KN/720325 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ: Difference between revisions

 
(No difference)

Latest revision as of 19:32, 22 January 2023

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಧ್ಯಾತ್ಮಿಕ ಜಗತ್ತಿನಲ್ಲಿ ಯಾವುದೇ ಕೀಳು ಶಕ್ತಿಯ ಪ್ರದರ್ಶನವಿಲ್ಲ (ಇದು ಭೌತಿಕ ಪ್ರಪಂಚವನ್ನು ನಡೆಸುತ್ತದೆ);

ಆ ಉನ್ನತ ಶಕ್ತಿ ಮಾತ್ರ ಇದೆ, 'ಚೇತನ ಸಿದ್ದ್ಯಾ ವತ್'. ಆದ್ದರಿಂದ ಆಧ್ಯಾತ್ಮಿಕ ಜಗತ್ತನ್ನು ಜೀವಂತ ಜಗತ್ತು ಎಂದು ಕರೆಯಲಾಗುತ್ತದೆ.

ಆಧ್ಯಾತ್ಮಿಕ ಜಗತ್ತಿನಲ್ಲಿ ಈ ಅಚೇತನ ಅಥವಾ ನಿರ್ಜೀವತೆಯ ಯಾವುದೇ ಅಭಿವ್ಯಕ್ತಿಗಳಿಲ್ಲ. ನಾವು ಭೌತಿಕ ಜಗತ್ತಿನಲ್ಲಿ ಏನನ್ನು ಕಂಡುಕೊಳ್ಳುತ್ತೇವೆಯೋ ಅದು ಆಧ್ಯಾತ್ಮಿಕ ಜಗತ್ತಿನಲ್ಲಿಯೂ ಲಭ್ಯವಿದೆ.

ಅಲ್ಲಿ ನೀರಿದೆ, ಮರಗಳಿವೆ, ಭೂಮಿ ಇದೆ. ಅದು 'ನಿರ್ವಿಶೇಶ' ಅಲ್ಲ, ಆಧ್ಯಾತ್ಮಿಕ ಪ್ರಪಂಚವು ನಿರಾಕಾರ ಪ್ರಪಂಚವಲ್ಲ. ಎಲ್ಲವೂ ಇದೆ. ಆದರೆ ಅವೆಲ್ಲವೂ ಉನ್ನತ ಶಕ್ತಿಯಿಂದ ಮಾಡಲ್ಪಟ್ಟಿದೆ.

ಯಮುನಾ ನದಿಯು ತನ್ನ ಅಲೆಗಳೊಂದಿಗೆ ಹರಿಯುತ್ತಿದೆ ಎಂದು ವಿವರಿಸಲಾಗಿದೆ, ಆದರೆ ಕೃಷ್ಣನು ಯಮುನೆಯ ದಡದಲ್ಲಿ ಬಂದಾಗ, ಕೃಷ್ಣನ ಕೊಳಲು ಧ್ವನಿಯನ್ನು ಕೇಳಲು ಅಲೆಗಳು ನಿಲ್ಲುತ್ತವೆ."

720325 - ಉಪನ್ಯಾಸ BG 07.06 - ಬಾಂಬೆ