KN/Prabhupada 0094 - ಕೃಷ್ಣನ ಮಾತುಗಳನ್ನು ಪುನಾರಾರ್ವತಿಸುವುದೆ ನಮ್ಮ ಕೆಲಸ

Revision as of 00:58, 17 March 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0094 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 1.20 -- London, July 17, 1973

ಅಶುದ್ಧ ಜೀವನದಲ್ಲಿ ದೇವರ ಬಗ್ಗೆ ವಿಚಾರಿಸಲು, ಅಥವಾ ಅರ್ಥಮಾಡಿಕೊಳ್ಳಲ್ಲು ಸಾಧ್ಯವಿಲ್ಲ. ನಾವು ಈ ಪದ್ಯವನ್ನು ಹಲವಾರು ಬಾರಿ ಪುನರಾವರ್ತಿಸಿದ್ದೇವೆ,

ಯೇಷಾಂ ತ್ವ ಅಂತ-ಗತಂ
ಪಾಪಂ ಜನಾನಾಂ ಪುಣ್ಯ-ಕರ್ಮಣಾಮ್
ತೇ ದ್ವಂದ್ವ-ಮೋಹ-ನಿರ್ಮುಕ್ತಾ
ಭಜಂತೇ ಮಾಂ ದೃಢ-ವ್ರತಾಃ
(ಭ.ಗೀ 7.28)

ಪಾಪಿಗಳು, ಪಾಪಿ ಪುರುಷರು, ಅವರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ಅರ್ಥಮಾಡಿಕೊಳ್ಳುವುದು ಏನೆಂದರೆ, "ಕೃಷ್ಣನು ಭಗವಾನ್; ಆದ್ದರಿಂದ ನಾನು ಕೂಡ ಭಗವಾನ್. ಅವನು ಒಬ್ಬ ಸಾಮಾನ್ಯ ಮನುಷ್ಯ, ಬಹುಶಃ ಸ್ವಲ್ಪ ಶಕ್ತಿಶಾಲಿ, ಐತಿಹಾಸಿಕವಾಗಿ ಬಹಳ ಪ್ರಸಿದ್ಧ ವ್ಯಕ್ತಿ. ಆದ್ದರಿಂದ ಅವನು ಕೇವಲ ಒಬ್ಬ ಮನುಷ್ಯ. ನಾನು ಕೂಡ ಮನುಷ್ಯ. ಆದ್ದರಿಂದ ನಾನೂ ಕೂಡ ದೇವರಲ್ಲವೇ?" ಇದು ಅಭಕ್ತರ, ಭಕ್ತರಲ್ಲದವರ, ಮತ್ತು ಪಾಪಿಗಳ ತೀರ್ಮಾನ.

ಆದ್ದರಿಂದ ಯಾರಾದರೂ ತನ್ನನ್ನು ತಾನೇ ದೇವರು ಎಂದು ಘೋಷಿಸಿಕೊಳ್ಳುತ್ತಿದ್ದರೆ, ಅವನು ಮಹಾ ಪಾಪಿ ಎಂದು ತಕ್ಷಣ ನೀವು ತಿಳಿದುಕೊಳ್ಳಬೇಕು. ಮತ್ತು ನೀವು ಅವನ ವಯಕ್ತಿಕ ಜೀವನವನ್ನು ಅಧ್ಯಯನ ಮಾಡಿದರೆ, ಅವನು ಮೊದಲ ದರ್ಜೆಯೆ ಪಾಪಿ ಮನುಷ್ಯ ಎಂದು ನೋಡುತ್ತೀರಿ. ಇದು ಪರೀಕ್ಷೆ. ಇಲ್ಲದಿದ್ದರೆ ನಾನು ದೇವರು ಎಂದು ಯಾರೂ ಹೇಳುವುದಿಲ್ಲ. . ಇದು ಸುಳ್ಳು ಪ್ರಾತಿನಿಧ್ಯ. ಯಾವ ಧರ್ಮನಿಷ್ಠನೂ ಅದನ್ನು ಮಾಡುವುದಿಲ್ಲ. ಅವನಿಗೆ ತಿಳಿದಿದೆ, "ನಾನು ಏನು? ನಾನು ಸಾಮಾನ್ಯ ಮನುಷ್ಯ. ದೇವರ ಸ್ಥಾನವನ್ನು ವಹಿಸುವೆ ಎಂದು ಹೇಗೆ ಹಕ್ಕು ಸಾದಿಸಲಿ?" ಮತ್ತು ಅವರು ಧೂರ್ತರಲ್ಲಿ ಪ್ರಸಿದ್ಧರಾಗುತ್ತಾರೆ.

