KN/Prabhupada 0071 - ದೇವರ ಅಜಾಗರೂಕವಾಗಿ ವ್ಯಯಮಾಡುವ ಮಕ್ಕಳು

Revision as of 02:29, 18 September 2019 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0071 - in all Languages Category:KN-Quotes - 1976 Category:KN-Quotes - C...")
(diff) ← Older revision | Latest revision (diff) | Newer revision → (diff)


Room Conversation With French Commander -- August 3, 1976, New Mayapur (French farm)

ನಾವೆಲ್ಲರು ದೇವರ ಅಜಾಗರೂಕವಾಗಿ ವ್ಯಯಮಾಡುವ ಮಕ್ಕಳು. ನಾವೆಲ್ಲ ದೇವರ ಮಕ್ಕಳು, ಸಂಶಯವಿಲ್ಲ, ಆದರೆ ಪ್ರಸ್ತುತ ಸಮಯದಲ್ಲಿ, ಅಜಾಗರೂಕವಾಗಿ ವ್ಯಯಮಾಡುವವರು. ಎಷ್ಟು ಅಜಾರೂಕರೆಂದರೆ, ನಾವು ನಮ್ಮ ಅಮೂಲ್ಯವಾದ ಬದುಕನ್ನು ಕೂಡ ಹಾಳುಮಾಡಿಕೊಳ್ಳುತ್ತಿದ್ದೇವೆ. ಈ ಅಜಾಗುರುಕತೆಯನ್ನು ತಡೆಗಟ್ಟಲೆಂದು ಈ ಕೃಷ್ಣ ಪ್ರಜ್ಞೆ ಆಂದೋಲನ, ಹಾಗು ಅವರಲ್ಲಿ ಜವಾಬ್ದಾರಿಯ ಅರಿವನ್ನು ಮೂಡಿಸಿ, ದಾಮಕ್ಕೆ ಹಿಂತಿರುಗುವುದು, ಮರಳಿ ಭಗವದ್ದಾಮಕ್ಕೆ. ಇದೇ ಕೃಷ್ಣ ಪ್ರಜ್ಞೆ. ಆದರೆ ಜನರು ಎಷ್ಟು ಅಜಾಗರೂಕರೆಂದರೆ, ದೇವರ ಬಗ್ಗೆ ಮಾತಾಡುತ್ತಲೆ ತಕ್ಷಣ “ಓ, ದೇವರಂತೆ! ಇದು ಮೂರ್ಖತನ” ಎಂದು ನಗುತ್ತಾರೆ. ಇದು ಪರಮ ದುಸ್ಸಾಹಸ. ಭಾರತವು ದೇವರ ಬಗ್ಗೆ ಬಹಳ ಶ್ರದ್ಧೆ ವಹಿಸುತ್ತಿತ್ತು, ಈಗಲು ವಹಿಸುತ್ತಿದೆ. ಈಗಿನ ನಾಯಕರು ಭಾರತಿಯರು ಹಾಳಾಗಿದ್ದಾರೆ ಎಂದುಕೊಂಡಿದ್ದಾರೆ… ಕೇವಲ ದೇವರ ಜ್ಞಾನದಲ್ಲಿರುತ್ತಾರೆ, ಆರ್ಥಿಕ ಬೆಳವಣಿಗೆಯ ಬಗ್ಗೆ ಅಮೇರಿಕದವರು ಮತ್ತು ಯುರೋಪಿಯರ ಹಾಗೆ ಆಲೋಚಿಸುತ್ತಿಲ್ಲ ಎಂದು.

ಇದು ಸ್ಥಿತಿ, ಬಹಳ ಕಠಿಣವಾಗಿದೆ, ಆದರು ನಾವು ಮಾನವಕುಲಕ್ಕೆ ಏನಾದರು ಸಹಾಯ ಮಾಡಬಹುದು, ಕೃಷ್ಣ ಪ್ರಜ್ಞೆ ಆಂದೋಲನದ ಬೋಧನೆಯಿಂದ. ಹಾಗು ಯಾರು ಭಾಗ್ಯವಂತರೋ ಅವರು ಬರುತ್ತಾರೆ, ಶ್ರದ್ಧೆಯಿಂದ ಸ್ವೀಕರಿಸುತ್ತಾರೆ. ಈ ಅಜಾರೂಕ ವ್ಯಯಶೀಲ ಮಕ್ಕಳು… ಹಲವಾರು ಉದಾರಣೆಗಳಿವೆ. ಉದಾಹರಣೆಗೆ, ಪೆಟ್ರೋಲು ಭಂಡಾರವಿದೆ, ಕುದುರೆಗಳನ್ನು ಬಳಸದೆ ಕಾರುಗಳು ಚಲಿಸಬಹುದೆಂಬ ಮಾಹಿತಿ ಪಡೆದರು. ಕೋಟ್ಯಾಂತರ ಕಾರುಗಳನ್ನು ತಯಾರಿಸಿ ಇಂಧನ ಭಂಡಾರವನ್ನು ಹಾಳುಮಾಡಿದರು. ಇದು ಅಜಾಗರೂಕತೆ ಎಂದರೆ. ಮತ್ತು ಅದು ಖಾಲಿಯಾದನಂತರ ಅಳುತ್ತಾರೆ. ಅದು ಖಾಲಿಯಾಗುತ್ತದೆ. ಇದು ನಡೆಯುತ್ತಿದೆ. ಅಜಾಗರೂಕತೆ. ಒಬ್ಬ ಅಜಾಗರೂಕ ಮಗ ತನ್ನ ತಂದೆ ಬಿಟ್ಟುಹೋದ ಆಸ್ತಿಯನ್ನು… ಬಳಸು, ಬಳಸು. ದೊರಕಿದಕೂಡಲೆ. ಅದು ಖಾಲಿಯಾದಂತೆ, ಅಷ್ಟೆ. ಅದುವೇ ಅಜಾಗರೂಕತೆ. ದೇಹದಲ್ಲಿ ಶಕ್ತಿಯಿದೆ, ಮೈಥುನ ಸುಖದ ಸ್ವಲ್ಪ ರುಚಿ ಕಂಡಕೂಡಲೆ, “ಓ, ಖರ್ಚುಮಾಡು, ಖರ್ಚುಮಾಡು”, ಎಲ್ಲ ಶಕ್ತಿಯೂ ವ್ಯಯ. ಮೆದುಳು ಖಾಲಿಯಾಗುತ್ತದೆ. ಹದಿನೆರೆಡು ವಯಸಲ್ಲಿ ಶುರುವಾಗಿ ಮೂವತ್ತು ವಯಸೊಳಗೆ ಎಲ್ಲ ಮುಗಿಯಿತು. ಇನ್ನು ಅವನು ನಪುಂಸಕ. ನನ್ನ ಬಾಲ್ಯದಲ್ಲಿ, ಅಂದರೆ ಸುಮಾರು ಎಂಬತ್ತು ವರ್ಷದ ಹಿಂದೆ, ಅಥವ ನೂರು ವರ್ಷಗಳ ಹಿಂದೆ ಮೋಟಾರ್ ಕಾರುಗಳು ಇರಲ್ಲಿಲ್ಲ. ಆದರೆ ಈಗ, ಎಲ್ಲಿಗೆ ಹೋದರು, ಯಾವುದೇ ದೇಶಕ್ಕೆ, ಅಲ್ಲಿ ಸಾವಿರಾರು, ಕೋಟ್ಯಾಂತರ ಕಾರುಗಳನ್ನು ನೋಡಬಹುದು. ಇದು ಅಜಾರೂಕತೆಯೆಂದರೆ. ಶತಮಾನದ ಹಿಂದೆ ಕಾರು ಇಲ್ಲವೆಂದರೂ ನಡೆಯುತ್ತಿತು, ಆದರೆ ಈಗ ಅವರಿಗೆ ಕಾರು ಇಲ್ಲದೆ ಬಾಳಲಾಗುವುದಿಲ್ಲ. ಹೀಗೆ ಅನಾವಶ್ಯಕವಾಗಿ ತಮ್ಮ ದೈಹಿಕ ಅಥವ ಐಹಿಕ ಅಗತ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು ಅಜಾಗರೂಕತೆ. ಹಾಗು ಯಾವ ನಾಯಕರು ಈ ಅಜಾಗರೂಕತೆಯನ್ನು ಪ್ರೋತ್ಸಹಿಸುತ್ತಾರೋ ಅದನ್ನು ಉತ್ತಮ ನಾಯಕತ್ವವೆಂದು ಹೇಳಲಾಗುತ್ತಿದೆ. ಮತ್ತು ಯಾರು, ”ಈ ಮೂರ್ಖತ್ವವನ್ನು ನಿಲ್ಲಿಸಿ, ಕೃಷ್ಣ ಪ್ರಜ್ಞೆಗೆ ಬನ್ನಿ” ಎನ್ನುತ್ತಾರೋ ಅವರನ್ನು ಲೆಕ್ಕಿಸುವುದಿಲ್ಲ. ಅಂಧಾ ಯಥಾಂದೈರ್ ಉಪನೀಯಮಾನಾಸ್ ತೆ ಪೀಶ-ತಂತ್ರ್ಯಾಮ್ ಉರು ದಾಮ್ನಿ ಬದ್ದಾಹ (ಶ್ರೀ. ಭಾ 7.5.31). ಇದನ್ನೇ “ಕುರುಡು ನಾಯಕ ಕರುಡು ಅನುಯಾಯಿಗಳನ್ನು ಮುನ್ನಡೆಸುವುದು” ಎಂದು ಹೇಳುತ್ತಾರೆ. ಪ್ರಕೃತಿಯ ಕಠಿಣ ಶಿಸ್ತಿನ ನಿಯಮಗಳು ಅವರಿಬ್ಬರನೂ ಬಂದಿಸಿದೆಯೆಂದು ಅವರಿಗೆ ತಿಳಿಯದು. (ವಿರಾಮ)

