KN/681026 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(No difference)

Revision as of 04:24, 3 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಧ್ಯಾನದ ಪ್ರಕ್ರಿಯೆಯು ಮನಸ್ಸನ್ನು ಸಮತೋಲನದಲ್ಲಿಡಲೆಂದು ಉದ್ದೇಶಿಸಿದೆ. ಅಂದರೆ ಶಮ, ಮತ್ತು ದಮ, ದಮ ಎಂದರೆ ಇಂದ್ರಿಯಗಳನ್ನು ನಿಯಂತ್ರಿಸುವುದು. ನನ್ನ ಇಂದ್ರಿಯಗಳು ಯಾವಾಗಲೂ ನನ್ನನ್ನು ನಿರ್ದೇಶಿಸುತ್ತಿವೆ, 'ಓಹ್, ನೀನು ಇದನ್ನು ತೆಗೆದುಕೊ. ನೀನು ಇದನ್ನು ಆನಂದಿಸು. ನೀನು ಅದನ್ನು ಮಾಡು. ನೀನು ಅದನ್ನು ಮಾಡು'. ಮತ್ತು ನಾನು ಓಡಿಸಲ್ಪಟ್ಟಿದ್ದೇನೆ. ನಾವೆಲ್ಲರೂ ಇಂದ್ರಿಯಗಳ ಸೇವಕರು. ಆದ್ದರಿಂದ ನಾವು ಇಂದ್ರಿಯಗಳ ಸೇವಕರಾಗಿದ್ದೇವೆ. ನಾವು ದೇವರ ಸೇವಕರಾಗಿ ರೂಪಾಂತರಗೊಳ್ಳಬೇಕು, ಅಷ್ಟೆ. ಅದು ಕೃಷ್ಣ ಪ್ರಜ್ಞೆ. ನೀವು ಈಗಾಗಲೇ ಸೇವಕರಾಗಿದ್ದೀರಿ, ಆದರೆ ನೀವು ಇಂದ್ರಿಯಗಳ ಸೇವಕರಾಗಿದ್ದೀರಿ, ಮತ್ತು ನೀವು ಆಜ್ಞಾಪಿಸಲ್ಪಟ್ಟಿದ್ದೀರಿ ಮತ್ತು ನಿರಾಶೆಗೊಂಡಿದ್ದೀರಿ. ನೀವು ದೇವರ ಸೇವಕರಾಗಿ. ನೀವು ಯಜಮಾನನಾಗಲು ಸಾಧ್ಯವಿಲ್ಲ, ಅದು ನಿಮ್ಮ ಸ್ಥಾನವಲ್ಲ. ನೀವು ಸೇವಕರಾಗಬೇಕು. ನೀವು ದೇವರ ಸೇವಕರಾಗದಿದ್ದರೆ, ನಂತರ ನೀವು ನಿಮ್ಮ ಇಂದ್ರಿಯಗಳ ಸೇವಕರಾಗುತ್ತೀರಿ.ಅದು ನಿಮ್ಮ ಸ್ಥಾನ. ಆದ್ದರಿಂದ ಯಾರೊಬ್ಬರು ಬುದ್ಧಿವಂತರೋ, ಆದ್ದರಿಂದ ಅವರು ಅರ್ಥಮಾಡಿಕೊಳ್ಳುತ್ತಾರೆ 'ನಾನು ಸೇವಕನಾಗೆ ಉಳಿಯಬೇಕಾದರೆ, ನಾನು ಇಂದ್ರಿಯಗಳ ಸೇವಕನಾಗಿ ಏಕೆ ಉಳಿಯಬೇಕು ? ಕೃಷ್ಣನಿಗಾಗಿ ಏಕಿಲ್ಲ ? ' ಇದು ಬುದ್ಧಿವಂತಿಕೆ. ಇದು ಬುದ್ಧಿವಂತಿಕೆ. ಮತ್ತು ಯಾರು ಮೂರ್ಖತನದಿಂದ ತಮ್ಮನ್ನು ಇಂದ್ರಿಯಗಳ ಸೇವಕರಾಗಿ ಇಟ್ಟುಕೊಳ್ಳುವರೋ ಅವರು ತಮ್ಮ ಜೀವನವನ್ನು ಹಾಳು ಮಾಡುತ್ತಿದ್ದಾರೆ. ತುಂಬಾ ಧನ್ಯವಾದಗಳು."
681026 - ಉಪನ್ಯಾಸ - ಮಾಂಟ್ರಿಯಲ್