KN/Prabhupada 0081 - ಸೂರ್ಯ ಗ್ರಹದಲ್ಲಿ ದೇಹಗಳು ಅಗ್ನಿಮಯವಾಗಿವೆ

Revision as of 12:49, 15 December 2019 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0081 - in all Languages Category:KN-Quotes - 1966 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 2.13 -- New York, March 11, 1966

ಇಲ್ಲಿ ಧೀರ, ಧೀರನೆಂದು ಕರೆಯಲಾಗಿದೆ.

ದೇಹಿನೋ ಅಸ್ಮಿನ್ ಯಥಾ ದೇಹೇ
ಕೌಮಾರಂ ಯೌವನಂ ಜರಾ
ತಥಾ ದೇಹಾಂತರ ಪ್ರಾಪ್ತಿರ್
ಧೀರಸ್ ತತ್ರ ನ ಮುಹ್ಯತಿ
(ಭ.ಗೀ 2.13)

ದೇಹಿನಃ. ದೇಹಿನಃ ಅಂದರೆ, “ಯಾರು ಈ ಭೌತಿಕ ದೇಹವನ್ನು ಸ್ವೀಕರಿಸಿರುವರೋ.” ಅಸ್ಮಿನ್. ಅಸ್ಮಿನ್ ಅಂದರೆ “ಈ ಲೋಕದಲ್ಲಿ” ಅಥವ “ಈ ಜನ್ಮದಲ್ಲಿ.” ಯಥಾ, “ಹೇಗೋ”. ದೇಹೇ. ದೇಹೇ ಅಂದರೆ “ಈ ದೇಹದಲ್ಲಿ.” ದೇಹಿನಃ. ಅಂದರೆ “ಯಾರು ಈ ಭೌತಿಕ ದೇಹವನ್ನು ಸ್ವೀಕರಿಸಿರುವರೋ”, ಹಾಗು ದೇಹೇ ಅಂದರೆ “ಈ ದೇಹದಲ್ಲಿ.” ಆದ್ದರಿಂದ ನಾನು ಈ ದೇಹದಲ್ಲಿ ವಾಸವಾಗಿದ್ದೇನೆ. ಆದರೆ ನಾನು ಈ ದೇಹವಲ್ಲ. ಹೇಗೆ ನೀವು ಈ ಅಂಗಿ ಹಾಗು ಮೇಲಂಗಿ ಒಳಗೆ ಇರುವಿರೋ, ಹಾಗೆಯೇ ನಾನು ಈ ದೇಹದಲ್ಲಿರುವೆ, ಈ ಸ್ಥೂಲ ಶರೀರ ಮತ್ತು ಸೂಕ್ಷ್ಮ ಶರೀರ. ಈ ಸ್ಥೂಲ ಶರೀರವು ಭೂಮಿ, ಜಲ, ಅಗ್ನಿ, ವಾಯು ಹಾಗು ಆಕಾಶದಿಂದ ಮಾಡಿರುವುದು. ಈ ಸ್ಥೂಲ ಶರೀರ, ನಮ್ಮ ಈ ಭೌತಿಕ ಶರೀರ. ಇಲ್ಲಿ, ಈ ಗ್ರಹದಲ್ಲಿ, ಭೂಮಿಯು ಪ್ರಮುಖ. ಎಲ್ಲೆ ಇರಲಿ, ಈ ದೇಹ, ಭೌತಿಕ ದೇಹ, ಪಂಚಭೂತಗಳಿಂದ ಮಾಡಲಾಗಿರುತ್ತದೆ: ಭೂಮಿ, ಜಲ, ಅಗ್ನಿ, ವಾಯು ಹಾಗು ಆಕಾಶ. ಇವು ಐದು ಪದಾರ್ಥಗಳು. ಈ ಕಟ್ಟಡ ಇದ್ದ ಹಾಗೆ. ಇಡೀ ಕಟ್ಟಡವು ಭೂಮಿ, ಜಲ ಹಾಗು ಅಗ್ನಿಯಿಂದ ಮಾಡಲಾಗಿದೆ. ಸ್ವಲ್ಪ ಮಣ್ಣನ್ನು ತೆಗೆದು, ಇಟ್ಟಿಗೆಯನ್ನಾಗಿ ಮಾಡಿ, ಬೆಂಕಿಯಲ್ಲಿ ಸುಟ್ಟು… ಅಂದರೆ ಭೂಮಿಗೆ ಜಲವನ್ನು ಸೇರಿಸಿ, ಅದಕ್ಕೆ ಇಟ್ಟಿಗೆಯ ಆಕಾರ ಕೊಟ್ಟು, ಅಗ್ನಿಯಲ್ಲಿ ಸುಟ್ಟು, ಅದು ಸಾಕಷ್ಟು ಗಟ್ಟಿಯಾದಾಗ, ದೊಡ್ಡ ಕಟ್ಟಡ ಕಟ್ಟುತ್ತೇವೆ. ಆದ್ದರಿಂದ ಅದು ಕೇವಲ ಭೂಮಿ, ಜಲ ಮತ್ತು ಅಗ್ನಿಯ ಒಂದು ಪ್ರದರ್ಶನ. ಅಷ್ಟೇ. ಅಂತೆಯೇ, ನಮ್ಮ ದೇಹವೂ ಕೂಡ ಅದೇ ರೀತಿಯಿಂದ ಮಾಡಲಾಗಿದೆ: ಭೂಮಿ, ಜಲ, ಅಗ್ನಿ, ವಾಯು ಹಾಗು ಆಕಾಶ. ವಾಯು… ವಾಯು ಬೀಸುತ್ತಿದೆ, ಉಸಿರಾಡುತ್ತಿದ್ದೇವೆ. ವಾಯು ಇರುತ್ತದೆ. ಈ ಚರ್ಮ ಭೂಮಿಯಂತೆ, ಹೊಟ್ಟೆಯಲ್ಲಿ ಅಗ್ನಿಯಿದೆ. ಉಷ್ಣವಿಲ್ಲದೆ ಯಾವುದೂ ಜೀರ್ಣವಾಗುವುದಿಲ್ಲ. ಗೊತ್ತಾ? ಉಷ್ಣತೆ ಕಡಿಮೆ ಆಗುತ್ತಿದಂತಯೇ, ನಿಮ್ಮ ಜೀರ್ಣ ಶಕ್ತಿ ಕುಗ್ಗುತ್ತದೆ. ಹಲವಾರು ವಿಷಯಗಳು. ಇದುವೇ ವ್ಯವಸ್ಥೆ. ಈಗ ಈ ಗ್ರಹದಲ್ಲಿ ನಮಗೆ ಭೂಮಿಯು ಪ್ರಮುಖವಾಗಿರುವ ದೇಹ ದೊರಕಿದೆ. ಅಂತೇಯೇ ಇತರ ಗ್ರಹಗಳಲ್ಲಿ ಜಲ ಪ್ರಮುಖವಾಗಿರುತ್ತದೆ, ಎಲ್ಲೋ ಅಗ್ನಿ ಪ್ರಮುಖವಾಗಿರುತ್ತದೆ. ಸೂರ್ಯ ಗ್ರಹದಲ್ಲಿ, ದೇಹಗಳು… ಅಲ್ಲೂ ಜೀವಾತ್ಮಗಳಿರುವರು, ಆದರೆ ಅವರ ದೇಹ ಅಗ್ನಿಮಯವಾಗಿರುತ್ತದೆ. ಅವರು ಅಗ್ನಿಯಲ್ಲಿ ವಾಸಿಸಬಲ್ಲರು. ಅವರು ಅಗ್ನಿಯಲ್ಲಿ ವಾಸಿಸಬಲ್ಲರು. ಹಾಗೆಯೇ, ವರುಣಲೋಕ, ಅಂದರೆ ಶುಕ್ರಗ್ರಹದಲ್ಲಿ… ಎಲ್ಲಾ ಗ್ರಹಗಳಲ್ಲಿಯು, ಜೀವಿಗಳು ವಿಭಿನ್ನ ತರಹದ ದೇಹವನ್ನು ಪಡೆದಿರುತ್ತಾರೆ. ಇಲ್ಲಿಯೂ ನೀವು ಕಾಣಬಹುದು… ನೀರಿನಲ್ಲಿ, ಜಲಚರಗಳು ಒಂದು ವಿಭಿನ್ನ ರೀತಿಯ ದೇಹವನ್ನು ಹೊಂದಿವೆ. ಎಷ್ಟೋ ವರ್ಷಗಳ ಕಾಲ ಜಲಚರಗಳು ಆರಾಮವಾಗಿ ನೀರಿನೊಳಗೆ ಬಾಳುತ್ತವೆ. ಆದರೆ ನೀವು ಅವಗಳನ್ನು ನೆಲಕ್ಕೆ ಎಳದರೆ ತಕ್ಷಣ ಅವು ಮರಣಿಸುತ್ತವೆ. ಹಾಗೆಯೇ, ನೀವು ನೆಲದ ಮೇಲೆ ಆರಾಮವಾಗಿರುವಿರಿ, ಆದೆರೆ ನೀರಿನಲ್ಲಿ ಹಾಕಿದರೆ ಮರಣಿಸುವಿರಿ. ಏಕೆಂದರೆ ನಿಮ್ಮ ದೇಹ, ದೇಹದ ನಿರ್ಮಾಣ ವಿಭಿನ್ನ. ಅವನ ದೇಹ, ಅದರ ನಿರ್ಮಾಣ ವಿಭಿನ್ನ. ಪಕ್ಷಿಯ ದೇಹ… ಪಕ್ಷಿಯು ತೂಕವಾಗಿದ್ದರೂ ಹಾರುತ್ತದೆ, ಆದರೆ ಅದನ್ನು ಹಾರುವ ಯಂತ್ರವಾಗಿ ಮಾಡಿದವನು ಭಗವಂತ. ಆದರೆ ನಿಮ್ಮ ಮಾನವಕೃತ ಯಂತ್ರ, ಅದು ಕುಸಿದು ಬೀಳುತ್ತದೆ. ನೋಡಿದಿರಾ? ಏಕೆಂದರೆ ಅದು ಕೃತಕ.

