KN/Prabhupada 0090 - ವ್ಯವಸ್ಥಿತ ನಿರ್ವಹಣೆ - ಇಲ್ಲದಿದ್ದರೆ ಇಸ್ಕಾನ್ ಅನ್ನು ಹೇಗೆ ನಿರ್ವಹಿಸುವುದು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0090 - in all Languages Category:KN-Quotes - 1973 Category:KN-Quotes - M...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 7: Line 7:
[[Category:KN-Quotes - in USA]]
[[Category:KN-Quotes - in USA]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0089 - Krsna's Effulgence is the Source of Everything|0089|Prabhupada 0091 - You Stand Here Naked|0091}}
{{1080 videos navigation - All Languages|Kannada|KN/Prabhupada 0089 - ಕೃಷ್ಣನ ತೇಜಸ್ಸು ಸರ್ವಸ್ವದ ಮೂಲ|0089|KN/Prabhupada 0091 - ನೀನು ಇಲ್ಲಿ ಬೆತ್ತಲೆಯಾಗಿ ನಿಲ್ಲು|0091}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 17:52, 1 October 2020



Morning Walk -- December 5, 1973, Los Angeles

ಪ್ರಭುಪಾದ: ಎಲ್ಲರೂ ಕೃಷ್ಣನ ಕುಟುಂಬಕ್ಕೆ ಸೇರಿದವರು, ಆದರೆ ಅವರು ಕೃಷ್ಣನಿಗೋಸ್ಕರ ಏನು ಮಾಡುತ್ತಿದ್ದಾರೆಂದು ನಾವು ನೋಡಬೇಕು. ಎಲ್ಲರೂ ರಾಜ್ಯದ ಪ್ರಜೆಗಳಂತೆ. ಒಬ್ಬ ವ್ಯಕ್ತಿಗೆ ಉನ್ನತ ಸ್ಥಾನ ಮತ್ತು ದೊಡ್ಡ ಬಿರುದನ್ನು ಏಕೆ ನೀಡಲಾಗುತ್ತದೆ? ಏಕೆ? ಏಕೆಂದರೆ ಅವನು ಗುರುತಿಸಲ್ಪಟ್ಟಿದ್ದಾನೆ.

ಸುದಾಮ: ನಿಜ.

ಪ್ರಭುಪಾದ: ಆದ್ದರಿಂದ ಒಬ್ಬರು ಸೇವೆಯನ್ನು ನೀಡಬೇಕು. "ನಾನು ಕೃಷ್ಣನ ಕುಟುಂಬಕ್ಕೆ ಸೇರಿದವನು", ಎಂದು ಭಾವಿಸುವುದು, ಆದರೆ ಕೃಷ್ಣನಿಗಾಗಿ ಏನನ್ನೂ ಮಾಡದಿರುವುದು, ಅದು ಅಲ್ಲ…

ಸುದಾಮ: ಅದು ಒಳ್ಳೆಯದಲ್ಲ.

ಪ್ರಭುಪಾದ: ಅದು ಒಳ್ಳೆಯದಲ್ಲ. ಅಂದರೆ ಅವನು... ಶೀಘ್ರದಲ್ಲೇ ಅವನು ಮತ್ತೆ ಕೃಷ್ಣನನ್ನು ಮರೆತುಬಿಡುತ್ತಾನೆ. ಅವನು ಮತ್ತೆ ಮರೆತುಬಿಡುತ್ತಾನೆ.

ಸುದಾಮ: ವಾಸ್ತವವಾಗಿ, ಇತರ ಅಂಶವು ತುಂಬಾ ಶಕ್ತಿಯುತವಾಗಿದೆ. ಇಲ್ಲಿರುವ ಈ ಜನರು, ಅವರು ಕೃಷ್ಣನ ಕುಟುಂಬದ ಭಾಗವಾಗಿದ್ದರೂ, ಅವರು ಮರೆತಿದ್ದರಿಂದ, ಅವರ ಮರೆವುಗಳಿಂದ ನಾವು ಪ್ರಭಾವಿತರಾಗುತ್ತೇವೆ.

ಪ್ರಭುಪಾದ: ಹೌದು. ಮರೆವು ಎಂದರೆ ಮಾಯಾ.

ಸುದಾಮ: ಹೌದು.