ಇದನ್ನು ಶ್ರೀಮದ್ ಭಾಗವತಂನಲ್ಲಿ ಹೇಳಿರುವಂತೆ, ಶ್ವ-ವಿಡ್-ವರಾಹೋಷ್ಟ್ರ ಖರೈಃ (ಶ್ರೀ.ಭಾ 2.3.19). ಆ ಪದ್ಯ ಯಾವುದು? ಉಷ್ಟ್ರ-ಖರೈಃ, ಸಂಸ್ತುತಃ ಪುರುಷಃ ಪಶುಃ. ಈ ಜಗತ್ತಿನಲ್ಲಿ ನಾವು ಅನೇಕ ಮಹಾನ್ ಪುರುಷರನ್ನು ನೋಡುತ್ತೇವೆ, ನಾಮಮಾತ್ರಕ್ಕೆ ಮಹಾನ್ ಪುರುಷರು, ಅವರನ್ನು ಸಾಮಾನ್ಯ ಜನರು ಪ್ರಶಂಸಿಸುತ್ತಾರೆ. ಆದ್ದರಿಂದ ಭಾಗವತಂ ಹೇಳುವಂತೆ, ಯಾರು ಭಕ್ತನಲ್ಲವೋ, ಹರೇ ಕೃಷ್ಣ ಮಂತ್ರವನ್ನು ಎಂದಿಗೂ ಜಪಿಸುವುದಿಲ್ಲವೋ, ಅವನು ಧೂರ್ತರ ದೃಷ್ಟಿಯಲ್ಲಿ ಬಹಳ ಶ್ರೇಷ್ಠ ವ್ಯಕ್ತಿಯಾಗಿರಬಹುದು, ಆದರೆ ಅವನು ಮೃಗವಲ್ಲದೆ ಮತ್ತೇನು ಅಲ್ಲ. ಶ್ವ-ವಿಡ್-ವರಾಹೋಷ್ಟ್ರ ಖರೈಃ "ಹಾಗಾದರೆ ನೀವು ಅವನ್ನು ಮಹಾನ್ ವ್ಯಕ್ತಿಯೆಂದು ಹೇಗೆ ಹೇಳಬಹುದು. ನೀವು ಆ ಮೃಗಕ್ಕೆ ಹಾಗೆ ಹೇಳುತ್ತಿದ್ದೀರಿ." ನಮ್ಮ ವ್ಯವಹಾರವು ಕೃತಜ್ಞತೆಯಿಲ್ಲದ ಕಾರ್ಯವಾಗಿದೆ. ನಾವು ಭಕ್ತರಲ್ಲದ ಯಾವುದೇ ಮನುಷ್ಯನನ್ನು ಧೂರ್ತನೆಂದು ಕರೆಯುತ್ತೇವೆ. ಸಾಮಾನ್ಯವಾಗಿ ಹೇಳುತ್ತೇವೆ. ಇದು ತುಂಬಾ ಕಠೋರವಾದ ಪದ, ಆದರೆ ನಾವು ಅದನ್ನು ಬಳಸಬೇಕಾಗಿದೆ. ಅವನು ಕೃಷ್ಣನ ಭಕ್ತನಲ್ಲ ಎಂದು ನಮಗೆ ತಿಳಿದ ತಕ್ಷಣ, ಅವನು ಒಬ್ಬ ಧೂರ್ತ. ನಾವು ಹೇಗೆ ಹೇಳುತ್ತೇವೆ? ಅವನು ನನ್ನ ಶತ್ರು ಅಲ್ಲ, ಆದರೆ ನಾವು ಹೇಳಬೇಕಾಗಿದೆ ಏಕೆಂದರೆ ಅದು ಕೃಷ್ಣನಿಂದ ಹೇಳಲ್ಪಟ್ಟಿದೆ.

