KN/Prabhupada 0047 - ಕೃಷ್ಣನು ಪರಿಪೂರ್ಣನು

Revision as of 15:49, 16 May 2019 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0047 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 7.1 -- Upsala University Stockholm, September 8, 1973

ವಿವಿಧ ಬಗೆಯ ಯೋಗಾ ಪದ್ದತಿಗಳಿವೆ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ, ಹಠಯೋಗ, ಧ್ಯಾನಯೋಗ, ಹಲವಾರು ಯೋಗಗಳು. ಆದರೆ ಭಕ್ತಿಯೋಗ ಅತ್ಯುನ್ನತ. ಇದನ್ನು ಕೊನೆಯೆ ಅಧ್ಯಾಯದಲ್ಲಿ ಹೇಳಲಾಗಿದೆ. ಈಗ ನಾನು ನಿಮ್ಮ ಮುಂದೆ ಓದುತ್ತಿರುವುದು ಏಳನೇಯ ಅಧ್ಯಾಯ. ಆರನೇಯ ಅಧ್ಯಾಯದ ಅಂತ್ಯದಲ್ಲಿ ಕೃಷ್ಣನು ಹೇಳುತ್ತಾನೆ,

ಯೋಗಿನಾಮಪಿ ಸರ್ವೇಷಾಂ
ಮದ್ಗತೇನಾಂತರಾತ್ಮನಾ,
ಶ್ರದ್ಧಾವಾನ್ ಭಜತೇ ಯೋ ಮಾಂ
ಸ ಮೇ ಯುಕ್ತತಮೋ ಮತಃ”
(ಭ.ಗೀ 6.47)

ಯೋಗಿನಾಮಪಿ ಸರ್ವೇಷಾಂ. ಯಾರು ಯೋಗ ಪದ್ಧತಿಯನ್ನು ಆಚರಿಸುತ್ತಿದ್ದಾನೊ ಅವನನ್ನು ಯೋಗಿ ಎನ್ನುತ್ತಾರೆ. ಆದ್ದರಿಂದ ಕೃಷ್ಣ ಹೇಳುತ್ತಾನೆ, “‘ಯೋಗಿನಾಮಪಿ ಸರ್ವೇಷಾಂ, ಎಲ್ಲಾ ಯೋಗಿಗಳಲ್ಲಿ…” ನಾನು ಆಗಲೆ ಹೇಳಿದ್ದೇನೆ. ವಿವಿಧ ಬಗೆಯ ಯೋಗಿಗಳಿದ್ದಾರೆ. “ಎಲ್ಲಾ ಯೋಗಿಗಳಲ್ಲಿ…” ಯೋಗಿನಾಮಪಿ ಸರ್ವೇಷಾಂ. ಸರ್ವೇಷಾಂ ಅಂದರೆ “ಎಲ್ಲಾ ಯೋಗಿಗಳಲ್ಲಿ. ಮದ್-ಗತೇನಾಂತರ್-ಆತ್ಮನಾ : “ತನ್ನಲ್ಲಿರುವ ನನ್ನನ್ನು ಕುರಿತು ಚಿಂತಿಸುತಿರುವನೋ.” ನಾವು ಕೃಷ್ಣನನ್ನು ಸ್ಮರಿಸಿಕೊಳ್ಳಬಹುದು. ಕೃಷ್ಣನ ಸ್ವರೂಪವು ನಮ್ಮಲ್ಲಿದೆ. ಕೃಷ್ಣನ ಮೂರ್ತಿಯನ್ನು ಪೂಜಿಸುತ್ತೇವೆ. ಆದ್ದರಿಂದ ನಮ್ಮನ್ನು ನಾವೆ ಮೂರ್ತಿ… ಕೃಷ್ಣನ ಸ್ವರೂಪವಾದ... ಕೃಷ್ಣನಿಂದ ವಿಭಿನ್ನವಲ್ಲದ… ಪೂಜೆಯಲ್ಲಿ ತೊಡಗಿಸಿಕೊಂಡರೆ, ಅಥವ ಮೂರ್ತಿಯ ಅನುಪಸ್ಥಿತಿಯಲ್ಲಿ ಕೃಷ್ಣನ ಪಾವನ ನಾಮವನ್ನು ಜಪಿಸಿದರೆ, ಅದುವೂ ಕೃಷ್ಣನೆ. ಅಭಿನ್ನತ್ವಾನ್ ನಾಮ-ನಾಮಿನೋಹ (ಚೈ.ಚ ಮಧ್ಯ 7.133). ಕೃಷ್ಣನು ಪರಿಪೂರ್ಣನು. ಆದ್ದರಿಂದ ಅವನಿಗೂ ಅವನ ನಾಮಕ್ಕೂ ವ್ಯತ್ಯಾಸವಿಲ್ಲ. ಅವನಿಗೂ ಅವನ ರೂಪಕ್ಕೂ ವ್ಯತ್ಯಾಸವಿಲ್ಲ. ಅವನಿಗೂ ಅವನ ಭಾವಚಿತ್ರಕ್ಕೂ ವ್ಯತ್ಯಾಸವಿಲ್ಲ. ಅವನಿಗೂ ಅವನ ವಿಷಯಗಳಿಗೂ ವ್ಯತ್ಯಾಸವಿಲ್ಲ. ಕೃಷ್ಣನ ಬಗ್ಗೆ ಏನೇ ಇದ್ದರೂ ಅದು ಕೃಷ್ಣನೆ. ಇದನ್ನೆ ಪರಾತ್ಪರ ಜ್ಞಾನವೆನುತ್ತಾರೆ. ಆದ್ದರಿಂದ ನೀವು ಕೃಷ್ಣನ ನಾಮವನ್ನಾದರು ಜಪಿಸಿ, ಅಥವ ಅವನ ಸ್ವರೂಪವನ್ನಾದರು ಪೂಜಿಸಿ – ಎಲ್ಲವೂ ಕೃಷ್ಣನೆ.

ಆದ್ದರಿಂದ ವಿವಿಧ ರೀತಿಯ ಭಕ್ತಿ ಸೇವೆಗಳಿವೆ.

ಶ್ರವಣಂ ಕೀರ್ತನಂ ವಿಷ್ಣೋಃ
ಸ್ಮರಣಂ ಪಾದಸೇವನಮ್
ಅರ್ಚನಂ ವಂದನಂ
ದಾಸ್ಯಂ ಸಖ್ಯಂ ಆತ್ಮ-ನಿವೇದನಮ್

(ಶ್ರೀ. ಭಾ 7.5.23)

ನೀವು ಕೇವಲ ಕೃಷ್ಣನ ಬಗೆ ಕೇಳಿಸಿಕೊಳ್ಳಿ. ಹಾಗೆ ಕೇಳಿಸಿ ಕೊಳ್ಳುವುದು ಕೂಡ ಕೃಷ್ಣನೆ. ಈಗ ನಾವು ಕೃಷ್ಣನ ಬಗೆ ಕೇಳಲು ಪ್ರಯತ್ನಿಸುತ್ತಿರುವಂತೆ. ಅಂತೆಯೇ ಹಾಗೆ ಕೇಳಿಸಿಕೊಳ್ಳುವುದು ಕೂಡ ಕೃಷ್ಣನೆ. ಈ ಹುಡುಗರು ಹಾಗು ಹುಡುಗಿಯರು ಜಪಿಸುತ್ತಿದ್ದಾರೆ. ಆ ಜಪ ಕೂಡ ಕೃಷ್ಣನೆ. ಶ್ರವಣಂ ಕೀರ್ತನಂ. ನಂತರ ಸ್ಮರಣಂ. ನೀವು ಕೃಷ್ಣನನ್ನು ಜಪಿಸುವಾಗ ಕೃಷ್ಣನ ಚಿತ್ರವನ್ನು ಸ್ಮರಿಸಿದರೆ, ಅದುವೂ ಕೃಷ್ಣನೆ. ಅಥವ ಕೃಷ್ಣನ ಚಿತ್ರವನ್ನು ನೋಡುವಿರಿ. ಅದುವೂ ಕೃಷ್ಣನೆ. ಕೃಷ್ಣನ ಮೂರ್ತಿಯನ್ನು ನೋಡುವಿರಿ. ಅದುವೂ ಕೃಷ್ಣನೆ. ಕೃಷ್ಣನ ಬಗೆ ಏನಾದರು ಕಲಿತುಕೊಳ್ಳುವಿರಿ. ಅದುವೂ ಕೃಷ್ಣನೆ. ಏನಾದರು,

