KN/Prabhupada 0063 - ನಾನು ಶ್ರೇಷ್ಠ ಮೃದಂಗ ವಾದ್ಯಗಾರನಾಗಬೇಕು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0063 - in all Languages Category:KN-Quotes - 1975 Category:KN-Quotes - A...")
 
(Vanibot #0023: VideoLocalizer - changed YouTube player to show hard-coded subtitles version)
 
Line 7: Line 7:
[[Category:KN-Quotes - in USA]]
[[Category:KN-Quotes - in USA]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0062 - See Twenty-four Hours Krsna|0062|Prabhupada 0064 - Siddhi Means Perfection of Life|0064}}
{{1080 videos navigation - All Languages|Kannada|KN/Prabhupada 0062 - ಇಪ್ಪತ್ತನಾಲ್ಕು ಗಂಟೆಯು ಕೃಷ್ಣನನ್ನು ದರ್ಶಿಸು|0062|KN/Prabhupada 0064 - ಸಿದ್ಧಿ ಎಂದರೆ ಜೀವನದ ಪರಿಪೂರ್ಣತೆ|0064}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 20: Line 18:


<!-- BEGIN VIDEO LINK -->
<!-- BEGIN VIDEO LINK -->
{{youtube_right|ElYCteukBk8|ನಾನು ಶ್ರೇಷ್ಠ ಮೃದಂಗ ವಾದ್ಯಗಾರನಾಗಬೇಕು<br />- Prabhupāda 0063}}
{{youtube_right|myqi-sti2t8|ನಾನು ಶ್ರೇಷ್ಠ ಮೃದಂಗ ವಾದ್ಯಗಾರನಾಗಬೇಕು<br />- Prabhupāda 0063}}
<!-- END VIDEO LINK -->
<!-- END VIDEO LINK -->



Latest revision as of 21:24, 3 February 2021



Arrival Lecture -- Dallas, March 3, 1975

ಇಲ್ಲಿರುವ ವಾತಾವರಣ ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ಶಿಕ್ಷಣವೆಂದರೆ ಕೃಷ್ಣ ಪ್ರಜ್ಞೆ. ಅದುವೇ ಶಿಕ್ಷಣ. ನಾವು ಕೇವಲ “ಕೃಷ್ಣ ದೇವೋತ್ತಮ ಪರಮಪುರುಷ” ಎಂದು ಅರಿತುಕೊಳ್ಳಬೇಕು. ಅವನು ಪರಮ, ಮತ್ತು ನಾವೆಲ್ಲ ಅವನ ಕಿಂಕರರು. ಆದ್ದರಿಂದ ಅವನ ಸೇವೆ ಮಾಡುವುದು ನಮ್ಮ ಕರ್ತವ್ಯ. ಈ ಎರಡು ವಾಕ್ಯಗಳನ್ನು ಅರ್ಥಮಾಡಿಕೊಂಡೆರೆ ನಮ್ಮ ಜೀವನ ಪರಿಪೂರ್ಣವಾಗುತ್ತದೆ. ನಾವು ಕೃಷ್ಣನನ್ನು ಹೇಗೆ ಪೂಜಿಸುವುದು ಎಂದು ತಿಳಿದುಕೊಂಡರೆ, ಹೇಗೆ ಅವನನ್ನು ಸಂತೋಷ ಪಡಿಸುವುದು, ಹೇಗೆ ಅವನಿಗೆ ಉಡುಪು ದರಿಸುವುದು, ಹೇಗೆ ಅವನಿಗೆ ಒಳ್ಳೆ ಆಹಾರ ಉಣಿಸುವುದು, ಹೇಗೆ ಅವನನ್ನು ಒಡವೆ ಹಾಗು ಪುಷ್ಫಗಳಿಂದ ಅಲಂಕರಿಸುವುದು, ಹೇಗೆ ಅವನಿಗೆ ಆದರದ ನಮನಗಳನ್ನು ಸಲ್ಲಿಸುವುದು, ಹೇಗೆ ಅವನ ನಾಮ ಜಪಿಸುವುದು, ಹೀಗೆ ಕೇವಲ ಆಲೋಚಿಸಿದರೆ ಸಾಕು, ಕೇವಲ ಹೆಸರಿಗಾಗಿ ಕರೆಯಲ್ಪಡುವ ಈ ಶಿಕ್ಷಣವಿಲ್ಲವಾದರೂ ನಾವು ಬ್ರಹ್ಮಾಂಡದಲ್ಲೆ ಪರಿಪೂರ್ಣ ವ್ಯಕ್ತಿಯಾಗುತ್ತೇವೆ. ಅದುವೇ ಕೃಷ್ಣಪ್ರಜ್ಞೆ. ಅದಕ್ಕೆ ಅ,ಆ, ಇ,ಈ ಶಿಕ್ಷಣ ಬೇಕಿಲ್ಲ. ಕೇವಲ ಪ್ರಜ್ಞೆಯ ಪರಿರ್ವತನೆ ಸಾಕು. ಆದ್ದರಿಂದ ಈ ಮಕ್ಕಳಿಗೆ ತಮ್ಮ ಜೀವನದ ಪ್ರಾರಂಭದಿಂದಲ್ಲೆ ಕಲಿಸಿದರೆ… ನಮ್ಮನ್ನು ನಮ್ಮ ಪೋಷಕರು ಹೀಗೆ ಪಳಗಿಸುವ ಅವಕಾಶ ಸಿಕ್ಕಿತು.

