KN/Prabhupada 0093 - ಭಗವ್ದಗೀತೆ ಕೂಡ ಕೃಷ್ಣನೇ

Revision as of 03:40, 1 March 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0093 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on Brahma-samhita, Lecture -- Bombay, January 3, 1973

ಶ್ರೀಮದ್ ಭಾಗವತಂ ವೇದಾಂತ-ಸೂತ್ರದ ಮೂಲ ವಿವರಣೆಯಾಗಿದೆ. ಆದ್ದರಿಂದ ವೇದಾಂತ-ಸೂತ್ರದಲ್ಲಿ, ವೇದಾಂತ-ಸೂತ್ರದ ವಿವರಣೆಯಲ್ಲಿ, ಅಂದರೆ ಶ್ರೀಮದ್ ಭಾಗವತಂನಲ್ಲಿ ಹೇಳಲಾಗಿದೆ,

ಜನ್ಮಾದಿ ಅಸ್ಯ ಯತಃ ಅನ್ವಯಾತ್ ಇತರತಶ್ ಚ ಅರ್ಥೇಶು ಅಭಿಜ್ಞಃ
ತೇನೆ ಬ್ರಹ್ಮ ಹೃದಾ ಆದಿ-ಕವಯೇ ಮುಹ್ಯಂತಿ ಯತ್ರ ಸೂರಯಃ
(ಶ್ರೀ.ಭಾ 1.1.1)

ಈ ವಿವರಣೆಗಳು ಇವೆ. ಆದ್ದರಿಂದ ಆದಿ-ಕವಿ, ಆದಿ-ಕವಿ ಎಂದರೆ ಬ್ರಹ್ಮ. ಬ್ರಹ್ಮ, ಆದಿ-ಕವಿ. ಆದ್ದರಿಂದ ತೇನೆ ಬ್ರಹ್ಮ. ಬ್ರಹ್ಮಾ ಎಂದರೆ ಶಬ್ದ-ಬ್ರಹ್ಮನ್, ವೈದಿಕ ಸಾಹಿತ್ಯ. ಕೃಷ್ಣನು ಬ್ರಹ್ಮನ ಹೃದಯದಲ್ಲಿ ಜ್ಞಾನಬೋಧನೆ ಮಾಡಿದನು. ಏಕೆಂದರೆ ಸೃಷ್ಟಿ ಆದ್ದಾಗ, ಆರಂಭದಲ್ಲಿ ಬ್ರಹ್ಮಾ ಒಬ್ಬನೇ ಜೀವಾತ್ಮ. ಆದ್ದರಿಂದ "ಬ್ರಹ್ಮ ವೈದಿಕ ಜ್ಞಾನವನ್ನು ಹೇಗೆ ಕಲಿತನು?”, ಎಂಬ ಪ್ರಶ್ನೆಯಿದೆ. ಅದನ್ನು ವಿವರಿಸಲಾಗಿದೆ: ತೇನೆ ಬ್ರಹ್ಮ... ಬ್ರಹ್ಮಾ. ಬ್ರಹ್ಮಾ ಎಂದರೆ ವೈದಿಕ ಸಾಹಿತ್ಯ. ಶಬ್ದ-ಬ್ರಹ್ಮನ್. ದೇವರ ಬಗ್ಗೆ ಮಾಹಿತಿ, ವಿವರಣೆ ಕೂಡ ಬ್ರಹ್ಮನ್. ಬ್ರಹ್ಮನ್ ಪರಾತ್ಪರ. ಬ್ರಹ್ಮನ್ ನಿಗು, ಬ್ರಹ್ಮನನ್ನು ವಿವರಿಸುವ ಸಾಹಿತ್ಯಕ್ಕು ಯಾವುದೇ ವ್ಯತ್ಯಾಸವಿಲ್ಲ. ಒಂದೇ ವಿಷಯ: ಭಗವದ್ಗೀತೆಗು, ಮತ್ತು