ಪ್ರಕೃತಿಯ ನಿಯಮಗಳು ಹೇಗೆ ಕೆಲಸಮಾಡುತ್ತಿವೆಯೆಂದು. ಅವರು ಸಂಪೂರ್ಣವಾಗಿ ಅಜ್ಞಾದಲ್ಲಿ ಮುಳುಗಿದ್ದಾರೆ. ಅವರಿಗೆ ತಿಳಿಯದು. ಇದು ಆಧುನಿಕ ನಾಗರಿಕತೆ. ಪ್ರಕೃತಿಯ ನಿಯಮಗಳು ಅದರ ರೀತಿಯಂತೆಯೇ ಕೆಲಸಮಾಡಬೇಕು. ನೀವು ಗಮನಿಸಿದರೂ ಅಥವ ಗಮನಿಸದಿದ್ದರೂ, ಅದು ನಿಮ್ಮ ವ್ಯವಹಾರ, ಆದರೆ ಪ್ರಕೃತಿಯ ನಿಯಮಗಳು ಕಾರ್ಯನಿರ್ವಹಿಸುತ್ತವೆ. ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ (ಭ.ಗೀ 3.27). ಆದರೆ ಈ ದೂರ್ತರಿಗೆ ಪ್ರಕೃತಿಯ ನಿಯಮಗಳು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯದು. ಪ್ರಕೃತಿಯ ನಿಯಮಗಳನ್ನು ಜಯಿಸಲು ಮೂರ್ಖರಂತೆ ಕೃತಕವಾಗಿ ಯತ್ನಿಸುತ್ತಿದ್ದಾರೆ. ಇದು ವಿಜ್ಞಾನ, ಮೂರ್ಖರ ವಿಜ್ಞಾನ, ಇದು ಅಸಾಧ್ಯ, ಆದರು ಪ್ರಯತ್ನಿಸುತ್ತಿದ್ದಾರೆ. ಇದು ದೂರ್ತತನ. ಮೂರ್ಖತ್ವ. ವಿಜ್ಞಾನಿಗಳು ಹಾಗೆ ಹೇಳುದಿಲ್ಲವೇನು? “ಜಯಿಸಲು ಪ್ರಯತ್ನಿಸುತ್ತಿದ್ದೇವೆ.” ದೂರ್ತ, ನೀನು ಎಂದಿಗೂ ಅದನ್ನು ಮಾಡಲಾಗುವುದಿಲ್ಲ. ಅದರೆ ಈ ದೂರ್ತತನ ಇನ್ನು ನಡೆಯುತ್ತಲೇ ಇದೆ. ಹಾಗು ಅವರೆಲ್ಲರು ಶ್ಲಾಘಿಸುತ್ತಿದ್ದಾರೆ, “ಓ, ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ.” “ಓ, ನೀವು ಚಂದ್ರ ಮಂಡಲಕ್ಕೆ ಹೋಗುತ್ತಿರುವಿರಿ.” ಆದರೆ ಎಲ್ಲಾ ಪ್ರಯತ್ನಗಳ ನಂತರ, ದ್ರಾಕ್ಷಿ ಹುಳಿಯಾಗಿದೆ, “ಅದು ಪ್ರಯೋಜನವಿಲ್ಲ.” ಅಷ್ಟೆ. ಈ ಕಥೆ ಗೊತ್ತಿದೆಯೆ? ನರಿ? ದ್ರಾಕ್ಷಿಯನ್ನು ತಿನ್ನಲು ಎಗರಿತು, ಎಗರಿತು, ಎಗರಿತು. ಅಸಫಲವಾದಾಗ ಹೇಳಿತು, “ಓ, ಇದು ಉಪಯೋಗವಿಲ್ಲ. ಇದು ಹುಳಿಯಾಗಿದೆ, ಪ್ರಯೋಜನವಿಲ್ಲ.” (ನಗು) ಇವರೂ ಹಾಗೇ ಮಾಡುತ್ತಿದ್ದಾರೆ. ನರಿಗಳು ಎಗರುತ್ತಿವೆ ಅಷ್ಟೆ. ನಾವು ಈ ನರಿಗಳು ಅಸಫಲವಾಗಿ ಎಗರುವುದನ್ನು ನೋಡುತ್ತಿದ್ದೇವೆ. (ನಗು) ಆದ್ದರಿಂದ ನಾವು ಜನರಿಗೆ ಈ ಪೆದ್ದ ನರಿಗಳನ್ನು ಅನುಕರಿಸಬೇಡಿ ಎಂದು ಎಚ್ಚರಿಸುತ್ತಿದ್ದೇವೆ. ವಿವೇಕವಂತರಾಗಿರಿ, ಹಾಗು ಕೃಷ್ಣ ಪ್ರಜ್ಞಾವಂತರಾಗಿರಿ. ಅದು ನಿಮ್ಮ ಜೀವನವನ್ನು ಸಫಲಗೊಳಿಸುತ್ತದೆ.