KN/Prabhupada 0039 - ಆಧುನಿಕ ನಾಯಕರು ಕೇವಲ ಕೈಗೊಂಬೆಯೆಂತೆ
Lecture on SB 1.10.3-4 -- Tehran, March 13, 1975
So an ideal king like Yudhiṣṭhira, he can rule over not only over the land, over the seas, all over the planet. This is the ideal. (reading:) "The modern English law of primogeniture, or the law of inheritance by the firstborn, was also prevalent in those days when Mahārāja Yudhiṣṭhira ruled the earth and the seas." That means whole planet, including the seas. (reading:) "In those days the king of Hastināpura, now part of New Delhi, was the emperor of the world, including the seas, up to the time of Mahārāja Parīkṣit, the grandson of Mahārāja Yudhiṣṭhira. His younger brothers were acting as his minister and commanders of state, and there was full cooperation between the perfectly religious brothers of the King. Mahārāja Yudhiṣṭhira was the ideal king or representative of Lord Śrī Kṛṣṇa..." The king should be the representative of Kṛṣṇa. (reading:) "...to rule over the kingdom of earth and was comparable to King Indra, the representative ruler of the heavenly planet. The demigods like Indra, Candra, Sūrya, Varuṇa, Vāyu, etc., are representative kings of different planets of the universe. And similarly Mahārāja Yudhiṣṭhira was also one of them, ruling over the kingdom of the earth.
Mahārāja Yudhiṣṭhira was not a typically unenlightened political leader of modern democracy. Mahārāja Yudhiṣṭhira was instructed by Bhīṣmadeva and the infallible Lord also, and therefore he had full knowledge of everything in perfection. The modern elected executive head of the state is just like a puppet because he has no kingly power. Even if he is enlightened like Mahārāja Yudhiṣṭhira, he cannot do anything out of his own good will due to his constitutional position. Therefore, there are so many states over the earth quarreling because of ideological differences or other selfish motives. But a king like Mahārāja Yudhiṣṭhira had no ideology of his own. He had but to follow the instruction of the infallible Lord and the Lord's representative, and the authorized agent, Bhīṣmadeva. It is instructed in the śāstras the one should follow the great authority and the infallible Lord without any personal motive and manufactured ideology. Therefore, it was possible for Mahārāja Yudhiṣṭhira to rule the whole world, including the seas, because the principles were infallible and universally applicable to everyone.
The conception of one world state can only be fulfilled if we can follow the infallible authority. An imperfect human being cannot create an ideology acceptable to everyone. Only the perfect and the infallible can create a program which is applicable at every place and can be followed by all in the world. It is the person who rules, and not the impersonal government. If the person is perfect, the government is perfect. If the person is a fool, the government is a fool's paradise. That is the law of nature. There are so many stories of imperfect kings or executive heads. Therefore, the executive head must be a trained person like Mahārāja Yudhiṣṭhira, and he must have the full autocratic power to rule over the world. The conception of a world state can take shape only under the regime of a perfect king like Mahārāja Yudhiṣṭhira. The world was happy in those days because there were kings like Mahārāja Yudhiṣṭhira to rule over the world." Let this king follow Mahārāja Yudhiṣṭhira and show an example of how monarchy can make a perfect state. There is instruction in the śāstras, and if he follows, he can do that. He has got the power.
Then because he was so perfect king, then, a representative of Kṛṣṇa, therefore, kāmaṁ vavarṣa parjanyaḥ (SB 1.10.4). Parjanyaḥ means rainfall. So rainfall is the basic principle of supply of all necessities of life, rainfall. Therefore Kṛṣṇa says in the Bhagavad-gītā, annād bhavanti bhūtāni parjanyād anna-sambhavaḥ (BG 3.14). If you want to make people happy, both man and animal... There are animals also. They are... These rascal state executive, sometimes they make a show of benefit for the men but no benefit for the animal. Why? Why this injustice? They are also born in this land. They are also living entity. They may be animals. They have no intelligence. They have intelligence, not as good as of man, but does it mean that regular slaughterhouse should be constructed for killing them? Is that justice? And not only that, but anyone, if he comes to the state, the king should give him shelter. Why distinction? Anyone takes shelter, "Sir, I want to live in your state," so he must be given all facilities. Why this, "No, no, you cannot come. You are American. You are Indian. You are this"? No. There are so many thing. If actually they follow the principle, the Vedic principles, then the ideal king will be a good leader. These are... And nature will help. Therefore it is said that during the reign of Mahārāja Yudhiṣṭhira, kāmaṁ vavarṣa parjanyaḥ sarva-kāma-dughā mahī (SB 1.10.4). Mahī, the earth. You get all your necessities from the earth. It does not fall from the sky. Yes, it falls from the sky in the form of rain. But they do not know the science, that how things are coming from earth by the different arrangement. Under certain conditions the rain falls and astral influence. Then so many things are produced, the valuable stones, the pearls. They do not know how these things are coming. So therefore, if the king is pious, to help him the nature also cooperates. And the king, if the government is impious, then nature will not cooperate.