ಪ್ರಭುಪಾದ: ಮಾಯಾ ಏನೂ ಅಲ್ಲ. ಅದು ಮರೆವು. ಅಷ್ಟೇ. ಅದಕ್ಕೆ ಅಸ್ತಿತ್ವವಿಲ್ಲ. ಮರೆವು, ಅದು ನಿಲ್ಲುವುದಿಲ್ಲ. ಆದರೆ ಅದು ಇರುವವರೆಗು ತುಂಬಾ ತೊಂದರೆ ಕೊಡುತ್ತದೆ.

ಸುದಾಮ: ಕೆಲವು ಭಕ್ತರು ಕೆಲವೊಮ್ಮೆ ತಮಗೆ ಸಂತೋಷವಾಗುತ್ತಿಲ್ಲ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಆದ್ದರಿಂದ ಅವರು ಅತೃಪ್ತರಾಗಿದ್ದರೂ, ಮಾನಸಿಕವಾಗಿ, ಅವರು ಇನ್ನೂ ಕೃಷ್ಣ ಪ್ರಜ್ಞೆಯಲ್ಲಿ ಮುಂದುವರಿಯಬೇಕು. ನಾನು ಅವರಿಗೆ ಹೇಳುತ್ತೇನೆ, ಒಬ್ಬರು ಅತೃಪ್ತರಾಗಿದ್ದರೂ ಸಹ...

ಪ್ರಭುಪಾದ: ಆದರೆ ನೀನು ಉದಾಹರಣೆಯಾಗಬೇಕು. ನೀನು ಉದಾಹರಣೆಯನ್ನು ಬೇರೆ ರೀತಿಯಲ್ಲಿ ತೋರಿಸಿದರೆ, ಅವರು ನಿನ್ನನ್ನು ಹೇಗೆ ಅನುಸರಿಸುತ್ತಾರೆ?

ಸುದಾಮ: ನಿಜ.

ಪ್ರಭುಪಾದ: ಉಪದೇಶಕ್ಕಿಂತ ಉದಾಹರಣೆ ಉತ್ತಮವಾಗಿದೆ. ನೀನು ಹೊರಗೆ ಏಕೆ ವಾಸಿಸುತ್ತಿದ್ದೀಯ?

ಸುದಾಮ: ಅದು, ನಾನು...

ಪ್ರಭುಪಾದ: (ವಿರಾಮ)... ಕಳೆದ ಬಾರಿ ನನ್ನ ಆರೋಗ್ಯ ತುಂಬಾ ಹದಗೆಟ್ಟಿದ್ದಾಗ, ನಾನು ಈ ಸ್ಥಳವನ್ನು ಬಿಡಬೇಕಾಯಿತು. ಅದರ ಅರ್ಥ ನಾನು ಸಂಘವನ್ನು ತೊರೆಯುತ್ತೇನೆ ಎಂದಲ್ಲ. ನಾನು ಭಾರತಕ್ಕೆ ಹೋಗಿ ಚೇತರಿಸಿಕೊಂಡೆ. ಅಥವಾ ಲಂಡನ್ ಹೋದೆ. ಅದು ಪರವಾಗಿಲ್ಲ. ಆದ್ದರಿಂದ ಆರೋಗ್ಯವು ಕೆಲವೊಮ್ಮೆ... ಆದರೆ ಇದರರ್ಥ ನಾವು ಸಂಘವನ್ನು ತ್ಯಜಿಸಬೇಕು ಎಂದಲ್ಲ. ನನ್ನ ಆರೋಗ್ಯ ಇಲ್ಲಿ ಸರಿ ಇಲ್ಲದಿದ್ದರೆ, ನಾನು ಹೋಗುತ್ತೇನೆ... ನನಗೆ ನೂರು ಕೇಂದ್ರಗಳಿವೆ. ಮತ್ತು ನಿಮ್ಮ ಆರೋಗ್ಯ ಮರುಪಡೆಯುವಿಕೆಗಾಗಿ ನೀವು ಈ ಬ್ರಹ್ಮಾಂಡದಿಂದ ಹೊರಗೆ ಹೋಗುವುದಿಲ್ಲವಲ್ಲ. ನೀವು ಬ್ರಹ್ಮಾಂಡದೊಳಗೆ ಉಳಿಯಬೇಕು. ಹಾಗಾದರೆ ನೀವು ಸಂಘದಿಂದ ಏಕೆ ಹೊರಗೆ ಹೋಗುತ್ತೀರಿ? (ವಿರಾಮ) ... ಶ್ರೀ ನರೋತ್ತಮ ದಾಸ ಠಾಕುರ... ನಾವು ಭಕ್ತರೊಂದಿಗೆ ಬದುಕಬೇಕು. ನಾನು ನನ್ನ ಕುಟುಂಬವನ್ನು ಏಕೆ ತೊರೆದಿದ್ದೇನೆ? ಏಕೆಂದರೆ ಅವರು ಭಕ್ತರಾಗಿರಲಿಲ್ಲ. ಆದ್ದರಿಂದ ನಾನು ಬಂದೆ... ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ನಾನು ಆರಾಮವಾಗಿರುತ್ತಿದ್ದೆ. ಇಲ್ಲ. ನಾವು ಭಕ್ತರಲ್ಲದವರ ಜೊತೆ ಬದುಕಬಾರದು, ಕುಟುಂಬ ಪುರುಷರು, ಅಥವಾ ಯಾರಾದರೂ ಇರಬಹುದು. ಮಹಾರಾಜ ವಿಭೀಷಣನಂತೆ. ಅವನ ಸಹೋದರ ಭಕ್ತನಲ್ಲದ ಕಾರಣ, ಅವನನ್ನು ಬಿಟ್ಟು, ಅವನನ್ನು ತೊರೆದನು. ಅವನು ರಾಮಚಂದ್ರನ ಬಳಿಗೆ ಬಂದನು. ವಿಭೀಷಣ. ನಿನಗೆ ಅದು ಗೊತ್ತಿದೆಯೇ?

