KN/680611b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(No difference)

Revision as of 06:08, 31 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಎಷ್ಟೊಂದು ಸೌಲಭ್ಯವನ್ನು ನೀಡಿದೆ. ಮತ್ತು ಭಗವದ್ಗೀತೆ ಇದೆ. ನಿಮ್ಮ ಎಲ್ಲಾ ವಿತರ್ಕಗಳಿಂದ, ನಿಮ್ಮ ಎಲ್ಲಾ ವಾದದಿಂದ, ನಿಮ್ಮ ಎಲ್ಲಾ ಇಂದ್ರಿಯಗಳೊಂದಿಗೆ ದೇವರು ಏನು ಎಂದು ನೀವು ಅರ್ಥಮಾಡಿಕೊಳ್ಳಬಹುದು. ಇದು ಏನೂ ಸಿದ್ಧಾಂತವಲ್ಲ. ಇದು ಎಲ್ಲಾ ಸಮಂಜಸ, ತಾತ್ವಿಕ. ದುರದೃಷ್ಟವಶಾತ್ ಅವರು ದೇವರು ಸತ್ತಿದ್ದಾನೆ ಎಂದು ನಿರ್ಧರಿಸಿದ್ದಾರೆ. ದೇವರು ಹೇಗೆ ಸತ್ತನು? ಇದು ಮತ್ತೊಂದು ಮೂಢತನವಾಗಿದೆ. ನೀವು ಸತ್ತಿಲ್ಲ; ದೇವರು ಹೇಗೆ ಸಾಯಬಲ್ಲನು? ಆದ್ದರಿಂದ ದೇವರು ಸತ್ತಿದ್ದಾನೆ ಎಂಬ ಪ್ರಶ್ನೆಯೇ ಇಲ್ಲ. ಸೂರ್ಯನು ಯಾವಾಗಲೂ ಇರುವಂತೆಯೇ ಅವನು ಯಾವಾಗಲೂ ಇರುತ್ತಾನೆ. ಕೇವಲ ಮೂಢರು, ಅವರು ಸೂರ್ಯ ಇಲ್ಲ ಎಂದು ಹೇಳುತ್ತಾರೆ. ಸೂರ್ಯನಿದ್ದಾನೆ. ಇದು ನಿಮ್ಮ ದೃಷ್ಟಿಯಿಂದ ಹೊರಗಿದೆ, ಅಷ್ಟೆ. ಅದೇ ರೀತಿ, "ನಾವು ದೇವರನ್ನು ನೋಡಲಾಗದ ಕಾರಣ, ದೇವರು ಸತ್ತಿದ್ದಾನೆ", ಇವುಗಳು ಮೂಢತನ. ಇದು ತುಂಬಾ ಒಳ್ಳೆಯ ನಿಲವಲ್ಲ. "
680611 - ಉಪನ್ಯಾಸ - ಮಾಂಟ್ರಿಯಲ್