ್ಲದ ಆಧ್ಯಾತ್ಮಿಕ ಸ್ಥಿತಿಯನ್ನು ಮರಳಿ ಹೊಂದಲು ನಮಗೆ ಸಾಧ್ಯವಾಗುತ್ತಿಲ್ಲ. ಈ ವಿಜ್ಞಾನವು ಯಾರಿಗೂ ತಿಳಿದಿಲ್ಲ. ಒಮ್ಮೆ ಒಬ್ಬ ಭೌತಶಾಸ್ತ್ರಜ್ಞ ನನ್ನನ್ನು ಕಾಣಲು ಬಂದಿದ್ದರು. ಜೀವಾತ್ಮ ಮತ್ತು ಅದರ ನಿಜವಾದ ಸ್ಥಿತಿಯನ್ನು ಅರಿಯಲು ಬೇಕಾದ ಶಿಕ್ಷಣ ಎಲ್ಲಿದೆ? ವಾಸ್ತವವಾಗಿ ಇಡೀ ಪ್ರಪಂಚವೇ ಕತ್ತಲಿನಲ್ಲಿದೆ. ಕೇವಲ 50, 60 ಅಥವಾ 100 ವರ್ಷಗಳ ಈ ಜೀವನದಲ್ಲೇ ಜನರು ಆಸಕ್ತರಾಗಿದ್ದಾರೆ. ಜೀವಿಯು ಶಾಶ್ವತ, ಆನಂದಮಯ ಮತ್ತು ಜ್ಞಾನಮಯ ಎಂಬುದನ್ನು ಅವರು ತಿಳಿದಿಲ್ಲ. ಈ ಭೌತಿಕ ಶರೀರದಿಂದಾಗಿ ನಾವು ಜನ್ಮ, ಮೃತ್ಯು, ಮುಪ್ಪು ಮತ್ತು ರೋಗಗಳನ್ನು ಅನುಭವಿಸುತ್ತಿದ್ದೇವೆ. ಇದು ನಿರಂತರವಾಗಿ ನಡೆಯುತ್ತಿದೆ. ಬದ್ಧ ಜೀವಿಗಳ ಮೇಲೆ ಕರುಣೆಯನ್ನು ತೋರಲು ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಕೃಷ್ಣನೂ ಕೂಡ ಅವತರಿಸುತ್ತಾನೆ. ಆದರೆ ಆತನು ಅಷ್ಟೊಂದು ಉದಾರಿಯಲ್ಲ. ಕೃಷ್ಣನು ಹೇಳುತ್ತಾನೆ, "ನೀನು ಮೊದಲು ಶರಣಾಗು. ಆಮೇಲೆ ನಾನು ನಿನಗೆ ಆಶ್ರಯವನ್ನು ನೀಡುತ್ತೇನೆ". ಕೃಷ್ಣ ಮತ್ತು ಚೈತನ್ಯ ಮಹಾಪ್ರಭುಗಳ ನಡುವೆ ವ್ಯತ್ಯಾಸವಿಲ್ಲದಿದ್ದರೂ ಸಹ, ಚೈತನ್ಯ ಮಹಾಪ್ರಭುಗಳು ಕೃಷ್ಣನಿಗಿಂತಲೂ ಹೆಚ್ಚು ಕೃಪಾಳು. ಚೈತನ್ಯ ಮಹಾಪ್ರಭುಗಳ ಕೃಪೆಯಿಂದ ನಾವು ಸುಲಭವಾಗಿ ಕೃಷ್ಣನನ್ನು ಅರಿಯಲು ಸಾಧ್ಯವಾಗಿದೆ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಇಲ್ಲಿ ಇದ್ದಾರೆ. ನೀವೆಲ್ಲರೂ ಅವರನ್ನು ಪೂಜಿಸಿರಿ. ಇದರಲ್ಲಿ ಯಾವ ಕಷ್ಟವೂ ಇಲ್ಲ. ಯಜ್ಞೈ ಸಂಕೀರ್ತನ ಪ್ರಾಯೈ, ಯಜಂತಿ ಹಿ ಸುಮೇಧಸಃ ಕೃಷ್ಣ ವರ್ಣಂ ತ್ವಿಷಾ ಅಕೃಷ್ಣಂ ಸಾಂಗೋ ಪಾಂಗಾಸ್ತ್ರ ಪಾರ್ಶದಂ
 
