KN/Prabhupada 0085 - ಜ್ಞಾನದ ಸಂಸ್ಕೃತಿಯೆಂದರೆ ಆಧ್ಯಾತ್ಮಿಕ ಜ್ಞಾನ

Revision as of 16:12, 2 February 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0085 - in all Languages Category:KN-Quotes - 1970 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on Sri Isopanisad, Mantra 9-10 -- Los Angeles, May 14, 1970

"ಜ್ಞಾನದ ಸಂಸ್ಕೃತಿಯಿಂದ ಒಂದು ಫಲಿತಾಂಶವನ್ನು ಪಡೆಯಲಾಗುತ್ತದೆ ಎಂದು ಬುದ್ಧಿವಂತರು ನಮಗೆ ವಿವರಿಸಿದ್ದಾರೆ, ಮತ್ತು ಅಜ್ಞಾನದ ಸಂಸ್ಕೃತಿಯಿಂದ ವಿಭಿನ್ನ ಫಲಿತಾಂಶವನ್ನು ಪಡೆಯಲಾಗುತ್ತದೆ ಎಂದು ಹೇಳಲಾಗುತ್ತದೆ."

ಆದ್ದರಿಂದ ನಿನ್ನೆ ನಾವು ಅಜ್ಞಾನದ ಸಂಸ್ಕೃತಿ ಯಾವುದು ಮತ್ತು ಜ್ಞಾನದ ಸಂಸ್ಕೃತಿ ಏನು ಎಂದು ಸ್ವಲ್ಪ ಮಟ್ಟಿಗೆ ವಿವರಿಸಿದ್ದೇವೆ. ಜ್ಞಾನದ ಸಂಸ್ಕೃತಿ ಎಂದರೆ ಆಧ್ಯಾತ್ಮಿಕ ಜ್ಞಾನ. ಅದು ನಿಜವಾದ ಜ್ಞಾನ. ಹಾಗು ಸೌಕರ್ಯಗಳಿಗಾಗಿ ಜ್ಞಾನದ ಪ್ರಗತಿ, ಅಥವಾ ಈ ಭೌತಿಕ ದೇಹವನ್ನು ರಕ್ಷಿಸಲು, ಅದು ಅಜ್ಞಾನದ ಸಂಸ್ಕೃತಿ. ಏಕೆಂದರೆ ನೀವು ಈ ದೇಹವನ್ನು ರಕ್ಷಿಸಲು ಏನೇ ಪ್ರಯತ್ನಿಸಿದರು, ಅದರ ಸಹಜ ಕ್ರಮದಲ್ಲಿ ನಡೆಯುತ್ತದೆ. ಏನದು? ಜನ್ಮ-ಮೃತ್ಯು-ಜರಾ-ವ್ಯಾಧಿ (ಭ.ಗೀ 13.9). ಈ ದೇಹವನ್ನು ನೀವು ಪುನರಾವರ್ತಿತ ಜನನ ಮತ್ತು ಮರಣದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ, ಮತ್ತು ಪ್ರಕಟವಾದಾಗ, ರೋಗ ಮತ್ತು ವೃದ್ಧಾಪ್ಯ. ಆದರೆ ಜನರು ಈ ದೇಹದ ಜ್ಞಾನವನ್ನು ಬೆಳೆಸುವಲ್ಲಿ ತುಂಬಾ ಕಾರ್ಯನಿರತರಾಗಿದ್ದಾರೆ, ಈ ದೇಹವು ಕ್ಷೀಣಿಸುತ್ತಿದೆ ಎಂದು ಪ್ರತಿ ಕ್ಷಣವು ನೋಡುತ್ತಿದ್ದರೂ ಕೂಡ. ದೇಹದ ಮರಣ ಹುಟ್ಟಿದ ಕೂಡಲೇ ದಾಖಲಾಗುತ್ತದೆ. ಅದು ಸತ್ಯ. ಆದ್ದರಿಂದ ನೀವು ಈ ದೇಹದ ಸಹಜ ಹಾದಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ನೀವು ದೇಹದ ಪ್ರಕ್ರಿಯೆಯನ್ನು ಪೂರೈಸಬೇಕು, ಅವುಗಳು ಜನ್ಮ, ಮೃತ್ಯು, ಜರಾ ಮತ್ತು ವ್ಯಾಧಿ.