ಶ್ರವಣಂ ಕೀರ್ತನಂ ವಿಷ್ಣೋಃ
ಸ್ಮರಣಂ ಪಾದಸೇವನಮ್
ಅರ್ಚನಂ ವಂದನಂ
ದಾಸ್ಯಂ ಸಖ್ಯಂ ಆತ್ಮ-ನಿವೇದನಮ್

(ಶ್ರೀ. ಭಾ 7.5.23)

ಈ ಒಂಬತ್ತು ವಿಧಾನಗಳಲ್ಲಿ ನೀವು ಯಾವುದೇ ಸ್ವೀಕರಿಸಿದರೂ ನೀವು ತಕ್ಷಣ ಕೃಷ್ಣನ ಸಂಪರ್ಕದಲ್ಲಿ ಬರುವಿರಿ. ನೀವು ಎಲ್ಲಾ ಒಂಬತ್ತನ್ನು ಸ್ವೀಕರಿಸಿದರೂ ಸರಿಯೇ, ಅಥವ ಎಂಟು, ಅಥವ ಏಳು, ಅಥವ ಆರು ಅಥವ ಐದು, ಅಥವ ನಾಲ್ಕು, ಅಥವ ಮೂರು, ಅಥವ ಎರಡು, ಅಥವ ಕೇವಲ ಒಂದು… ಇದನ್ನು ನೀವು ಕಟ್ಟುನಿಟ್ಟಾಗಿ ತೆಗೆದುಕೊಂಡರೆ ಹಾಗು… ಈ ಜಪಮಾಡುವುದು. ಅದಕ್ಕೆ ಖರ್ಚು ಏನು ಇಲ್ಲ. ನಾವು ವಿಶ್ವದಾದ್ಯಂತ ಜಪಿಸುತ್ತಿದ್ದೇವೆ. ನಮ್ಮನ್ನು ಆಲಿಸಿ ಯಾರು ಬೇಕಾದರು ಜಪಿಸಬಹುದು. ಇದರಿಂದ ನಿಮಗೇನೂ ಖರ್ಚಾಗುವುದಿಲ್ಲ. ಜಪಿಸಿದರೆ ನಿಮಗೇನೂ ನಷ್ಟವಾಗುವುದಿಲ್ಲ. ಆದರೆ ನೀವು ಮಾಡಿದರೆ ಆಗ ನೀವು ತಕ್ಷಣ ಕೃಷ್ಣನ ಸಂರ್ಪಕಕ್ಕೆ ಬರುವಿರಿ. ಅದುವೆ ಲಾಭ. ತಕ್ಷಣವಾಗಿ. ಏಕೆಂದರೆ ಕೃಷ್ಣ ಹಾಗು ಅವನ ನಾಮ…

