KN/Prabhupada 0103 - ಭಕ್ತರ ಸಂಘದಿಂದ ಎಂದಿಗೂ ದೂರವಾಗಲು ಪ್ರಯತ್ನಿಸಬೇಡಿ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0103 - in all Languages Category:KN-Quotes - 1974 Category:KN-Quotes - L...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 7: Line 7:
[[Category:KN-Quotes - in India, Vrndavana]]
[[Category:KN-Quotes - in India, Vrndavana]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0102 - The Speed of the Mind|0102|Prabhupada 0104 - Stop the Cycle of Birth and Death|0104}}
{{1080 videos navigation - All Languages|Kannada|KN/Prabhupada 0102 - ಮನಸ್ಸಿನ ವೇಗ|0102|KN/Prabhupada 0104 - ಜನನ ಮತ್ತು ಮರಣದ ಚಕ್ರವನ್ನು ನಿಲ್ಲಿಸಿ|0104}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 17:51, 1 October 2020



Lecture on CC Adi-lila 7.91-2 -- Vrndavana, March 13, 1974

"ಜನ್ಮ ಜನ್ಮಾಂತರದವರೆಗು", ಎಂದು ನರೋತ್ತಮ ದಾಸ ಠಾಕುರ ಹೇಳುತ್ತಾರೆ. ಯಾಕೆಂದರೆ ಒಬ್ಬ ಭಕ್ತ, ಅವನು ಮರಳಿ ಭಗವ್ಧಾಮಕ್ಕೆ ಹೋಗಲು ಕೂಡ ಆಶಿಸುವುದಿಲ್ಲ. ಇಲ್ಲ. ಯಾವುದೇ ಸ್ಥಳವಾಗಲಿ, ಅದು ಮುಖ್ಯವಲ್ಲ. ಅವನು ಕೇವಲ ಪರಮಪ್ರಭುವನ್ನು ವೈಭವೀಕರಿಸಲು ಬಯಸುತ್ತಾನೆ. ಅದೇ ಅವನ ವ್ಯವಹಾರ. ಭಕ್ತನು ಜಪಿಸುವುದು, ಮತ್ತು ನರ್ತಿಸುವುದು, ಮತ್ತು ಭಕ್ತಿ ಸೇವೆಯನ್ನು ನಿರ್ವಹಿಸುವುದು ವೈಕುಂಠ ಅಥವಾ ಗೊಲೋಕಾ ವೃಂದಾವನಕ್ಕೆ ಹೋಗುವುದಕ್ಕಾಗಿ ಅಲ್ಲ. ಅದು ಕೃಷ್ಣನ ಇಚ್ಛೆ. "ಅವನು ಇಷ್ಟಪಟ್ಟರೆ ನನ್ನನ್ನು ಕರೆದೊಯ್ಯುತ್ತಾನೆ.” ಭಕ್ತಿವಿನೋದ ಠಾಕುರರ ತರಹ : ಇಚ್ಛಾ ಯದಿ ತೋರ. ಜನ್ಮಾಒಬಿ ಯದಿ ಮೋರೆ ಇಚ್ಛಾ ಯದಿ ತೋರ, ಭಕ್ತ-ಗೃಹೇತೇ ಜನ್ಮ ಹ-ವು ಪ ಮೋರ. ಒಬ್ಬ ಭಕ್ತನು ಪ್ರಾರ್ಥಿಸುವುದು ಕೇವಲ... ಅವನು ಕೃಷ್ಣನನ್ನು, "ದಯವಿಟ್ಟು ನನ್ನನ್ನು ಮತ್ತೆ ವೈಕುಂಠ ಅಥವಾ ಗೊಲೋಕ ವೃಂದಾವನಕ್ಕೆ ಕರೆದುಕೊಂಡು ಹೋಗು", ಎಂದು ವಿನಂತಿಸುವುದಿಲ್ಲ. ಇಲ್ಲ. "ನಾನು ಮರು ಜನ್ಮ ಪಡೆಯಬೇಕು ಎಂದು ನೀನು ಭಾವಿಸಿದರೆ ಪರವಾಗಿಲ್ಲ. ಆದರೆ, ನನ್ನ ಏಕೈಕ ಕೋರಿಕೆಯು ನನಗೆ ಭಕ್ತನ ಮನೆಯಲ್ಲಿ ಜನ್ಮ ನೀಡಬೇಕು ಎಂಬುದು. ಅಷ್ಟೆ. ನಾನು ನಿನ್ನನ್ನು ಮರೆಯಬಾರದು ಎಂಬುವುದಕೋಸ್ಕರ.” ಇದುವೇ ಭಕ್ತನ ಏಕೈಕ ಪ್ರಾರ್ಥನೆ. ಯಾಕೆಂದರೆ... ಈ ಮಗುವಿನಂತೆಯೇ. ಇವಳು ವೈಷ್ಣವ ತಂದೆ ಮತ್ತು ತಾಯಿಯನ್ನು ಹೊಂದಿದ್ದಾಳೆ. ಆದ್ದರಿಂದ ಅವಳು ತನ್ನ ಹಿಂದಿನ ಜನ್ಮದಲ್ಲಿ ವೈಷ್ಣವಿ ಅಥವಾ ವೈಷ್ಣವನಾಗಿರಬೇಕು. ಯಾಕೆಂದರೆ ಇದು ಒಂದು ಅವಕಾಶ... ನಮ್ಮ ಎಲ್ಲಾ ಮಕ್ಕಳು, ವೈಷ್ಣವ ತಂದೆ, ತಾಯಿಯಿಂದ ಜನಿಸಿದವರು, ಅವರು ತುಂಬಾ ಭಾಗ್ಯವಂತರು. ಜೀವನದ ಆರಂಭದಿಂದಲೂ ಅವರು ಹರೇ ಕೃಷ್ಣ ಮಹಾ-ಮಂತ್ರವನ್ನು ಕೇಳುತ್ತಿದ್ದಾರೆ. ಅವರು ವೈಷ್ಣವರೊಂದಿಗೆ ಸಹವಾಸ ಮಾಡುತ್ತಿದ್ದಾರೆ… ಜಪಿಸುತ್ತಾ, ನರ್ತಿಸುತ್ತಾ. ಅನುಕರಣೆಯೋ, ಅಥವಾ ನಿಜವಾಗಿಯೋ, ಅದು ಮುಖ್ಯವಲ್ಲ. ಆದ್ದರಿಂದ ಆ ಮಕ್ಕಳು ಮಹಾ ಭಾಗ್ಯವಂತರು. ಶುಚೀನಾಂ ಶ್ರೀಮತಾಂ ಗೇಹೇ ಯೋಗ-ಭ್ರಷ್ಟಃ-ಸಂಜಾಯತೇ (ಭ.ಗೀ 6.41). ಆದ್ದರಿಂದ ಅವರು ಸಾಮಾನ್ಯ ಮಕ್ಕಳಲ್ಲ. ಅವರು... ಈ ಮಕ್ಕಳು, ಅವರು ಯಾವಾಗಲೂ ಭಕ್ತರೊಡನೆ ಬೆರೆಯುಲು ಹಂಬಲಿಸುತ್ತಾರೆ, ಹರೇ ಕೃಷ್ಣ ಎಂದು ಜಪಿಸುತ್ತಾ, ನಮ್ಮ ಬಳಿಗೆ ಬರುತ್ತಿದ್ದಾರೆ. ಆದ್ದರಿಂದ ಅವರು ಸಾಮಾನ್ಯ ಮಕ್ಕಳಲ್ಲ. ಭಕ್ತಿ-ಸಂಗೇ ವಾಸ. ಇದು ಬಹಳ ಒಳ್ಳೆಯ ಅವಕಾಶ, ಭಕ್ತ-ಸಂಗೇ ವಾಸ.

