KN/Prabhupada 0017 - ಆಧ್ಯಾತ್ಮಿಕ ಮತ್ತು ಭೌತಿಕ ಶಕ್ತಿಗಳು

Revision as of 04:12, 12 July 2019 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)


Lecture on Sri Isopanisad, Mantra 1 -- Los Angeles, May 2, 1970

ಈ ಭೌತಿಕ ಜಗತ್ತಿನಲ್ಲಿ ಎರಡು ಶಕ್ತಿಗಳು ಕೆಲಸ ಮಾಡುತ್ತಿವೆ: ಆಧ್ಯತ್ಮಿಕ ಶಕ್ತಿ ಮತ್ತು ಭೌತಿಕ ಶಕ್ತಿ. ಭೌತಿಕ ಶಕ್ತಿ ಎಂದರೆ ಏಂಟು ರೀತಿಯ ಭೌತಿಕ ಅಂಶಗಳು. ಭೂಮಿರ್ ಆಪೊ ನಳೊ ವಾಯಃ: (ಭ ಗೀ ೭.೪) ಭೂಮಿ, ನೀರು, ಅಗ್ನಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ, ಮತ್ತು ಅಹಂಕಾರ ಇದೆಲ್ಲ ಭೌತಿಕ. ಮತ್ತು ಅದೇ ರೀತಿ, ಅಪ್ಪಟವಾದ, ಅಪ್ಪಟವಾದ, ಅಪ್ಪಟವಾದ, ಅಪ್ಪಟವಾದ, ಮತ್ತು ಸೂಕ್ಷ್ಮವಾದ, ಸೂಕ್ಷ್ಮವಾದ, ಸೂಕ್ಷ್ಮವಾದ ಹೇಗೆ ನೀರು ಭೂಮಿಗಿಂತ ಅಪ್ಪಟವಾಗಿದೆ, ನಂತರ ಹೇಗೆ ಅಗ್ನಿ ನೀರಿಗಿಂತ ಅಪ್ಪಟವಾಗಿದೆ ನಂತರ ಹೀಗೆ ಗಾಳಿ ಅಗ್ನಿಗಿಂತ ಅಪ್ಪಟವಾಗಿದೆ, ನಂತರ ಹೇಗೆ ಆಕಾಶ, ಅಥವ ನಿರ್ಮಲ ಆಕಾಶ ಗಾಳಿಗಿಂತ ಅಪ್ಪಟವಾಗಿದೆ ಅದೇ ರೀತಿ ಬುದ್ಧಿ ಆಕಾಶಕಿಂತ ಅಪ್ಪಟವಾಗಿದೆ, ಅಥವ ಮನಸ್ಸು ಆಕಾಶಕಿಂತ ಅಪ್ಪಟವಾಗಿದೆ. ಮನಸ್ಸು....... ನಿಮಗೆ ಗೊತ್ತಾ, ನಾನು ಹಲವಾರು ಭಾರಿ ಉದಾಹರಣೆ ಕೊಟ್ಟಿದ್ದಿನಿ: ಮನಸ್ಸಿನ ವೇಗ ಒಂದು ಕ್ಷ್ಣಣದಲ್ಲಿ ಹಲವು ಸಾವಿರ ಮೈಲಿಗಳು ಹೋಗಬಹುದು ಆದ್ದರಿಂದ ಇದು ಅಪ್ಪಟವಾದಷ್ಟು , ಇದು ಬಲಶಾಲಿ ಅದೇ ರೀತಿ, ಅಂತಿಮವಾಗಿ, ನಾವು ಆಧ್ಯಾತ್ಮಿಕ ಭಾಗಕ್ಕೆ ಬಂದಾಗ, ಅಪ್ಪಟ, ಯಾವುದರಿಂದ ಎಲ್ಲವು ಹೊರಸೂಸುತ್ತವೆಯೊ, ಓ, ಅದು ಬಹಳ ಬಲಶಾಲಿ ಇದೇ ಆಧ್ಯಾತ್ಮಿಕ ಶಕ್ತಿ. ಇದುನ್ನು ಭಗವದ್ಗೀತೆಯಲ್ಲಿ ನೀಡಲಾಗಿದೆ. ಏನು ಆ ಆಧ್ಯಾತ್ಮಿಕ ಶಕ್ತಿ? ಆ ಆಧ್ಯಾತ್ಮಿಕ ಶಕ್ತಿಯೆ ಈ ಜೀವಾತ್ಮ. ಅಪರೆಯಮ್ ಇತಸ್ ತು ವಿದ್ಧಿ ಮೆ ಪ್ರಕೃತಿಮ್ ಪರಾ (ಭ ಗೀ ೭.