ಅಭಿನ್ನತ್ವಾನ್ ನಾಮ-ನಾಮಿನೋಹ (ಚೈ.ಚ ಮಧ್ಯ 7.133). ವೈದಿಕ ಗ್ರಂಥಗಳಲ್ಲಿ ನೀಡಿರುವ ವಿವರಣೆಗಳಿವು. ಅಭಿನ್ನತ್ವಾನ್ ನಾಮ-ನಾಮಿನೋಹ. ನಾಮ ಚಿಂತಾಮಣಿಹಿ ಕೃಷ್ಣಃ ಕೃಷ್ಣನ ನಾಮವು ಚಿಂತಾಮಣಿ. ಚಿಂತಾಮಣಿ ಎಂದರೆ ಆಧ್ಯಾತ್ಮಿಕ. ಚಿಂತಾಮಣಿ ಪ್ರಕರ ಸದ್ಮಸು ಕಲ್ಪ ವೃಕ್ಷ ಲಕ್ಷಾವೃತೇಶು (ಬ್ರಹ್ಮ ಸಂಹಿತ 5.29). ಇವುಗಳೆ ವೈದಿಕ ವಿವರಣೆಗಳು. ಕೃಷ್ನನು ವಾಸವಾಗಿರುವ ಸ್ಥಳವನ್ನು ವಿವರಿಸಿದ್ದಾರೆ: ಚಿಂತಾಮಣಿ ಪ್ರಕರ ಸದ್ಮಸು ಕಲ್ಪ ವೃಕ್ಷ ಲಕ್ಷಾವೃತೇಶು ಸುರಬಿರ್ ಅಭಿಪಾಲಯಂತಂ. (ಬ್ರಹ್ಮ ಸಂಹಿತ 5.29) ಆದ್ದರಿಂದ ನಾಮವೂ…ಕೃಷ್ಣನ ಪಾವನ ನಾಮ ಕೂಡ ಆಧ್ಯಾತ್ಮಿಕ. ನಾಮ ಚಿಂತಾಮಣಿಹಿ ಕೃಷ್ಣಃ. ಅವನು ಅದೆ ಕೃಷ್ಣನೆ… ವ್ಯಕ್ತಿ. ನಾಮ ಚಿಂತಾಮಣಿಹಿ ಕೃಷ್ಣಶ್ ಚೈತನ್ಯ. (ಚೈ.ಚ ಮಧ್ಯ 7.133) ಚೈತನ್ಯ ಎಂದರೆ ಮರಣವಿಲ್ಲದ, ಜೀವಾತ್ಮ. ಕೃಷ್ಣನ ಜೊತೆಯಲ್ಲಿ ವೈಯಕ್ತಿಕವಾಗಿ ಮಾತನಾಡುವುದರ ಫಲವೇನಿದೆಯೊ ನಾಮ ಜಪಮಾಡುವಾಗ ಅದೇ ಫಲ ಸಿಗುತ್ತದೆ. ಅದು ಕೂಡ ಸಾಧ್ಯ. ಅದರೆ ಇದು ಕ್ರಮೇಣವಾಗಿ ಅರಿವಾಗುತ್ತದೆ. ನಾಮ ಚಿಂತಾಮಣಿಹಿ ಕೃಷ್ಣಶ್ ಚೈತನ್ಯ ರಸ ವಿಗ್ರಹಃ ‘ರಸ ವಿಗ್ರಹಃ’ ಎಂದರೆ ಎಲ್ಲಾ ಆನಂದಗಳ ಭಂಡಾರ. ಹರೇ ಕೃಷ್ಣ ನಾಮವನ್ನು ಜಪಿಸುವಾಗ ನೀವು ಕ್ರಮೇಣವಾಗಿ ಅಲೌಕಿಕ ಆನಂದವನ್ನು ಸವಿಯುವಿರಿ. ಈ ಹುಡುಗರು ಹಾಗು ಹುಡುಗಿಯರ ಹಾಗೆ… ಜಪಿಸುತ್ತಿರುವಾಗ ಸಂತೋಷದಿಂದ ಕುಣಿಯುತ್ತಿದ್ದಾರೆ. ಯಾರೂ ಅವರನ್ನು ಅನುಸರಿಸಲಾಗಲಿಲ್ಲ. ಜಪಿಸುತ್ತಿದ್ದಾರೆ ಅಂದಮಾತ್ರಕ್ಕೆ ಅವರು ಹುಚ್ಚರಲ್ಲ. ನಿಜವಾಗಿಯು ಅವರಿಗೆ ಸ್ವಲ್ಪ ಆನಂದ, ಅಲೌಕಿಕ ಆನಂದ, ಸಿಗುತ್ತಿದೆ. ಆದ್ದರಿಂದ ಅವರು ಕುಣಿಯುತ್ತಿದ್ದಾರೆ. ಅದೇನು ನಾಯಿ-ನೃತ್ಯವಲ್ಲ. ಇಲ್ಲ. ನಿಜವಾಗಿಯು ಅದು ಆಧ್ಯಾತ್ಮಿಕ ನೃತ್ಯ, ಆತ್ಮದ ನೃತ್ಯ. ಅಂತೆಯೇ… ಆದ್ದರಿಂದ ಅವನನ್ನು ರಸ-ವಿಗ್ರಹ, ಆನಂದ ಭಂಡಾರ, ಎಂದು ಕರೆಯುತ್ತಾರೆ.

