KN/Prabhupada 0095 - ಶರಣಾಗತಿಯೆ ನಮ್ಮ ವ್ಯವಹಾರ

Revision as of 02:15, 24 March 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0095 - in all Languages Category:KN-Quotes - 1974 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 4.7 -- Bombay, March 27, 1974

ನಾವು ಶರಣಾಗುತ್ತಿದ್ದೇವೆ, ಆದರೆ ನಾವು ಕೃಷ್ಣನಿಗೆ ಶರಣಾಗುತ್ತಿಲ್ಲ. ಇದು ರೋಗ. ಇದು ರೋಗ. ಮತ್ತು ಕೃಷ್ಣ ಪ್ರಜ್ಞೆ ಆಂದೋಲನ ಎಂದರೆ ಈ ರೋಗವನ್ನು ಗುಣಪಡಿಸುವುದು. ಈ ರೋಗವನ್ನು ಗುಣಪಡಿಸಿ. ಕೃಷ್ಣ ಸಹ ಬರುತ್ತಾನೆ. ಅವನು ಹೇಳುತ್ತಾನೆ, ಯದಾ ಯದಾ ಹಿ ಧರ್ಮಸ್ಯ (ಭ.ಗೀ 4.7). ಧರ್ಮಸ್ಯ ಗ್ಲಾನಿಃ, ಧರ್ಮವನ್ನು ನಿರ್ವಹಿಸುವ ವಿಷಯದಲ್ಲಿ ವ್ಯತ್ಯಾಸಗಳು, ವ್ಯತ್ಯಾಸಗಳು ಇದ್ದಾಗ, ಕೃಷ್ಣ ಹೇಳುತ್ತಾನೆ, ತದಾತ್ಮಾನಂ ಸೃಜಾಮಿ ಅಹಮ್. ಮತ್ತು ಅಭ್ಯುತ್ಥಾನಮ್ ಅಧರ್ಮಸ್ಯ. ಎರಡು ವಿಷಯಗಳಿವೆ. ಜನರು ಕೃಷ್ಣನಿಗೆ ಶರಣಾಗದಿದ್ದಾಗ, ಅವರು ಅನೇಕ ಕೃಷ್ಣರನ್ನು ತಯಾರಿಸುತ್ತಾರೆ, ಅಲ್ಲಿ ಶರಣಾಗಲು, ಎಷ್ಟೋ ಧೂರ್ತರಿಗೆ. ಅದು ಅಧರ್ಮಸ್ಯ. ಧರ್ಮ ಎಂದರೆ ಕೃಷ್ಣನಿಗೆ ಶರಣಾಗುವುದು, ಆದರೆ ಕೃಷ್ಣನಿಗೆ ಶರಣಾಗುವ ಬದಲು, ಅವರು ಬೆಕ್ಕುಗಳು, ನಾಯಿಗಳು, ಇದು, ಅದು, ಅನೇಕ ವಿಷಯಗಳಿಗೆ ಶರಣಾಗಲು ಬಯಸುತ್ತಾರೆ. ಅದು ಅಧರ್ಮ.

ಹಿಂದೂ ಧರ್ಮ, ಅಥವಾ ಮುಸ್ಲಿಂ ಧರ್ಮ, ಅಥವಾ ಕ್ರಿಶ್ಚಿಯನ್ ಧರ್ಮ ಎಂದು ಕರೆಯಲ್ಪಡುವ ಸ್ಥಾಪನೆಗೆ ಕೃಷ್ಣ ಬರಲಿಲ್ಲ. ಇಲ್ಲ. ಅವರು ನಿಜವಾದ ಧರ್ಮವನ್ನು ಸ್ಥಾಪಿಸಲು ಬಂದರು. ನಿಜವಾದ ಧರ್ಮ ಎಂದರೆ ನಾವು ಸಮರ್ಪಿಸಿಕೊಳ್ಳಬೇಕು, ನಿಜವಾದ ವ್ಯಕ್ತಿಗೆ ಶರಣಾಗಬೇಕು. ಅದು ನಿಜವಾದ ಧರ್ಮ. ನಾವು ಶರಣಾಗುತ್ತಿದ್ದೇವೆ. ಎಲ್ಲರಿಗೂ ಸ್ವಲ್ಪ ತಿಳಿದಿದೆ. ಅವರು ಅಲ್ಲಿ ಶರಣಾಗಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಯಾವುದಾದರೂ. ಎಲ್ಲರಿಗೂ ಸ್ವಲ್ಪ ತಿಳಿದಿದೆ. ಮತ್ತು ಆ ಆದರ್ಶದ ನಾಯಕ ಕೂಡ ಇದ್ದಾನೆ. ಆದ್ದರಿಂದ ಶರಣಾಗುವುದು ನಮ್ಮ ವ್ಯವಹಾರ. ಅದು ಸತ್ಯ. ಆದರೆ ಎಲ್ಲಿ ಶರಣಾಗಬೇಕೆಂದು ನಮಗೆ ತಿಳಿದಿಲ್ಲ. ಅದು ಕಷ್ಟ. ಮತ್ತು ಶರಣಾಗತಿಯ ತಪ್ಪುಗ್ರಹಿಕೆಯಿಂದ, ಅಥವಾ ತಪ್ಪುಸ್ಥಳದಲ್ಲಿಡುವುದರಿಂದ, ಇಡೀ ಪ್ರಪಂಚವು ಅಸ್ತವ್ಯಸ್ತವಾಗಿದೆ.