ಯಜ್ಞೈ ಸಂಕೀರ್ತನ ಪ್ರಾಯೈರ್, ಯಜಂತಿ ಹಿ ಸುಮೇಧಸಃ ([[Vanisource:SB 11.5.32|ಭಾಗವತ 11.5.32]]) ನೀವು ಸುಮ್ಮನೆ ಹರೇಕೃಷ್ಣ ಮಂತ್ರವನ್ನು ಜಪಿಸಿ ಮತ್ತು ಸಾಧ್ಯವಾದದ್ದನ್ನು ಚೈತನ್ಯ ಮಹಾಪ್ರಭುಗಳಿಗೆ ಅರ್ಪಿಸಿ. ಅವರು ಬಹಳ ಕರುಣಾಳು. ಅವರು ನಮ್ಮ ಅಪರಾಧಗಳನ್ನು ನೋಡುವುದಿಲ್ಲ. ರಾಧಾ ಕೃಷ್ಣರ ಪೂಜೆಯು ಸ್ವಲ್ಪ ಕಷ್ಟಕರವಾದುದು. ಅವರನ್ನು ನಾವು ಬಹಳ ಗೌರವ ಮತ್ತು ಆದರದಿಂದ ಪೂಜಿಸಬೇಕು. ಆದರೆ ಚೈತನ್ಯ ಮಹಾಪ್ರಭುಗಳು ತಾವಾಗಿಯೇ ಪತಿತರ ಉದ್ಧಾರಕ್ಕಾಗಿ ಬಂದಿದ್ದಾರೆ. ಸ್ವಲ್ಪ ಮಾತ್ರ ಭಕ್ತಿ ಸೇವೆಯಿಂದ ಅವರು ತೃಪ್ತರಾಗುತ್ತಾರೆ. ಆದರೆ ನಿರ್ಲಕ್ಷ್ಯಿಸಬೇಡಿ. ಅವರು ಬಹಳ ಕೃಪಾಳು ಎಂಬ ಕಾರಣಕ್ಕೆ ನಾವು ಅವರ ಸ್ಥಾನವನ್ನು ಮರೆಯಬಾರದು. ಅವರು ದೇವೋತ್ತಮ ಪರಮ ಪುರುಷ. ನಾವು ಅವರಿಗೆ ಅತ್ಯಂತ ಹೆಚ್ಚು ಗೌರವವನ್ನು ಸಲ್ಲಿಸಬೇಕು. ಚೈತನ್ಯ ಮಹಾಪ್ರಭುಗಳು ನಮ್ಮ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಅವರನ್ನು ಪುಜಿಸಲು, ಸಂತೋಷಪಡಿಸಲು ಬಹಳ ಸುಲಭ. ಯಜ್ಞೈ ಸಂಕೀರ್ತನ ಪ್ರಾಯೈರ್, ಯಜಂತಿ ಹಿ ಸುಮೇಧಸಃ ನೀವು ಸುಮ್ಮನೆ ಹರೇ ಕೃಷ್ಣ ಮಹಾ ಮಂತ್ರವನ್ನು ಹಾಡಿ ಮತ್ತು ಕುಣಿಯಿರಿ. ಚೈತನ್ಯ ಮಹಾಪ್ರಭುಗಳಿಗೆ ಇದರಿಂದ ಬಹಳ ಸಂತೋಷವಾಗುತ್ತದೆ. ಭಗವಂತನ ನಾಮವನ್ನು ಹಾಡಿ ಕುಣಿಯುವದನ್ನು ಅವರೇ ಪರಿಚಯಿಸಿದರು. ಭಗವಂತನ್ನು ಅರಿಯಲು ಇದು ಅತಿ ಸುಲಭವಾದ ಮಾರ್ಗ. ಆದ್ದರಿಂದ, ಸಾಧ್ಯವಾದಷ್ಟು, ಸಾಧ್ಯವಾದರೆ 24 ಗಂಟೆಯೂ ಸಹ ಸಾಧ್ಯವಾಗದಿದ್ದರೆ, ಕನಿಷ್ಟ ಪಕ್ಷ 4 ಸಲ, 6 ಸಲ ಹರೇ ಕೃಷ್ಣ ಮಂತ್ರವನ್ನು ಚೈತನ್ಯ ಮಹಾಪ್ರಭುಗಳ ಮುಂದೆ ಜಪಿಸಿ ಮತ್ತು ನಿಮಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಇದು ಸತ್ಯ.  