ನಾಮ ಚಿಂತಾಮಣಿಹಿ ಕೃಷ್ಣಶ್ ಚೈತನ್ಯ ರಸ ವಿಗ್ರಹಃ ಪೂರ್ಣಃ (ಚೈ.ಚ ಮಧ್ಯ 7.133). ಪೂರ್ಣ, ಪೂರ್ತಿಯಾಗಿ. ಕೃಷ್ಣನಿಗಿಂತ ಶೇಕಡ ಒಂದರಷ್ಟೂ ಕಡಿಮೆ ಇಲ್ಲ. ಇಲ್ಲ. ಶೇಕಡ ನೂರಕ್ಕೆ ನೂರು ಕೃಷ್ಣನೆ. ಪೂರ್ತಿಯಾಗಿ. ಪೂರ್ಣ. ಪೂರ್ಣ ಎಂದರೆ ಪೂರ್ತಿಯಾಗಿ. ಪೂರ್ಣಃ ಶುದ್ದಃ. ಶುದ್ದ ಎಂದರೆ ನಿರ್ಮಲವಾದದ್ದು. ಐಹಿಕ ಲೋಕದಲ್ಲಿ ಮಾಲಿನ್ಯವಿದೆ. ಐಹಿಕ, ಯಾವುದೆ ನಾಮವನ್ನು ಜಪಿಸಿರಿ, ಅದು ಮಾಲಿನ್ಯವಾದ ಕಾರಣ, ದೀರ್ಘಾವಧಿಯವರೆಗು ಮುಂದುವರಿಸಲಾಗುವುದಿಲ್ಲ. ಇದು ಇನ್ನೊಂದು ಅನುಭವ. ಆದರೆ ಈ ಹರೇ ಕೃಷ್ಣ ಮಂತ್ರವನ್ನ ನೀವು ಇಪ್ಪತ್ತನಾಲ್ಕು ಗಂಟೆ ಜಪಿಸಿದರೂ ನಿಮಗೆ ಆಯಾಸವೆನಿಸದು. ಅದುವೇ ಪರೀಕ್ಷೇ. ನೀವು ಜಪಿಸುತ್ತಿರಿ. ಏನು ತಿನ್ನದೆ, ನೀರೂ ಕುಡಿಯದೆ, ಈ ಹುಡುಗರು ಇಪ್ಪತ್ತನಾಲ್ಕು ಗಂಟೆ ಜಪಿಸಬಲ್ಲರು. ಇದು ಎಷ್ಟು ಚೆನ್ನಾಗಿದೆ. ಏಕೆಂದರೆ ಇದು ಸಂಪೂರ್ಣ, ಆಧ್ಯಾತ್ಮಿಕ, ಶುದ್ದ. ಶುದ್ದ ಎಂದರೆ ನಿರ್ಮಲ. ಐಹಿಕ ಮಾಲಿನ್ಯ ಇಲ್ಲದಿರುವುದು. ಐಹಿಕ ಸುಖ, ಯಾವುದೆ ಸುಖ… ಐಹಿಕ ಲೋಕದಲ್ಲಿ ಮೇಲ್ಮಟ್ಟದ ಸುಖವೆಂದರೆ ಮೈಥುನ. ಆದರೆ ಅದನ್ನು ಇಪ್ಪತ್ತನಾಲ್ಕು ಗಂಟೆ ಅನುಭವಿಸಲಾಗುವುದಿಲ್ಲ. ಅದು ಸಾಧ್ಯವಿಲ್ಲ. ಅದನ್ನು ಕೆಲ ನಿಮಿಷ ಅನುಭವಿಸಬಹುದು. ಅಷ್ಟೆ. ನಿಮ್ಮನ್ನು ಒತ್ತಾಯಿಸಿ ಅನುಭವಿಸಿಯೆಂದರೂ ನೀವು ತಿರಸ್ಕರಿಸುವಿರಿ: “ಇಲ್ಲ. ಇನ್ನು ಬೇಡ.” ಅದು ಐಹಿಕ. ಆದರೆ ಆಧ್ಯಾತ್ಮಿಕವೆಂದರೆ ಅದಕ್ಕೆ ಕೊನೆಯಿಲ್ಲ. ನೀವು ನಿರಂತರವಾಗಿ, ಇಪ್ಪತ್ತನಾಲ್ಕು ಗಂಟೆಯೂ ಅನುಭವಿಸಬಹುದು. ಅದು ಆಧ್ಯಾತ್ಮಿಕ ಅನುಭವವೆಂದರೆ. ಬ್ರಹ್ಮ ಸೌಖ್ಯಂ ಅನಂತಮ್ (ಶ್ರೀ.ಭಾ 5.5.1). ಅನಂತಮ್. ಅನಂತಮ್ ಎಂದರೆ ಅಂತ್ಯವಿಲ್ಲದ.