ಹಲವಾರು ಸಂತರು ನನ್ನ ತಂದೆಯೆ ಮನೆಗೆ ಬರುವರು. ನನ್ನ ತಂದೆ ಒಬ್ಬ ವೈಷ್ಣವ. ಅವರು ವೈಷ್ಣವ, ಹಾಗು ನಾನು ಕೂಡ ವೈಷ್ಣವನಾಗಬೇಕೆಂದು ಬಯಸಿದ್ದರು. ಯಾರೆ ಸಂತರು ಬಂದರೂ ಅವರನ್ನು ಬೇಡುವರು, “ನನ್ನ ಮಗನು ರಾಧಾರಾಣಿಯ ಸೇವಕನಾಗಲಿ ಎಂದು ದಯವಿಟ್ಟು ಆಶೀರ್ವಾದ ಮಾಡಿ.” ಅದುವೇ ಅವರ ಪ್ರಾರ್ಥನೆ. ಅವರು ಬೇರೆಯಾವದಕ್ಕೂ ಪ್ರಾರ್ಥಿಸುತ್ತಿರಲಿಲ್ಲ. ಹಾಗು ನನಗೆ ಮೃದಂಗವಾದನದ ಶಿಕ್ಷಣ ನೀಡಿದರು. ನನ್ನ ತಾಯಿ ಇದನು ವಿರೋದಿಸಿದರು. ಎರಡು ಶಿಕ್ಷಕರಿದ್ದರು – ಒಬ್ಬರು ಅ, ಆ, ಇ, ಈ, ಕಲಿಸಲು, ಒಬ್ಬರು ಮೃದಂಗ ಕಲಿಸಲು. ನನಗೆ ಗುರುವು ಮೃದಂಗ ಕಲಿಸುವಾಗ, ಇನ್ನೊಬ್ಬ ಗುರುವು ಕಾಯುತ್ತಿರುವರು. ಆದ್ದರಿಂದ ನನ್ನ ಅಮ್ಮನಿಗೆ ಕೋಪಬರುವುದು – “ಏನಿದು ಮೂರ್ಖತೆ? ಮೃದಂಗವೇಕೆ ಕಲಿಸುವಿರಿ? ಮೃದಂಗ ಕಲಿತು ಅವನೇನು ಮಾಡುವನು?” ಬಹುಶಃ ನನ್ನ ತಂದೆಗೆ ಭವಿಷ್ಯದಲ್ಲಿ ನಾನು ಶ್ರೇಷ್ಠ ಮೃದಂಗ ವಾದ್ಯಗಾರನಾಗಬೇಕೆಂಬ ಆಸೆಯಿತ್ತೇನೋ. (ನಗು) ಆದ್ದರಿಂದ ನಾನು ನನ್ನ ತಂದೆಗೆ ಸದಾ ಚಿರ ಋಣಿ, ಹಾಗು ನನ್ನ ‘ಕೃಷ್ಣ’ ಪುಸ್ತಕವನ್ನು ಅವರಿಗೆ ಸಮರ್ಪಿಸಿದ್ದೇನೆ. ಅವರಿಗೆ ಅಸೆಯಿತ್ತು. ನಾನು ಶ್ರೀಮದ್ ಭಾಗವತಂ ಬೋಧಕನಾಗಬೇಕೆಂದು, ಮೃದಂಗ ವಾದ್ಯಗಾರನಾಗಬೇಕೆಂದು, ಹಾಗು ರಾಧಾರಾಣಿಯ ದಾಸನಾಗಬೇಕೆಂದು ಬಯಸಿದರು.

ಪ್ರತಿ ಪೋಷಕರೂ ಹಾಗೆ ಆಲೋಚಿಸಬೇಕು; ಅನ್ಯಥಾ ತಂದೆ-ತಾಯಿ ಆಗಬಾರದು. ಆದುವೇ ಶಾಸ್ತ್ರದ ಆದೇಶವಾಗಿದೆ. ಇದು ಶ್ರೀಮದ್ ಭಾಗವತಂ, ಐದನೆಯೆ ಸ್ಕಂಧದಲ್ಲಿ ಹೇಳಲಾಗಿದೆ ಪಿತಾ ನ ಸ ಸ್ಯಾಜ್ ಜನನೀ ನ ಸ ಸ್ಯಾದ್ ಗುರು ನ ಸ ಸ್ಯಾತ್ ಸ್ವ-ಜನೋ ನ ಸ ಸ್ಯಾತ್. ಅಂತೆಯೇ ಇದರ ತೀರ್ಮಾನವೇನೆಂದರೆ, ನ ಮೋಚಯೇದ್ ಯಃ ಸಮುಪೇತ-ಮೃತ್ಯುಮ್. ಯಾರು ತನ್ನ ಶಿಷ್ಯನನ್ನು ರಕ್ಷಿಸಲಾಗುವುದಿಲ್ಲವೋ… ಆಸನ್ನ ಮೃತ್ಯವಿನ ಅಪಾಯದಿಂದ… ಅವನು ಗುರುವಾಗಬಾರದು. ಅದನ್ನು ಮಾಡಲಾಗದಿದ್ದರೆ ತಂದೆ-ತಾಯಿ ಕೂಡ ಆಗಬಾರದು. ಹೀಗೆಯೆ ಯಾರೂ ಸ್ನೇಹಿತನಲ್ಲ, ಸಂಬಂದಿಕನಲ್ಲ, ತಂದೆಯಲ್ಲ, … ಮೃತ್ಯುವಿನ ಬಿಗಿಹಿಡಿತದಿಂದ ಹೇಗೆ ಕಾಪಾಡಿಕೊಳ್ಳುವುದೆಂದು ಬೇರೆಯವರಿಗೆ ಕಲಿಸಲಾಗದಿದ್ದರೆ. ಆದ್ದರಿಂದ ಈ ಶಿಕ್ಷಣವೇ ವಿಶ್ವಾದ್ಯಂತ ಅಗತ್ಯವಾಗಿರುವುದು. ಇದರಲ್ಲಿ ಸಾಧಾರಣ ವಿಷಯವೇನೆಂದರೆ ಕೇವಲ ಕೃಷ್ಣಪ್ರಜ್ಞಾವಂತರಾದರೆ ಈ ಜನ್ಮ, ಮೃತ್ಯು, ಮುಪ್ಪು, ವ್ಯಾದಿಯ ತೊಡಕುಗಳಿಂದ ತಪ್ಪಬಹುದು.