೫) ಕೃಷ್ಣ ಹೇಳುತ್ತಾನೆ,"ಇವು ಭೌತಿಕ ಶಕ್ತಿಗಳು. ಇದರ ಆಚೆ ಇನೊಂದು ಇದೆ, ಆಧ್ಯಾತ್ಮಿಕ ಶಕ್ತಿ ಅಪರೆಯಮ್. ಅಪರಾ ಎಂದರೆ ಕೆಳಮಟ್ಟದ್ದು. ಅಪರೆಯಮ್ ಈ ಎಲ್ಲ ವಿವರಿಸಿದ ಭೌತಿಕ ಅಂಶಗಳು, ಅವು ಕೆಳಮಟ್ಟದ ಶಕ್ತಿಗಳು. ಮತ್ತು ಇದರ ಆಚೆ ಶ್ರೇಷ್ಟ ಶಕ್ತಿಯಿದೆ, ನನ್ನ ಪ್ರೀತಿಯ ಅರ್ಜುನ." ಏನದು? ಜೀವ-ಭೂತ ಮಹಾ-ಬಾಹೊ: ಇವು ಜೀವಾತ್ಮಗಳು." ಅವರು ಸಹ ಶಕ್ತಿ. ನಾವು ಜೀವಾತ್ಮಗಳು, ನಾವು ಸಹ ಶಕ್ತಿ, ಆದರೆ ಶ್ರೇಷ್ಟ ಶಕ್ತಿ. ಹೇಗೆ ಶ್ರೇಷ್ಟ? ಏಕೆಂದರೆ ಯಯೆದಮ್ ಧಾರ್ಯತೆ ಜಗತ್ (ಭ ಗೀ ೭.೫) ಆ ಶ್ರೇಷ್ಟ ಶಕ್ತಿಯು ಕೆಳಮಟ್ಟದ ಶಕ್ತಿಯನ್ನು ನಿಯಂತ್ರಿಸುತ್ತಿದೆ ಜಡ ವಸ್ತುವಿಗೆ ಶಕ್ತಿಯಿಲ್ಲ ದೊಡ್ಡ ವಿಮಾನ, ಒಳ್ಳೆಯ ಯಂತ್ರ, ಆಕಾಶದಲ್ಲಿ ಹಾರುತ್ತದೆ, ಜಡ ವಸ್ತುವಿನಿಂದ ಮಾಡಿದೆ ಆದರೆ ಆಧ್ಯಾತ್ಮಿಕ ಶಕ್ತಿ ಇಲ್ಲದ ಹೊರತು, ಚಾಲಕ, ಇಲ್ಲದ ಹೊರತು, ಅದು ನಿಷ್ಪ್ರಯೋಜಕ. ಅದು ನಿಷ್ಪ್ರಯೋಜಕ. ಸಾವಿದಾರು ವರುಷ ಆ ವಿಮಾನ ನಿಲ್ದಾಣದಲ್ಲಿ ನಿಂತಿರುತ್ತದೆ; ಸಣ್ಣ ಅಣು ಆಧ್ಯಾತ್ಮಿಕ ಶಕ್ತಿ ಹೊರತು ಅದು ಹಾರುವುದಿಲ್ಲ, ಆ ಚಾಲಕ, ಬಂದು ಅದನ್ನು ಸ್ಪರ್ಶ ಮಾಡುವ ತನಕ ಆದ್ದರಿಂದ ದೇವರನ್ನು ಅರ್ಥ ಮಾಡಿಕೊಳ್ಳಲು ಏನು ಕಷ್ಟ? ಎಷ್ಟು ಸರಳ ವಿಷಯ, ಒಂದು ವೇಳೆ ಈ ಬೃಹತ್ ಯಂತ್ರ... ಏಷ್ಟೊಂದು ಬೃಹತ್ ಯಂತ್ರಗಳಿವೆ, ಅವು ಈ ಆಧ್ಯಾತ್ಮಿಕ ಶಕ್ತಿಯ ಸ್ಪರ್ಶವಿಲ್ಲದೆ ಚಲಿಸಲು ಅಸಾಧ್ಯ ಒಬ್ಬ ಮಾನವ ಅಥವ ಒಂದು ಮನುಷ್ಯ ಹಾಗಾದರೆ ಹೇಗೆ ಈ ಇಡೀ ಭೌತಿಕ ಜಗತ್ತು ಸ್ವಯಂಚಾಲಿತವಾಗಿದೆ ಎಂದು ನಿರೀಕ್ಷಿಸುತ್ತೆವೆ ಅಥವ ಯಾವುದೇ ನಿಯಂತ್ರಣ ಇಲ್ಲದೆ ನೀವು ಹೇಗೆ ನಿಮ್ಮ ವಾದವನ್ನು ಆ ರೀತಿ ಮಂಡಿಸುತ್ತಿರಾ? ಅದು ಸಾಧ್ಯವಿಲ್ಲ ಆದ್ದರಿಂದ ಕಡಿಮೆ ಬುದ್ಧಿವಂತ ವರ್ಗದ ಜನರು, ಅವರಿಗೆ ಈ ಭೌತಿಕ ಶಕ್ತಿಯನ್ನು ಭಗವಂತನು ಹೇಗೆ ನಿಯಂತ್ರಿಸುತ್ತಿದ್ದಾನೆ ಎಂದು ಅರ್ಥವಾಗುವುದಿಲ್ಲ