ಆದ್ದರಿಂದ ಯುಧಿಷ್ಠಿರನಂತಹ ಆದಶ೯ ರಾಜನು… ಅವನು ಕೇವಲ ಭೂಮಿ ಹಾಗು ಸಮುದ್ರಗಳ ಮೇಲೆ ಮಾತ್ರವಲ್ಲ, ಸಂಪೂಣ೯ ಗ್ರಹವನ್ನೇ ಆಳಲು ಆಗುತ್ತಿತ್ತು. ಆದಶ೯ವೆಂದರೆ ಇದು. ಓದುತ್ತ: ಆಂಗ್ಲರ ಆಧುನಿಕ ಜ್ಯೇಷ್ಠತ್ವ ಕಾನೂನು, ಅಥವ ಜ್ಯೇಷ್ಠನ ಉತ್ತರಾಧಿಕಾರ ಕಾನೂನು ಮಹಾರಾಜ ಯುಧಿಷ್ಠಿರನು ಭೂಮಿ ಹಾಗು ಸಮುದ್ರಗಳನ್ನು ಆಳುತ್ತಿದ ಆ ದಿನಗಳಲ್ಲಿಯು ಪ್ರಚಲಿತವಾಗಿತ್ತು. ಅಂದರೆ ಸಂಪೂಣ೯ ಗ್ರಹ… ಸಮುದ್ರಗಳ ಸಮೇತ. ಓದುತ್ತ: ಆ ದಿನಗಳಲ್ಲಿ ಹಸ್ತಿನಾಪುರದ, ಈಗ ನವದೆಹಲಿಯ ಭಾಗ, ಅರಸು ಸಮುದ್ರಗಳ ಸಮೇತ, ಸಂಪೂಣ೯ ಭೂಮಿಯ ಚಕ್ರವತಿ೯ಯಾಗಿದ್ದನು... ಮಹಾರಾಜ ಯುಧಿಷ್ಠಿರನ ಮೊಮ್ಮೊಗ ಮಹಾರಾಜ ಪರೀಕ್ಷಿತನ ಕಾಲದವರೆಗು. ಅವನ ತಮ್ಮಂದಿರು ಅವನ ಮಂತ್ರಿಗಳಾಗಿ ಹಾಗು ರಾಜ್ಯದ ದಂಡನಾಯಕರಾಗಿ ಕಾಯ೯ ನಿವ೯ಹಿಸುತ್ತಿದ್ದರು, ಹಾಗು ರಾಜನ ಪರಿಪೂಣ೯ವಾಗಿ ಧಾಮಿ೯ಕರಾದ ತಮ್ಮಂದಿರ ನಡುವೆ ಪೂಣ೯ ಸಹಕಾರವಿತ್ತು. ಮಹಾರಾಜ ಯುಧಿಷ್ಠಿರನು ಆದಶ೯ ರಾಜನು ಅಥವ ಪ್ರಭು ಶ್ರೀಕೃಷ್ಣನ ಪ್ರತಿನಿಧಿ… ಅರಸು ಕೃಷ್ಣನ ಪ್ರತಿನಿಧಿಯಾಗಿರಬೇಕು. … ಭೂ ರಾಜ್ಯವನ್ನು ಆಳಲು, ಹಾಗು ಸ್ವಗ೯ದ ಪ್ರತಿನಿಧಿ ರಾಜನಾಗಿದ್ದ ರಾಜ ಇಂದ್ರನಿಗೆ ಹೋಲಿಸಬಹುದಾದವನಾಗಿದ್ದನ್ನು. ದೇವತೆಗಳಾದಂತಹ ಇಂದ್ರ, ಚಂದ್ರ, ಸೂಯ೯, ವರುಣ, ವಾಯು ಮುಂತಾದವರು ಬ್ರಹ್ಮಾಂಡದ ವಿವಧ ಗ್ರಹಗಳ ಪ್ರತಿನಿಧಿ ರಾಜರು. ಅಂತೆಯೇ ಮಹಾರಾಜ ಯುಧಿಷ್ಠಿರನು ಅವರಲ್ಲಿ ಒಬ್ಬರಾಗಿದ್ದು ಭೂ ರಾಜ್ಯವನ್ನು ಆಳುತ್ತಿದ್ದನು. ಮಹಾರಾಜ ಯುಧಿಷ್ಠಿರನು ಆಧುನಿಕ ಪ್ರಜಾಪ್ರಭುತ್ವದ ಒಬ್ಬ ಅಪ್ರಬುದ್ದ ರಾಜಕೀಯ ನಾಯಕನಲ್ಲ. ಮಹಾರಾಜ ಯುಧಿಷ್ಠಿರನು ಭೀಷ್ಮದೇವ ಹಾಗು ಅಚ್ಯುತನಾದ ಪ್ರಭುವಿನಿಂದ ಕೂಡ ಬೋದನೆ ಪಡೆದರು ಆದ್ದರಿಂದ ಅವನು ಸಮಗ್ರ ಜ್ಞಾನವನ್ನು ಪರಿಪೂಣ೯ವಾಗಿ ಹೊಂದ್ದಿದನು. ರಾಜ್ಯದ ಆಧುನಿಕ ಚುನಾಯಿತ ಕಾಯ೯ನಿವಾ೯ಹಕ ಮುಖಂಡ ಕೇವಲ ಒಂದು ಸೂತ್ರದ ಬೊಂಬೆಯಂತೆ ಏಕೆಂದರೆ ಆತನಿಗೆ ರಾಜನಂತಹ ಅಧಿಕಾರವಿಲ್ಲ. ಅವನು ಮಹಾರಾಜ ಯುಧಿಷ್ಠಿರನಂತಹ ಪ್ರಬುದ್ದನಾಗಿದ್ದರು ತನ್ನ ಸಾಂವಿಧಾನಿಕ ಸ್ಥಾನದಿಂದಾಗಿ ಸ್ವೇಚ್ಛೆಯಿಂದ ಏನೂ ಮಾಡಲಾಗುವುದಿಲ್ಲ. ಆದ್ದರಿಂದ ಭೂಮಿಯ ಮೇಲೆ ಹಲವಾರು ರಾಜ್ಯಗಳು ಕಾದಾಡುತ್ತಿವೆ ಸೈದ್ದಾಂತಿಕ ಭಿನ್ನಾಭಿಪ್ರಾಯ ಅಥವ ಸ್ವಾರ್ಥ ಉದ್ದೇಶಗಳ ಕಾರಣದಿಂದ. ಆದರೆ ಮಹಾರಾಜ ಯುಧಿಷ್ಠಿರನಂತ ಅರಸು ತನ್ನದೆ ಆದಂತಹ ಯಾವ ಸಿದ್ಧಾಂತವನ್ನು ಹೊಂದಿರಲ್ಲಿಲ. ಅವನು ಕೇವಲ ಬೋಧನೆಯನ್ನು ಅನುಸರಿಸಬೇಕಿತ್ತು…ಅಚ್ಯುತನಾದ ಪ್ರಭುವಿನ ಹಾಗು ಅವನ ಪ್ರತಿನಿಧಿ ಮತ್ತು ಅಧಿಕೃತ ಕಾರ್ಯಕರ್ತನಾದ ಭೀಷ್ಮದೇವನ. ಶಾಸ್ತ್ರಗಳ ಆದೇಶವೆನೆಂದರೆ ಒಬ್ಬ ಮಹಾನ್ ತಜ್ಞ ಹಾಗು ಅಚ್ಯತನಾದ ಪ್ರಭುವನ್ನು ಯಾವುದೆ ವೈಯಕ್ತಿಕ ಉದ್ದೇಶ ಅಥವ ತಯಾರಿಸಲಾದಂತಹ ಸಿದ್ಧಾಂತವಿಲ್ಲದೆ ಅನುಸರಿಸಭೇಕು. ಆದ್ದರಿಂದ ಮಹಾರಾಜ ಯುಧಿಷ್ಠಿರನಿಗೆ ಈ ಸಂಪೂರ್ಣ ಲೋಕವನ್ನೆ ಆಳಲಾಯಿತು, ಸಮುದ್ರಗಳ ಸಮೇತ, ಏಕೆಂದರೆ ಆ ನೀತಿಗಳು ದೋಷಾತೀತ ಹಾಗು ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯಿಸುವಂತಹದಾಗಿದ್ದವು. ನಾವು