KN/Prabhupada 0033 - ಮಹಾಪ್ರಭುಗಳ ಹೆಸರು ಪತಿತಪಾವನ
Morning Walk -- October 4, 1975, Mauritius
ಪುಷ್ಟ ಕೃಷ್ಣ: ಈಗಿನ ಕಾಲದ ಸರ್ಕಾರಗಳು ಘೋರ ಪಾಪಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಆದ್ದರಿಂದ ಸಾಮಾನ್ಯ ಜನರನ್ನು ಹೇಗೆ ಸುಧಾರಿಸುವುದು?
ಪ್ರಭುಪಾದ: ಹಾಗಾದರೆ ನೀನು ಸರ್ಕಾರವು ಪರಿಪೂರ್ಣವಾಗಿದೆ ಎನ್ನುತ್ತಿಯಾ?
ಪುಷ್ಟ ಕೃಷ್ಣ: ಇಲ್ಲ.
ಪ್ರಭುಪಾದ: ಹಾಗಾದರೆ? ಅವರನ್ನು ಜರುಗಿಸಬೇಕು. ಸರ್ಕಾರ ಎಂದರೆ ಈಗಿನ ಕಾಲದಲ್ಲಿ ಎಲ್ಲ ಮೂಢರು. ಅವರನ್ನು ಚುನಾಯಿಸಿದವರು ಮೂಢರು ಮತ್ತು ಅವರೂ ಸಹ ಮೂಢರು. ಅದೇ ಕಷ್ಟವಾಗಿದೆ. ಎಲ್ಲಿ ಹೋದರೂ ಮೂಢರೇ ಸಿಗುತಾರೆ. ಮಂದ. ಮಂದ ಎಂಬುದಕ್ಕೆ ಅರ್ಥ ಕೊಡಲಾಗಿದೆ. ನಮ್ಮ ಶಿಬಿರದಲ್ಲೂ ಸಹ ಮೂಢರಿದ್ದಾರೆ. ವರದಿಯನ್ನು ನೋಡಿ. ಅವರೂ ಸಹ ಸುಧಾರಣೆಗೆ ಬಂದ್ದಿದ್ದಾರೆ, ಅವರು ಮೂಢರು. ಅವರಿಗೆ ಅವರ ಮೂಢ ಹವ್ಯಾಸಗಳನ್ನು ಬಿಡಲಾಗುವದಿಲ್ಲ. ಆದ್ದರಿಂದ ಸಾಮಾನ್ಯವಾಗಿ ಮಂದ ಅಂತ ಹೇಳಲಾಗಿದೆ. "ಎಲ್ಲವೂ ಕೆಟ್ಟದ್ದು". ಆದರೆ ಒಂದು ವ್ಯತ್ತ್ಯಾಸವೇನೆಂದರೆ, ನಮ್ಮ ಶಿಬಿರದಲ್ಲಿ ಕೆಟ್ಟವರೆಲ್ಲರನ್ನು ಸುಧಾರಿಸಲಾಗುತ್ತದೆ, ಹೊರಗಡೆ ಸುಧಾರಣೆ ಇಲ್ಲ. ಇಲ್ಲಿ ಅವರು ಸುಧಾರಣೆಗೊಳ್ಳುವ ಭರವಸೆ ಇದೆ, ಆದರೆ ಹೊರಗಡೆ ಭರವಸೆ ಇಲ್ಲ. ಅದೇ ವ್ಯತ್ತ್ಯಾಸ. ಅನ್ಯಥಾ ಎಲ್ಲರೂ ಹೀನರು. ತಾರತಮ್ಯ ಮಾಡದೆ ನೀವು ಹೇಳಬಹುದು, "ಮಂದಃ ಸುಮಂದ್ ಮತಯೋ" (ಶ್ರೀ.ಭಾ. 1.1.10). ಈಗ, ಸರ್ಕಾರ ಹೇಗೆ ಒಳ್ಳೆಯದಾಗಿರಲು ಸಾಧ್ಯ? ಇದೂ ಸಹ ಕೆಟ್ಟದು. ಮಹಾಪ್ರಭುಗಳ ಹೆಸರು ಪತಿತ ಪಾವನ; ಎಲ್ಲ ಕೆಟ್ಟವರನ್ನು ಉದ್ಧರಿಸುತ್ತಾರೆ. ಕಲಿಯುಗದಲ್ಲಿ ಯಾರೂ ಉತ್ತಮರಿಲ್ಲ, ಎಲ್ಲರೂ ಕೆಟ್ಟವರೇ. ನೀವು ಪ್ರಭಲರಾಗಬೇಕು, ಕೆಟ್ಟವರನ್ನು ಎದುರಿಸಲು.