KN/Prabhupada 0086 - ಅಸಮಾನತೆಗಳು ಏಕಿವೆ: Difference between revisions
(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0086 - in all Languages Category:KN-Quotes - 1970 Category:KN-Quotes - L...") |
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->") |
||
Line 7: | Line 7: | ||
[[Category:KN-Quotes - in USA]] | [[Category:KN-Quotes - in USA]] | ||
<!-- END CATEGORY LIST --> | <!-- END CATEGORY LIST --> | ||
<!-- BEGIN NAVIGATION BAR -- DO NOT EDIT OR REMOVE --> | <!-- BEGIN NAVIGATION BAR -- DO NOT EDIT OR REMOVE --> | ||
{{1080 videos navigation - All Languages| | {{1080 videos navigation - All Languages|Kannada|KN/Prabhupada 0085 - ಜ್ಞಾನದ ಸಂಸ್ಕೃತಿಯೆಂದರೆ ಆಧ್ಯಾತ್ಮಿಕ ಜ್ಞಾನ|0085|KN/Prabhupada 0087 - ಭೌತಿಕ ಪ್ರಕೃತಿಯ ನಿಯಮ|0087}} | ||
<!-- END NAVIGATION BAR --> | <!-- END NAVIGATION BAR --> | ||
<!-- BEGIN ORIGINAL VANIQUOTES PAGE LINK--> | <!-- BEGIN ORIGINAL VANIQUOTES PAGE LINK--> |
Latest revision as of 17:51, 1 October 2020
Sri Isopanisad, Mantra 9-10 -- Los Angeles, May 14, 1970
ನಾವು ಅನೇಕ ವಿಭಿನ್ನ ವ್ಯಕ್ತಿತ್ವಗಳನ್ನು ಏಕೆ ಕಾಣುತ್ತೇವೆ? ಇದು ಪಿತ್ತ, ಕಫ, ಮತ್ತು ವಾತದ ಸಂಯೋಜನೆಯಾಗಿದ್ದರೆ, ಅವು ಏಕೆ ಹೋಲುವಂತಿಲ್ಲ? ಆದ್ದರಿಂದ ಅವರು ಈ ಜ್ಞಾನವನ್ನು ಬೆಳೆಸಿಕೊಳ್ಳುವುದಿಲ್ಲ. ಏಕೆ ಅಸಮಾನತೆಗಳಿವೆ? ಒಬ್ಬ ಮನುಷ್ಯ ಲಕ್ಷಾಧಿಪತಿಯಾಗಿ ಜನಿಸುತ್ತಾನೆ; ಇನ್ನೊಬ್ಬ ಮನುಷ್ಯನು ಜನಿಸಿದನು, ಅವನು ದಿನಕ್ಕೆ ಎರಡು ಬಾರಿ ಪೂರ್ಣ ಊಟ ಮಾಡಲು ಸಹ ಸಾಧ್ಯವಿಲ್ಲ, ಅವನು ಎಷ್ಟೇ ಯತ್ನಿಸಿದರೂ ಕೂಡ. ಈ ತಾರತಮ್ಯ ಏಕೆ? ಒಬ್ಬನನ್ನು ಏಕೆ ಅಂತಹ ಅನುಕೂಲಕರ ಸ್ಥಿತಿಗೆ ಸೇರಿಸಲಾಗುತ್ತದೆ? ಇತರ ಏಕೆ ಅಲ್ಲ? ಆದ್ದರಿಂದ ಕರ್ಮದ ನಿಯಮವಿದೆ, ಪ್ರತ್ಯೇಕತೆ.