ಇದು ಇಲ್ಲಿರುವ ವ್ಯವಸ್ಥೆ. ಪ್ರತಿಯೊಂದು ಜೀವಿಯು ಒಂದು ಪ್ರತ್ಯೇಕವಾದ ದೇಹವನ್ನು ಪಡೆದಿದೆ. ದೇಹಿನೋ ಅಸ್ಮಿನ್ ಯಥಾ ದೇಹೇ (ಭ.ಗೀ 2.13). ಆ ದೇಹದ ಗುಣವೇನು? ಈಗ, ನಮ್ಮ ದೇಹವನ್ನು ಹೇಗೆ ಬದಲಾಯಿಸುವುದು ಎಂದು ಇಲ್ಲಿ ವಿವರಿಸಲಾಗಿದೆ. ಹೇಗೆ… ಆದರೆ ಅದು ನಮಗೆ ಒಂದು ಕಷ್ಟವಾದ ಸಮಸ್ಯೆ ಏಕೆಂದರೆ ನಾವು ಈ ದೇಹವೇ ಆತ್ಮವೆಂಬ ಪರಿಕಲ್ಪನೆಯಲ್ಲಿ ಮಗ್ನರಾಗಿದ್ದೇವೆ. ಆಧ್ಯಾತ್ಮಿಕ ಜ್ಞಾನದ ಪ್ರಥಮ ತಿಳುವಳಿಕೆಯು, “ನಾನು ಈ ದೇಹವಲ್ಲ”, ಎಂಬುದು. “ನಾನು ಈ ದೇಹವಲ್ಲ”, ಎಂಬುದನ್ನು ದೃಢವಾಗಿ ಮನವರಿಕೆಯಾಗುವವರೆಗು, ಅವನು ಆಧ್ಯಾತ್ಮಿಕ ಹಾದಿಯಲ್ಲಿ ಮುಂದುವರಿಯಲಾಗುವುದಿಲ್ಲ. ಆದ್ದರಿಂದ ಭಗವದ್ಗೀತೆಯ ಪ್ರಥಮ ಪಾಠವನ್ನು ಈ ರೀತಿ ಅರ್ಥಮಾಡಿಕೊಳ್ಳಬೇಕು. ದೇಹೀನೋ ಅಸ್ಮಿನ್. ದೇಹಿ, ಅಂದರೆ ಆತ್ಮ. ಆತ್ಮ, ದೇಹೀ ಅಂದರೆ ಆತ್ಮ. ಯಾರು ಈ ದೇಹವನ್ನು ಸ್ವೀಕರಿಸಿರುವನೋ, ಭೌತಿಕ ದೇಹ, ಅವನನ್ನು ದೇಹೀ ಎನ್ನುತ್ತಾರೆ. ಅಸ್ಮಿನ್, ಅವನಿದ್ದಾನೆ. ಅವನು ಇರುವನು, ಆದರೆ ದೇಹ ಬದಲಾಗುತ್ತಿದೆ.