KN/710214e ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ: Difference between revisions

 
(No difference)

Latest revision as of 01:11, 23 September 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇಡೀ ಮಾನವ ನಾಗರಿಕತೆಯು ಮೋಸಗಾರರ ಮತ್ತು ಮೋಸಹೋಗುವವರ ಸಮಾಜವಾಗಿದೆ ಎಂಬುದು ಸತ್ಯ. ಅಷ್ಟೆ. ಯಾವುದೇ ಕ್ಷೇತ್ರವಾಗಲಿ. ಮಯೈವ ವ್ಯಾವಹಾರಿಕೆ (ಶ್ರೀ.ಭಾ 12.2.3). ಕಲಿಯುಗದಲ್ಲಿ ಇಡೀ ಜಗತ್ತು ‘ಮಯೈವ ವ್ಯಾವಹಾರಿಕೆ.’ ‘ವ್ಯಾವಹಾರಿಕೆ’ ಎಂದರೆ ಮಾಮೂಲಿ ವ್ಯವಹಾರ, ಮೋಸ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಮೋಸವಿರುತ್ತದೆ. ದೈನಂದಿನ ವ್ಯವಹಾರಗಳಲ್ಲಿ. ಬಹಳ ದೊಡ್ಡ ವಿಷಯಗಳನ್ನು ಬಿಡಿ, ಸಾಮಾನ್ಯ ವ್ಯವಹಾರಗಳಲ್ಲಿ ಮೋಸವಿರುತ್ತದೆ. ಇದನ್ನು ಭಾಗವತದಲ್ಲಿ ಹೇಳಲಾಗಿದೆ, ಮಯೈವ ವ್ಯವಹರಿ. ನೀವು ಈ ಸನ್ನಿವೇಶದಿಂದ ಎಷ್ಟು ಬೇಗ ಹೊರ ಬರುತ್ತೀರೋ ಅಷ್ಟು ಒಳ್ಳೆಯದು. ಅದೇ ಕೃಷ್ಣಪ್ರಜ್ಞೆ. ನೀವು ಬದುಕಿರುವವರೆಗು ಸುಮ್ಮನೆ ಹರೇ ಕೃಷ್ಣನ ಜಪ ಮಾಡಿ ಕೃಷ್ಣನ ಮಹಿಮೆಗಳನ್ನು ಬೋಧಿಸಿ. ಅಷ್ಟೇ. ಇಲ್ಲದಿದ್ದರೆ ಇದು ಬಹಳ ಅಪಾಯಕಾರಿ ಸ್ಥಳವೆಂದು ನೆನೆಪಿರಲಿ."
710214 - ಸಂಭಾಷಣೆ - ಗೋರಖ್ಪುರ