ನಾವು ನಿಜವಾಗಿಯೂ ಕೃಷ್ಣ ಪ್ರಜ್ಞೆ ಹೊಂದಿದ್ದರೆ, ನಮ್ಮ ವ್ಯವಹಾರವು ಕೃಷ್ಣನ ಪದಗಳನ್ನು ಪುನರಾವರ್ತಿಸುವುದು. ಅಷ್ಟೇ. ಕೃಷ್ಣನ ಪ್ರತಿನಿಧಿ ಮತ್ತು ಪ್ರತಿನಿಧಿಯಲ್ಲದವನ ನಡುವಿನ ವ್ಯತ್ಯಾಸವೇನು? ಕೃಷ್ಣನ ಪ್ರತಿನಿಧಿ ಕೃಷ್ಣ ಹೇಳುವದನ್ನು ಪುನರಾವರ್ತಿಸುತ್ತಾನೆ. ಅಷ್ಟೇ. ಅವನು ಪ್ರತಿನಿಧಿಯಾಗುತ್ತಾನೆ. ಇದಕ್ಕೆ ಹೆಚ್ಚಿನ ಅರ್ಹತೆ ಅಗತ್ಯವಿಲ್ಲ. ನೀವು ಕೇವಲ ದೃಢ ನಿಶ್ಚಯದಿಂದ ಪುನರಾವರ್ತಿಸುತ್ತೀರಿ. ಕೃಷ್ಣನು ಹೇಳುವಂತೆ, ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಎಕಂ ಶರಣಂ ವ್ರಜ (ಭ.ಗೀ 18.66). ಆದ್ದರಿಂದ ಯಾವ ವ್ಯಕ್ತಿ, "ನಾನು ಕೃಷ್ಣನಿಗೆ ಶರಣಾದರೆ ನನ್ನ ಎಲ್ಲಾ ವ್ಯವಹಾರವು ಯಶಸ್ವಿಯಾಗುತ್ತದೆ", ಎಂಬ ಈ ಸತ್ಯವನ್ನು ಒಪ್ಪಿಕೊಂಡವನೋ ಅವನು ಕೃಷ್ಣನ ಪ್ರತಿನಿಧಿ. ಅಷ್ಟೇ.

