KN/680925 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್: Difference between revisions

(No difference)

Revision as of 10:04, 1 October 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಭಗವಾನ್ ಚೈತನ್ಯ ಹೇಳಿದ್ದನ್ನು ಕರಾರುವಕ್ಕಾಗಿ ಯಾರು ಮಾತನಾಡುತ್ತಾರೋ, ಕೃಷ್ಣನು ಏನು ಹೇಳಿದನೋ ಅದರಂತೆಯೇ, ಆಗ ಅವರು ಆಧ್ಯಾತ್ಮಿಕ ಗುರುಗಳು. 'ನಾನು ಎಂ.ಎ ಉತ್ತೀರ್ಣನಾಗಿದ್ದೇನೆ' ಎಂದು ಹೇಳುವ ಶಿಕ್ಷಕನಂತೆ. ಈಗ ಪುರಾವೆ ಏನು? ಅಂದರೆ ಅವರು ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತಾಡುವಂತೆ ನಿಖರವಾಗಿ ಮಾತನಾಡಿದರೆ, ಆಗ ಅವರು ಎಂ.ಎ. ಒಬ್ಬರು ವೈದ್ಯಕೀಯ ಅಭ್ಯಸಿಕರಾಗಿದ್ದಾರೆ, ಅವರು ವೈದ್ಯಕೀಯ ಕಾಲೇಜಿನಲ್ಲಿ ಇತರ ವೈದ್ಯಕೀಯ ಅಭ್ಯಾಸಿಕರಿಂದ ಅನುಮೋದನೆ ಪಡೆದಿದ್ದರೆ, ಅವರು ವೈದ್ಯಕೀಯ ಅಭ್ಯಾಸಿಕರು. ಅಂತೆಯೇ, ನೀವು ಆಧ್ಯಾತ್ಮಿಕ ಗುರುಗಳು ಯಾರು ಎಂದು ಪರೀಕ್ಷಿಸಲು ಬಯಸಿದರೆ, ನೀವು ಪ್ರಮಾಣಿತ ಆಧ್ಯಾತ್ಮಿಕ ಗುರುಗಳನ್ನು ನೋಡಬೇಕು, ಕೃಷ್ಣ ಮತ್ತು ಭಗವಾನ್ ಚೈತನ್ಯ ಮತ್ತು ಅಂತಹುದೇ. ಲಾರ್ಡ್ ಜೀಸಸ್ ಕ್ರೈಸ್ಟ್ ಸಹ, ಅಲ್ಲಿ ಇದ್ದಾರೆ..., ಭಗವಾನ್ ಬುದ್ಧ, ಅವರುಗಳು ಕೂಡ ಆಧ್ಯಾತ್ಮಿಕ ಗುರುಗಳು, ಆದರೆ ಅವರು ವಿಭಿನ್ನ ಸಂದರ್ಭಗಳಲ್ಲಿ ಮಾತನಾಡಿದರು. ಅದು ವಿಭಿನ್ನ ವಿಷಯ. ಆದರೆ ನೀವು ಆಧ್ಯಾತ್ಮಿಕ ಗುರುಗಳು ಯಾರು ಎಂದು ತಿಳಿಯಬೇಕಾದರೆ ನೀವು ಅವನು ಪ್ರಾಮಾಣಿಕ ಆಧ್ಯಾತ್ಮಿಕ ಗುರುಗಳಂತೆಯೇ ಕರಾರುವಕ್ಕಾಗಿ ಮಾತನಾಡುತ್ತಿದ್ದಾನೆಯೇ ಎಂದು ಅವನನ್ನು ಪರೀಕ್ಷಿಸಬೇಕು."
680925 - ಉಪನ್ಯಾಸ ಭಗವಾನ್ ಚೈತನ್ಯರ ಬೋಧನೆಗಳು - ಸಿಯಾಟಲ್