KN/Prabhupada 0036 - ನಮ್ಮ ಜೀವನದ ಗುರಿ

Revision as of 17:52, 1 October 2020 by Elad (talk | contribs) (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
(diff) ← Older revision | Latest revision (diff) | Newer revision → (diff)


Lecture on BG 2.1-11 -- Johannesburg, October 17, 1975

ಆದ್ದರಿಂದ ನಾವು ಈ ಪ್ರಪಂಚದ ವಿಷಯಗಳಿಂದ ದಿಗ್ಬ್ರಮೆಗೊಂಡಾಗ ಏನು ಮಾಡಲಿ - ಮಾಡಲೇ ಅಥವಾ ಬಿಡಲೇ, ಇದು ಉದಾಹರಣೆ ಅಂಥಹ ಸಮಯದಲ್ಲಿ ಗುರುಗಳ ಸನ್ನಿಧಿಗೆ ಹೋಗಬೇಕು. ನಾವು ಇಲ್ಲಿ ಆ ಉಪದೇಶವನ್ನು ನೋಡುತ್ತಿದ್ದೇವೆ. ಪ್ರಚ್ಚಾಮಿ ತ್ವಂ ಧರ್ಮ ಸಮೂಢ ಚೇತಃ ನಾವು ದಿಗ್ಬ್ರಮೆಗೊಂಡಾಗ, ಧರ್ಮ ಮತ್ತು ಆಧರ್ಮಗಳಲ್ಲಿ ವ್ಯತ್ಯಾಸ ಮಾಡುವುದಿಲ್ಲ. ನಮ್ಮ ಸ್ಥಾನವನ್ನು ನಾವು ಸರಿಯಾಗಿ ಉಪಯೋಗಿಸುವುದಿಲ್ಲ. ಅದು, ಕಾರ್ಪಣ್ಯ ದೋಷೊಪಹತ ಸ್ವಭಾವ.(ಬ್. ಗ್. 2.7) ಅಂತಹ ಸಮಯದಲ್ಲಿ ನಮಗೆ ಗುರುವಿನ ಅವಶ್ಯಕತೆ ಇರುತ್ತದೆ. ತದ್ ವಿಜ್ಞಾನಾರ್ಥಂ ಸಗುರುಂ ಏವ ಅಭಿಗಚೆತ್ ಶ್ರೋತ್ರಿಯಂ ಬ್ರಹ್ಮ ನಿಷ್ಟಂ. (ಮ. ಉ. 1.2.12) ಇದೇ ಕರ್ತವ್ಯ, ಇದೇ ಸಂಸ್ಕೃತಿ. ನಾವು ನಮ್ಮ ಜೀವನದಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸುತ್ತೇವೆ. ಅದು ಸಹಜ. ಈ ಪ್ರಪಂಚವೇ ಸಮಸ್ಯೆಗಳಿಂದ ಕೂಡಿದೆ. ಪದಂ ಪದಂ ಯದ್ ವಿಪದಾಮ್ (ಶ್ರೀ. ಭ. 10.14.58) ಐಹಿಕ ಪ್ರಪಂಚವೆಂದರೆ, ಪ್ರತಿಯೊಂದು ಹೆಜ್ಜೆಗೂ ಅಪಾಯ. ಅದೇ ಪ್ರಪಂಚ. ಆದ್ದರಿಂದ ನಾವು ಗುರುವಿನಿಂದ ಮಾರ್ಗದರ್ಶನೆ ಪಡೆಯಬೇಕು, ಶಿಕ್ಷಕನಿಂದ, ಗುರುವಿನಿಂದ, ಹೇಗೆ ಪ್ರಗತಿ ಮಾಡಬೇಕು, ಏಕೆಂದರೆ ಇದು... ಅದನ್ನು ಮುಂದೆ ಹೇಳಲಾಗಿದೆ, ಅದೇ ನಮ್ಮ ಜೀವನದ ಗುರಿ. ಈ ಮನುಷ್ಯ ಜನ್ಮದಲ್ಲಾದರೂ, ಈ ಆರ್ಯ ಸಂಸ್ಕೃತಿಯಲ್ಲಿ, ನಮ್ಮ ಸ್ವಧರ್ಮವನ್ನು ತಿಳಿದುಕೊಳ್ಳುವದು ನಮ್ಮ ಜೀವನದ ಗುರಿ , "ನಾನು ಯಾರು, ನಾನು ಯಾರು." "ನಾನು ಯಾರು" ಎಂದು ಅರ್ಥಮಾಡಿಕೊಳ್ಳದೆ ಇದ್ದರೆ ನಾವು ಬೆಕ್ಕು ಮತ್ತು ನಾಯಿಗಳ ಸಮಾನ. ನಾಯಿ ಬೆಕ್ಕುಗಳಿಗೆ ತಿಳಿಯುವುದಿಲ್ಲ. ಅವುಗಳು ತಾವು ದೇಹವೆಂದು ತಿಳಿಯುತ್ತವೆ. ಅದು ಮುಂದೆ ಹೇಳಲಾಗಿದೆ. ಆದ್ದರಿಂದ ಜೀವನದ ಈ ಪರಿಸ್ಥಿತಿಯಲ್ಲಿ, ನಾವು ದಿಗ್ಬ್ರಮೆಗೊಂಡಾಗ.... ನಿಜಕ್ಕೂ, ನಾವು ಪ್ರತಿ ಕ್ಷಣಕ್ಕೂ ದಿಗ್ಬ್ರಮೆಗೊಳ್ಳುತ್ತೇವೆ. ಆದ್ದರಿಂದ, ಉಚಿತವಾದ ಗುರುವಿನ ಸನ್ನಿಧಾನಕ್ಕೆ ಹೋಗುವ ಅವಶ್ಯಕತೆ ಇದೆ. ಈಗ ಅರ್ಜುನನು ಶ್ರೀಕೃಷ್ಣನ ಸನ್ನಿಧಾನಕ್ಕೆ ಬಂದಿದ್ದಾನೆ. ಉತ್ತಮ ಗುರು. ಉತ್ತಮ ಗುರು. ಗುರು ಎಂದರೆ ಪರಮ ಪುರುಷ. ಅವನು ಪ್ರತಿಯೊಬ್ಬರ ಗುರು, ಪರಮ ಗುರು. ಆದ್ದರಿಂದ, ಯಾರು ಶ್ರೀಕೃಷ್ಣನ ಪ್ರತಿನಿಧಿಯೋ ಅವನು ಸಹ ಗುರು. ಅದು ನಾಲ್ಕನೇ ಅಧ್ಯಾಯದಲ್ಲಿ ಹೇಳಲಾಗಿದೆ. ಏವಂ ಪರಂಪರಾ ಪ್ರಾಪ್ತಂ ಇಮಂ ರಾಜರ್ಷಯೋ ವಿದುಃ (ಭ. ಗ. 4.2) ಆದ್ದರಿಂದ, ನಾವು ಎಲ್ಲಿ ಶರಣಾಗತರಾಗಬೇಕು ಮತ್ತು ಯಾವ ಗುರುವನ್ನು ಸ್ವೀಕರಿಸಬೇಕು ಎಂದು ಶ್ರೀಕೃಷ್ಣ ಉದಾಹರಣೆ ಕೊಡುತ್ತಾನೆ. ಕೃಷ್ಣ ಇಲ್ಲಿ ಇದ್ದಾನೆ, ಆದ್ದರಿಂದ ಕೃಷ್ಣನನ್ನು ಅಥವಾ ಅವನ ಪ್ರತಿನಿಧಿಯನ್ನು ಗುರುವೆಂದು ಸ್ವೀಕರಿಸ ಬೇಕು. ಆಗ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಅನ್ಯಥಾ ಅದು ಅಸಾಧ್ಯ, ಏಕೆಂದರೆ ಅವರು ನಿಮಗೆ ಒಳ್ಳೆಯದು ಯಾವುದು ಮತ್ತು ಕೆಟ್ಟದ್ದು ಯಾವುದು ಎಂದು ಹೇಳುತ್ತಾರೆ. ಅವನು ಕೇಳುತ್ತಾ ಇದ್ದಾನೆ, ಯಚ್ರೇಯಃ ಸ್ಯಾನ್ ನಿಶ್ಚಿತಂ ಬೃಹಿ ತತ್. (ಭ. ಗಿ. 2.7) ನಿಶ್ಚಿತಂ ನಿಮಗೆ ಸಲಹೆ, ಉಪದೇಶ, ನಿಶ್ಚಿತಂ, ಸಂದೇಹವಿಲ್ಲದ್ದು, ಭ್ರಮೆ ಇಲ್ಲದ್ದು ಬೇಕಾದರೆ. ದೋಷ ಇಲ್ಲದ್ದು, ಮೋಸವಿಲ್ಲದ್ದು ಅದನ್ನೇ ನಿಶ್ಚಿತಂ ಎಂದು ಎನ್ನಲಾಗುತ್ತದೆ. ಅದನ್ನು ಕೃಷ್ಣನಿಂದ ಅಥವಾ ಅವನ ಪ್ರತಿನಿಧಿಯಿಂದ ಪಡೆಯಲಾಗುತ್ತದೆ. ನಿಮಗೆ ಅಪೂರ್ಣ ವ್ಯಕ್ತಿಂಡ ಅಥವಾ ಮೋಸಗಾರನಿಂದ ಸರಿಯಾದ ಮಾಹಿತಿ ಸಿಗಲಾರದು. ಅದು ಸರಿಯಾದಂತಹ ಉಪದೇಶವಲ್ಲ. ಇತ್ತೀಚಿಗೆ, ಪ್ರತಿಒಬ್ಬರೂ ಗುರು ಆಗುವಂತಹ ರೀತಿ ಬಂದಿದೆ. ಮತ್ತು ಅವನು ತನ್ನದೇ ಆದಂಥ ಮತವನ್ನು ನೀಡುತ್ತಾನೆ "ನನ್ನ ವಿಚಾರದಲ್ಲಿ", "ನನ್ನ ಅಭಿಪ್ರಾಯದಲ್ಲಿ" ಎಂದು. ಅವನು ಗುರುವಲ್ಲ. ಗುರುವೆಂದರೆ ಶಾಸ್ತ್ರದ ಆಧಾರವನ್ನು ಕೊಡ ಬೇಕು. ಯಃ ಶಾಸ್ತ್ರ ವಿಧಿಂ ಉತ್ಸ್ರಜ್ಯ ವರ್ತತೇ ಕಾಮ ಕರತಃ (ಭ. ಗಿ. 16.23) "ಯಾರು ಶಾಸ್ತ್ರದಿಂದ ಪುರಾವೆ, ಪ್ರಮಾಣ ಕೊಡಲಾರರೋ, ಆಗ," ನಸಿದ್ಧಿಮ್ ಅವಪ್ನೋತಿ, "ಎಂತಹ ಸಮಯದಲ್ಲಿಯೂ ಸಹ ಅವನಿಗೆ ಯಶ ಸಿಗುವುದಿಲ್ಲ", ನ ಸುಖಂ, "ಇಲ್ಲವೇ ಈ ಪ್ರಪಂಚದಲ್ಲಿ ಸುಖವು ಸಿಗುವುದಿಲ್ಲ", ನ ಪರಾಂ ಗತಿಮ್, "ಮತ್ತು ಮುಂದಿನ ಜನ್ಮದಲ್ಲಿ ಉನ್ನತಿಯ ಮಾತೇನು?" ಇವು ಕಟ್ಟಳೆಗಳು.