KN/Prabhupada 0050 - ಅವರಿಗೆ ಮರುಜನ್ಮದ ಬಗ್ಗೆ ಅರಿವಿಲ್ಲ

Revision as of 02:57, 28 June 2019 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0050 - in all Languages Category:KN-Quotes - 1972 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 16.5 -- Calcutta, February 23, 1972

ಪ್ರಕೃತಿಯು, ಕೃಷ್ಣನ ಆದೇಶದಂತೆ, ನಮಗೆ ಅವಕಾಶಗಳನ್ನು ಕೊಡುತ್ತಿದೆ… ಜನ್ಮ ಮತ್ತು ಮೃತ್ಯುವಿನ ತೊಡಕುಗಳಿಂದ ಹೊರಬರಲು ಅವಕಾಶಗಳನ್ನು ಕೊಡುತ್ತಿದೆ: ಜನ್ಮ – ಮೃತ್ಯು – ಜರ – ವ್ಯಾಧಿ ದುಃಖ-ದೋಷಾನುದರ್ಶನಮ್ (ಭ.ಗೀ 13.9). ‘ಜನ್ಮ – ಮೃತ್ಯು – ಜರ – ವ್ಯಾಧಿ’ - ಜೀವನದ ಈ ನಾಲ್ಕು ಘಟನೆಗಳ ತೊಂದರೆಗಳನ್ನು ತಿಳಿದುಕೊಳ್ಳುವಂತಃ ಬುದ್ದಿವಂತನಾಗಿರಬೇಕು. ಇದುವೇ ವೈದಿಕ ವ್ಯವಸ್ಥೆ – ಹೇಗೆ ಈ ಹಿಡಿತದಿಂದ ವಿಮುಕ್ತನಾಗುವುದೆಂದು. ಆದರೆ ಅವನಿಗೆ ‘ಇದು ಮಾಡು, ಅದು ಮಾಡು’ ಎಂದು ಅವಕಾಶ ನೀಡಲಾಗುತ್ತದೆ – ಒಂದು ನಿಯಂತ್ರಿತ ಜೀವನ… ಅವನು ಅಂತಿಮವಾಗಿ ವಿಮುಕ್ತನಾಗಲೆಂದು.

ಆದ್ದರಿಂದ ಭಗವಾನ್ ಹೇಳಿದನು, ದೈವೀ ಸಂಪದ್ ವಿಮೋಕ್ಷಾಯಾ (ಭ.ಗೀ 16.5). ನೀನು ದೈವೀ ಸಂಪತ್ತನ್ನು, ಈ ಗುಣಗಳು ಬೆಳೆಸಿಕೊಂಡರೆ – ಇಲ್ಲಿ ವಿವರಿಸಲಾದಹಾಗೆ – ಅಹಿಂಸ, ಸತ್ವ-ಸಂಶುದ್ದಿಃ, ಅಹಿಂಸ, ಹೀಗೆ ಹಲಾವರು, ಆಗ ನೀನು ವಿಮುಕ್ತನಾಗುತ್ತಿಯ, ವಿಮೋಕ್ಷಾಯಾ. ದೌರ್ಭಾಗ್ಯವೆಂದರೆ, ಈ ಆಧುನಿಕ ನಾಗರಿಕತೆಗೆ ವಿಮೋಕ್ಷಾಯವೆಂದರೆ ಏನೆಂದು ತಿಳಿಯದು. ಅವರು ಅಂಧರು. ವಿಮೋಕ್ಷಾಯವೆಂಬುವ ಒಂದು ಸ್ಥಾನವಿದೆಯೆಂದು ಕೂಡ ತಿಳಿಯದು. ಅವರಿಗೆ ಅರಿವಿಲ್ಲ. ಅವರಿಗೆ ಮರುಜನ್ಮದ ಬಗ್ಗೆ ತಿಳಿಯದು. ಶಿಕ್ಷಣ ವ್ಯವಸ್ಥೆಯಿಲ್ಲ. ನಾನು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದೇನೆ. ಆತ್ಮ ದೇಹಾಂತರದ ಬಗ್ಗೆ ಶಿಕ್ಷಣ ನೀಡುವ ಒಂದು ಸಂಸ್ಥೆಯೂ ಇಲ್ಲ, ಹೇಗೆ ಉತ್ತಮ ಜನ್ಮ ಪಡೆಯ ಬಹುದೆಂಬುದರ ಬಗ್ಗೆ. ಆದರೆ ಅವರು ನಂಬುವುದಿಲ್ಲ. ಅವರಿಗೆ ಅರಿವಿಲ್ಲ. ಅದುವೇ ಆಸುರೀ ಸಂಪತ್. ಅದು ಇಲ್ಲಿ ವಿವರಿಸಲಾಗುತ್ತದೆ: ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರ್ ಆಸುರಾಃ. ಪ್ರವೃತ್ತಿಂ. ಪ್ರವೃತ್ತಿಂ ಅಂದರೆ ಆಕರ್ಷಣೆ, ಅಥವ ವ್ಯಾಮೋಹ. ಯಾವ ತರಹದ ಚಟುವಟಿಕೆಗಳಲ್ಲಿ ಮೋಹವಿರಬೇಕು, ಯಾವ ಚಟುವಟಿಕೆಗಳಲ್ಲಿ ನಿರ್ಮೋಹವಿರಬೇಕು ಎಂಬುದು ಅಸುರರಿಗೆ ತಳಿಯದು. ಪ್ರವೃತ್ತಿಂ ಚ ನಿವೃತ್ತಿಂ ಚ.

