KN/Prabhupada 0042 - ಈ ದೀಕ್ಷೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಿ

Revision as of 00:46, 15 May 2019 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0042 - in all Languages Category:KN-Quotes - 1976 Category:KN-Quotes - L...")
(diff) ← Older revision | Latest revision (diff) | Newer revision → (diff)


Initiation Lecture Excerpt -- Melbourne, April 23, 1976

ಚೈತನ್ಯ ಚರಿತಾಮೃತದಲ್ಲಿ ಶ್ರೀಲ ರೂಪ ಗೋಸ್ವಾಮೀಯವರಿಗೆ ಬೋಧನೆಮಾಡುತ್ತಾ ಚೈತನ್ಯ ಮಹಾಪ್ರಭುಗಳು ಹೇಳಿದರು:

“ಎ ರೂಪೆ ಬ್ರಹ್ಮಾಂಡ ಭ್ರಮಿತೆ ಕೋನ ಭಾಗ್ಯವಾನ್ ಜೀವ
ಗುರು-ಕೃಷ್ಣ-ಕೃಪಾಯ ಪಾಯ ಭಕ್ತಿ-ಲತಾ ಬೀಜ”
(ಚೈ.ಚ. ಮದ್ಯ.19.151)

ಜೀವಾತ್ಮಗಳು, ಅವು ಒಂದು ಜೀವರಾಶಿಯಿಂದ ಮತ್ತೊಂದಕ್ಕೆ ಸ್ಥಳಾಂತರ ಮಾಡುತ್ತಿವೆ, ಹಾಗು ಒಂದು ಗ್ರಹದಿಂದ ಮತ್ತೊಂದಕ್ಕೆ ಅಲೆದಾಡುತ್ತಿರುತ್ತದೆ… ಕೆಲವೊಮ್ಮೆ ಕೆಳಮಟ್ಟದ ಜೀವರಾಶಿಯಲ್ಲಿ, ಕೆಲವೊಮ್ಮೆ ಮೇಲ್ಮಟ್ಟದ ಜೀವರಾಶಿಯಲ್ಲಿ. ಇದು ಮುಂದುವರಿಯುತ್ತಿದೆ. ಇದನ್ನು ಸಂಸಾರ-ಚಕ್ರ-ವರ್ತ್ಮನಿ ಎನ್ನುತ್ತಾರೆ. ಕಳೆದ ರಾತ್ರಿ ಮೃತ್ಯು-ಸಂಸಾರ-ವರ್ತ್ಮನಿಯನ್ನು ವಿವರಿಸತುತ್ತಿದ್ದೆವು. ಪ್ರತ್ಯೇಕವಾಗಿ ಈ ಪದವನ್ನೇ ಉಪಯೋಗಿಸಲಾಗಿದೆ - ಮೃತ್ಯು-ಸಂಸಾರ-ವರ್ತ್ಮನಿ. ಜೀವನ ನಡೆಸಲು ಅತಿ ಕಠಿಣವಾದ ರೀತಿಗಳು… ಸಾಯುವದಕ್ಕೂ ಕೂಡ. ಮರಣಿಸುವುದೆಂದರೆ ಪ್ರತಿ ಒಬ್ಬರಿಗೂ ಭಯ ಏಕೆಂದರೆ ಮರಣದನಂತರ ಏನಾಗುತ್ತದೆಯೆಂದು ಯಾರಿಗೂ ತಿಳಿಯದು. ಯಾರು ಮೂರ್ಖರೊ ಅವರು ಪಶುಗಳು. ಪಶುಗಳ ವಧೆ ಆಗುತ್ತಿರುವಂತೆ… ಇನ್ನೊಂದು ಪಶು “ನಾನು ಸುರಕ್ಷಿತವಾಗಿದ್ದೇನೆ” ಎಂದು ಆಲೋಚಿಸುತಿದೆ. ಆದ್ದರಿಂದ ಕೊಂಚ ಬುದ್ದಿಯುಳ್ಳ ಯಾವುದೇ ವ್ಯಕ್ತಿಯಾದರೂ ಮೃತನಾಗಿ ಇನ್ನೊಂದು ದೇಹವನ್ನು ಸ್ವೀಕರಿಸಲು ಇಷ್ಟಪಡುವುದಿಲ್ಲ. ಹಾಗು ನಮಗೆ ಯಾವ ತರಹದ ದೇಹ ಸಿಗಬಹುದೆಂದು ನಮಗೆ ಗೊತ್ತಿಲ್ಲ. ಆದ್ದರಿಂದ ಗುರು ಮತ್ತು ಕೃಷ್ಣರ ಅನುಗ್ರಹದಿಂದ ಸಿಗುತ್ತಿರುವ ದೀಕ್ಷೆಯನ್ನು ಬಹಳ ಹಗುರವಾಗಿ ತೆಗೆದುಕೊಳ್ಳಬಾರದು. ಬಹಳ ಗಂಭೀರವಾಗಿ ತೆಗೆದುಕೊಳ್ಳಿ. ಇದೊಂದು ಮಹತ್ವದ ಅವಕಾಶ. ಬೀಜ ಅಂದರೆ ಭಕ್ತಿಯ ಬೀಜ.