:ಮನುಷ್ಯಾಣಾಂ ಸಹಸ್ರೇಷು  
:ಕಶ್ಚಿದ್ ಯತತಿ ಸಿದ್ಧಯೇ
:ಯತತಾಮಪಿ ಸಿದ್ಧಾನಾಂ  
:ಕಶ್ಚಿನ್ಮಾಂ ವೇತ್ತಿ ತತ್ವತಃ  
:([[Vanisource:BG 7.3 (1972)|ಭ.ಗೀ 7.3]])  
 
ಎಷ್ಟೋ ಸಾವಿರ, ದಶಲಕ್ಷಾಂತರ ಜನರಲ್ಲಿ ಒಬ್ಬ ತನ್ನ ಜೀವನ ಸಾರ್ಥಕಗೊಳಿಸಲು ಕಾತುರನಾಗಿರುತ್ತಾನೆ. ಯಾರಿಗೂ ಆಸಕ್ತಿ ಇಲ್ಲ. ವಾಸ್ತವವಾಗಿ ಅವರಿಗೆ ಜೀವನದ ನಿಜವಾದ ಯಶಸ್ಸು ಏನೆಂದು ತಿಳಿದಿಲ್ಲ. ಆಧುನಿಕ ನಾಗರೀಕತೆಯಲ್ಲಿ ಪ್ರತಿಯೊಬ್ಬನೂ ಯೋಚಿಸುತ್ತಿದ್ದಾನೆ, "ನನಗೆ ಒಂದು ಒಳ್ಳೆಯ ಹೆಂಡತಿ, ಕಾರು ಮತ್ತು ಮನೆ ಸಿಕ್ಕಿದರೆ ನನ್ನ ಜೀವನ ಯಶಸ್ವಿಯಾಗುತ್ತದೆ". ಅದು ಯಶಸ್ಸಲ್ಲ. ಅದು ತಾತ್ಕಾಲಿಕ. ಮಾಯೆಯ ಹಿಡಿತದಿಂದ, ಅಂದರೆ ಜನ್ಮ, ಮೃತ್ಯು, ಮುಪ್ಪು ಮತ್ತು ರೋಗಗಳಿಂದ ಕೂಡಿರುವ ಈ ಭೌತಿಕ ಜೀವನದಿಂದ ತಪ್ಪಿಸಿಕೊಳ್ಳುವುದೇ ನಿಜವಾದ ಯಶಸ್ಸು. ನಾವು ಅನೇಕ ವಿಧದ ಜನ್ಮಗಳನ್ನು ಪಡೆದಿದ್ದೇವೆ. ಮತ್ತು ಈ ಮನುಷ್ಯ ಜನ್ಮವು ಜನನ ಮರಣ ಚಕ್ರದಿಂದ ಪಾರಾಗಲು ಒಂದು ಉತ್ತಮವಾದ ಅವಕಾಶ. ಜೀವಾತ್ಮನು ಭಗವಂತನಾದ ಶ್ರೀ ಕೃಷ್ಣನ ಒಂದು ಭಾಗವಾಗಿರುವ ಕಾರಣ, ಅದು ಶಾಶ್ವತ ಮತ್ತು ಸದಾ ಆನಂದದಿಂದ ಇರುತ್ತದೆ. ಸತ್-ಚಿತ್-ಆನಂದ, ಶಾಶ್ವತ, ಆನಂದ ಮತ್ತು ಸಂಪುರ್ಣ ಜ್ಞಾನ. ದುರದೃಷ್ಟವಶಾತ್, ಈ ಭೌತಿಕ ಬದ್ಧ ಜೀವನದಲ್ಲಿ ನಾವು ಅನೇಕ ಶರೀರಗಳನ್ನು ಬದಲಾಯಿಸುತ್ತೇವೆ. ಆದರೆ, ಜನ್ಮ ಮೃತ್ಯುಗಳು ಇಲ್ಲದ ಆಧ್ಯಾತ್ಮಿಕ ಸ್ಥಿತಿಯನ್ನು ಮರಳಿ ಹೊಂದಲು ನಮಗೆ ಸಾಧ್ಯವಾಗುತ್ತಿಲ್ಲ. ಈ ವಿಜ್ಞಾನವು ಯಾರಿಗೂ ತಿಳಿದಿಲ್ಲ. ಒಮ್ಮೆ ಒಬ್ಬ ಭೌತಶಾಸ್ತ್ರಜ್ಞ ನನ್ನನ್ನು ಕಾಣಲು