ಕೃಷ್ಣನಿಗು, ಯಾವುದೇ ವ್ಯತ್ಯಾಸವಿಲ್ಲ. ಭಗವದ್ಗೀತೆ ಕೂಡ ಕೃಷ್ಣನೆ. ಅನ್ಯಥಾ, ಈ ಪುಸ್ತಕವನ್ನು ಯಾಕೆ ಪೂಜಿಸಲಾಗುತ್ತದೆ, ಇಷ್ಟು ದಿನ, ಐದು ಸಾವಿರ ವರ್ಷಗಳ ನಂತರವೂ ಭಗವದ್ಗೀತೆ ಕೃಷ್ಣ ಇಲ್ಲದಿದ್ದರೆ? ಇತ್ತೀಚಿನ ದಿನಗಳಲ್ಲಿ ಅನೇಕ ಸಾಹಿತ್ಯಗಳು, ಪುಸ್ತಕಗಳು ಪ್ರಕಟವಾಗುತ್ತಿವೆ. ಒಂದು ವರ್ಷ, ಎರಡು ವರ್ಷ, ಮೂರು ವರ್ಷಗಳ ನಂತರ, ಅಷ್ಟೇ, ಮುಗಿದವು. ಯಾರೂ ಅದರಲ್ಲಿ ಕಾಳಜಿ ವಹಿಸುವುದಿಲ್ಲ. ಯಾರೂ ಅದರಲ್ಲಿ ಕಾಳಜಿ ವಹಿಸುವುದಿಲ್ಲ. ಯಾರೂ ಓದುವುದಿಲ್ಲ... ವಿಶ್ವದ ಇತಿಹಾಸದಲ್ಲಿ ಯಾವುದೇ ಸಾಹಿತ್ಯ ತಗೆದುಕೊಳ್ಳಿ, ಐದು ಸಾವಿರ ವರ್ಷಗಳವರೆಗೆ ಯಾವುದೇ ಸಾಹಿತ್ಯ ಅಸ್ತಿತ್ವದಲ್ಲಿಲ್ಲ, ಅನೇಕರು, ಅನೇಕ ವಿದ್ವಾಂಸರು, ಧರ್ಮವಾದಿಗಳು, ಮತ್ತು ದಾರ್ಶನಿಕರು ಪದೇ ಪದೇ ಓದಿರುವ ಸಾಹಿತ್ಯ. ಏಕೆ? ಏಕೆಂದರೆ ಅದು ಕೃಷ್ಣ. ಕೃಷ್ಣ... ಭಗವದ್ಗೀತೆ ಮತ್ತು ಭಗವಾನ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಶಬ್ದ-ಬ್ರಹ್ಮನ್. ಆದ್ದರಿಂದ ಭಗವದ್ಗೀತೆಯನ್ನು ಸಾಮಾನ್ಯ ಸಾಹಿತ್ಯವೆಂದು ತೆಗೆದುಕೊಳ್ಳಬಾರದು, ತಳಮಟ್ಟದ ಜ್ಞಾನದ ಮೂಲಕ ಅದರ ಬಗ್ಗೆ ಟಿಪ್ಪಣಿ ಮಾಡಬಾರದು. ಇಲ್ಲ. ಅದು ಸಾಧ್ಯವಿಲ್ಲ. ಮೂರ್ಖರು ಮತ್ತು ಧೂರ್ತರು, ಅವರು ತಮ್ಮ ತಳಮಟ್ಟದ ಪಾಂಡಿತ್ಯದಿಂದ ಭಗವದ್ಗೀತೆಯನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಿಲ್ಲ. ಅದು ಶಬ್ದ-ಬ್ರಹ್ಮನ್. ಕೃಷ್ಣನಲ್ಲಿ ಭಕ್ತಿ ಹೊಂದಿರುವ ವ್ಯಕ್ತಿಗೆ ಇದು ಅಭಿವ್ಯಕ್ತವಾಗುತ್ತದೆ. ಯಸ್ಯ ದೇವೇ ಪರಾ ಭಕ್ತಿರ್ ಯಥಾ ದೇವೇ... ಇವು ವೈದಿಕ ಬೋಧನೆಗಳು.