ನಾವು ಈ ಶರಣಾಗತಿಯಿಂದ ಆ ಶರಣಾಗತಿಗೆ ಬದಲಾಯಿಸುತ್ತಿದ್ದೇವೆ. "ಇನ್ನು ಕಾಂಗ್ರೆಸ್ ಪಕ್ಷವಿಲ್ಲ. ಈಗ ಕಮ್ಯುನಿಸ್ಟ್ ಪಕ್ಷ." ಮತ್ತೆ, "ಇನ್ನು ಕಮ್ಯುನಿಸ್ಟ್ ಪಕ್ಷವಿಲ್ಲ. ಇದು ... ಈ ಪಕ್ಷ, ಆ ಪಕ್ಷ." ಪಕ್ಷವನ್ನು ಬದಲಾಯಿಸುವುದರಿಂದ ಏನು ಪ್ರಯೋಜನ? ಈ ಪಕ್ಷ ಅಥವಾ ಆ ಪಕ್ಷದ ಕಾರಣ, ಅವರು ಕೃಷ್ಣನಿಗೆ ಶರಣಾಗಿಲ್ಲ. ಆದ್ದರಿಂದ ನೀವು ಕೃಷ್ಣನಿಗೆ ಶರಣಾಗುವ ಹಂತಕ್ಕೆ ಬರದಿದ್ದರೆ, ಯಾವುದೇ ಶಾಂತಿ ಇರಲು ಸಾಧ್ಯವಿಲ್ಲ. ಅದು ವಿಷಯ. ಹರಿವಾಣದಿಂದ ಬೆಂಕಿಗೆ ಕೇವಲ ಸ್ಥಳಾಂತರವಾಗುವುದು ನಿಮ್ಮನ್ನು ಉಳಿಸುವುದಿಲ್ಲ. ಆದ್ದರಿಂದ ಕೃಷ್ಣನನ ಕೊನೆಯ ಬೋಧನೆ

ಸರ್ವಧರ್ಮಾನ್ ಪರಿತ್ಯಜ್ಯ
ಮಾಮ್ ಏಕಂ ಶರಣಂ ವ್ರಜ
ಅಹಂ ತ್ವಾಂ ಸರ್ವ ಪಾಪೇಭ್ಯೋ
ಮೋಕ್ಷಯಿಷ್ಯಾಮಿ...
(ಭ.ಗೀ 18.66)

ಆದ್ದರಿಂದ ಧರ್ಮದ ವ್ಯತ್ಯಾಸ ಎಂದರೆ... ಇದನ್ನು ಶ್ರೀಮದ್ ಭಾಗವತಂನಲ್ಲಿಯೂ ಹೇಳಲಾಗಿದೆ. ಸಾ ವೈ ಪುಂಸಾಮ್ ಪರೋ ಧರ್ಮಃ. ಪ್ರಥಮ ದರ್ಜೆ, ಅಥವಾ ಉನ್ನತ ಧರ್ಮ. ಪಾರಃ ಎಂದರೆ ಶ್ರೇಷ್ಠ, ಅತೀಂದ್ರಿಯ. ಸ ವೈ ಪುಂಸಾಮ್ ಪರೋ ಧರ್ಮೋ ಯತೋ ಭಕ್ತಿರ್ ಅಧೋಕ್ಷಜೆ (ಶ್ರೀ.ಭಾ 1.2.6). ನಾವು ಅಧೋಕ್ಷಜನಿಗೆ ಶರಣಾದಾಗ... ಅಧೋಕ್ಷಜ ಎಂದರೆ ಸರ್ವೋಚ್ಚ ಅಲೌಕಿಕತೆ, ಅಥವಾ ಕೃಷ್ಣ. ಕೃಷ್ಣನ ಇನ್ನೊಂದು ಹೆಸರು ಅಧೋಕ್ಷಜ. ಅಹೈತುಕಿ ಅಪ್ರತಿಹತಾ. ಅಹೈತುಕಿ ಎಂದರೆ ಯಾವುದೇ ಕಾರಣವಿಲ್ಲದೆ. ಯಾವುದೇ ಕಾರಣವಿಲ್ಲದೆ. “ಕೃಷ್ಣ ಇಂತಹವನು, ಅಂತಹವನು, ಆದ್ದರಿಂದ ನಾನು ಶರಣಾಗುತ್ತೇನೆ", ಎಂದು ಅಲ್ಲ. ಯಾವುದೇ ಕಾರಣವಿಲ್ಲದೆ. ಅಹೈತುಕಿ ಅಪ್ರತಿಹತಾ. ಮತ್ತು ಅದನ್ನು ತಡೆಗಟಲಾಗುವುದಿಲ್ಲ. ಯಾರೂ ತಡೆಗಟ್ಟಲು ಸಾಧ್ಯವಿಲ್ಲ. ನೀವು ಕೃಷ್ಣನಿಗೆ ಶರಣಾಗಲು ಬಯಸಿದರೆ, ಯಾವುದೇ ತಡೆಯೂ ಇಲ್ಲ, ಯಾವುದೇ ಅಡಚಣೆ ಇಲ್ಲ. ನೀವು ಅದನ್ನು ಯಾವುದೇ ಸ್ಥಾನದಲ್ಲಿದ್ದರೂ ಮಾಡಬಹುದು. ನೀವು ಅದನ್ನು ಮಾಡಬಹುದು. ಅಹೈತುಕಿ ಅಪ್ರತಿಹತಾ ಯಯಾತ್ಮಾ ಸುಪ್ರಸೀದತಿ. ಆಗ ನೀವು, ಆತ್ಮ, ನಿಮ್ಮ ಆತ್ಮ, ನಿಮ್ಮ ಮನಸ್ಸು, ನಿಮ್ಮ ದೇಹವು ತೃಪ್ತಿಗೊಳ್ಳುತ್ತದೆ. ಇದು ಪ್ರಕ್ರಿಯೆ.