KN/Prabhupada 0055 - ಆಲಿಸುವಿಕೆಯಿಂದ ಕೃಷ್ಣನನ್ನು ಮುಟ್ಟುತ್ತಿರುವಿರಿ: Difference between revisions
(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0055 - in all Languages Category:KN-Quotes - 1972 Category:KN-Quotes - L...") |
(Vanibot #0023: VideoLocalizer - changed YouTube player to show hard-coded subtitles version) |
||
Line 7: | Line 7: | ||
[[Category:KN-Quotes - in India]] | [[Category:KN-Quotes - in India]] | ||
<!-- END CATEGORY LIST --> | <!-- END CATEGORY LIST --> | ||
<!-- BEGIN NAVIGATION BAR -- DO NOT EDIT OR REMOVE --> | <!-- BEGIN NAVIGATION BAR -- DO NOT EDIT OR REMOVE --> | ||
{{1080 videos navigation - All Languages| | {{1080 videos navigation - All Languages|Kannada|KN/Prabhupada 0054 - ಎಲ್ಲರು ಕೃಷ್ಣನಿಗೆ ಕೇವಲ ತೊಂದರೆ ಕೊಡುತ್ತಿದ್ದೇವೆ|0054|KN/Prabhupada 0056 - ಶಾಸ್ತ್ರಗಳಲ್ಲಿ ಹನ್ನೆರಡು ಆಚಾರ್ಯರ ಉಲ್ಲೇಖವಿದೆ|0056}} | ||
<!-- END NAVIGATION BAR --> | <!-- END NAVIGATION BAR --> | ||
<!-- BEGIN ORIGINAL VANIQUOTES PAGE LINK--> | <!-- BEGIN ORIGINAL VANIQUOTES PAGE LINK--> | ||
Line 20: | Line 18: | ||
<!-- BEGIN VIDEO LINK --> | <!-- BEGIN VIDEO LINK --> | ||
{{youtube_right| | {{youtube_right|qcAvPpw3FuQ|ಆಲಿಸುವಿಕೆಯಿಂದ ಕೃಷ್ಣನನ್ನು ಮುಟ್ಟುತ್ತಿರುವಿರಿ<br />- Prabhupāda 0055}} | ||
<!-- END VIDEO LINK --> | <!-- END VIDEO LINK --> | ||
Latest revision as of 21:23, 3 February 2021
Lecture on BG 2.18 -- Hyderabad, November 23, 1972
ಚೈತನ್ಯ ಮಹಾಪ್ರಭುಗಳ ಭವಿಷ್ಯವಾಣಿ: ಜಗತ್ತಿನಲ್ಲಿ ಎಷ್ಟು ನಗರ ಪ್ರದೇಶ ಮತ್ತು ಹಳ್ಳಿಗಳಿವೆಯೋ, ಅಲ್ಲೆಲ್ಲಾ ಈ ಹರೇ ಕೃಷ್ಣ ಮಂತ್ರ, ಅಥವಾ ಚೈತನ್ಯ ಮಹಾಪ್ರಭುಗಳ ಹೆಸರಿನ ನಾಮ ಸಂಕೀರ್ತನೆ ಕೊಂಡಾಡಲಾಗುತ್ತದೆ. ಅದು ನಡೆಯುತ್ತಿದೆ. ಈ ಹರೇ ಕೃಷ್ಣ ಪಂಥವನ್ನು ಜಗತ್ತಿನೆಲ್ಲೆಡೆ ಪರಿಚಯಿಸಲು ಬಹಳಷ್ಟು ಅವಕಾಶವಿದೆ. ಅದು ವ್ಯವಹಾರಿಕ. ದುರುದೃಷ್ಟವಶಾತ್, ಚೈತನ್ಯ ಮಹಾಪ್ರಭುಗಳು ಈ ವಿಷಯವನ್ನು ಪ್ರತಿ ಒಬ್ಬ ಭಾರತಿಯನಿಗು ವಹಿಸಿಕೊಟ್ಟಿದ್ದರೂ ಕೂಡ… ಬಂಗಾಳದಲ್ಲಿ ಜನಿಸಿದರು ಎಂಬ ಕಾರಣದಿಂದ ಬಂಗಾಳದವರಿಗಲ್ಲ. ಅವರು ಎಂದಿಗೂ ಬಂಗಾಳದವರಿಗೆ ಮಾತ್ರ ಎಂದು ಹೇಳಲಿಲ್ಲ. ಅವರು ಹೇಳಿದ್ದು, ಭಾರತ-ಭೂಮಿತೆ ಮನುಷ್ಯ-ಜನ್ಮ ಹೈಲ ಯಾರ (ಚೈ.ಚ ಆದಿ 9.41). “ಭರತವರ್ಷದ ಈ ಪುಣ್ಯ ಭೂಮಿಯಲ್ಲಿ, ಯಾರು ಮನುಷ್ಯ ಜನ್ಮ ಪಡೆದಿದ್ದಾರೋ ಅವರು ತನ್ನ ಜೀವನವನ್ನು ಪರಿಪೂರ್ಣವಾಗಿಸಿಕೊಳ್ಳಬೇಕು.” ಜನ್ಮ ಸಾರ್ಥಕ ಕರಿ. ನಿಮ್ಮ ಜೀವನವನ್ನು ಪರಿಪೂರ್ಣವಾಗಿಸಿಕೊಳ್ಳದೆ ನೀವು ಭೋದಿಸಲಾರಿರಿ. ನಾನು ಅಪರಿಪೂರ್ಣನಾದರೆ, ಭೋದಿಸಲಾರೆ. ನಾನು ಪರಿಪೂರ್ಣನಾಗಿರಬೇಕು. ಅದು ಬಹಳ ಕಷ್ಟವಲ್ಲ. ನಮಗೆ ಮಹಾನ್ ರಿಷಿಗಳ, ಸಾಧು ಸಜ್ಜನರ, ಹಾಗು ಸ್ವತಃ ಭಗವಂತ ಕೃಷ್ಣನ ನಿರ್ದೇಶನ ಸಿಕ್ಕಿದೆ.