ನೀವು ಹೆಚ್ಚು ವಿದ್ಯಾವಂತ ಅಥವಾ ಮುಂದುವರಿದವರಾಗಿರಬೇಕಾಗಿಲ್ಲ. ಕೃಷ್ಣ ಹೇಳಿದ್ದನ್ನು ನೀವು ಸುಮ್ಮನೆ ಒಪ್ಪಿಕೊಂಡರೆ... ಅರ್ಜುನ ಹೇಳಿದಂತೆಯೇ, ಸರ್ವಂ ಎತಂ ಋತಂ ಮನ್ಯೆ ಎದ್ ವದಸಿ ಕೇಶವ (ಭ.ಗೀ 10.14). "ನನ್ನ ಪ್ರೀತಿಯ ಕೃಷ್ಣ, ಕೇಶವ, ನೀನು ಏನು ಹೇಳುತ್ತಿರುವೆಯೋ, ನಾನು ಅದನ್ನು ಸ್ವೀಕರಿಸುತ್ತೇನೆ, ಯಾವುದೇ ಬದಲಾವಣೆಯಿಲ್ಲದೆ." ಅದು ಭಕ್ತ. ಆದ್ದರಿಂದ ಅರ್ಜುನನನ್ನು ಉದ್ದೇಶಿಸಿ, ಭಕ್ತೋ 'ಸಿ ಎನ್ನಲಾಗಿದೆ. ಇದು ಭಕ್ತನ ವ್ಯವಹಾರ. ಕೃಷ್ಣನು ನನ್ನ ಹಾಗೆ ಸಾಮಾನ್ಯ ಮನುಷ್ಯ ಎಂದು ನಾನು ಏಕೆ ಯೋಚಿಸಬೇಕು? ಇದು ಭಕ್ತ ಮತ್ತು ಅಭಕ್ತನ ನಡುವಿನ ವ್ಯತ್ಯಾಸ. ಒಬ್ಬ ಭಕ್ತನಿಗೆ ತಿಳಿದಿದೆ, "ನಾನು ಅತ್ಯಲ್ಪ, ಕೃಷ್ಣನ ಸಣ್ಣ ಕಿಡಿ. ಕೃಷ್ಣ ಒಬ್ಬ ವ್ಯಕ್ತಿಗತ ಪುರುಷ. ನಾನು ಕೂಡ ವ್ಯಕ್ತಿಗತ ಪರುಷ. ಆದರೆ ನಾವು ಅವನ ಶಕ್ತಿ ಮತ್ತು ನನ್ನ ಶಕ್ತಿಯ ಬಗ್ಗೆ ಪರಿಗಣಿಸಿದಾಗ, ನಾನು ಅತ್ಯಂತ ಅತ್ಯಲ್ಪ." ಇದು ಕೃಷ್ಣನ ಬಗ್ಗೆ ತಿಳುವಳಿಕೆ.

ಯಾವುದೇ ತೊಂದರೆ ಇಲ್ಲ. ಕೇವಲ ಪ್ರಾಮಾಣಿಕರಾಗಿರಬೇಕು, ಪಾಪ ಮಾಡಬಾರದು. ಆದರೆ ಪಾಪಿ ಮನುಷ್ಯನು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪಾಪಿ ಮನುಷ್ಯ ಹೇಳುತ್ತಾನೆ, "ಓಹ್, ಕೃಷ್ಣ ಕೂಡ ಮನುಷ್ಯ. ನಾನು ಕೂಡ ಮನುಷ್ಯ. ನಾನು ಯಾಕೆ ದೇವರಲ್ಲ? ಅವನು ಮಾತ್ರ ದೇವರೇ? ಇಲ್ಲ, ನಾನೂ ಕೂಡ. ನಾನು ದೇವರು. ನೀನು ದೇವರು, ನೀನು ದೇವರು, ಪ್ರತಿಯೊಬ್ಬರೂ ದೇವರು." ವಿವೇಕಾನಂದರು ಹೇಳಿದಂತೆ, "ನೀವು ದೇವರನ್ನು ಏಕೆ ಹುಡುಕುತ್ತಿದ್ದೀರಿ? ಬೀದಿಯಲ್ಲಿ ಇಷ್ಟು ದೇವರುಗಳು ಅಲೆದಾಡುತ್ತಿರುವುದನ್ನು ನೀವು ನೋಡುತ್ತಿಲ್ಲವೇ?" ನೋಡಿದಿರ. ಇದು ಅವನ ದೇವರ ಸಾಕ್ಷಾತ್ಕಾರ. ಇದು ಅವನ ದೇವರ ಸಾಕ್ಷಾತ್ಕಾರ. ಮತ್ತು ಅವನು ದೊಡ್ಡ ಮನುಷ್ಯನಾದನು: "ಓಹ್, ಅವನು ಎಲ್ಲರನ್ನೂ ದೇವರಂತೆ ನೋಡುತ್ತಿದ್ದಾನೆ."

