KN/720406 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮೆಲ್ಬರ್ನ್: Difference between revisions

 
(No difference)

Latest revision as of 08:13, 24 January 2023

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವೈದಿಕ ಗ್ರಂಥಗಳ ಪ್ರಕಾರ, ದೇವರು ಬರುತ್ತಾನೆ ಮತ್ತು ಅವನು ಏಕೆ ಬರುತ್ತಾನೆಂದು ಅವನು ವೈಯಕ್ತಿಕವಾಗಿ ಹೇಳುತ್ತಾನೆ:

'ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ' (ಭಗವದ್ಗೀತೆ 4.7). ಧಾರ್ಮಿಕ ತತ್ವಗಳ ವಿಚಾರಣೆಯಲ್ಲಿ ವ್ಯತ್ಯಾಸಗಳು ಕಂಡುಬಂದಾಗ, ಅವನು ಬರುತ್ತಾನೆ. 'ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ, ಅಭ್ಯುತ್ಥಾನಂ ಅಧರ್ಮಸ್ಯ.' ಧಾರ್ಮಿಕ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳು ಕಂಡುಬಂದಾಗ, ಅಧಾರ್ಮಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಅದು ಸಹಜ. ಮಂದಗಾಮಿ ಸರ್ಕಾರ ಬಂದಾಗಲೆಲ್ಲ ದುಷ್ಟರು, ಕಳ್ಳರ ಸಂಖ್ಯೆ ಹೆಚ್ಚುತ್ತದೆ. ಇದು ಸಹಜ. ಮತ್ತು ಸರ್ಕಾರವು ತುಂಬಾ ಕಟ್ಟುನಿಟ್ಟಾಗಿದ್ದರೆ, ಕೆಟ್ಟ ಜನರು ಮತ್ತು ಕಳ್ಳರು ಬಹಳ ಪ್ರಮುಖರಾಗಲು ಸಾಧ್ಯವಿಲ್ಲ. ಆದ್ದರಿಂದ ಕೃಷ್ಣ ಬಂದಾಗ, ಅವನಿಗೆ ಎರಡು ವ್ಯವಹಾರಗಳಿವೆ: 'ಪರಿತ್ರಾಣಾಯ ಸಾಧುನಾಂ ವಿನಶಾಯಚ ದುಷ್ಕೃತಂ' (ಭಗವದ್ಗೀತೆ 4.8)-ಭಕ್ತರಿಗೆ, ನಂಬಿಗಸ್ತರಾಗಿರುವವರಿಗೆ ರಕ್ಷಣೆ ನೀಡುವುದಕ್ಕಾಗಿ, ಮತ್ತು ರಾಕ್ಷಸರನ್ನು ಕೊಲ್ಲುವುದಕ್ಕಾಗಿ."

720406 - ಉಪನ್ಯಾಸ at Christian Monastery - ಮೆಲ್ಬರ್ನ್