ದೋಷಾತೀತ ತಜ್ಞನನ್ನು ಅನುಸರಿಸಿದರೆ ಮಾತ್ರ ಏಕರಾಜ್ಯ ಜಗತ್ತಿನ ವಿಚಾರವನ್ನು ಈಡೇರಿಸಲು ಸಾಧ್ಯ. ಒಬ್ಬ ಅಪೂರ್ಣ ಮಾನವ ಎಲ್ಲರೂ ಒಪ್ಪುವಂತಹ ಸಿದ್ಧಾಂತವನ್ನು ಸೃಷ್ಠಿಸಲಾಗುವುದಿಲ್ಲ. ಪರಿಪೂರ್ಣ ಹಾಗು ದೋಷಾತೀತರು ಮಾತ್ರವೇ ಲೋಕದಲ್ಲಿ ಎಲ್ಲಾ ಸ್ಥಳಗಳಲ್ಲಿಯು ಅನ್ವಯವಾಗುವಂತಹ ಮತ್ತು ಎಲ್ಲರೂ ಅನುಸರಿಸಬಹುದಾದಂತಹ ಕಾರ್ಯಕ್ರಮವನ್ನು ಸೃಷ್ಠಿಸಬಲ್ಲರು. ಅದು ಒಬ್ಬ ವ್ಯಕ್ತಿ ಆಳುವುದು, ನಿರಾಕಾರ ಸರ್ಕಾರವಲ್ಲ. ಆ ವ್ಯಕ್ತಿ ಪರಿಪೂರ್ಣನಾಗಿದ್ದರೆ ಸರ್ಕಾರವೂ ಪರಿಪೂರ್ಣವಾಗಿರುತ್ತದೆ. ಆ ವ್ಯಕ್ತಿ ಮೂರ್ಖನಾಗಿದ್ದರೆ ಸರ್ಕಾರ ಭ್ರಮಾಲೋಕವಾಗಿ ಉಳಿಯುತ್ತದೆ. ಇದೇ ಪ್ರಕೃತಿಯ ನಿಯಮ. ಅಪೂರ್ಣವಾದ ರಾಜರು ಅಥವ ಕಾರ್ಯನಿರ್ವಾಹಕ ಮುಖಂಡರ ಹಲವಾರು ಕಥೆಗಳಿವೆ. ಆದ್ದರಿಂದ ಕಾರ್ಯನಿರ್ವಾಹಕ ಮುಖಂಡ ಮಹಾರಾಜ ಯುಧಿಷ್ಠಿರನಂತೆ ತರಬೇತಿ ಪಡೆದವನಂತ್ತಾಗಿರಬೇಕು, ಹಾಗು ಅವನಿಗೆ ಲೋಕವನ್ನು ಆಳುವ ಪೂರ್ಣ ನಿರಂಕುಶಾಧಿಕಾರವಿರಬೇಕು. ಏಕರಾಜ್ಯ ಲೋಕದ ಪರಿಕಲ್ಪನೆ ಮಹಾರಾಜ ಯುಧಿಷ್ಠಿರನಂತಹ ಪರಿಪೂರ್ಣ ರಾಜನ ಆಡಳಿತದಲ್ಲಿ ಮಾತ್ರವೆ ರೂಪಗೊಳ್ಳಲು ಸಾಧ್ಯ. ಆ ದಿನಗಳಲ್ಲಿ ಈ ಲೋಕವೆ ಆನಂದದಿಂದಿತ್ತು ಏಕೆಂದರೆ ಮಹಾರಾಜ ಯುಧಿಷ್ಠಿರನಂತಹ ಅರಸು ಲೋಕವನ್ನು ಆಳುತ್ತಿದ್ದನು. ಈ ಅರಸು, ಮಹಾರಾಜ ಯುಧಿಷ್ಠಿರನನ್ನು ಅನುಸರಿಸಿ, ಹೇಗೆ ರಾಜಪ್ರಭುತ್ವ ಒಂದು ಪರಿಪೂರ್ಣ ರಾಜ್ಯವನ್ನು ಮಾಡಬಹುದೆಂದು