ಯಸ್ಯ ದೇವೇ ಪರಾ ಭಕ್ತಿರ್
ಯಥಾ ದೇವೇ ತಥಾ ಗುರೌವ್
ತಸ್ಯೈತೇ ಕಥಿತಾ ಹಿ ಅರ್ಥಾಃ
ಪ್ರಕಾಶಂತೇ ಮಹಾತ್ಮನಃ
(ಶ್ವೇ. ಉ 6.23)

ಅವು ಅಭಿವ್ಯಕ್ತವಾಗುತ್ತವೆ. ಆದ್ದರಿಂದ ವೈದಿಕ ಸಾಹಿತ್ಯವನ್ನು ಅಪೌರುಷೇಯ ಎಂದು ಕರೆಯಲಾಗುತ್ತದೆ. ನಿಮ್ಮ ತಳಮಟ್ಟದ ಜ್ಞಾನದ ಮೂಲಕ ಅರ್ಥಮಾಡಿಕೊಳ್ಳುವುದು ಅಲ್ಲ; ನಾನು ಒಂದು ಭಗವದ್ಗೀತೆಯನ್ನು ಖರೀದಿಸುತ್ತೇನೆ, ಮತ್ತು ನನಗೆ ವ್ಯಾಕರಣ ಜ್ಞಾನ ಇರುವುದರಿಂದ ಅರ್ಥಮಾಡಿಕೊಳ್ಳುತ್ತೇನೆ. ಇಲ್ಲ. ವೇದೇಷು ದುರ್ಲಭ. ಬ್ರಹ್ಮ-ಸಂಹಿತದಲ್ಲಿ, ವೇದೇಷು ದುರ್ಲಭ ಎಂದು ಹೇಳಲಾಗಿದೆ. ನಿಮ್ಮ ಸಾಹಿತ್ಯಿಕ ಸಾಮರ್ಥ್ಯ, ಅಥವಾ ಪಾಂಡಿತ್ಯದಿಂದ, ನೀವು ಎಲ್ಲಾ ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡುತ್ತೀರಿ - ದುರ್ಲಭ. ಅದು ಸಾಧ್ಯವಿಲ್ಲ. ವೇದೇಷು ದುರ್ಲಭ. ಅನೇಕ ವ್ಯಕ್ತಿಗಳು ಇದ್ದಾರೆ, ಅವರು ಭಗವದ್ಗೀತೆಯನ್ನು ತಮ್ಮ ನಾಮಮಾತ್ರದ ಪಾಂಡಿತ್ಯದ ಮೂಲಕ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಯಾರಿಗೂ ಅದರಲ್ಲಿ ಆಸಕ್ತಿಯಿಲ್ಲ. ಅವರು ಒಬ್ಬ ವ್ಯಕ್ತಿಯನ್ನು ಸಹ ಕೃಷ್ಣನ ಭಕ್ತನಾಗಲು ಮನಪರಿವರ್ತನೆ ಮಾಡಲು ಆಗುವುದಿಲ್ಲ. ಇದು ಒಂದು ಸವಾಲು. ನಿಮ್ಮ ಬಾಂಬೆಯಲ್ಲಿ ಹಲವಾರು ವ್ಯಕ್ತಿಗಳು ಇದ್ದಾರೆ, ಅವರು ಭಗವದ್ಗೀತೆಯನ್ನು ಹಲವು ವರ್ಷಗಳಿಂದ ವಿವರಿಸುತ್ತಿದ್ದಾರೆ, ಆದರೆ ಒಬ್ಬ ವ್ಯಕ್ತಿಯನ್ನೂ ಸಹ ಕೃಷ್ಣನ ಶುದ್ಧ ಭಕ್ತನನ್ನಾಗಿ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಇದು ನಮ್ಮ ಸವಾಲು. ಆದರೆ ಈ ಭಗವದ್ಗೀತೆ, ಈಗ ಅದನ್ನು ಯಥಾರ್ಥವಾಗಿ ವಿವರಿಸಲಾಗುತ್ತಿದೆ, ಮತ್ತು ಸಾವಿರಾರು ಯುರೋಪಿಯನ್ನರು ಮತ್ತು ಅಮೆರಿಕನ್ನರು, ಯಾರ ಪೂರ್ವಜರು, ಅಥವಾ ಕುಟುಂಬವು, ಎಂದಿಗೂ ಕೃಷ್ಣ ಹೆಸರನ್ನೂ ತಿಳಿದಿರಲಿಲ್ಲವೋ, ಅವರು ಭಕ್ತರಾಗುತ್ತಿದ್ದಾರೆ. ಇದು ಯಶಸ್ಸಿನ ರಹಸ್ಯ. ಆದರೆ ಈ ಮೂರ್ಖ ಜನರು, ಅವರಿಗೆ ಗೊತ್ತಿಲ್ಲ. ಭಗವದ್ಗೀತೆಯನ್ನು ತಮ್ಮ ಧೂರ್ತ ಜ್ಞಾನದಿಂದ ವ್ಯಾಖ್ಯಾನಿಸುವ ಮೂಲಕ ಅದನ್ನು ಅಭಿವ್ಯಕ್ತಿಸಬಹುದು ಎಂದು ಅವರು ಭಾವಿಸುತ್ತಾರೆ. ಅದು ಸಾಧ್ಯವಿಲ್ಲ. ನಾಹಂ ಪ್ರಕಾಶಃ ಯೋಗಮಾಯ-ಸಮಾವೃತಃ. ಈ ಮೂರ್ಖರಿಗು ಮತ್ತು ಧೂರ್ತರಿಗು ಕೃಷ್ಣನು ಬಹಿರಂಗಗೊಳ್ಳುವುದಿಲ್ಲ. ಕೃಷ್ಣನು ಎಂದಿಗೂ ಬಹಿರಂಗಗೊಳ್ಳುವುದಿಲ್ಲ. ನಾಹಂ ಪ್ರಕಾಶಃ ಸರ್ವಸ್ಯ (ಭ.ಗೀ 7.25). ಈ ಮೂರ್ಖರು ಮತ್ತು ಧೂರ್ತರು ಅವನನ್ನು ಅರ್ಥಮಾಡಿಕೊಳ್ಳುಲ್ಲು ಅವನು ಅಷ್ಟು ಅಗ್ಗದ ವಿಷಯವಲ್ಲ. ಅದು ಸಾಧ್ಯವಿಲ್ಲ. ಕೃಷ್ಣ ಹೇಳುತ್ತಾನೆ, ನಾಹಂ ಪ್ರಕಾಶಃ ಯೋಗಮಾಯ-ಸಮಾವೃತಃ (ಭ.ಗೀ 7.25).

ಮನುಷ್ಯಾಣಾಂ ಸಹಸ್ರೇಷು
ಕಶ್ಚಿದ್ ಯತತಿ ಸಿದ್ಧಯೇ
ಯತತಾಂ ಅಪಿ ಸಿದ್ಧಾನಾಂ
ಕಶ್ಚಿದ್ ವೇತ್ತಿ ಮಾಂ ತತ್ವತಃ
(ಭ.ಗೀ 7.3)