ಬಂದಿದ್ದರು. ಜೀವಾತ್ಮ ಮತ್ತು ಅದರ ನಿಜವಾದ ಸ್ಥಿತಿಯನ್ನು ಅರಿಯಲು ಬೇಕಾದ ಶಿಕ್ಷಣ ಎಲ್ಲಿದೆ? ವಾಸ್ತವವಾಗಿ ಇಡೀ ಪ್ರಪಂಚವೇ ಕತ್ತಲಿನಲ್ಲಿದೆ. ಕೇವಲ 50, 60, ಅಥವಾ 100 ವರ್ಷಗಳ ಈ ಜೀವನದಲ್ಲೇ ಜನರು ಆಸಕ್ತರಾಗಿದ್ದಾರೆ. ಜೀವಿಯು ಶಾಶ್ವತ, ಆನಂದಮಯ, ಮತ್ತು ಜ್ಞಾನಮಯ ಎಂಬುದನ್ನು ಅವರು ತಿಳಿದಿಲ್ಲ. ಈ ಭೌತಿಕ ಶರೀರದಿಂದಾಗಿ ನಾವು ಜನ್ಮ, ಮೃತ್ಯು, ಮುಪ್ಪು ಮತ್ತು ರೋಗಗಳನ್ನು ಅನುಭವಿಸುತ್ತಿದ್ದೇವೆ. ಇದು ನಿರಂತರವಾಗಿ ನಡೆಯುತ್ತಿದೆ.  
 
ಬದ್ಧ ಜೀವಿಗಳ ಮೇಲೆ ಕರುಣೆಯನ್ನು ತೋರಲು ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಕೃಷ್ಣನೂ ಕೂಡ ಅವತರಿಸುತ್ತಾನೆ. ಆದರೆ ಆತನು ಅಷ್ಟೊಂದು ಉದಾರಿಯಲ್ಲ. ಕೃಷ್ಣನು ಹೇಳುತ್ತಾನೆ, "ನೀನು ಮೊದಲು ಶರಣಾಗು. ಆಮೇಲೆ ನಾನು ನಿನಗೆ ಆಶ್ರಯವನ್ನು ನೀಡುತ್ತೇನೆ". ಕೃಷ್ಣ ಮತ್ತು ಚೈತನ್ಯ ಮಹಾಪ್ರಭುಗಳ ನಡುವೆ ವ್ಯತ್ಯಾಸವಿಲ್ಲದಿದ್ದರೂ ಸಹ, ಚೈತನ್ಯ ಮಹಾಪ್ರಭುಗಳು ಕೃಷ್ಣನಿಗಿಂತಲೂ ಹೆಚ್ಚು ಕೃಪಾಳು. ಚೈತನ್ಯ ಮಹಾಪ್ರಭುಗಳ ಕೃಪೆಯಿಂದ ನಾವು ಸುಲಭವಾಗಿ ಕೃಷ್ಣನನ್ನು ಅರಿಯಲು ಸಾಧ್ಯವಾಗಿದೆ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಇಲ್ಲಿ ಇದ್ದಾರೆ. ನೀವೆಲ್ಲರೂ ಅವರನ್ನು ಪೂಜಿಸಿರಿ. ಇದರಲ್ಲಿ ಯಾವ ಕಷ್ಟವೂ ಇಲ್ಲ. ಯಜ್ಞೈ ಸಂಕೀರ್ತನ ಪ್ರಾಯೈ, ಯಜಂತಿ ಹಿ ಸುಮೇಧಸಃ ಕೃಷ್ಣ ವರ್ಣಂ ತ್ವಿಷಾ ಅಕೃಷ್ಣಂ ಸಾಂಗೋ ಪಾಂಗಾಸ್ತ್ರ ಪಾರ್ಶದಂ ಯಜ್ಞೈ ಸಂಕೀರ್ತನ ಪ್ರಾಯೈರ್, ಯಜಂತಿ ಹಿ ಸುಮೇಧಸಃ ([[Vanisource:SB 11.5.32|ಶ್ರೀ.ಭಾ 11.5.32]]) ನೀವು ಸುಮ್ಮನೆ ಹರೇಕೃಷ್ಣ ಮಂತ್ರವನ್ನು ಜಪಿಸಿ ಮತ್ತು ಸಾಧ್ಯವಾದದ್ದನ್ನು ಚೈತನ್ಯ ಮಹಾಪ್ರಭುಗಳಿಗೆ ಅರ್ಪಿಸಿ. ಅವರು ಬಹಳ ಕರುಣಾಳು. ಅವರು ನಮ್ಮ ಅಪರಾಧಗಳನ್ನು ನೋಡುವುದಿಲ್ಲ. ರಾಧಾ ಕೃಷ್ಣರ ಪೂಜೆಯು ಸ್ವಲ್ಪ ಕಷ್ಟಕರವಾದುದು. ಅವರನ್ನು ನಾವು ಬಹಳ ಗೌರವ ಮತ್ತು ಆದರದಿಂದ ಪೂಜಿಸಬೇಕು. ಆದರೆ ಚೈತನ್ಯ ಮಹಾಪ್ರಭುಗಳು ತಾವಾಗಿಯೇ ಪತಿತರ ಉದ್ಧಾರಕ್ಕಾಗಿ ಬಂದಿದ್ದಾರೆ. ಸ್ವಲ್ಪ ಮಾತ್ರ ಭಕ್ತಿ ಸೇವೆಯಿಂದ ಅವರು ತೃಪ್ತರಾಗುತ್ತಾರೆ. ಆದರೆ ನಿರ್ಲಕ್ಷ್ಯಿಸಬೇಡಿ. ಅವರು ಬಹಳ ಕೃಪಾಳು ಎಂಬ ಕಾರಣಕ್ಕೆ ನಾವು ಅವರ ಸ್ಥಾನವನ್ನು ಮರೆಯಬಾರದು. ಅವರು ದೇವೋತ್ತಮ ಪರಮ ಪುರುಷ. ನಾವು ಅವರಿಗೆ ಅತ್ಯಂತ ಹೆಚ್ಚು ಗೌರವವನ್ನು ಸಲ್ಲಿಸಬೇಕು. ಚೈತನ್ಯ ಮಹಾಪ್ರಭುಗಳು ನಮ್ಮ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಅವರನ್ನು ಪುಜಿಸಲು, ಸಂತೋಷಪಡಿಸಲು ಬಹಳ ಸುಲಭ. ಯಜ್ಞೈ ಸಂಕೀರ್ತನ ಪ್ರಾಯೈರ್, ಯಜಂತಿ ಹಿ ಸುಮೇಧಸಃ ನೀವು ಸುಮ್ಮನೆ ಹರೇ ಕೃಷ್ಣ ಮಹಾಮಂತ್ರವನ್ನು ಹಾಡಿ ಮತ್ತು ಕುಣಿಯಿರಿ. ಚೈತನ್ಯ ಮಹಾಪ್ರಭುಗಳಿಗೆ ಇದರಿಂದ ಬಹಳ ಸಂತೋಷವಾಗುತ್ತದೆ. ಭಗವಂತನ ನಾಮವನ್ನು ಹಾಡಿ ಕುಣಿಯುವದನ್ನು ಅವರೇ ಪರಿಚಯಿಸಿದರು. ಭಗವಂತನ್ನು ಅರಿಯಲು ಇದು ಅತಿ ಸುಲಭವಾದ ಮಾರ್ಗ. ಆದ್ದರಿಂದ, ಸಾಧ್ಯವಾದಷ್ಟು, ಸಾಧ್ಯವಾದರೆ 24 ಗಂಟೆಯೂ ಸಹ ಸಾಧ್ಯವಾಗದಿದ್ದರೆ, ಕನಿಷ್ಟ ಪಕ್ಷ 4 ಸಲ, 6 ಸಲ ಹರೇ ಕೃಷ್ಣ ಮಂತ್ರವನ್ನು ಚೈತನ್ಯ ಮಹಾಪ್ರಭುಗಳ ಮುಂದೆ ಜಪಿಸಿದರೆ ನಿಮಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಇದು ಸತ್ಯ.  
