KN/720529 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(No difference)

Latest revision as of 18:00, 1 February 2023

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"'ನನ್ನ ಪ್ರೀತಿಯ ಪ್ರಭು, ನಾನು ನನ್ನ ಬಗ್ಗೆ ಚಿಂತಿಸುತ್ತಿಲ್ಲ, ಏಕೆಂದರೆ ನಾನು ವಿಷಯ ಪಡೆದುಕೊಂಡಿದ್ದೇನೆ. ಅಜ್ಞಾನವನ್ನು ಹೇಗೆ ದಾಟಬೇಕು ಅಥವಾ ವೈಕುಂಠಕ್ಕೆ ಹೋಗುವುದು ಅಥವಾ ಮುಕ್ತಿ ಹೊಂದುವುದು ಹೇಗೆ ಎಂಬುದರ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಈ ಸಮಸ್ಯೆಗಳು ಬಗೆಹರಿದಿವೆ. ನೀವು ಹೇಗೆ ಪರಿಹರಿಸಿದ್ದೀರಿ? 'ತ್ವದ್-ವೀರ್ಯ ಗಾಯನ ಮಹಾಮೃತ ಮಗ್ನ ಚಿತ್ತ:'; ನಾನು ಯಾವಾಗಲೂ ನಿಮ್ಮ ಚಟುವಟಿಕೆಗಳನ್ನು ವೈಭವೀಕರಿಸಲು ತೊಡಗಿರುವ ಕಾರಣ, ನನ್ನ ಸಮಸ್ಯೆಯು ಪರಿಹಾರವಾಗಿದೆ.

ಹಾಗಾದರೆ ನಿಮ್ಮ ಸಮಸ್ಯೆ ಏನು? ಸಮಸ್ಯೆಯು 'ಸೋಚೇ' : ನಾನು ದುಃಖಿಸುತ್ತಿದ್ದೇನೆ, 'ಸೋಚೇ ತತೋ ವಿಮುಖ ಚೇತಸಃ', ನಿನ್ನಿಂದ ವಿಮುಖರಾದವರು. ನಿಮ್ಮ ಬಗ್ಗೆ ವಿಮುಖರಾಗಿ, ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ, 'ಮಾಯಾ ಸುಖಯಾ', ಭಾವಿಸಲಾದ ಸಂತೋಷಕ್ಕಾಗಿ, ಈ ದುಷ್ಟರು. ಹೀಗಾಗಿ ಅವರಿಗಾಗಿ ಕೊರಗುತ್ತಿದ್ದೇನೆ’. ಇದು ನಮ್ಮ ವೈಷ್ಣವ ತತ್ವ. ಕೃಷ್ಣನ ಪಾದಕಮಲಗಳಲ್ಲಿ ಆಶ್ರಯ ಪಡೆದವನಿಗೆ ಯಾವುದೇ ತೊಂದರೆಯಿಲ್ಲ. ಆದರೆ ಕೃಷ್ಣನನ್ನು ಮರೆತು ಸುಮ್ಮನೆ ಕಷ್ಟಪಟ್ಟು ದುಡಿಯುತ್ತಿರುವ ದುಷ್ಟರನ್ನು ಬಿಡಿಸುವುದು ಹೇಗೆ ಎಂಬುದೇ ಆತನ ಸಮಸ್ಯೆ. ಅದು ಸಮಸ್ಯೆಯಾಗಿದೆ."

720529 - ಉಪನ್ಯಾಸ SB 02.03.11-12 - ಲಾಸ್ ಎಂಜಲೀಸ್