ಆದ್ದರಿಂದ ಇದು ಜ್ಞಾನ. ಆದುದರಿಂದ ಈಶೋಪನಿಶದ್ ಹೇಳುತ್ತದೆ ಅನ್ಯದ್ ಎವಾಹುರ್ ವಿದ್ಯಯಾ ಅನ್ಯದ್ ಆಹುರ್ ಅವಿದ್ಯಯಾ. ಅಜ್ಞಾನದಲ್ಲಿರುವವರು, ಅವರು ವಿಭಿನ್ನ ರೀತಿಯ ಜ್ಞಾನದ ಪ್ರಗತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ, ಮತ್ತು ನಿಜವಾಗಿ ಜ್ಞಾನದಲ್ಲಿರುವವರು ಬೇರೆ ರೀತಿಯಲ್ಲಿ ಬೆಳೆಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರು, ಅವರು ನಮ್ಮ ಕೃಷ್ಣ ಪ್ರಜ್ಞೆ ಚಟುವಟಿಕೆಗಳನ್ನು ಇಷ್ಟಪಡುವುದಿಲ್ಲ. ಅವರು ಆಶ್ಚರ್ಯಚಕಿತರಾಗುತ್ತಾರೆ. ಗರ್ಗಮುನಿ ನಿನ್ನೆ ಸಂಜೆ ನನಗೆ ಹೇಳುತ್ತಿದ್ದರು, "ನೀವು ಎಲ್ಲಿಂದ ಇಷ್ಟು ಹಣವನ್ನು ಪಡೆಯುತ್ತೀರಿ? ನೀವು ತುಂಬಾ ಕಾರುಗಳು, ಮತ್ತು ದೊಡ್ಡ ಚರ್ಚ್ ಆಸ್ತಿಯನ್ನು ಖರೀದಿಸುತ್ತಿದ್ದೀರಿ, ಮತ್ತು ಪ್ರತಿದಿನ ಐವತ್ತು, ಅರವತ್ತು ಪುರುಷರನ್ನು ಪೋಷಿಸುತ್ತಿದ್ದೀರಿ, ಮತ್ತು ಆನಂದಿಸುತ್ತಿದ್ದೀರಿ. ಹೇಗೆ?" (ನಗು) ಆದ್ದರಿಂದ ಅವರಿಗೆ ಆಶ್ಚರ್ಯವಾಗುತ್ತದೆ. ನಮಗೂ ಆಶ್ಚರ್ಯ, ಏಕೆ ಈ ಧೂರ್ತರು ಹೊಟ್ಟೆಯನ್ನು ತುಂಬಲು ಇಷ್ಟು ಶ್ರಮಿಸುತ್ತಿದ್ದಾರೆ ಎಂದು. ಆದ್ದರಿಂದ ಭಗವದ್ಗೀತೆ ಹೇಳುತ್ತದೆ, ಯಾ ನಿಶಾ ಸರ್ವ-ಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ (ಭ.ಗೀ 2.69). ಈ ಜನರು ನಿದ್ರಿಸುತ್ತಿದ್ದಾರೆಂದು ನಾವು ನೋಡುತ್ತಿದ್ದೇವೆ, ಮತ್ತು ನಾವು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ ಎಂದು ಅವರು ತಿಳಿದುಕೊಳ್ಳುತ್ತಿದ್ದಾರೆ. ಇದು ವಿರುದ್ಧ ದೃಷ್ಟಿಕೋನ. ಏಕೆ? ಏಕೆಂದರೆ ಅವರ ಕ್ರಿಯೆಯ ಹಾದಿ ವಿಭಿನ್ನ, ನಮ್ಮ ಕ್ರಿಯೆಯ ಹಾದಿ ವಿಭಿನ್ನ. ಈಗ, ಬುದ್ಧಿವಂತ ವ್ಯಕ್ತಿಯು ನಿರ್ಧರಿಸಬೇಕು, ಯಾರ ಕಾರ್ಯಗಳು ವಾಸ್ತವಿಕವಾಗಿ ಸರಿಯೆಂದು.
