KN/Prabhupada 0034 - ಎಲ್ಲರೂ ಅಧಿಕೃತರಾದವರಿಂದ ಜ್ಞಾನವನ್ನು ಪಡೆಯುತ್ತಾರೆ

Revision as of 04:13, 12 July 2019 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)


Lecture on BG 7.1 -- Durban, October 9, 1975

ಅಧ್ಯಾಯ ಏಳು, "ಪರಾತ್ಪರ ಜ್ಞಾನ". ಅದರಲ್ಲಿ ಎರಡು ವಿಧಗಳು ಇವೆ, ಪರಾತ್ಪರ ಮತ್ತು ಸಾಪೇಕ್ಷ . ಇದು ಸಾಪೇಕ್ಷ ಜಗತ್ತು. ಇಲ್ಲಿ ಒಂದು ವಿಷಯಕ್ಕೆ ಇನೊಂದು ಸಂಬಂಧ ಪಟ್ಟ ವಿಷಯ ಇಲ್ಲದೇ ಇದ್ದರೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾವು "ಇಲ್ಲಿ ಮಗ ಇದ್ದಾನೆ" ಎಂದಾಕ್ಷಣ ಆಗ ಅಲ್ಲಿ ತಂದೆ ಇರಲೇ ಬೇಕು. ನಾವು "ಇಲ್ಲಿ ಪತಿ ಇದ್ದಾನೆ" ಎಂದಾಕ್ಷಣ ಆಗ ಅಲ್ಲಿ ಪತ್ನಿ ಇರಲೇ ಬೇಕು. ನಾವು "ಇಲ್ಲಿ ಸೇವಕ ಇದ್ದಾನೆ" ಎಂದಾಕ್ಷಣ ಆಗ ಅಲ್ಲಿ ಸ್ವಾಮಿ ಇರಲೇ ಬೇಕು. ನಾವು "ಇಲ್ಲಿ ಪ್ರಕಾಶ ಇದೆ" ಎಂದಾಕ್ಷಣ ಆಗ ಅಲ್ಲಿ ಕತ್ತಲು ಇರಲೇ ಬೇಕು. ಇದಕ್ಕೆ ಹೇಳುವದು ಸಾಪೇಕ್ಷ ಜಗತ್ತು ಎಂದು. ಒಂದನ್ನು ಅರ್ಥ ಮಾಡಿಕೊಳ್ಳಲು ಇತರ ಸಾಪೇಕ್ಷ ರೀತಿಯ ಮೂಲಕ ಸಾಧ್ಯ. ಆದರೆ ಇನ್ನೊಂದು ಜಗತ್ತು ಇದೆ. ಅದನ್ನು ಪರಾತ್ಪರ ಜಗತ್ತು ಎಂದು ಕರಿಯಲ್ಲಾಗುತ್ತದೆ. ಅಲ್ಲಿ ಸ್ವಾಮಿ ಮತ್ತು ಸೇವಕ ಇಬ್ಬರೂ ಸಮಾನ. ಇಬ್ಬರಲ್ಲಿ ಏನೂ ವ್ಯತ್ಯಾಸವಿಲ್ಲ. ಒಬ್ಬರು ಸ್ವಾಮಿ ಮತ್ತು ಇನ್ನೊಬ್ಬರು ಸೇವಕ ಆದರೂ ಸಹ ಅವರ ಇಬ್ಬರ ಸ್ಥಾನ ಒಂದೇ. ಆದ್ದರಿಂದ ಭಗವತ್ಗೀತೆಯ ಏಳನೇ ಅಧ್ಯಾಯ ಪರಾತ್ಪರ ಜಗತ್ತಿನ ಮತ್ತು ಪರಾತ್ಪರ ಜ್ಞಾನದ ಬಗ್ಗೆ ಸಂಕೇತಿಸುತ್ತದೆ. ಆ ಜ್ಞಾನವನ್ನು ಹೇಗೆ ಪಡೆಯುವುದು