ಆದ್ದರಿಂದ ನೀವು ಏನೆಲ್ಲ ಪ್ರತಿಜ್ಞೆ ಮಾಡಿರುವಿರೊ ಪ್ರಭುವಿನ ಸಮಕ್ಷದಲ್ಲಿ, ಗುರುವಿನ ಸಮಕ್ಷದಲ್ಲಿ, ಅಗ್ನಿಸಾಕ್ಷಿಯಾಗಿ, ವೈಷ್ಣವರ ಸಮಕ್ಷದಲ್ಲಿ, ಈ ಪ್ರತಿಜ್ಞೆಯಿಂದ ಎಂದಿಗೂ ವಿಪಥಗೊಳ್ಳಬೇಡಿ. ಆಗ ನೀವು ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ಸ್ಥಿರವಾಗಿ ನಿಲ್ಲುವಿರಿ. ಅನೈತಿಕ ಸಂಭೋಗವಿಲ್ಲ, ಜೂಜಾಟವಿಲ್ಲ, ಮಾಂಸಭಕ್ಷಣವಿಲ್ಲ, ಮಧ್ಯಪಾನವಿಲ್ಲ, ಈ ನಾಲ್ಕು ಬೇಡ , ಮತ್ತು ಹರೇ ಕೃಷ್ಣ ಜಪ – ಒಂದು ಬೇಕು. ನಾಲ್ಕು “ಬೇಡ’ – ಒಂದು “ಬೇಕು”. ಅದು ನಿನ್ನ ಜೀವನವನ್ನು ಸಫಲಗೊಳಿಸುತ್ತದೆ. ಇದು ಬಹಳ ಸುಲಭ. ಕಠಿಣವಲ್ಲ. ಆದರೆ ಮಾಯೆ ಬಹಳ ಶಕ್ತಿವಂತೆ, ಕೆಲವೊಮ್ಮೆ ನಮ್ಮನ್ನು ವಿಪಥಗೊಳಿಸುತ್ತಾಳೆ. ಆದ್ದರಿಂದ ಮಾಯೆ ಯಾವಾಗ ನಮ್ಮನ್ನು ವಿಪಥಗೊಳಿಸಲು ಯತ್ನಿಸುತ್ತಾಳೊ, ಆಗ ಕೃಷ್ಣನನ್ನು ಪ್ರಾರ್ಥಿಸಿ, “ದಯವಿಟು ನನ್ನನ್ನು ಕಾಪಾಡು. ನಾನು ಶರಣಾಗತಿ ಪಡೆದಿದ್ದೇನೆ, ಸಂಪೂರ್ಣ ಶರಣಾಗತಿ ಪಡೆದಿದ್ದೇನೆ, ಕೃಪೆಮಾಡಿ ನನಗೆ ರಕ್ಷಣೆ ನೀಡು.” ಆಗ ಕೃಷ್ಣ ರಕ್ಷಣೆ ನೀಡುತ್ತಾನೆ. ಆದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಅದೆ ನನ್ನ ಮನವಿ. ನಿಮಗೆ ನನ್ನ ಎಲ್ಲಾ ಶುಭಾಶಯಗಳು ಹಾಗು ಆಶೀರ್ವಾದಗಳು. ಆದ್ದರಿಂದ ಭಕ್ತಿಯ ಅವಕಾಶವನ್ನು ಉಪಯೋಗಿಸಿಕೊಳ್ಳೋಣ, ಭಕ್ತಿ-ಲತಾ-ಬೀಜ. ಮಾಲಿ ಹನಾ ಸೈ ಬೀಜ ಕರೆ ಆರೊಪಣಾ. ಒಂದು ಉತ್ತಮ ಬೀಜ ದೊರೆತ್ತರೆ ಅದನ್ನು ಭೂಮಿಯಲ್ಲಿ ಊಳಬೇಕು. ಒಂದು ನಿರ್ದಶನವೆಂದರೆ, ಉತ್ತಮ ಗುಲಾಬಿಹೂವಿನ ಒಳ್ಳೆಯ ಬೀಜವು ಸಿಕ್ಕರೆ ಅದನ್ನು ಭೂಮಿಯಲ್ಲಿ ಊತ್ತಿಟ್ಟು, ಸ್ವಲ್ಪ ನೀರು ಕೊಡಿ. ಅದು ಬೆಳೆಯುತ್ತದೆ. ನೀರೆರೆಯುವುದರಿಂದ ಬೀಜವನ್ನು ಬೆಳೆಸಬಹುದು. ನೀರೆರೆಯುವುದೆಂದರೇನು? ಶ್ರವಣ ಕೀರ್ತನ ಜಲೆ ಕರಯೆ ಸೆಚನ (ಚೈ.ಚ ಮದ್ಯ 19.152). ಬೀಜಕ್ಕೆ ನೀರೆರೆಯುವುದೆಂದರೆ, ಭಕ್ತಿ-ಲತಾ, ಶ್ರವಣ-ಕೀರ್ತನ, ಕೇಳಿಸಿಕೊಳ್ಳುವುದು ಮತ್ತು ಜಪಿಸುವುದು. ನೀವು ಇದರ ಬಗ್ಗೆ ಸನ್ಯಾಸಿಗಳು ಹಾಗು ವೈಷ್ಣವರಿಂದ ಹೆಚ್ಚು ಹೆಚ್ಚಾಗಿ ಕೇಳುತ್ತೀರಿ. ಆದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಅದೆ ನನ್ನ ಮನವಿ. ಧನ್ಯವಾದಗಳು. ಭಕ್ತರು: ಜಯ ಶ್ರೀಲ ಪ್ರಭುಪಾದ!