ಈ ಮೂರ್ಖತನ, ಈ ಧೂರ್ತತನ ಪ್ರಪಂಚದಾದ್ಯಂತ ನಡೆಯುತ್ತಿದೆ. ದೇವರು ಎಂದರೇನು, ದೇವರ ಶಕ್ತಿ ಎಂದರೇನು, ದೇವರ ಅರ್ಥವೇನು ಎಂದು ಒಬ್ಬನಿಗೂ ತಿಳಿದಿಲ್ಲ. ಅವರು ಕೆಲವು ಧೂರ್ತರನ್ನು ದೇವರಾಗಿ ಸ್ವೀಕರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಅದು ನಡೆಯುತ್ತಿದೆ. ಮತ್ತೊಬ್ಬ ಧೂರ್ತ ಬಂದಿದ್ದಾನೆ. ಅವನು ತನ್ನನ್ನು ದೇವರು ಎಂದು ಘೋಷಿಸಿಕೊಳ್ಳುತ್ತಿದ್ದಾನೆ. ಆದ್ದರಿಂದ ಇದು ತುಂಬಾ ಅಗ್ಗದ ವಿಷಯವಾಗಿದೆ. ಆದರೆ "ನಾನು ದೇವರೆಂದು ಹೇಳಿಕೊಳ್ಳುತ್ತಿದ್ದೇನೆ; ನನಗೆ ಯಾವ ಶಕ್ತಿಯಿದೆ?", ಎಂದು ಯೋಚಿಸಲು ಅವರಿಗೆ ಮೆದುಳು ಇಲ್ಲ.

ಆದ್ದರಿಂದ ಇದು ರಹಸ್ಯವಾಗಿದೆ. ಇದು ರಹಸ್ಯ. ಭಕ್ತನಾಗದೆ, ದೇವರನ್ನು ಅರ್ಥಮಾಡಿಕೊಳ್ಳುವ ರಹಸ್ಯವು ಸಾಧ್ಯವಿಲ್ಲ. ಮತ್ತು ಭಗವದ್ಗೀತೆಯಲ್ಲಿ ಒಬ್ಬನು ಅವನನ್ನು ಹೇಗೆ ತಿಳಿಯಬಹುದು ಎಂದು ಕೃಷ್ಣನು ಹೇಳಿದ್ದಾನೆ. ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಾಶ್ ಚಾಸ್ಮಿ ತತ್ವತಃ (ಭ.ಗೀ 18.55). ಭಕ್ತಿಯಿಂದ ಮಾತ್ರ, ಕೇವಲ. "ಉನ್ನತ, ಉನ್ನತ ಜ್ಞಾನದಿಂದ", ಅಥವಾ "ಯೋಗ ಪ್ರಕ್ರಿಯೆಯಿಂದ", ಅಥವಾ "ನಟನೆಯಿಂದ, ಬಹಳ ದೊಡ್ಡ ಕರ್ಮಿ, ಕೆಲಸಗಾರನಾಗುವ ಮೂಲಕ, ನನ್ನನ್ನು ಅರ್ಥಮಾಡಿಕೊಳ್ಳಬಹುದು", ಎಂದು ಅವನು ಹೇಳಬಹುದಿತ್ತು. ಇಲ್ಲ, ಅವನು ಎಂದಿಗೂ ಹೇಳಿಲ್ಲ, ಹೇಳಿಲ್ಲ. ಆದ್ದರಿಂದ ಕರ್ಮಿಗಳು, ಜ್ಞಾನಿಗಳು, ಯೋಗಿಗಳು, ಅವರೆಲ್ಲರೂ ಧೂರ್ತರು. ಅವರು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲರು ಧೂರ್ತರು. ಕರ್ಮಿಗಳು ತೃತೀಯ ದರ್ಜೆಯ ಧೂರ್ತರು, ಜಾನಿಗಳು ಎರಡನೇ ದರ್ಜೆಯ ಧೂರ್ತರು, ಮತ್ತು ಯೋಗಿಗಳು ಪ್ರಥಮ ದರ್ಜೆಯ ಧೂರ್ತರು. ಅಷ್ಟೇ.