ಉದಾಹರಣೆಯಾಗಲಿ. ಶಾಸ್ತ್ರಗಳಲ್ಲಿ ಆದೇಶಗಳಿವೆ, ಅದನ್ನು ಅವನು ಅನುಸರಿಸಿದರೆ, ಅವನೂ ಮಾಡಬಹುದು. ಅವನ ಹತ್ತಿರ ಅಧಿಕಾರವಿದೆ. ಅವನು ಅಂಥ ಪರಿಪೂರ್ಣ ರಾಜನಾದ್ದರಿಂದ… ಕೃಷ್ಣನ ಪ್ರತಿನಿಧಿಯಾದ್ದರಿಂದ… ಆದ್ದರಿಂದ…ಕಾಮಂಮ್ ವವರ್ಶ ಪರ್ಜನ್ಯಃ.. ಪರ್ಜನ್ಯಃ ಅಂದರೆ ಮಳೆ. ಆದ್ದರಿಂದ ಮಳೆ ಜೀವನದ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಮೂಲಭೂತ ತತ್ವ…ಮಳೆ. ಆದ್ದರಿಂದ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ “ಅನ್ನಾದ್ ಭವಂತಿ ಭೂತ್ತಾನಿ ಪರ್ಜನ್ಯಾದ್ ಅನ್ನ ಸಂಭವಃ” ನೀವು ಜನರನ್ನು ಸಂತೋಷಪಡಿಸಬೇಕೆಂದರೆ…ಮಾನವ ಹಾಗು ಪಶು.. ಪಶುಗಳೂ ಇವೆ. ಅವು… ಈ ಧೂರ್ತ ರಾಜ್ಯ ಕಾರ್ಯನಿರ್ವಾಹಕರು… ಅವರು ಕೆಲವೊಮ್ಮೆ ಮಾನವ ಹಿತಕೋಸ್ಕರ ಎಂಬುವಂತ ಪ್ರದರ್ಶನ ಮಾಡುತ್ತಾರೆ ಆದರೆ ಪಶುಗಳ ಹಿತಕೋಸ್ಕರವಲ್ಲ. ಏಕೆ? ಏಕೆ ಈ ಅನ್ಯಾಯ? ಅವುಗಳೂ ಈ ಭೂಮಿಯಲ್ಲೆ ಹುಟ್ಟಿವೆ. ಅವುಗಳ್ಲೂ ಜೀವಿಗಳ್ಳೆ. ಆವುಗಳು ಪಶುಗಳಾಗಿರಬಹುದು. ಆವುಗಳಿಗೆ ಬುದ್ದಿಶಕ್ತಿ ಇಲ್ಲ. ಆವುಗಳ್ಳಿಗೆ ಬುದ್ದಿಶಕ್ತಿಯಿದೆ, ಮಾನುಷ್ಯನಿಗಿರುವಷ್ಟು ಇಲ್ಲ, ಆದರೆ ಅದರ ಅರ್ಥ ಅವುಗಳನ್ನು ಕೊಲ್ಲಲು ವ್ಯವಸ್ಥಿತ ಕಸಾಯಿಖಾನೆಗಳನ್ನು ನಿರ್ಮಿಸಬೇಕು ಎಂಬುದೆ? ಇದು ನ್ಯಾಯವೆ? ಅದು ಮಾತ್ರವಲ್ಲ ಯಾರೆ ರಾಜ್ಯಕ್ಕೆ ಬಂದರು ಅರಸು ಆಶ್ರಯ ಕೊಡಬೇಕು. ಈ ಭೇದವೇಕೆ? ಯಾರೆ ಆಶ್ರಯ ಪಡೆದರು… “ಸ್ವಾಮಿ, ನಾನು ನಿಮ್ಮ ರಾಜ್ಯದಲ್ಲಿ ವಾಸಿಸಬೇಕು ಎಂದಿದ್ದೇನೆ”… ಆದ್ದರಿಂದ ಅವನಿಗೆ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡಬೇಕು. ಏಕೆ ಹೀಗೆ, “ಇಲ್ಲ ಇಲ್ಲ ನೀನು ಬರುವಂತಿಲ್ಲ! ನೀನು ಅಮೇರಿಕದವನು! ನೀನು ಭಾರತದವನು! ನೀನು ಇದು.”? ಅಲ್ಲ. ಹಲವಾರು ವಿಷಯಗಳಿವೆ. ಅವರು ನಿಜವಾಗಿ ತತ್ವಗಳನ್ನು ಅನುಸರಿಸುವುದಾದರೆ, ವೈದಿಕ ತತ್ವಗಳನ್ನು, ಆಗ ರಾಜನು ಒಬ್ಬ ಆದರ್ಶ ನಾಯಕನಾಗುತ್ತಾನೆ. ಆದ್ದರಿಂದ ಮಹಾರಾಜ ಯುಧಿಷ್ಠಿರನ ಆಳ್ವಿಕೆಯ ಕಾಲದಲ್ಲಿ ಹೇಳುತ್ತಿದ್ದರು… ಕಾಮಂಮ್ ವವರ್ಶ ಪರ್ಜನ್ಯಃ ಸರ್ವ ಕಾಮಾ ದುಘಾ ಮಹೀ (ಶ್ರೀಮದ್ ಭಾಗವತಂ 1.10.4). ಮಹೀ, ಈ ಭೂಮಿ. ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಭೂಮಿಯಿಂದ ಪೂರೈಸಿಕೊಳ್ಳುತೀರಿ. ಅದು ಆಕಾಶದಿಂದ ಬೀಳುವುದ್ದಿಲ್ಲ. ಹೌದು, ಆಕಾಶದಿಂದ ಮಳೆಯ ರೂಪದಲ್ಲಿ ಬೀಳುತ್ತದೆ. ಆದರೆ ವಿಭಿನ್ನ ವ್ಯವಸ್ಥೆಗಳಿಂದ ಹೇಗೆ ಭೂಮಿಯಿಂದ ವಸ್ತುಗಳು ಬರುತ್ತವೆ ಎಂಬ ವಿಜ್ಞಾನ ಅವರಿಗೆ ತಿಳಿಯದು. ಕೆಲವು ಖಚಿತವಾದ ಸ್ಥಿತಿಗಳಲ್ಲಿ, ಮಳೆ ಬೀಳುತ್ತದೆ ಮತ್ತು ನಕ್ಷತ್ರಗಳ ಪ್ರಭಾವ… ಆಗ ಹಲವಾರು ವಸ್ತುಗಳು ಉತ್ಪನ್ನವಾಗುತ್ತವೆ, ಅಮೂಲ್ಯವಾದ ರತ್ನಗಳು, ಮುತ್ತುಗಳು. ಈ ವಸ್ತುಗಳು ಹೇಗೆ ಬರುತ್ತಿವೆ ಎಂಬುದು ಅವರಿಗೆ ತಿಳಿಯದು. ಆದ್ದರಿಂದ ಅರಸು ಧರ್ಮಶ್ರದ್ದೆಯುಳ್ಳವನಾಗಿದ್ದರೆ ಅವನಿಗೆ ಸಹಾಯ ಮಾಡಲು ಪ್ರಕೃತಿಯೂ ಸಹಕರಿಸುತ್ತದೆ. ಮತ್ತು ಅರಸು ಹಾಗು ಸರ್ಕಾರ ಅಧಾರ್ಮಿಕವಾಗಿದ್ದರೆ, ಆಗ ಪ್ರಕೃತಿ ಸಹಕರಿಸದು.