KN/681211 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(No difference)

Revision as of 01:53, 9 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಭಾಗವತದಲ್ಲಿ ಹೇಳಿದೆ, ನೈಶಾಮ್ ಮತೀಸ್ ತಾವದ್ ಉರುಕ್ರಮಾಂಘ್ರಿಮ್ (ಶ್ರೀ.ಭಾ. ೭.೫.೩೨). ಯಾರಾದರೂ ಉರುಕ್ರಮಾಂಘ್ರಿ ಅಥವಾ ಸರ್ವೋಚ್ಚ ಭಗವಂತನನ್ನು ಅರ್ಥಮಾಡಿಕೊಂಡರೆ, ಅವನಿಗೆ, ಆತ್ಮದ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟವಲ್ಲ. ಯಾವ ರೀತಿಯಲ್ಲಿ ಒಬ್ಬನು ಸೂರ್ಯ ಮಂಡಲವನ್ನು ನೋಡಿರುವನೋ, ಅವನಿಗೆ ಸೂರ್ಯನ ಬೆಳಕು ಏನೆಂದು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟವಲ್ಲ.ಆದರೆ ನಿರಂತರವಾಗಿ ಕತ್ತಲೆಯಲ್ಲಿ ಇರುವವನು, ಸೂರ್ಯನ ಬೆಳಕನ್ನೂ ನೋಡಿಲ್ಲ ಅಥವಾ ಸೂರ್ಯ ಮಂಡಲವನ್ನೂ ನೋಡಿಲ್ಲ, ಅವನಿಗೆ, ಬೆಳಕು ಏನು, ಸೂರ್ಯ ಏನು, ಅದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಆದ್ದರಿಂದ ಉರುಕ್ರಮಾಂಘ್ರಿಮ್, ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮತ್ತು ಅದು ಅರ್ಥವಾದರೆ ಸ್ಪೃಶತ್ಯ್ ಅನರ್ಥಾಪಗಮೊ ಯದ್-ಅರ್ಥಹ್. ಒಬ್ಬನು ಉರುಕ್ರಮಾಂಘ್ರಿಮ್, ದೇವೋತ್ತಮ ಎಂದರೇನು ಎಂದು ಅರ್ಥಮಾಡಿಕೊಂಡರೆ, ಆ ಮರುಕ್ಷಣವೇ ಅವನ ಅಜ್ಞಾನ, ಭ್ರಮೆ ಎಲ್ಲವೂ ಮುಗಿಯುವುದು."
681211 - ಉಪನ್ಯಾಸ ಭ. ಗೀತಾ ೦೨.೨೭-೩೮ - ಲಾಸ್ ಎಂಜಲೀಸ್