KN/681007 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್: Difference between revisions

(No difference)

Revision as of 09:19, 26 October 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
" ಮತ್ತೊಂದು ಆಧ್ಯಾತ್ಮಿಕ ಆಕಾಶವಿದೆ, ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ, ಅಲ್ಲೆಲ್ಲೂ ಸೂರ್ಯನ ಬೆಳಕಿನ ಅಗತ್ಯವಿಲ್ಲ, ನ ಯತ್ರ ಭಾಸಯತೆ ಸೂರ್ಯೋ. ಸೂರ್ಯೋ ಎಂದರೆ ಸೂರ್ಯ, ಮತ್ತು ಭಾಸಾಯತೆ ಎಂದರೆ ಸೂರ್ಯನ ಬೆಳಕನ್ನು ವಿತರಿಸುವುದು. ಆದ್ದರಿಂದ ಅಲ್ಲಿ ಸೂರ್ಯನ ಬೆಳಕಿನ ಅಗತ್ಯವಿಲ್ಲ. ನ ಯತ್ರ ಭಾಸಯತೆ ಸೂರ್ಯೋ ನ ಶಶಾಂಕೊ. ಶಶಾಂಕೊ ಎಂದರೆ ಚಂದ್ರ. ಅಲ್ಲಿ ಚಂದ್ರನ ಬೆಳಕಿನ ಅಗತ್ಯವೂ ಇಲ್ಲ. ನ ಶಶಾಂಕೊ ನ ಪಾವಕಃ. ಅಲ್ಲಿ ವಿದ್ಯುತ್ತಿನ ಅಗತ್ಯವೂ ಇಲ್ಲ. ಅಂದರೆ ಬೆಳಕಿನ ರಾಜ್ಯ. ಇಲ್ಲಿ, ಈ ಭೌತಿಕ ಪ್ರಪಂಚವು ಕತ್ತಲೆಯ ರಾಜ್ಯವಾಗಿದೆ. ಅದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದು ವಾಸ್ತವಿಕವಾಗಿ ಕತ್ತಲೆ. ಈ ಭೂಮಿಯ ಇನ್ನೊಂದು ಬದಿಯಲ್ಲಿ ಸೂರ್ಯ ಇದ್ದ ತಕ್ಷಣ ಇಲ್ಲಿ ಕತ್ತಲೆ. ಅಂದರೆ ಸ್ವಾಭಾವಿಕವಾಗಿ ಅದು ಕತ್ತಲೆ. ಸುಮ್ಮನೆ ಸೂರ್ಯನ ಬೆಳಕು, ಚಂದ್ರನ ಬೆಳಕು ಮತ್ತು ವಿದ್ಯುತ್ತಿನಿಂದ ನಾವು ಅದನ್ನು ಬೆಳಗಿಸುತ್ತಿದ್ದೇವೆ. ವಾಸ್ತವವಾಗಿ, ಇದು ಕತ್ತಲೆ. ಮತ್ತು ಕತ್ತಲೆ ಎಂದರೆ ಅಜ್ಞಾನ ಎಂದೂ ಅರ್ಥ. "
681007 - ಉಪನ್ಯಾಸ - ಸಿಯಾಟಲ್