KN/Prabhupada 0024 - ಕೃಷನು ಎಷ್ಟು ದಯಾಳು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0024 - in all Languages Category:KN-Quotes - 1974 Category:KN-Quotes - L...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 9: Line 9:
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Hindi|HI/Prabhupada 0023 - मृत्यु से पहले कृष्ण भावनाभावित हो जाअो|0023|HI/Prabhupada 0025 - अगर हम असली चीज देते हैं, तो उसका असर तो होगा ही|0025}}
{{1080 videos navigation - All Languages|Kannada|KN/Prabhupada 0023 - ಸಾವಿಗೆ ಮುನ್ನ ಕೃಷ್ಣ ಪ್ರಜ್ಞರಾಗಿರಿ|0023|KN/Prabhupada 0025 - ನೀವು ಅಪ್ಪಟವಾದುದನ್ನು ನೀಡಿದರೆ ಅದು ಕೆಲಸ ಮಾಡುತ್ತದೆ|0025}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 19: Line 19:


<!-- BEGIN VIDEO LINK -->
<!-- BEGIN VIDEO LINK -->
{{youtube_right|fQRuJEPYKe4|Krishna is so Kind<br /> - Prabhupāda 0024}}
{{youtube_right|3Euwu7dAjL8|ಕೃಷನು ಎಷ್ಟು ದಯಾಳು<br /> - Prabhupāda 0024}}
<!-- END VIDEO LINK -->
<!-- END VIDEO LINK -->



Latest revision as of 17:51, 1 October 2020



Lecture on SB 3.25.26 -- Bombay, November 26, 1974

ಅರ್ಜುನನು ಕೃಷ್ಣನನ್ನು ಮುಖಾಮುಖಿ ಕಾಣುತ್ತಿದ್ದಾಗ, ಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದ. ಕೃಷ್ಣನನ್ನು ಕಣ್ಣಾರೆ ಕಾಣುವುದು ಮತ್ತು ಭಗವದ್ಗೀತೆಯನ್ನು ಓದುವುದು, ಎರಡೂ ಒಂದೇ. ಇವೆರಡರ ನಡುವೆ ವ್ಯತ್ಯಾಸವಿಲ್ಲ. ಯಾರಾದರೂ ಹೇಳಬಹುದು, "ಅರ್ಜುನನು ತುಂಬಾ ಅದೃಷ್ಟವಂತ. ಅವನು ಕೃಷ್ಣನನ್ನು ಮುಖಾಮುಖಿ ಕಂಡನು ಮತ್ತು ಕೃಷ್ಣ ಅವನಿಗೆ ಬೋಧಿಸಿದನು". ಅದು ಸರಿಯಲ್ಲ. ಕೃಷ್ಣನನ್ನು ತಕ್ಷಣವೇ ಕಾಣಬಹುದು. ಅವನನ್ನು ಕಾಣುವ ಕಣ್ಣುಗಳು ನಿಮ್ಮಲ್ಲಿ ಇರಬೇಕು. ಆದ್ದರಿಂದ ಪ್ರೇಮಾಂಜನ ಚ್ಛುರಿತ ಎಂದು ಹೇಳಿದೆ. ಪ್ರೇಮ ಮತ್ತು ಭಕ್ತಿ, ಎರಡೂ ಒಂದೇ. ಪ್ರೇಮಾಂಜನ ಚ್ಛುರಿತ ಭಕ್ತಿ ವಿಲೋಚನೇನ, ಸಂತ ಸ್ವಾಮಿ ಹೃದಯೇಷು ವಿಲೋಕಯಂತಿ (ಬಹ್ಮ ಸಂಹಿತೆ 5.38) ಇದಕ್ಕೆ ಸಂಬಂಧಿಸಿದಂತೆ ಒಂದು ಕಥೆಯನ್ನು ಹೇಳುತ್ತೇನೆ. ದಕ್ಷಿಣ ಭಾರತದಲ್ಲಿ ಒಬ್ಬ ಬ್ರಾಹ್ಮಣ, ಶ್ರೀ ರಂಗನಾಥ ದೇಗುಲದಲ್ಲಿ ಭಗವದ್ಗೀತೆಯನ್ನು ಓದುತ್ತಿದ್ದ. ಅವನೊಬ್ಬ ಅನಕ್ಷರಸ್ಥ. ಅವನಿಗೆ ಸಂಸ್ಕೃತ ತಿಳಿದಿರಲಿಲ್ಲ. ನೆರೆ ಮನೆಯ ಜನರಿಗೆ ಈತ ಒಬ್ಬ ಅನಕ್ಷರಸ್ಥ ಮತ್ತು ಭಗವದ್ಗೀತೆಯನ್ನು ಓದುತ್ತಿದ್ದಾನೆ ಎಂಬುದು ತಿಳಿದಿತ್ತು. ಅವನು ಭಗವದ್ಗೀತೆಯನ್ನು ತೆರೆದಿಟ್ಟು ಸುಮ್ಮನೆ ಶಬ್ದ ಮಾಡುತ್ತಿದ್ದ. "ಹೇ ಬ್ರಾಹ್ಮಣ, ನಿನ್ನ ಭಗವದ್ಗೀತೆಯ ಅಧ್ಯಯನ ಹೇಗೆ ನಡೆಯುತ್ತಿದೆ?" ಎಂದು ಜನರು ಅವನನ್ನು ಹಂಗಿಸುತ್ತಿದ್ದರು. "ನಾನು ಅನಕ್ಷರಸ್ಥನಾದ ಕಾರಣ ಜನರು ನನ್ನನ್ನು ಹಂಗಿಸುತ್ತಿದ್ದಾರೆ" ಎಂದು ಅವನಿಗೆ ತಿಳಿದಿತ್ತು. ಹೀಗಿರುವಾಗ, ಒಮ್ಮೆ ಶ್ರೀ ಚೈತನ್ಯ ಮಹಾಪ್ರಭುಗಳು ಶ್ರೀ ರಂಗನಾಥ ದೇಗುಲಕ್ಕೆ ಬಂದರು. "ಇಲ್ಲಿ ಒಬ್ಬ ಭಕ್ತನಿದ್ದಾನೆ" ಎಂದು ಅವರಿಗೆ ತಿಳಿಯಿತು. "ನನ್ನ ಪ್ರೀತಿಯ ಬ್ರಾಹ್ಮಣನೇ, ನೀನು ಏನನ್ನು ಓದುತ್ತಿರುವೆ?" ಎಂದು ಅವರು ಕೇಳಿದರು. "ಇವರು ನನ್ನನ್ನು ಹಂಗಿಸುತ್ತಿಲ್ಲ" ಎಂದು ಆತ ಅರ್ಥ ಮಾಡಿಕೊಂಡನು. "ಸ್ವಾಮಿ, ನಾನು ಭಗವದ್ಗೀತೆಯನ್ನು ಓದುತ್ತಿದ್ದೇನೆ. ಭಗವದ್ಗೀತೆಯನ್ನು ಓದಲು ಪ್ರಯತ್ನಿಸುತ್ತಿದ್ದೇನೆ, ಆದರೆ ನಾನೊಬ್ಬ ಅನಕ್ಷರಸ್ಥ" ಎಂದು ಅವನು ಹೇಳಿದನು. "ನೀನು ಪ್ರತಿ ದಿನ ಹದಿನೆಂಟು ಅಧ್ಯಾಯಗಳನ್ನು ಓದಬೇಕು" ಎಂದು ನನ್ನ ಗುರು ಮಹಾರಾಜರು ಹೇಳಿದ್ದಾರೆ. ನನಗೆ ಅಕ್ಷರ ಜ್ಞಾನ ಇಲ್ಲ. ನನಗೆ ಓದಲು ಸಾಧ್ಯವಿಲ್ಲ. ಆದರೂ ನಾನು ಗುರು ಮಹಾರಾಜರ ಆಜ್ಞೆಯನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ. ಸುಮ್ಮನೆ ಪುಟಗಳನ್ನು ತೆರೆಯುತ್ತೇನೆ. ನನಗೆ ಅದನ್ನು ಓದಲು ಬರುವುದಿಲ್ಲ. "ನೀನು ಕೆಲವೊಮ್ಮೆ ಅಳುವುದನ್ನು ನಾನು ಕಂಡಿದ್ದೇನೆ" ಎಂದು ಚೈತನ್ಯ ಮಹಾಪ್ರಭುಗಳು ಹೇಳಿದರು. "ಹೌದು ನಾನು ಅಳುತ್ತಿದ್ದೇನೆ" "ನಿನಗೆ ಓದಲು ಬರುವುದಿಲ್ಲ ಎಂದ ಮೇಲೆ ಅಳುವುದು ಹೇಗೆ ಸಾಧ್ಯ? " "ಇಲ್ಲ, ಏಕೆಂದರೆ ನಾನು ಈ ಭಗವದ್ಗೀತೆಯನ್ನು ಹಿಡಿದಾಗ ಒಂದು ಚಿತ್ರವನ್ನು ಕಾಣುತ್ತೇನೆ." ಕೃಷ್ಣನು ಎಷ್ಟು ದಯಾಳು ಎಂದರೆ, ಆತನು ಅರ್ಜುನನ ರಥದ ಸಾರಥಿಯಾಗಿದ್ದಾನೆ. ಅರ್ಜುನನು ಕೃಷ್ಣನ ಭಕ್ತ. ಕೃಷ್ಣನು ಎಷ್ಟು ದಯಾಳು ಎಂದರೆ ಅವನು ಒಬ್ಬ ಸೇವಕನ ಪಾತ್ರವನ್ನು ವಹಿಸುತ್ತಿದ್ದಾನೆ. "ನನ್ನ ರಥವನ್ನು ಇಲ್ಲಿ ನಿಲ್ಲಿಸು" ಎಂಬ ಅರ್ಜುನನ ಆದೇಶದಂತೆ ಕೃಷ್ಣನು ನಡೆದುಕೊಳ್ಳುತ್ತಿದ್ದನು. ಆದ್ದರಿಂದ ಕೃಷ್ಣನು ತುಂಬಾ ದಯಾಳು. ಈ ದೃಶ್ಯವನ್ನು ನಾನು ನನ್ನ ಮನಸ್ಸಿನಲ್ಲಿ ಕಂಡಾಗ ಅಳುತ್ತೇನೆ. "ನೀನು ನಿಜವಾಗಿಯೂ ಭಗವದ್ಗೀತೆಯನ್ನು ಓದುತ್ತಿದ್ದೀಯ" ಎಂದು ಹೇಳಿ ಚೈತನ್ಯ ಮಹಾಪ್ರಭುಗಳು ಆತನನ್ನು ತಕ್ಷಣವೇ ಆಲಂಗಿಸಿದರು. "ಯಾವುದೇ ಶಿಕ್ಷಣವಿಲ್ಲದಿದ್ದರೂ ನೀನು ಭಗವದ್ಗೀತೆಯನ್ನು ಓದುತ್ತಿದ್ದೀಯ." ಅವರು ಅವನನ್ನು ಆಲಂಗಿಸಿದರು. ಹೀಗೆ ಆತನು ದೃಶ್ಯವನ್ನು ಕಾಣುತ್ತಿದ್ದನು. ಆತನು ಕೃಷ್ಣ ಪ್ರೇಮಿಯಾದ ಕಾರಣ, ಅವನಿಗೆ ಶ್ಲೋಕ ಓದಲು ಬರುವುದೊ ಇಲ್ಲವೋ ಎಂಬುದು ಮುಖ್ಯವಲ್ಲ. ಆತನು ಕೃಷ್ಣ ಪ್ರೇಮದಲ್ಲಿ ತಲ್ಲೀನನಾಗಿದ್ದ ಮತ್ತು ಭಗವಂತನನ್ನು ಕಾಣುತ್ತಿದ್ದ. ಕೃಷ್ಣನು ಅರ್ಜುನನ ರಥದಲ್ಲಿ ಕುಳಿತು ಅದನ್ನು ನಡೆಸುತ್ತಿದ್ದ. ಇದು ಅಗತ್ಯವಿದೆ.