KN/670104c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(No difference)

Revision as of 08:50, 23 June 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇಂದ್ರಿಯಗಳನ್ನು ನಿಯಂತ್ರಿಸುವ ಪ್ರಮುಖ ಕಾರ್ಯವೆಂದರೆ ನಾಲಿಗೆ. ನಾಲಿಗೆ ಎಲ್ಲಾ ಇಂದ್ರಿಯಗಳ ಪ್ರಾರಂಭ ಎಂದು ನಾನು ಹಲವಾರು ಬಾರಿ ವಿವರಿಸಿದ್ದೇನೆ. ಆದ್ದರಿಂದ ನೀವು ನಾಲಿಗೆಯನ್ನು ನಿಯಂತ್ರಿಸಬಹುದಾದರೆ, ನೀವು ಇತರ ಇಂದ್ರಿಯಗಳನ್ನು ಸಹ ನಿಯಂತ್ರಿಸಬಹುದು. ಮತ್ತು ನಿಮಗೆ ನಾಲಿಗೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ನೀವು ಇತರ ಇಂದ್ರಿಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ಇಂದ್ರಿಯಗಳನ್ನು ನಿಯಂತ್ರಿಸಲು ಪ್ರಾರಂಭಿಸಬೇಕು. ನಾಲಿಗೆ ಎರಡು ಕಾರ್ಯಗಳನ್ನು ಹೊಂದಿದೆ: ರುಚಿ ಮತ್ತು ಕಂಪಿಸುವುದು. ಕಂಪಿಸುವ ಕ್ರಿಯೆ; ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮಾ, ಹರೇ ರಾಮಾ, ರಾಮಾ ರಾಮಾ ಹರೇ ಹರೇ ಮತ್ತು ಕೃಷ್ಣ ಪ್ರಸಾದವನ್ನು ಸೇವಿಸುವುದಕ್ಕೆ. ಆಗ ನೀವೇ ನಿಮ್ಮ ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಮುಂದುವರಿಯುವುದನ್ನು ಗಮನಿಸುವಿರಿ. ಇದನ್ನು ದಮಃ ಎನ್ನುತ್ತಾರೆ.

ಆದ್ದರಿಂದ ನಿಮ್ಮ ಇಂದ್ರಿಯಗಳನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾದ ತಕ್ಷಣ, ಸ್ವಾಭಾವಿಕವಾಗಿ ನಿಮ್ಮ ಮನಸ್ಸನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ. ಅದನ್ನು ಸಮಃ ಎಂದು ಕರೆಯಲಾಗುತ್ತದೆ. ಆದ್ದರಿಂದ ಇವುಗಳು ಪ್ರಕ್ರಿಯೆಗಳು. ಆದ್ದರಿಂದ ನಾವು ಈ ಪ್ರಕ್ರಿಯೆಯನ್ನು ಅಭ್ಯಾಸ ಮಾಡಬೇಕು ಮತ್ತು ಈ ಪ್ರಕ್ರಿಯೆಯನ್ನು ವಿಶ್ವಾಸಾರ್ಹ ಮೂಲಗಳಿಂದ ಕಲಿಯಬೇಕು ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಬೇಕು.ಇದು ಈ ಮಾನವ ಜೀವನ ರೂಪದ ನಿಜವಾದ ಬಳಕೆಯಾಗಿದೆ.ನಾವು ಅದನ್ನು ಕಲಿಯಬೇಕು, ನಾವು ಅದನ್ನು ಅಭ್ಯಾಸ ಮಾಡಬೇಕು ಮತ್ತು ನಮ್ಮ ಜೀವನವನ್ನು ಯಶಸ್ವಿಯಾಗಿ ಮಾಡಬೇಕು. ತುಂಬಾ ಧನ್ಯವಾದಗಳು. "

670104 - ಉಪನ್ಯಾಸ ಭ. ಗೀ ೧೦.೦೪ - ನ್ಯೂ ಯಾರ್ಕ್