KN/Prabhupada 0035 - ಈ ದೇಹದಲ್ಲಿ ಇಬ್ಬರು ಜೀವಿಗಳಿದ್ದಾರೆ
Lecture on BG 2.1-11 -- Johannesburg, October 17, 1975
ಈಗ, ಶ್ರೀಕೃಷ್ಣ ಗುರುವಿನ ಸ್ಥಾನವನ್ನು ಸ್ವೀಕರಿಸಿ, ಉಪದೇಶ ಮಾಡಲು ಪ್ರಾರಂಭಿಸಿದನು. ತಂ ಉವಾಚ ಹೃಷಿಕೇಶ. ಹೃಷಿಕೇಶ... ಶ್ರೀಕೃಷ್ಣನ ಮತ್ತೊಂದು ಹೆಸರು ಹೃಷಿಕೇಶ. ಹೃಷಿಕೇಶ ಎಂದರೆ ಹೃಷಿಕ ಮತ್ತು ಈಶ... ಹೃಷಿಕ ಎಂದರೆ ಇಂದ್ರಿಯಗಳು ಮತ್ತು ಈಶ ಎಂದರೆ ಸ್ವಾಮಿ. ಆದರಿಂದ, ಶ್ರೀಕೃಷ್ಣ ನಮ್ಮ ಇಂದ್ರಿಯಗಳ ಸ್ವಾಮಿ, ಎಲ್ಲರ ಇಂದ್ರಿಯಗಳ. ಅದನ್ನು ಹದಿಮೂರನೇ ಅಧ್ಯಾಯದಲ್ಲಿ ವಿವರಿಸಿದೆ, ಎಂದರೆ, ಕ್ಷೇತ್ರಜ್ನಂ ಚಾಪಿ ಮಾಂ ವಿಧ್ಧಿ ಸರ್ವ ಕ್ಷೇತ್ರೇಶು ಭಾರತ. (ಭ. ಗ. 13.3) ಈ ದೇಹದಲ್ಲಿ ಎರಡು ಆತ್ಮಗಳು ಇವೆ. ಒಂದು ನಾನು, ವೈಯಕ್ತಿಕ ಜೀವಾತ್ಮ, ಇನೊಂದು ಶ್ರೀಕೃಷ್ಣ, ಪರಮಾತ್ಮ. ಈಶ್ವರ ಸರ್ವ ಭೂತಾನಾಂ ಹೃದ್ದೇಶೇ ಅರ್ಜುನ ತಿಷ್ಟತಿ. (ಭ. ಗ. 18.61) ಆದ್ದರಿಂದ, ನಿಜವಾಗಿಯೂ ಒಡೆಯ ಪರಮಾತ್ಮ. ನನಗೆ ಉಪಯೋಗಿಸುವ ಅವಕಾಶ ಕೊಡಲಾಗಿದೆ, ಆದ್ದರಿಂದ, ನನ್ನ ಇಂದ್ರಿಯಗಳು, ನನ್ನ ಎಂದು ಹೇಳಲಾದ ಇಂದ್ರಿಯಗಳು, ನನ್ನದಲ್ಲ. ನಾನು ನನ್ನ ಕರವನ್ನು ಸೃಷ್ಟಿಸಿಲ್ಲ. ಈ ಕರವು ಭಗವಂತನಿಂದ, ಅಥವಾ ಶ್ರೀಕೃಷ್ಣನ್ನಿಂದ ಸೃಷ್ಟಿಸಲ್ಲಾಗಿದೆ, ಪ್ರಕೃತಿ ಮೂಲಕ. ಮತ್ತು ಈ ಕರವು ನನಗೆ, ತಿನ್ನಲೂ, ಪಡೆಯಲೂ, ನನ್ನ ಉಪಯುಗಕ್ಕೆ ಕೊಡಲಾಗಿದೆ. ಆದರೆ ನಿಜವಾಗಿ ಅದು ನನ್ನ ಕರವಲ್ಲ. ಅನ್ಯಥಾ, ಈ ಕರವು ಪಕ್ಷವಾತದಿಂದ ದುರ್ಬಲವಾದಾಗ, ನಾನು ನನ್ನದು ಎಂದು ಹೇಳುತಿದ್ದೆ ನಾನು ಉಪಯೋಗಿಸಲಾರೆ ಏಕೆಂದರೆ ಈ ಕರದ ಶಕ್ತಿ ಒಡೆಯನಿಂದ ಹಿಂತೆಗೆದುಕೊಡಲಾಗಿದೆ. ಬಾಡಿಗೆಯ ಮನೆಯೊಪದಿಯಲ್ಲಿ ನೀನು ಅಲ್ಲಿ ವಾಸಿಸುವೆ, ಮನೆ ಮಾಲಿಕನು ನಿನಗೆ ಮನೆಯಿಂದ ಹೊರಗೆ ಹಾಕಿದರೆ ನೀನು ಅಲ್ಲಿ ಇರಲು ಸಾಧ್ಯವಿಲ್ಲ, ನೀನು ಅದನ್ನುಉಪಯೋಗಿಸಲೂ ಸಹ ಆಗವುದಿಲ್ಲ ಅದೇ ರೀತಿ, ನಿಜವಾದ ಮಾಲಿಕನಾದ ಶ್ರೀ ಹೃಷಿಕೇಷನು ವಾಸಮಾಡಲು ಎಲ್ಲಿಯವರೆಗೆ ಅನುಮತಿ ನೀಡುತ್ತಾನೋ, ಅಲ್ಲಿಯವರೆಗೆ ಈ ದೇಹವನ್ನು ಉಪಯೋಗಿಸಬಹುದು.— ಆದರಿಂದ, ಶ್ರೀ ಕೃಷ್ಣನ ಹೆಸರು ಹೃಷಿಕೇಶ. ಮತ್ತು ಈ ಕೃಷ್ಣ ಪ್ರಜ್ಞೆ ಚಳುವಳಿ ಅಂದರೆ, ನಾವು ಈ ಇಂದ್ರಿಯಗಳನ್ನು ಪಡೆದಿದ್ದೇವೆ. ಇದನ್ನು ಶ್ರೀಕೃಷ್ಣನ ಸಲುವಾಗಿ ಉಪಯೋಗಿಸಬೇಕು. ಶ್ರೀಕೃಷ್ಣನ ಸಲುವಾಗಿ ಅಲ್ಲದೇ, ನಾವು ನಮ್ಮ ಸಲುವಾಗಿ ಉಪಯೋಗಿಸುತ್ತಿದ್ದೇವೆ. ಇದೆ ನಮ್ಮ ಜೀವನದ ದುಃಖದಾಯಕ ಪರಿಸ್ಥಿತಿ. ಹೇಗೆ ನೀವು ವಾಸಿಸುವ ಸ್ಥಳಕ್ಕೆ ಬಾಡಿಗೆಯನ್ನು ಕೊಡಬೇಕೋ, ಬಾಡಿಗೆ ಕೊಡದಿದ್ದರೆ, ಅದು ನಿಮ್ಮ ಆಸ್ತಿ ಎಂದು ತಿಳಿದರೆ, ಆಗ ತೊಂದರೆ. ಅದೇ ರೀತಿ, ಹೃಷಿಕೇಶ ಎಂದರೆ ನಿಜವಾದ ಒಡೆಯ, ಶ್ರೀಕೃಷ್ಣ. ನನಗೆ ಈ ಆಸ್ತಿ ಕೊಡಲಾಗಿದೆ. ಅದನ್ನು ಭಗವದ್ ಗೀತೆಯಲ್ಲಿ ಹೇಳಿದೆ. ಈಶ್ವರ ಸರ್ವ ಭೂತಾನಾಂ ಹೃದ್ದೇಶೆ ಅರ್ಜುನ ತಿಷ್ಟತಿ ಭ್ರಾಹ್ಮಯನ್ ಸರ್ವ ಭೂತಾನಿ ಯಂತ್ರ ರೂಢಾನಿ ಮಾಯಯಾ. (ಬ್. ಗ. 18.61) ಯಂತ್ರ, ಇದು ಒಂದು ಯಂತ್ರ. ಈ ಯಂತ್ರವು ಶ್ರೀಕೃಷ್ಣನಿಂದ ಕೊಡಲಾಗಿದೆ. ಏಕೆಂದರೆ "ನನಗೆ ಮಾನವ ಯಂತ್ರ ಸಿಕ್ಕಿದರೆ, ನಾನು ಈ ರೀತಿ ಉಪಭೋಗಿಸಬಹುದು". ಆದ್ದರಿಂದ ಶ್ರೀ ಕೃಷ್ಣನು ನಿಮ್ಮ ಇಚ್ಛೆಯನ್ನು ಪೂರ್ತಿ ಮಾಡುತ್ತಾನೆ. "ಸರಿ". ಮತ್ತು ನಾನು ಯೊಚಿಸುತ್ತೆನೆ "ನನಗೆ ಇಂತಹ ಯಂತ್ರ ಸಿಕ್ಕಿದರೆ ನಾನು ನೇರವಾಗಿ ಬೇರೆ ಪ್ರಾಣಿಯ ರಕ್ತವನ್ನುಹೀರಬಹುದು". ಶ್ರೀಕೃಷ್ಣ ಹೇಳುತ್ತಾನೆ "ಸರಿ, ನೀನು ಒಂದು ಹುಲಿಯ ಯಂತ್ರವನ್ನು ಪಡೆ, ಮತ್ತು ಉಪಯೋಗಿಸು. ಇದು ಹೀಗೇ ನಡಿಯುತ್ತೈದೆ ಅದರಿಂದ ಅವನ ಹೆಸರು ಹೃಷಿಕೇಶ. "ನಾನು ಈ ದೇಹದ ಮಾಲಿಕನಲ್ಲ" ಎಂದು ಸರಿಯಾಗಿ ತಿಳಿದುಕೊಂಡರೆ. ಶ್ರೀಕೃಷ್ಣ ಈ ದೇಹದ ಮಾಲೀಕ. ನಾನು ನನ್ನ ಇಂದ್ರಿಯ ತೃಪ್ತಿಗಾಗಿ ಈ ತರಹದ ದೇಹವನ್ನು ಆಶಿಸಿದ್ದೆ. ಅವನು ನೀಡಿದ್ದಾನೆ ಮತ್ತು ನಾನು ಈಗ ಆನಂದವಾಗಿಲ್ಲ. ಆದ್ದರಿಂದ ನಾನು ಈ ಯಂತ್ರವನ್ನು ಒಡೆಯನ ಸಲುವಾಗಿ ಉಪಯೋಗಿಸಲು ಕಲಿಯುತ್ತೇನೆ, ಇದನ್ನು ಭಕ್ತಿ ಎನ್ನುತ್ತಾರೆ. ಹ್ರಿಶಿಕೆಣ ಹೃಷಿಕೇಶ ಸೇವನಂ ಭಕ್ಟಿರ್ ಉಚ್ಯತೇ [ಸೀ ಸೀ ಮ್. ೧೯೧೭೦] ಶ್ರೀಕೃಷ್ಣ ಇಂದ್ರಿಯಗಳ ಸ್ವಾಮಿ ಆದ್ದರಿಂದ ಈ ಇಂದ್ರಿಯಗಳನ್ನು- ಈ ದೇಹವನ್ನು ದೇಹದ ಒಡೆಯನ ಸಲುವಾಗಿ ಉಪಯೋಗಿಸಿದರೆ, ಶ್ರೀಕೃಷ್ಣನ ಸಲುವಾಗಿ ಉಪಯೋಗಿಸಿದರೆ, ಇದೆ ನಮ್ಮ ಜೀವನದ ಸಾರ್ಥಕತೆ.