KN/680930b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್: Difference between revisions

(No difference)

Revision as of 08:33, 20 October 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಮತ್ತು ಗೋಪಿ, ಈ ಸಂಬಂಧವು ಎಷ್ಟು ನಿಕಟ ಮತ್ತು ಪರಿಶುದ್ಧವೆಂದರೆ, 'ನನ್ನ ಪ್ರಿಯ ಗೋಪಿಯರೆ, ನಿಮ್ಮ ಪ್ರೀತಿಯ ವ್ಯವಹಾರಗಳ ಬಗ್ಗೆ ನಿಮಗೆ ಮರುಪಾವತಿ ಮಾಡುವುದು ನನ್ನ ಶಕ್ತಿಯಲ್ಲಿಲ್ಲ' ಎಂದು ಕೃಷ್ಣ ಸ್ವತಃ ಒಪ್ಪಿಕೊಂಡಿದ್ದಾನೆ. ಕೃಷ್ಣ ದೇವೋತ್ತಮ ಪರಮ ಪುರುಷ. ಅವನೇ ದಿವಾಳಿಯಾದ, ಅದು 'ನನ್ನ ಪ್ರೀತಿಯ ಗೋಪಿಯರೆ, ನನ್ನನ್ನು ಪ್ರೀತಿಸುವ ಮೂಲಕ ನೀವು ರಚಿಸಿದ ನಿಮ್ಮ ಋಣಗಳನ್ನು ಮರುಪಾವತಿಸಲು ನನಗೆ ಸಾಧ್ಯವಿಲ್ಲ'. ಆದ್ದರಿಂದ ಅದು ಪ್ರೀತಿಯ ಅತ್ಯುನ್ನತ ಪರಿಪೂರ್ಣತೆಯಾಗಿದೆ.

ರಮ್ಯಾ ಕಾಚಿದ್ ಉಪಾಸಾನಾ ವ್ರಜ-ವಧು (ಚೈತನ್ಯ ಮಂಜುಸ). ನಾನು ಕೇವಲ ಚೈತನ್ಯ ಮಹಾಪ್ರಭುಗಳ ಧ್ಯೇಯವನ್ನು ವಿವರಿಸುತ್ತಿದ್ದೇನೆ. ಅವರು ನಮಗೆ ಆದೇಶವನ್ನು ಕೊಡುತ್ತಿದ್ದಾರೆ, ಅವರ ಧ್ಯೇಯವು, ಪ್ರೀತಿಯ ವಸ್ತುವೆಂದರೆ ಕೇವಲ ಕೃಷ್ಣ ಮಾತ್ರ ಮತ್ತು ಅವನ ವೃಂದಾವನ ಭೂಮಿ. ಗೋಪಿಯರು ಅವನನ್ನು ಪ್ರೀತಿಸುವ ಪ್ರಕ್ರಿಯೆಯು ಎದ್ದುಕಾಣುವ ಉದಾಹರಣೆಯಾಗಿದೆ. ಯಾರೂ ತಲುಪಲು ಸಾಧ್ಯವಿಲ್ಲ. ಭಕ್ತರಲ್ಲಿ ಹಲವು ಹಂತಗಳಿವೆ, ಮತ್ತು ಗೋಪಿಯರು ಅತ್ಯುನ್ನತ ವೇದಿಕೆಯಲ್ಲಿದ್ದಾರೆಂಬುದಾಗಿ ಭಾವನೆ. ಮತ್ತು ಗೋಪಿಗಳ ನಡುವೆ ರಾಧಾ ರಾಣಿ ಸರ್ವೋಚ್ಚರು. ಆದ್ದರಿಂದ ರಾಧಾ ರಾಣಿಯ ಪ್ರೀತಿಯನ್ನು ಯಾರೂ ಮೀರಿಸಲಾಗುವುದಿಲ್ಲ.

680930 - ಉಪನ್ಯಾಸ - ಸಿಯಾಟಲ್