ಸುದಾಮ: ಹೌದು.

ಹೃದಯಾನಂದ: ಆದ್ದರಿಂದ ಪ್ರಭುಪಾದ, ಒಬ್ಬ ಸನ್ಯಾಸಿ ಒಬ್ಬಂಟಿಯಾಗಿ ಬದುಕಬೇಕು ಎಂದು ಅದು ಹೇಳುತ್ತದೆ. ಅಂದರೆ ಭಕ್ತರೊಂದಿಗೆ ಮಾತ್ರ.

ಪ್ರಭುಪಾದ: ಯಾರು...! ಸನ್ಯಾಸಿ ಏಕಾಂಗಿಯಾಗಿ ಬದುಕಬೇಕು ಎಂದು ಎಲ್ಲಿ ಹೇಳಲಾಗಿದೆ?

ಹೃದಯಾನಂದ: ನನ್ನ ಪ್ರಕಾರ, ಕೆಲವೊಮ್ಮೆ ನಿಮ್ಮ ಪುಸ್ತಕಗಳಲ್ಲಿ.

ಪ್ರಭುಪಾದ: ಇಹ್?

ಹೃದಯಾನಂದ: ಕೆಲವೊಮ್ಮೆ ನಿಮ್ಮ ಪುಸ್ತಕಗಳಲ್ಲಿ. ಭಕ್ತರೊಂದಿಗೆ ಎಂದು ಇದರ ಅರ್ಥವೇ?

ಪ್ರಭುಪಾದ: ಸಾಮಾನ್ಯವಾಗಿ, ಸನ್ಯಾಸಿ ಒಬ್ಬಂಟಿಯಾಗಿ ಬದುಕಬಹುದು. ಆದರೆ ಸನ್ಯಾಸಿಯ ಕರ್ತವ್ಯವು ಬೋಧಿಸುವುದು.

ಸುದಾಮ: ಅದನ್ನು ನಾನು ಎಂದಿಗೂ ನಿಲ್ಲಿಸಲು ಬಯಸುವುದಿಲ್ಲ.

ಪ್ರಭುಪಾದ: ಇಹ್?

ಸುದಾಮ: ನಾನು ಎಂದಿಗೂ ಬೋಧಿಸುವುದನ್ನು ನಿಲ್ಲಿಸಲು ಬಯಸುವುದಿಲ್ಲ.