ಪ್ರವೃತ್ತಿಂ ಚ ನಿವೃತ್ತಿಂ ಚ
ಜನಾ ನ ವಿದುರಾಸುರಾಃ
ನ ಶೌಚಂ ನಾಪಿ ಚಾಚಾರೋ
ನ ಸತ್ಯಂ ತೇಷು ವಿದ್ಯತೇ
(ಭ. ಗೀ 16.7)

ಇವರೇ ಅಸುರರು. ಅವರಿಗೆ ತಮ್ಮ ಜೀವನವನ್ನು ಹೇಗೆ, ಯಾವ ದಿಕ್ಕಿನಲ್ಲಿ ನಡೆಸಬೇಕು ಎಂಬುದು ತಿಳಿಯದು. ಅದನ್ನು ಪ್ರವೃತ್ತಿಯನ್ನುತ್ತಾರೆ. ಯಾವ ತರಹದ ಜೀವನವನ್ನು ತ್ಯಜಿಸಬೇಕು, ವೈರಾಗ್ಯ, ಅದು ನಿವೃತ್ತಿ. ಪ್ರವೃತ್ತಿಸ್ ತು ಜೀವಾತ್ಮನ. ಅದು ಇನ್ನೊಂದು. ಭುನಮ್. ನಿವೃತ್ತಿಸ್ ತು ಮಹಾಫಲಾಂ. ಸಂಪೂರ್ಣ ಶಾಸ್ತ್ರವು, ಸಂಪೂರ್ಣ ವೈದಿಕ ನಿರ್ದೇಶನವು, ಪ್ರವೃತ್ತಿ-ನಿವೃತ್ತಿಗಾಗಿಯೇ. ಅವರು ಕ್ರಮೇಣ ತರಬೇತಿ ನಡೆಸುತ್ತಿದ್ದಾರೆ. ಲೋಕೇ ವ್ಯವಾಯಾಮಿಷ-ಮದ್ಯ-ಸೇವಾ ನಿತ್ಯಾ ಸುಜಂತೊಃ. ಒಬ್ಬ ಜೀವಿಗೆ ವ್ಯವಾಯ, ಅಂದರೆ ಮೈಥುನದ ಬಗ್ಗೆ ಸಹಜ ಒಲವು ಇರುತ್ತದೆ; ಹಾಗು ಮದ್ಯ-ಸೇವಾಃ, ಮಾದಕತೆ; ಆಮಿಷ ಸೇವಾಃ, ಮತ್ತು ಮಾಂಸ ಭಕ್ಷಣೆ. ಒಂದು ಸಹಜ ಪ್ರವೃತ್ತಿಯಿದೆ. ಆದರೆ ಅಸುರರು ಅದನ್ನು ನಿಲ್ಲಿಸಲು ಪ್ರಯತ್ನಿಸುವುದಿಲ್ಲ. ಅದನ್ನು ಹೆಚ್ಚಿಸಲು ಬಯಸುತ್ತಾರೆ. ಅದು ಅಸುರ ಬದುಕ್ಕೆಂದರೆ. ನನಗೆ ರೋಗವಿದೆ. ಅದನ್ನು ನಿವಾರಿಸಲು ವೈದ್ಯರು “ಇದನ್ನು ಸೇವಿಸಬೇಡ” ಎಂದು ಸಲಹೆ ನೀಡುತ್ತಾರೆ. ಒಬ್ಬ ಮಧುಮೇಹಿಯಂತೆ. “ಸಕ್ಕರೆ, ಪಿಷ್ಟ, ತಿನ್ನಬಾರದು” ಎಂದು ನಿಷೇಧಿಸಲಾಗಿದೆ. ನಿವೃತ್ತಿ. ಅಂತೆಯೇ, ಶಾಸ್ತ್ರ ನಮಗೆ ನಿರ್ದೇಶನ ನೀಡುತ್ತದೆ ಇವುಗಳನ್ನು ಸ್ವೀಕರಿಸು, ಇವುಗಳನ್ನು ತಿರಸ್ಕರಿಸು ಎಂದು. ಶಾಸ್ತ್ರ. ನಮ್ಮ ಸಮಾಜದ ತರಹ. ನಾವು ಅತ್ಯವಶ್ಯಕವಾದ ಪ್ರವೃತ್ತಿ ಹಾಗು ನಿವೃತ್ತಿಯನ್ನು ಆರಿಸಿಕೊಂಡಿದ್ದೇವೆ. ಪ್ರವೃತ್ತಿ… ನಮ್ಮ ವಿದ್ಯಾರ್ಥಿಗಳಿಗೆ ಬೋಧಿಸಿತ್ತಿದ್ದೇವೆ – “ಅನೈತಿಕ ಮೈಥುನವಿಲ್ಲ, ಮಾಂಸ ಭಕ್ಷಣೆಯಿಲ್ಲ, ಆಮಿಷ-ಸೇವೆ ಇಲ್ಲ”. ಆಮಿಷ-ಸೇವಾ ನಿತ್ಯಾ ಸುಜಂತೊಃ. ಆದರೆ ಶಾಸ್ತ್ರವು ಹೇಳುತ್ತಿದೆ ನೀನು ಇವುಗಳನ್ನು ತ್ಯಜಿಸಲಾದರೆ, ನಿವೃತ್ತಿಸ್ ತು ಮಹಾಫಲಾಂ, ಆಗ ನಿನ್ನ ಜೀವನ ಸಫಲವೆಂದು. ಆದರೆ ನಾವು ಸಿದ್ದವಾಗಿಲ್ಲ. ಯಾರು ಪ್ರವೃತ್ತಿಗಳನ್ನು ಸ್ವೀಕರಿಸಲು ಹಾಗು ನಿವೃತ್ತಿಗಳನ್ನು ತಿರಸ್ಕರಿಸಲು ಸಿದ್ದವಿಲ್ಲವೋ ಅವನು ಅಸುರ ಎಂದು ತಿಳಿದುಕೊಳ್ಳಬೇಕು. ಕೃಷ್ಣನು ಹೇಳುತ್ತಾನೆ, ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರ್ ಆಸುರಾಃ (ಭ.ಗೀ 16.7). “ಓ, ಏನದು?“ ಹೆಸರಾಂತ ಸ್ವಾಮಿಗಳೂ ಹೇಳುತ್ತಾರೆ, “ಓ, ಅದರಲ್ಲಿ ಏನು ತಪ್ಪಿದೆ?” ಎಂದು. ಏನು ಬೇಕಾದರೂ ತಿನ್ನು. ತಪ್ಪಿಲ್ಲ. ನೀನು ಏನಾದರೂ ಮಾಡಬಹುದು. “ನನಗೆ ಸ್ವಲ್ಪ ಶುಲ್ಕ ಕೊಡು, ನಾನು ನಿನಗೆ ಒಂದು ವಿಶೇಷ ಮಂತ್ರ ಕೊಡುತ್ತೇನೆ.” ಈ ತರಹ ನಡೆಯುತ್ತಿದೆ.