KN/670331 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 07:13, 23 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಹೇಳುತ್ತಾನೆ, ಅಪಿ ಚೇತ್ ಸು-ದುರಾಚಾರಾಃ. ನೀವು ಕೆಲವು ಭಕ್ತರಲ್ಲಿ ಕೆಲವು ಕೆಟ್ಟ ನಡವಳಿಕೆಯನ್ನು ಕಂಡುಕೊಂಡರೂ, ಗುಣಮಟ್ಟಲ್ಲದ್ದು, ಏಕೆಂದರೆ ಅವನು ಭಕ್ತನಾಗಿರುವುದರಿಂದ, ಅವನು ನಿರಂತರವಾಗಿ ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಸಿಕೊಂಡಿದ್ದಾನೆ, ಆದ್ದರಿಂದ ಅವನು ಸಾಧು. ಅವನ ಹಿಂದಿನ ಜೀವನದ ಕಾರಣದಿಂದಾಗಿ ಅವನಿಗೆ ಕೆಟ್ಟ ಅಭ್ಯಾಸಗಳು, ಸ್ವಲ್ಪ ಇದ್ದರೂ ಸಹ ಇದು ಅಪ್ರಸ್ತುತವಾಗುತ್ತದೆ, ಏಕೆಂದರೆ ಅದು ನಿಲ್ಲುತ್ತದೆ. ಅವನು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಿರುವುದರ ಕಾರಣ, ಎಲ್ಲಾ ಅಸಂಬದ್ಧ ಅಭ್ಯಾಸಗಳು ನಿಲ್ಲುತ್ತವೆ. ಸ್ವಿಚ್ ಆಫ್ ಆಗಿದೆ. ಒಬ್ಬರು ಕೃಷ್ಣನ ಬಳಿಗೆ ಬಂದ ತಕ್ಷಣ, ಒಬ್ಬರನ್ನು ಕೆಟ್ಟ ಅಭ್ಯಾಸಗಳಿಗೆ ಪ್ರೇರೇಪಿಸಿದ ಸ್ವಿಚ್, ಅದು ತಕ್ಷಣವೇ ಆಫ್ ಆಗುತ್ತದೆ. , ಎಲ್ಲಾ ಅಸಂಬದ್ಧ ಅಭ್ಯಾಸಗಳು ನಿಲ್ಲುತ್ತವೆ. ಆದ್ದರಿಂದ, ಯಾವ ತರಹ ಶಾಖವಿರುತ್ತದೋ, ತಾಪನ, ಹೀಟರ್, ಎಲೆಕ್ಟ್ರಿಕ್ ಹೀಟರ್ ಇರುವಂತೆಯೇ. ನೀವು ಸ್ವಿಚ್ ಆಫ್ ಮಾಡಿದರೆ ಅದು ಇನ್ನೂ ಬಿಸಿಯಾಗಿರುತ್ತದೆ, ಆದರೆ ಕ್ರಮೇಣ ತಾಪಮಾನವು ಕಡಿಮೆಯಾಗುತ್ತದೆ ಮತ್ತು ಅದು ತಂಪಾಗುತ್ತದೆ. "
670331 - ಉಪನ್ಯಾಸ ಭ. ಗೀತಾ ೧೦.೦೮ - ಸ್ಯಾನ್ ಫ್ರಾನ್ಸಿಸ್ಕೋ