ಪ್ರಭುಪಾದ: ಹೌದು. ಬೋಧನೆಯನ್ನು, ನೀನು ಬೋಧನೆಯನ್ನು ತಯಾರಿಸಲು ಸಾಧ್ಯವಿಲ್ಲ. ನಿನ್ನ ಆಧ್ಯಾತ್ಮಿಕ ಗುರು ಆದೇಶಿಸಿದ ತತ್ವಗಳ ಪ್ರಕಾರ ನೀನು ಬೋಧನೆ ಮಾಡಬೇಕು. ನಿನ್ನ ಸ್ವಂತ ಬೋಧನೆಯನ್ನು ನೀನು ತಯಾರಿಸಲು ಸಾಧ್ಯವಿಲ್ಲ. ಅದು ಮುಖ್ಯ. ಒಬ್ಬ ನಾಯಕ ಇರಬೇಕು. ನಾಯಕತ್ವದಲ್ಲಿ. ಯಸ್ಯ ಪ್ರಸಾದಾದ್ ಭಗವತ್... ಇದನ್ನು ಏಕೆ ಹೇಳಲಾಗಿದೆ? ಎಲ್ಲೆಡೆ, ಕಚೇರಿಯಲ್ಲು, ಒಬ್ಬ ಮುಖ್ಯಸ್ಥನಿರುತ್ತಾನೆ. ಆದ್ದರಿಂದ ನೀವು ಅವನನ್ನು ಮೆಚ್ಚಿಸಬೇಕು. ಅದು ಸೇವೆ. ಕಚೇರಿಯಲ್ಲಿ, ಇಲಾಖೆಯಲ್ಲಿ ಕಚೇರಿ ಅಧೀಕ್ಷಕರು ಇದ್ದಾರೆ ಎಂದು ಭಾವಿಸೋಣ. ಮತ್ತು, "ಹೌದು, ನಾನು ನನ್ನ ವ್ಯವಹಾರವನ್ನು ಮಾಡುತ್ತಿದ್ದೇನೆ", ಎಂದು ನಿಮ್ಮದೇ ಆದ ರೀತಿಯಲ್ಲಿ ಮಾಡಿದರೆ, ಮತ್ತು ಕಚೇರಿ ಅಧೀಕ್ಷಕರು ಸಂತೋಷವಾಗದಿದ್ದರೆ, ಆ ರೀತಿಯ ಸೇವೆ ಉತ್ತಮವಾಗಿದೆ ಎಂದು ನೀವು ಭಾವಿಸುತ್ತೀರಾ? ಇಲ್ಲ. ಅದೇ ರೀತಿ, ಎಲ್ಲೆಡೆ ನಮಗೆ ಮೇಲಧಿಕಾರಿ ಇರುತ್ತಾರೆ. ಆದ್ದರಿಂದ ನಾವು ಕೆಲಸ ಮಾಡಬೇಕು. ಅದು ವ್ಯವಸ್ಥಿತವಾಗಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಜೀವನ ವಿಧಾನವನ್ನು ತಯಾರಿಸಿದರೆ, ಆವಿಷ್ಕರಿಸಿದರೆ, ಅವ್ಯವಸ್ಥೆಯಾಗುತ್ತದೆ.

ಸುದಾಮ: ಹೌದು, ಅದು ನಿಜ.

ಪ್ರಭುಪಾದ: ಹೌದು. ಈಗ ನಾವು ವಿಶ್ವ ಸಂಘಟನೆ. ಆಧ್ಯಾತ್ಮಿಕ ಭಾಗವಿದೆ, ಮತ್ತು ಐಹಿಕ ಭಾಗವೂ ಇದೆ. ಅದು ಐಹಿಕ ಭಾಗವೂ ಅಲ್ಲ. ಅದು ಕೂಡ ಆಧ್ಯಾತ್ಮಿಕ ಭಾಗವೆ, ಅಂದರೆ ವ್ಯವಸ್ಥಿತ ನಿರ್ವಹಣೆ. ಇಲ್ಲದಿದ್ದರೆ ಅದನ್ನು ಹೇಗೆ ನಿರ್ವಹಿಸುವುದು? ಗೌರಸುಂದರ ಮನೆಯನ್ನು ಮಾರಿದಂತೆಯೇ, ಮತ್ತು ಹಣದ ಯಾವುದೇ ಕುರುಹು ಇಲ್ಲ. ಇದು ಏನು? ಅವನು ಯಾರನ್ನೂ ಕೇಳಲಿಲ್ಲ. ಅವನು ಮನೆಯನ್ನು ಮಾರಿದನು, ಮತ್ತು ಹಣ ಎಲ್ಲಿದೆ, ಯಾವುದೇ ಕುರುಹು ಇಲ್ಲ.