KN/681219d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(No difference)

Revision as of 01:36, 11 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮಾನವ ಜೀವನವು ತುಂಬಾ ಅಲ್ಪ ಅವಧಿಯದು, ನಾವು ಯಾವಾಗ ಸಾಯುತ್ತೇವೆ ಎಂದೇ ನಮಗೆ ತಿಳಿದಿಲ್ಲ. ಅದಕ್ಕೂ ಮೊದಲು, ಮುಂದಿನ ಜೀವನಕ್ಕಾಗಿ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ಮುಂದಿನ ಜೀವನ ಎಂದರೆ ನೇರವಾಗಿ ಕೃಷ್ಣನಲ್ಲಿ ಹಿಂದಿರುಗುವುದು, ಅತ್ಯುನ್ನತವಾದ ಪರಿಪೂರ್ಣತೆ. ನೀವು ಭಗವದ್ಗೀತೆಯಲ್ಲಿ ಕಾಣುವ ಹಾಗೆ , ಯಾಂತಿ ದೇವಾ - ವ್ರತಾಃ ದೆವಾನ್ ಪಿತ್ರುನ್ ಯಾಂತಿ ಪಿತೃ- ವ್ರತಾಃ (ಭ.ಗೀತಾ ೯.೨೫). ಅಲ್ಲಿ ಅಸಂಖ್ಯಾತ ಬಗೆಯ ಗ್ರಹಗಳಿವೆ. ಉನ್ನತ ಲೋಕಮಂಡಲಗಳು ದೇವತೆಗಳ ವಾಸಸ್ಥಾನ, ಅವರು ತುಂಬಾ ಶಕ್ತಿಶಾಲಿ ಅವರು ಕೂಡ ಮಾನವರೇ, ಆದರೆ ಅವರು ತುಂಬಾ ಸುಂದರವಾಗಿದ್ದಾರೆ, ಅವರು ತುಂಬಾ ಶಕ್ತಿಶಾಲಿಗಳು. ಆದ್ದರಿಂದ ನೀವು ಅಲ್ಲಿಗೆ ಹೋಗಬಹುದು. ಚಂದ್ರ ಗ್ರಹ, ಸೂರ್ಯ ಗ್ರಹ-ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ- ಅಲ್ಲಿ ಹೇಗೆ ಸೂಚಿಸಿದಿಯೋ ನೀವು ಅದಕ್ಕೆ ತಕ್ಕಂತೆ ವರ್ತಿಸಿದರೆ, ಅಂದರೆ "ನೀವು ಚಂದ್ರನ ಗ್ರಹಕ್ಕೆ ಹೋಗಲು ಬಯಸಿದರೆ, ನೀವು ಈ ರೀತಿ ಮಾಡಬೇಕು, "ಆಗ ಈ ದೇಹವನ್ನು ತೊರೆದ ನಂತರ ನೀವು ಅಲ್ಲಿಗೆ ಹೋಗಬಹುದು. ಅದೇ ರೀತಿ, ನೀವು ಯಾವುದೇ ಗ್ರಹಕ್ಕೆ ಹೋಗಬಹುದು. ಅದೇ ರೀತಿ, ನೀವು ಕೃಷ್ಣನ ಗ್ರಹಕ್ಕೂ ಹೋಗಬಹುದು."
681219 - ಉಪನ್ಯಾಸ ದೀಕ್ಷಾ- ಲಾಸ್ ಎಂಜಲೀಸ್