KN/681219c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(No difference)

Revision as of 09:59, 10 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜಗೈ-ಮಾಧೈ ಇವರ ಹಾಗೆ. ಶ್ರೀ ಚೈತನ್ಯ ಮಹಾಪ್ರಭು ಅವರ ಕಾಲದಲ್ಲಿ ಜಗೈ-ಮಾಧೈ, ಅವರು ಅತ್ಯಂತ ದೊಡ್ಡ ಪಾಪಿ ಪುರುಷರು. ಆದ್ದರಿಂದ ಯಾವಾಗ ಅವರು ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಶರಣಾಗಿ ತಪ್ಪೊಪ್ಪಿಗೆಯೊಂದಿಗೆ ಹೀಗೆಂದರು, "ನನ್ನ ಕರ್ತನೇ, ನಾವು ಅನೇಕ ಪಾಪಕಾರ್ಯಗಳನ್ನು ಮಾಡಿದ್ದೇವೆ. ದಯವಿಟ್ಟು ನಮ್ಮನ್ನು ಉಳಿಸಿ" ಆ ಚೈತನ್ಯ ಮಹಾಪ್ರಭುಗಳು ಅವರನ್ನು ಕೇಳಿದರು "ಹೌದು, ನಾನು ನಿಮ್ಮನ್ನು ಸ್ವೀಕರಿಸುತ್ತೇನೆ ಮತ್ತು ನಾನು ನಿಮ್ಮನ್ನು ಉಳಿಸುತ್ತೇನೆ, ಇನ್ನು ಮುಂದೆ ನೀವು ಇಂತಹ ಪಾಪ ಚಟುವಟಿಕೆಗಳನ್ನು ಮಾಡುವುದಿಲ್ಲಎಂಬ ಭರವಸೆಯ ಷರತ್ತಿನ ಮೇಲೆ. " ಆದ್ದರಿಂದ ಅವರು ಒಪ್ಪಿದರು, "ಹೌದು. ನಾವು ಏನೇನು ಮಾಡಿದ್ದೇವೋ ಅಷ್ಟೇ. ಇನ್ನು ಮುಂದೆ ನಾವು ಅದನ್ನು ಮಾಡಲು ಹೋಗುವುದಿಲ್ಲ." ನಂತರ ಶ್ರೀ ಚೈತನ್ಯ ಮಹಾಪ್ರಭು ಅವರನ್ನು ಒಪ್ಪಿಕೊಂಡರು ಮತ್ತು ಅವರು ಮಹಾನ್ ಭಕ್ತರಾದರು, ಮತ್ತು ಅವರ ಜೀವನವು ಯಶಸ್ವಿಯಾಯಿತು. ಅದೇ ಪ್ರಕ್ರಿಯೆಯು ಇಲ್ಲಿಯೂ ಇದೆ. ಈ ದೀಕ್ಷೆ ಎಂದರೆ ನೀವು ಮಾಡಬೇಕು ..., ಪ್ರತಿಯೊಬ್ಬರೂ ತಮ್ಮ ಹಿಂದಿನ ಜೀವನದಲ್ಲಿ ಯಾವುದೇ ಪಾಪ ಚಟುವಟಿಕೆಗಳನ್ನು ಮಾಡಿರಬಹುದು, ಅದು ಈಗ ಖಾತೆಯನ್ನು ಮುಚ್ಚಲಾಗಿದೆ ಎಂದು ಎಲ್ಲರೂ ನೆನಪಿನಲ್ಲಿಡಬೇಕು."
681219 - ಉಪನ್ಯಾಸ ದೀಕ್ಷಾ- ಲಾಸ್ ಎಂಜಲೀಸ್