ಆದ್ದರಿಂದ ನಮ್ಮ ಜೀವನವನ್ನು ಪರಿಪೂರ್ಣವಾಗಿಸಿಕೊಳ್ಳಲು ಕಠಿಣವೇನಲ್ಲ. ನಾವು ಸುಮ್ಮನೆ ನಿರ್ಲಕ್ಷಿಸುತ್ತಿದ್ದೇವೆ. ಅದು ನಮ್ಮ ದೌರ್ಭಾಗ್ಯ. ಮಂದಾಃ ಸುಮಂದ-ಮತಯೋ ಮಂದ-ಭಾಗ್ಯಾಃ (ಶ್ರೀ.ಭಾ 1.1.10). ನಾವು ಮಂದ, ಮಂದ-ಮತಃ ಆದ್ದರಿಂದ ನಾವು ಕೆಲವು ನಕಲಿ ತರ್ಕವನ್ನು, ನಕಲಿ ಸಿದ್ಧಾಂತವನ್ನು ಸ್ವೀಕರಿಸಿ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ. ನಾವು ಸತ್ಯದ ಹಾದಿಯನ್ನು ಶಾಸ್ತ್ರದಿಂದ ತಿಳಿದುಕೊಳ್ಳಬೇಕು. ಆಗ ನಾವು ಜ್ಙಾನವುಳ್ಳವರಾಗುತ್ತೇವೆ. ಸುಮೇಧಸಃ. ಯಜ್ಞೈ: ಸಂಕೀರ್ತನ-ಪ್ರಾಯೈರ್ ಯಜಂತಿ ಹಿ ಸುಮೇಧಸಃ (ಶ್ರೀ.ಭಾ 11.5.32). ಸಮೀಪ ಮಾರ್ಗದ ವಿಧಾನ. ಬುದ್ಧಿವಂತರು ಈ ಸಂರ್ಕಿತನ ಆಂದೋಲನವನ್ನು ತಮ್ಮ ಜೀವನದ ಆಧ್ಯಾತ್ಮಿಕ ಅಭ್ಯುದಯಕೋಸ್ಕರ ಸ್ವೀಕರಿಸುತ್ತಾರೆ. ಇದು ಸತ್ಯಾಂಶ, ವೈಜ್ಞಾನಿಕವಾದದ್ದು, ಅಧಿಕಾರಯುತವಾದದ್ದು. ಆದ್ದರಿಂದ ನಿರ್ಲಕ್ಷಿಸಬೇಡಿ. ಈ ಹರೇ ಕೃಷ್ಣ ಮಂತ್ರ ಜಪವನ್ನು ಮನಸು ಮತ್ತು ಆತ್ಮದಲ್ಲಿ ನೆಲೆಸಿ, ಹಾಗು ಎಲ್ಲಿಗಾದರೂ… ನಿಯಮಿತಃ ಸ್ಮರಣೆ ನ ಕಾಲಃ. ಯಾವುದೇ ನಿಯಮಗಳು ಅಥವ ನಿಬಂಧನೆಗಳಿಲ್ಲ, “ನೀವು ಈ ಸಮಯದಲ್ಲೆ ಅಥವ ಆ ಸಮಯದಲ್ಲೆ, ಈ ಆಸನದಲ್ಲೆ ಅಥವ ಆ ಆಸನದಲ್ಲೆ ಜಪ ಮಾಡಬೇಕೆಂದು.” ಇಲ್ಲ. ಇದು ಪತಿತ ಬದ್ದಾತ್ಮಗಳಿಗೋಸ್ಕರವೇ ಉದ್ದೇಶಿಸಿರುವದರಿಂದ ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲ. ನಾಮ್ನಾಮ್ ಅಕಾರಿ ಬಹುದಾ ನಿಜ-ಸರ್ವ-ಶಕ್ತಿಸ್ ತತ್ರಾರ್ಪಿತಾ ನಿಯಮಿತಃ ಸ್ಮರಣೆ ನ ಕಾಲಃ. ಆ ನಾಮ, ಕೃಷ್ಣನ ಪವಿತ್ರ ನಾಮ, ಕೃಷ್ಣನಷ್ಟೆ ಶಕ್ತಿಯುತ. ಕೃಷ್ಣ ಹಾಗು ಅವನ ನಾಮಕ್ಕೆ ವ್ಯತ್ಯಾಸವಿಲ್ಲ. ಕೃಷ್ಣನು ಪರಾತ್ಪರ. ಆದ್ದರಿಂದ ಕೃಷ್ಣನ ನಾಮ, ಕೃಷ್ಣ ರೂಪ, ಕೃಷ್ಣನ ಗುಣ, ಕೃಷ್ಣನ ಹಿಂಬಾಲಕರು, ಕೃಷ್ಣನ ಲೀಲಗಳು, ಸ್ವತಃ ಕೃಷ್ಣನಿಂದ ವಿಭಿನ್ನವಲ್ಲ. ನೀವು ಕೃಷ್ಣನ ಬಗ್ಗೆ ಕೇಳಿದಾಗ, ಆಲಿಸುವಿಕೆಯಿಂದ ಕೃಷ್ಣನನ್ನು ಮುಟ್ಟುತ್ತಿರುವಿರಿ ಎಂದು ತಿಳಿದುಕೊಳ್ಳಬೇಕು. ಕೃಷ್ಣನ ಮೂರ್ತಿ ನೋಡಿದಾಗ, ಸ್ವತಃ ಕೃಷ್ಣನನ್ನೆ ನೋಡುತ್ತಿರುವಿರಿ ಎಂದು ಅರ್ಥ. ಏಕೆಂದರೆ ಕೃಷ್ಣನು ಪರಾತ್ಪರ. ಅವನು ನಿಮ್ಮ ಸೇವೆಯನ್ನು ಹೇಗಾದರೂ ಸ್ವೀಕರಿಸಬಲ್ಲ. ಏಕೆಂದರೆ ಅವನು ಸರ್ವಸ್ವ. ಈಶಾವಸ್ಯಮ್ ಇದಂ ಸರ್ವಂ (ಈಶೋಪನಿಷದ್ 1). ಅವನ ಶಕ್ತಿ. ಪರಸ್ಯ ಬ್ರಹ್ಮಣಃ ಶಕ್ತಿಸ್ ತಧೇದಂ ಅಖಿಲಂ ಜಗತ್. ಎಲ್ಲವೂ ಕೃಷ್ಣನ ಶಕ್ತಿಯೇ. ಆದ್ದರಿಂದ ನಾವು ಕೃಷ್ಣನ ಶಕ್ತಿಯ ಜೊತೆ ಸಂಪರ್ಕದಲ್ಲಿದ್ದರೆ, ಸ್ವಲ್ಪ ಜ್ಙಾನದಿಂದ, ನಾವು ನೇರವಾಗಿ ಕೃಷ್ಣನ ಸಂಪರ್ಕದಲ್ಲಿರುತ್ತೇವೆ. ಇದು ಪ್ರಕ್ರಿಯೆ. ನೀವು ನಿರಂತರ ಕೃಷ್ಣನ ಜೊತೆ ಸಂಪರ್ಕದಲ್ಲಿದ್ದರೆ, ಅದುವೇ ಕೃಷ್ಣ ಪ್ರಜ್ಞೆ. ಆಗ ನೀನು ಪರಿಶುದ್ಧವಾಗುತ್ತಿಯ. ಪರಿಶುದ್ಧ. ಒಂದು ಕಬ್ಬಿಣದ ದಂಡವನ್ನು ಬೆಂಕಿಯಲ್ಲಿ ಹಾಕಿದರೆ, ಅದು ಕಾದು ಬಿಸಿಯಾಗಿ ಕೊನೆಗೆ ಕೆಂಪಗಾಗುತ್ತದೆ. ಅದು ಕೆಂಪಗೆ ಕಾದಾಗ, ಬೆಂಕಿಯಾಗುತ್ತದೆ. ಇನ್ನು ಅದು ಕಬ್ಬಿಣದ ದಂಡವಲ್ಲ. ಅಂತೆಯೇ, ನೀವು ಕೃಷ್ಣ ಪ್ರಜ್ಞೆಯಲ್ಲಿದ್ದರೆ, ನೀವು ಕೃಷ್ಣ-ತನ್ಮಯವಾಗುತ್ತೀರಿ. ಇದುವೇ ಪ್ರಕ್ರಿಯೆ. ಆಗ ಪ್ರತಿವೊಂದು ಪರಿಶುದ್ದವಾಗುತ್ತದೆ; ಆಗ ನಿಮ್ಮ ಆಧ್ಯಾತ್ಮಿಕ ಜೀವನ ಪ್ರಕಟವಾಗುತ್ತದೆ. ಆಗ ನಿಮ್ಮ ಬದುಕು ಸಫಲವಾಗುತ್ತದೆ.