ಈ ವಿಷಯಗಳನ್ನು ವೈದಿಕ ಸಾಹಿತ್ಯದಲ್ಲಿ ಬಹಳ ಚೆನ್ನಾಗಿ ಚರ್ಚಿಸಲಾಗಿದೆ. ಇನ್ನೊಂದು ಇದೆ ... ಈ ಈಶೋಪನಿಷದ್ ಅಂತೆಯೇ, ಗರ್ಗ ಉಪನಿಷದ್ ಎಂಬ ಮತ್ತೊಂದು ಉಪನಿಷತ್ತು ಇದೆ. ಆದ್ದರಿಂದ ಅದು ತುಂಬಾ ಕಲಿತ ಗಂಡ ಮತ್ತು ಹೆಂಡತಿಯ ನಡುವಿನ ಮಾತು. ಗಂಡ ಹೆಂಡತಿಗೆ ಕಲಿಸುತ್ತಿದ್ದಾನೆ. ಏತದ್ ವಿದಿತ್ವಾ ಯ: ಪ್ರಯಾತಿ ಸ ಏವ ಬ್ರಾಹ್ಮಣ ಗರ್ಗಿ. ಏತದ್ ಅವಿದಿತ್ವಾ ಯ: ಪ್ರಯಾತಿ ಸ ಏವ ಬ್ರಾಹ್ಮಣ ಕೃಪಣಾ. ಜ್ಞಾನದ ಈ ನೈಜ ಸಂಸ್ಕೃತಿ, ಯಾರೊಬ್ಬ... ಎಲ್ಲರೂ ಜನ್ಮ ತೆಗೆದುಕೊಳ್ಳುತ್ತಾರೆ, ಮತ್ತು ಎಲ್ಲರೂ ಸಾಯುತ್ತಾರೆ. ಇದರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೂ ಸಾಯುತ್ತೇವೆ, ಮತ್ತು ಅವರೂ ಸಾಯುತ್ತಾರೆ. "ನೀವು ಜನ್ಮ, ಮೃತ್ಯು, ಜರಾ, ಮತ್ತು ವ್ಯಾಧಿ ಬಗ್ಗೆ ಯೋಚಿಸುತ್ತಿದ್ದೀರಿ”, ಎಂದು ಅವರು ಹೇಳಬಹುದು. ಆದ್ದರಿಂದ ಇದರ ಅರ್ಥ ನೀವು ಕೃಷ್ಣ ಪ್ರಜ್ಞೆಯ ಜ್ಞಾನವನ್ನು ಬೆಳೆಸಿಕೊಳ್ಳುತ್ತಿರುವುದರಿಂದ, ಪ್ರಕೃತಿಯ ದಾಳಿಯ ಈ ನಾಲ್ಕು ತತ್ವಗಳಿಂದ ನೀವು ಮುಕ್ತರಾಗುತ್ತೀರಿ ಎಂದೆ? ಇಲ್ಲ. ಅದು ನಿಜವಲ್ಲ. ನಿಜವೇನೆಂದರೆ, ಗರ್ಗ ಉಪನಿಷದ್ ಹೇಳುತ್ತದೆ, ಏತದ್ ವಿದಿತ್ವಾ ಯ: ಪ್ರಯಾತಿ. ಯಾರು ಅವನು ಏನೆಂದು ತಿಳಿದ ನಂತರ ಈ ದೇಹವನ್ನು ತೊರೆಯುವವನೋ, ಸಾ ಏವ ಬ್ರಾಹ್ಮಣ, ಅವನು ಬ್ರಾಹ್ಮಣ... ಬ್ರಾಹ್ಮಣ… ನಾವು ನಿಮಗೆ ಪವಿತ್ರ ಎಳೆಯನ್ನು ಅರ್ಪಿಸುತ್ತಿದ್ದೇವೆ. ಏಕೆ? ಜೀವನದ ರಹಸ್ಯ ಏನು ಎಂದು ನೀವು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಅದು ಬ್ರಾಹ್ಮಣ. ವಿಜಾನತಃ. ಈ ಪದ್ಯದಲ್ಲಿ ನಾವು ಓದಿದ್ದೇವೆ, ವಿಜಾನತಃ. ವಿಷಯಗಳನ್ನು ಯಥಾರ್ಥವಾಗಿ ತಿಳಿದುಕೊಂಡ ನಂತರ ಈ ದೇಹವನ್ನು ತೊರೆಯುವವನು, ಅವನು ಬ್ರಾಹ್ಮಣ.