ಎಂದು ಪೂರ್ಣ ಪುರುಷೋತ್ತಮನಾದ ಶ್ರೀ ಕೃಷ್ಣನೇ ತಿಳಿಸಿದ್ದಾನೆ. ಶ್ರೀ ಕ್ರಷ್ನ ಪೂರ್ಣ ಪುರುಷೋತ್ತಮ. ಈಶ್ವರಃ ಪರಮ ಕೃಷ್ಣಃ ಸಚ್ಚಿದಾನಂದ ವಿಗ್ರಹಃ ಅನಾದಿರ್ ಆದಿರ್ ಗೋವಿಂದ ಸರ್ವ ಕಾರಣ ಕಾರಣಂ. ಇದೇ ಶ್ರೀ ಕೃಷ್ಣನ ವರ್ಣನೆಯು ಬ್ರಹ್ಮ ದೇವರು ಬರೆದ ಪುಸ್ತಕ ಬ್ರಹ್ಮ ಸಂಹಿತೆಯಲ್ಲಿ ತಿಳಿಸಿದ್ದಾರೆ. ಈ ಪುಸ್ತಕ ಅಧಿಕೃತ. ಈ ಪುಸ್ತಕವನ್ನು ಶ್ರೀ ಚೈತನ್ಯ ಮಹಾಪ್ರಭುಗಳು ದಕ್ಷಿಣ ಭಾರತದಿಂದ ತಂದರು. ಅವರು ದಕ್ಷಿಣ ಭಾರತದಿಂದ ಹಿಂತಿರುಗಿದಮೇಲೆ ಅದನ್ನು ಅವರ ಭಕ್ತರಿಗೆ ಕೊಟ್ಟರು. ಆದರಿಂದ ನಾವು ಈ ಬ್ರಹ್ಮ ಸಂಹಿತಾ ಪುಸ್ತಕವನ್ನು ಅಧಿಕೃತವೆಂದು ಒಪ್ಪುತೇವೇ. ಇದೇ ನಮ್ಮ ಜ್ಞಾನದ ವಿಧಾನ. ನಾವು ಜ್ಞಾನವನ್ನು ಅಧಿಕೃತ ಮೂಲದಿಂದ ಒಪ್ಪುತ್ತೇವೆ. ಪ್ರತಿಒಬ್ಬರೂ ಅಧಿಕೃತ ಮೂಲದಿಂದ ಜ್ಞಾನವನ್ನು ಪಡೆಯುತ್ತಾರೆ, ಆದರೆ ಸರ್ವಸಾಮಾನ್ಯವಾದ ಅಧಿಕ್ರುತದಿನ್ದ, ಜ್ಞಾನವನ್ನು ಪಡೆಯುವ ನಮ್ಮ ವಿಧಾನ ಸ್ವಲ್ಪ ಬೇರೆ. ನಾವು ಒಂದು ಅಧಿಕೃತ ವಿಧಾನ ಒಪ್ಪುತೇವೇ ಎಂದರೆ ಅವರು ಸಹ ಅವರ ಹಿಂದಿನ ಅಧಿಕಾರಿಗಳನ್ನು ಒಪ್ಪುತ್ತಾರೆ. ನಾವು ಸ್ವತಃ ಅಧಿಕೃತ ಅಧಿಕಾರಿಯಾಗಲು ಸಾಧ್ಯವಿಲ್ಲ. ಆಗ ಅದು ಅಪೂರ್ಣ. ನಾವು ಈ ಉದಾಹರಣೆಯನ್ನು ಬಹಳ ಸಲ ಹೇಳಿದ್ದೇವೆ, ಮಗು ತನ್ನ ತಂದೆಯಿಂದ ಕಲಿಯುತ್ತದೆ. ಮಗು ತಂದೆಯನ್ನು ಕೇಳುತ್ತದೆ, "ಅಪ್ಪ, ಈ ಯಂತ್ರ ಏನು?" ಆಗ ತಂದೆ ಹೇಳುತ್ತಾರೆ, "ಮಗು, ಇದು ಮೈಕ್ರೊಫೋನ್." ಆದ್ದರಿಂದ, ಮಗು ತಂದೆಯಿಂದ ಜ್ಞಾನವನ್ನು ಪಡಿಯುತ್ತದೆ. "ಇದು ಮೈಕ್ರೊಫೋನ್." ಆಗ, ಮಗು ಬೇರೆಯವರಿಗೆ, "ಇದು ಮೈಕ್ರೊಫೋನ್" ಎಂದು ಹೇಳುತ್ತದೆ. ಆಗ ಅದು ಸರಿ. ಅದು ಮಗು ಇದ್ದರೂ ಸಹ, ಅದು ಅಧಿಕೃತ ಅಧಿಕಾರಿಯಿಂದ ಜ್ಞಾನವನ್ನು ಪ್ರಾಪ್ತಿಗೊಳಿಸಿದ್ದರಿಂದ, ಅವನು ಹೇಳಿದ್ದು ಸರಿ. ಹಾಗೆಯೇ, ನಾವು ಅಧಿಕೃತ ಮೂಲದಿಂದ ಜ್ಞಾನವನ್ನು ಪ್ರಾಪ್ತಿಮಾಡಿಕೊಂಡರೆ, ನಾನು ಮಗು ಆದರೂ ಸಹ ನಾನು ಹೇಳಿದ್ದು ಸರಿ. ಇದು ಜ್ಞಾನವನ್ನು ಪ್ರಾಪ್ತಿಸುವ ನಮ್ಮಪದ್ದತಿ. ನಾವು ಜ್ಞಾನವನ್ನು ನಿರ್ಮಾಣ ಮಾಡುವುದಿಲ್ಲ. ಆ ವಿಧಾನವು ಭಗವತ್ ಗೀತೆಯ ನಾಲ್ಕನ್ನೆಯ ಅಧ್ಯಾಯದಲ್ಲಿ ಕೊಟ್ಟಿದೆ. ಏವಂ ಪರಂಪರಾ ಪ್ರಾಪ್ತಂ ಇಮಂ ರಾಜರ್ಷಯೋ ವಿದುಃ (ಭ.ಗ. 4.2) ಇದು ಪರಂಪರೆಯ ಪದ್ದತಿ... ಇಮಂ ವಿವಸ್ವತೆ ಯೋಗಂ ಪ್ರೊಕ್ತವಾನ್ ಅಹಂ ಅವ್ಯಯಂ ವಿವಸ್ವಾನ್ ಮನವೇ ಪ್ರಾಹ ಮನೂರ್ ಇಕ್ಷ್ವಾಕವೇ 'ಬ್ರವೀತ್ (ಭ.ಗ. 4.1) ಏವಂ ಪರಂಪರಾ. ಪರಾತ್ಪರ ಜ್ಞಾನವನ್ನು ಪರಾತ್ಪರನಿಂದಲೇ ಪಡೆಯಬಹುದು. ಸಾಪೇಕ್ಷ ಜಗತ್ತಿನ ಯಾವ ವ್ಯಕ್ತಿಯೂ ಪರಾತ್ಪರ ಜಗತ್ತಿನ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ಅದು ಅಸಾಧ್ಯ. ಇಲ್ಲಿ ನಾವು ಪರಾತ್ಪರ ಜಗತನ್ನು ತಿಳಿಯುತ್ತೇವೆ, ಪರಾತ್ಪರ ಜ್ಞಾನವನ್ನು , ಪರಮ ಪುರುಷನಿಂದ, ಪರಾತ್ಪರ ಪುರುಷನಿಂದ. ಪರಾತ್ಪರ ಪುರುಷ ಎಂದರೆ ಅನಾದಿರ್ ಆದಿರ್ ಗೋವಿಂದ (ಬ್ರ. ಸಂ. 5.1) ಅವನೇ ಮೂಲ ಪುರುಷ, ಆದರೆ ಅವನಿಗೆ ಮೂಲವಿಲ್ಲ. ಆದ್ದರಿಂದ ಪರಾತ್ಪರ. ಅವನ ಉತ್ತ್ಪತ್ತಿಗೆ ಬೇರೆ ಯಾರೂ ಕಾರಣವಿಲ್ಲ. ಅವನು ಭಗವಂತ. ಅದಕ್ಕೆ, ಈ ಅಧ್ಯಾಯದಲ್ಲಿ, ಆದ್ದರಿಂದ ಹೇಳಿದೆ "ಶ್ರೀ ಭಗವಾನ್ ಉವಾಚ, ಪರಾತ್ಪರ ಪುರುಷ... ಭಗವಾನ್ ಎಂದರೆ ಪರಾತ್ಪರ, ಪುರುಷ ಯಾರನ್ನೂ ಅವಲಂಬಿಸುವುದಿಲ್ಲ.