<!-- END TRANSLATED TEXT -->
<!-- END TRANSLATED TEXT -->

Latest revision as of 01:03, 11 July 2024



Arrival Lecture -- Miami, February 25, 1975

ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ವಿಷಯವಲ್ಲ.

ಮನುಷ್ಯಾಣಾಂ ಸಹಸ್ರೇಷು
ಕಶ್ಚಿದ್ ಯತತಿ ಸಿದ್ಧಯೇ
ಯತತಾಮಪಿ ಸಿದ್ಧಾನಾಂ
ಕಶ್ಚಿನ್ಮಾಂ ವೇತ್ತಿ ತತ್ವತಃ
(ಭ.ಗೀ 7.3)

ಎಷ್ಟೋ ಸಾವಿರ, ದಶಲಕ್ಷಾಂತರ ಜನರಲ್ಲಿ ಒಬ್ಬ ತನ್ನ ಜೀವನ ಸಾರ್ಥಕಗೊಳಿಸಲು ಕಾತುರನಾಗಿರುತ್ತಾನೆ. ಯಾರಿಗೂ ಆಸಕ್ತಿ ಇಲ್ಲ. ವಾಸ್ತವವಾಗಿ ಅವರಿಗೆ ಜೀವನದ ನಿಜವಾದ ಯಶಸ್ಸು ಏನೆಂದು ತಿಳಿದಿಲ್ಲ. ಆಧುನಿಕ ನಾಗರೀಕತೆಯಲ್ಲಿ ಪ್ರತಿಯೊಬ್ಬನೂ ಯೋಚಿಸುತ್ತಿದ್ದಾನೆ, "ನನಗೆ ಒಂದು ಒಳ್ಳೆಯ ಹೆಂಡತಿ, ಕಾರು ಮತ್ತು ಮನೆ ಸಿಕ್ಕಿದರೆ ನನ್ನ ಜೀವನ ಯಶಸ್ವಿಯಾಗುತ್ತದೆ". ಅದು ಯಶಸ್ಸಲ್ಲ. ಅದು ತಾತ್ಕಾಲಿಕ. ಮಾಯೆಯ ಹಿಡಿತದಿಂದ, ಅಂದರೆ ಜನ್ಮ, ಮೃತ್ಯು, ಮುಪ್ಪು ಮತ್ತು ರೋಗಗಳಿಂದ ಕೂಡಿರುವ ಈ ಭೌತಿಕ ಜೀವನದಿಂದ ತಪ್ಪಿಸಿಕೊಳ್ಳುವುದೇ ನಿಜವಾದ ಯಶಸ್ಸು. ನಾವು ಅನೇಕ ವಿಧದ ಜನ್ಮಗಳನ್ನು ಪಡೆದಿದ್ದೇವೆ. ಮತ್ತು ಈ ಮನುಷ್ಯ ಜನ್ಮವು ಜನನ ಮರಣ ಚಕ್ರದಿಂದ ಪಾರಾಗಲು ಒಂದು ಉತ್ತಮವಾದ ಅವಕಾಶ. ಜೀವಾತ್ಮನು ಭಗವಂತನಾದ ಶ್ರೀ ಕೃಷ್ಣನ ಒಂದು ಭಾಗವಾಗಿರುವ ಕಾರಣ, ಅದು ಶಾಶ್ವತ ಮತ್ತು ಸದಾ ಆನಂದದಿಂದ ಇರುತ್ತದೆ. ಸತ್-ಚಿತ್-ಆನಂದ, ಶಾಶ್ವತ, ಆನಂದ ಮತ್ತು ಸಂಪುರ್ಣ ಜ್ಞಾನ. ದುರದೃಷ್ಟವಶಾತ್, ಈ ಭೌತಿಕ ಬದ್ಧ ಜೀವನದಲ್ಲಿ ನಾವು ಅನೇಕ ಶರೀರಗಳನ್ನು ಬದಲಾಯಿಸುತ್ತೇವೆ. ಆದರೆ, ಜನ್ಮ ಮೃತ್ಯುಗಳು ಇಲ್ಲದ ಆಧ್ಯಾತ್ಮಿಕ ಸ್ಥಿತಿಯನ್ನು ಮರಳಿ ಹೊಂದಲು ನಮಗೆ ಸಾಧ್ಯವಾಗುತ್ತಿಲ್ಲ. ಈ ವಿಜ್ಞಾನವು ಯಾರಿಗೂ ತಿಳಿದಿಲ್ಲ. ಒಮ್ಮೆ ಒಬ್ಬ ಭೌತಶಾಸ್ತ್ರಜ್ಞ ನನ್ನನ್ನು ಕಾಣಲು ಬಂದಿದ್ದರು. ಜೀವಾತ್ಮ ಮತ್ತು ಅದರ ನಿಜವಾದ ಸ್ಥಿತಿಯನ್ನು ಅರಿಯಲು ಬೇಕಾದ ಶಿಕ್ಷಣ ಎಲ್ಲಿದೆ? ವಾಸ್ತವವಾಗಿ ಇಡೀ ಪ್ರಪಂಚವೇ ಕತ್ತಲಿನಲ್ಲಿದೆ. ಕೇವಲ 50, 60, ಅಥವಾ 100 ವರ್ಷಗಳ ಈ ಜೀವನದಲ್ಲೇ ಜನರು ಆಸಕ್ತರಾಗಿದ್ದಾರೆ. ಜೀವಿಯು ಶಾಶ್ವತ, ಆನಂದಮಯ, ಮತ್ತು ಜ್ಞಾನಮಯ ಎಂಬುದನ್ನು ಅವರು ತಿಳಿದಿಲ್ಲ. ಈ ಭೌತಿಕ ಶರೀರದಿಂದಾಗಿ ನಾವು ಜನ್ಮ, ಮೃತ್ಯು, ಮುಪ್ಪು ಮತ್ತು ರೋಗಗಳನ್ನು ಅನುಭವಿಸುತ್ತಿದ್ದೇವೆ. ಇದು ನಿರಂತರವಾಗಿ ನಡೆಯುತ್ತಿದೆ.

ಬದ್ಧ ಜೀವಿಗಳ ಮೇಲೆ ಕರುಣೆಯನ್ನು ತೋರಲು ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಕೃಷ್ಣನೂ ಕೂಡ ಅವತರಿಸುತ್ತಾನೆ. ಆದರೆ ಆತನು ಅಷ್ಟೊಂದು ಉದಾರಿಯಲ್ಲ. ಕೃಷ್ಣನು ಹೇಳುತ್ತಾನೆ, "ನೀನು ಮೊದಲು ಶರಣಾಗು. ಆಮೇಲೆ ನಾನು ನಿನಗೆ ಆಶ್ರಯವನ್ನು ನೀಡುತ್ತೇನೆ". ಕೃಷ್ಣ ಮತ್ತು ಚೈತನ್ಯ ಮಹಾಪ್ರಭುಗಳ ನಡುವೆ ವ್ಯತ್ಯಾಸವಿಲ್ಲದಿದ್ದರೂ ಸಹ, ಚೈತನ್ಯ ಮಹಾಪ್ರಭುಗಳು ಕೃಷ್ಣನಿಗಿಂತಲೂ ಹೆಚ್ಚು ಕೃಪಾಳು. ಚೈತನ್ಯ ಮಹಾಪ್ರಭುಗಳ ಕೃಪೆಯಿಂದ ನಾವು ಸುಲಭವಾಗಿ ಕೃಷ್ಣನನ್ನು ಅರಿಯಲು ಸಾಧ್ಯವಾಗಿದೆ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಇಲ್ಲಿ ಇದ್ದಾರೆ. ನೀವೆಲ್ಲರೂ ಅವರನ್ನು ಪೂಜಿಸಿರಿ. ಇದರಲ್ಲಿ ಯಾವ ಕಷ್ಟವೂ ಇಲ್ಲ. ಯಜ್ಞೈ ಸಂಕೀರ್ತನ ಪ್ರಾಯೈ, ಯಜಂತಿ ಹಿ ಸುಮೇಧಸಃ ಕೃಷ್ಣ ವರ್ಣಂ ತ್ವಿಷಾ ಅಕೃಷ್ಣಂ ಸಾಂಗೋ ಪಾಂಗಾಸ್ತ್ರ ಪಾರ್ಶದಂ ಯಜ್ಞೈ ಸಂಕೀರ್ತನ ಪ್ರಾಯೈರ್, ಯಜಂತಿ ಹಿ ಸುಮೇಧಸಃ (ಶ್ರೀ.