KN/680318 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 07:21, 18 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
" ಸುಖದೇವ ಗೋಸ್ವಾಮಿ ಹೇಳುತ್ತಾರೆ, 'ತತಸ್ ಚಾನು ಅನುದಿನಂ'. ಅನುದಿನಂ ಅಂದರೆ 'ದಿನಗಳು ಕಳೆದಂತೆ'. ಹಾಗಾದರೆ ಏನು ಲಕ್ಷಣಗಳು ಇರುತ್ತವೇ ? ಈಗ, ನಾಂಕ್ಷತಿ. ನಾಂಕ್ಷತಿ ಅಂದರೆ ಕ್ರಮೇಣವಾಗಿ ಕ್ಷೀಣಿಸುವುದು ಎಂದರ್ಥ, ಕ್ಷೀಣಿಸುವುದು. ಯಾವುದು ಕ್ಷೀಣಿಸುವುದು ? ಧರ್ಮ, ಧಾರ್ಮಿಕತೆ; ಸತ್ಯಂ, ಸತ್ಯತೆ; ಶೌಚಂ, ಶೌಚ್ಯತೇ; ಕ್ಷಮಾ, ಕ್ಷಮತೆ; ದಯಾ, ದಯೆ; ಆಯುಹ್, ಜೀವನದ ಅವಧಿ; ಬಲ, ಶಕ್ತಿ; ಮತ್ತು ಸ್ಮ್ರತಿ, ಜ್ಞಾಪಕ; ಈ ಎಂಟು ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಮೊದಲ ವಿಷಯ ಧಾರ್ಮಿಕತೆ. ಕಲಿಯುಗದ ಕಾಲವು ಹೆಚ್ಚುತ್ತಿದ್ದಂತೆ, ಜನರು ಹೆಚ್ಚು ಹೆಚ್ಚು ಅಧರ್ಮಿಗಳಾಗುತ್ತಾರೆ. ಮತ್ತು ಅವರು ಹೆಚ್ಚು ಹೆಚ್ಚು ಸುಳ್ಳುಗಾರರಾಗುತ್ತಾರೆ. ಅವರು ಏನು ಸತ್ಯವೋ ಅದನ್ನು ಮಾತಾಡಲು ಮರೆಯುತ್ತಾರೆ. ಶೌಚಂ, ಶೌಚ್ಯತೇ, ಅದೂ ಕೂಡ ಕ್ಷೀಣವಾಗುತ್ತದೆ.
680318 - ಉಪನ್ಯಾಸ ಶ್ರೀ.ಭಾ. ೧೨.೦೨.೦೧- ಸ್ಯಾನ್ ಫ್ರಾನ್ಸಿಸ್ಕೋ