ಭಾಗವತಂ ಹೇಳುತ್ತದೆ, ಯಸ್ಯಾತ್ಮ-ಬುದ್ಧಿಃ ಕುಣಪೆ ತ್ರಿ-ಧಾತುಕೆ (ಶ್ರೀ.ಭಾ 10.84.13). ಈ ದೇಹವು ಮೂರು ಪ್ರಾಥಮಿಕ ಅಂಶಗಳಿಂದ ಮಾಡಲ್ಪಟ್ಟಿದೆ: ಕಫ, ಪಿತ್ತ ಮತ್ತು, ವಾತ. ಅದು ವೈದಿಕ ಪದ್ಧತಿ, ಮತ್ತು ಆಯುರ್ವೇದ ಚಿಕಿತ್ಸೆ. ಈ ದೇಹವು ಕಫ, ಪಿತ್ತ, ಮತ್ತು ವಾತದ ಚೀಲವಾಗಿದೆ. ವೃದ್ಧಾಪ್ಯದಲ್ಲಿ ಗಾಳಿಯ ಪ್ರಸರಣವು ತೊಂದರೆಗೊಳಗಾಗುತ್ತದೆ; ಆದ್ದರಿಂದ ವೃದ್ಧನು ಸಂಧಿವಾತವಾಗುತ್ತಾನೆ, ಅನೇಕ ದೈಹಿಕ ಕಾಯಿಲೆಗಳು. ಆದ್ದರಿಂದ ಭಗವತಂ ಹೇಳುತ್ತದೆ, "ಪಿತ್ತ, ಕಫ, ಮತ್ತು ವಾತದ ಈ ಸಂಯೋಜನೆಯನ್ನು ಸ್ವಯಂ ಎಂದು ಯಾರು ಒಪ್ಪಿಕೊಂಡಿರುವನೋ ಅವನ್ನೊಬ್ಬ ಕತ್ತೆ." ಹೌದು. ಇದು ಸತ್ಯ. ಪಿತ್ತ, ಕಫ, ಮತ್ತು ವಾತದ ಈ ಸಂಯೋಜನೆಯನ್ನು ಸ್ವಯಂ ಎಂದು ಒಪ್ಪಿಕೊಂಡರೆ... ಒಬ್ಬ ಬುದ್ಧಿವಂತ ವ್ಯಕ್ತಿ, ಒಬ್ಬ ಮಹಾನ್ ತತ್ವಜ್ಞಾನಿ, ಬಹಳ ಶ್ರೇಷ್ಠ ವಿಜ್ಞಾನಿ, ಅವನು ಪಿತ್ತ, ಕಫ, ಮತ್ತು ವಾತದ ಸಂಯೋಜನೆ ಎಂದು ಅರ್ಥವೇ? ಇಲ್ಲ. ಇದು ತಪ್ಪು. ಅವನು ಈ ಪಿತ್ತ, ಅಥವಾ ಕಫ, ಅಥವಾ ಗಾಳಿಯಿಂದ ಭಿನ್ನ. ಅವನು ಆತ್ಮ. ಮತ್ತು ತನ್ನ ಕರ್ಮಾನುಸಾರವಾಗಿ, ಅವನು ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾನೆ. ಆದ್ದರಿಂದ ಅವರಿಗೆ ಈ ಕರ್ಮ, ಕರ್ಮದ ನಿಯಮ ಅರ್ಥವಾಗುವುದಿಲ್ಲ. ನಾವು ಅನೇಕ ವಿಭಿನ್ನ ವ್ಯಕ್ತಿತ್ವಗಳನ್ನು ಏಕೆ ಕಾಣುತ್ತೇವೆ?