ಆದ್ದರಿಂದ ನಮ್ಮ ಕೃಷ್ಣ ಪ್ರಜ್ಞೆ ಸಮಾಜವು ಭಕ್ತ-ಸಂಗ, ಭಕ್ತರ ಸಂಘ. ಎಂದಿಗೂ ದೂರವಾಗಲು ಪ್ರಯತ್ನಿಸಬೇಡಿ. ಎಂದಿಗೂ ದೂರವಾಗಲು ಪ್ರಯತ್ನಿಸಬೇಡಿ. ವ್ಯತ್ಯಾಸಗಳು ಇರಬಹುದು. ನೀವು ಹೊಂದುಕೊಳ್ಳಬೇಕು. ಮತ್ತು ಭಕ್ತರ ಸಂಘದಲ್ಲಿ ಈ ಜಪ ಮತ್ತು ನೃತ್ಯ, ಹೆಚ್ಚಿನ ಪ್ರಯೋಜನವನ್ನು, ಹೆಚ್ಚಿನ ಮೌಲ್ಯವನ್ನು ಪಡೆದುಕೊಂಡಿದೆ. ಇಲ್ಲಿ ಅದನ್ನು ದೃಢೀಕರಿಸಲಾಗಿದೆ - ಮತ್ತು ಎಲ್ಲಾ ವೈಷ್ಣವರು ದೃಢ ಪಡಿಸಿದ್ದಾರೆ.

ತಾಂದೇರ ಚರಣ-ಸೇವಿ-ಭಕ್ತ-ಸನೇ ವಾಸ
ಜನಮೇ ಜನಮೇ ಮೋರ ಏ ಅಭಿಲಾಷ
(ಶ್ರೀಲ ನರೋತ್ತಮ ದಾಸ ಠಾಕುರ)

ಜನಮೆ ಜನಮೆ ಮೋರ ಎಂದರೆ ಅವನು ಹಿಂತಿರುಗಲು ಬಯಸುವುದಿಲ್ಲ. ಅದು ಅವನ ಆಸೆ ಅಲ್ಲ. "ಕೃಷ್ಣನು ಬಯಸಿದಾಗ, ಕೃಷ್ಣ ನನಗೆ ಅವಕಾಶ ನೀಡುತ್ತಾನೆ. ಅದು ಬೇರೆ ವಿಷಯ. ಇಲ್ಲವಾದರೆ, ನಾನು ಈ ರೀತಿ ಮುಂದುವರಿಯುತ್ತೇನೆ, ಭಕ್ತರ ಸಂಘದಲ್ಲಿ ಜೀವನ, ಮತ್ತು ಜಪ ಮತ್ತು ನೃತ್ಯ ನನ್ನ ವ್ಯವಹಾರವಾಗಿದೆ.” ಇದರ ಅಗತ್ಯವಿದೆ. ಬೇರೇನೂ ಅಲ್ಲ. ಇನ್ನೇನಾದರೂ, ಅಪೇಕ್ಷಿಸುವ ಯಾವುದಾದರೂ, ಅದು ಅನ್ಯಾಭಿಲಾಷ. ಅನ್ಯಾಭಿಲಾಷಿತಾ-ಶೂನ್ಯಮ್ (ಭ.ರ.ಸಿ 1.1.11). ಒಬ್ಬ ಭಕ್ತನು ಇದನ್ನು ಹೊರತುಪಡಿಸಿ ಯಾವುದನ್ನೂ ಅಪೇಕ್ಷಿಸಬಾರದು, "ನಾನು ಭಕ್ತರ ಸಂಘದಲ್ಲಿ ಬಾಳುತ್ತೇನೆ, ಮತ್ತು ಹರೇ ಕೃಷ್ಣ ಮಹಾ-ಮಂತ್ರವನ್ನು ಜಪಿಸುತ್ತೇನೆ.” ಇದೇ ನಮ್ಮ ಜೀವನ. ನಿಮಗೆ ಧನ್ಯವಾದಗಳು.