ಭಾ 11.5.32) ನೀವು ಸುಮ್ಮನೆ ಹರೇಕೃಷ್ಣ ಮಂತ್ರವನ್ನು ಜಪಿಸಿ ಮತ್ತು ಸಾಧ್ಯವಾದದ್ದನ್ನು ಚೈತನ್ಯ ಮಹಾಪ್ರಭುಗಳಿಗೆ ಅರ್ಪಿಸಿ. ಅವರು ಬಹಳ ಕರುಣಾಳು. ಅವರು ನಮ್ಮ ಅಪರಾಧಗಳನ್ನು ನೋಡುವುದಿಲ್ಲ. ರಾಧಾ ಕೃಷ್ಣರ ಪೂಜೆಯು ಸ್ವಲ್ಪ ಕಷ್ಟಕರವಾದುದು. ಅವರನ್ನು ನಾವು ಬಹಳ ಗೌರವ ಮತ್ತು ಆದರದಿಂದ ಪೂಜಿಸಬೇಕು. ಆದರೆ ಚೈತನ್ಯ ಮಹಾಪ್ರಭುಗಳು ತಾವಾಗಿಯೇ ಪತಿತರ ಉದ್ಧಾರಕ್ಕಾಗಿ ಬಂದಿದ್ದಾರೆ. ಸ್ವಲ್ಪ ಮಾತ್ರ ಭಕ್ತಿ ಸೇವೆಯಿಂದ ಅವರು ತೃಪ್ತರಾಗುತ್ತಾರೆ. ಆದರೆ ನಿರ್ಲಕ್ಷ್ಯಿಸಬೇಡಿ. ಅವರು ಬಹಳ ಕೃಪಾಳು ಎಂಬ ಕಾರಣಕ್ಕೆ ನಾವು ಅವರ ಸ್ಥಾನವನ್ನು ಮರೆಯಬಾರದು. ಅವರು ದೇವೋತ್ತಮ ಪರಮ ಪುರುಷ. ನಾವು ಅವರಿಗೆ ಅತ್ಯಂತ ಹೆಚ್ಚು ಗೌರವವನ್ನು ಸಲ್ಲಿಸಬೇಕು. ಚೈತನ್ಯ ಮಹಾಪ್ರಭುಗಳು ನಮ್ಮ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಅವರನ್ನು ಪುಜಿಸಲು, ಸಂತೋಷಪಡಿಸಲು ಬಹಳ ಸುಲಭ. ಯಜ್ಞೈ ಸಂಕೀರ್ತನ ಪ್ರಾಯೈರ್, ಯಜಂತಿ ಹಿ ಸುಮೇಧಸಃ ನೀವು ಸುಮ್ಮನೆ ಹರೇ ಕೃಷ್ಣ ಮಹಾಮಂತ್ರವನ್ನು ಹಾಡಿ ಮತ್ತು ಕುಣಿಯಿರಿ. ಚೈತನ್ಯ ಮಹಾಪ್ರಭುಗಳಿಗೆ ಇದರಿಂದ ಬಹಳ ಸಂತೋಷವಾಗುತ್ತದೆ. ಭಗವಂತನ ನಾಮವನ್ನು ಹಾಡಿ ಕುಣಿಯುವದನ್ನು ಅವರೇ ಪರಿಚಯಿಸಿದರು. ಭಗವಂತನ್ನು ಅರಿಯಲು ಇದು ಅತಿ ಸುಲಭವಾದ ಮಾರ್ಗ. ಆದ್ದರಿಂದ, ಸಾಧ್ಯವಾದಷ್ಟು, ಸಾಧ್ಯವಾದರೆ 24 ಗಂಟೆಯೂ ಸಹ ಸಾಧ್ಯವಾಗದಿದ್ದರೆ, ಕನಿಷ್ಟ ಪಕ್ಷ 4 ಸಲ, 6 ಸಲ ಹರೇ ಕೃಷ್ಣ ಮಂತ್ರವನ್ನು ಚೈತನ್ಯ ಮಹಾಪ್ರಭುಗಳ ಮುಂದೆ ಜಪಿಸಿದರೆ ನಿಮಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಇದು ಸತ್ಯ.