KN/Prabhupada 0099 - ಕೃಷ್ಣನಿಂದ ಹೇಗೆ ಮಾನ್ಯತೆ ಪಡೆಯುವುದು

Revision as of 02:44, 1 May 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0099 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 13.4 -- Bombay, September 27, 1973

ನಮಗೆ ಕಾಣುವಂತೆ ವಿಭಿನ್ನ ವರ್ಗದ ಪುರುಷರಿದ್ದಾರೆ, ಅವರೆಲ್ಲರೂ ಬಾಂಬೆಯಲ್ಲಿದ್ದಾರೆ, ಅಥವಾ ಬೇರೆ ನಗರದಲ್ಲಿ, ಅದೇ ರೀತಿ, ಎಲ್ಲಾ ಜೀವಾತ್ಮಗಳು ಒಂದೇ ಗುಣಮಟ್ಟದಲ್ಲಿಲ್ಲ. ಅವುಗಳಲ್ಲಿ ಕೆಲವು ಸತ್ವ ಗುಣದ ಸಂಪರ್ಕದಲ್ಲಿವೆ, ಅವುಗಳಲ್ಲಿ ಕೆಲವು ರಜೋ ಗುಣದ ಸಂಪರ್ಕದಲ್ಲಿವೆ, ಮತ್ತು ಅವುಗಳಲ್ಲಿ ಕೆಲವು ತಮೋ ಗುಣದ ಸಂಪರ್ಕದಲ್ಲಿವೆ. ಆದ್ದರಿಂದ ಅಜ್ಞಾನದಲ್ಲಿರುವವರು ನೀರಿನಲ್ಲಿ ಬಿದ್ದಂತೆಯೇ ಇದ್ದಾರೆ. ಬೆಂಕಿ ನೀರಿನ ಮೇಲೆ ಬೀಳುತ್ತಿದ್ದಂತೆ ಅದು ಸಂಪೂರ್ಣವಾಗಿ ನಂದಿಸುತ್ತದೆ. ಆದರೆ ಬೆಂಕಿಯ ಕಿಡಿಯೊಂದು ಒಣ ಹುಲ್ಲಿನ ಮೇಲೆ ಬಿದ್ದರೆ, ಒಣ ಹುಲ್ಲಿನ ಲಾಭವನ್ನು ಪಡೆದುಕೊಂಡರೆ, ಬೆಂಕಿ ಉರಿಯುತ್ತದೆ. ಅದು ಮತ್ತೆ ಬೆಂಕಿಯಾಗುತ್ತದೆ.

ಅಂತೆಯೇ, ಸತ್ವ ಗುಣದಲ್ಲಿರುವವರು, ತಮ್ಮ ಕೃಷ್ಣ ಪ್ರಜ್ಞೆಯನ್ನು ಸುಲಭವಾಗಿ ಜಾಗೃತಗೊಳಿಸಬಹುದು. ಏಕೆಂದರೆ ಭಗವದ್ಗೀತೆಯಲ್ಲಿ ಹೇಳಲಾಗಿದೆ: ಯೇಷಾಂ ತ್ವ ಅಂತ-ಗತಂ ಪಾಪಾಂ (ಭ.ಗೀ 7.28). ಜನರು ಈ ದೇವಸ್ಥಾನಕ್ಕೆ ಏಕೆ ಬರುತ್ತಿಲ್ಲ? ಯಾಕೆಂದರೆ ಕೆಲವರು ಸಂಪೂರ್ಣ ಅಜ್ಞಾನದಲ್ಲಿದ್ದಾರೆ. ನ ಮಾಮ್ ದುಷ್ಕೃತಿನೋ ಮೂಢಃ ಪ್ರಪದ್ಯಂತೇ ನರಾಧಮಾಃ (ಭ.ಗೀ 7.15). ಅವರು ಬರಲು ಸಾಧ್ಯವಿಲ್ಲ. ಕೇವಲ ಪಾಪ ಕಾರ್ಯಗಳಲ್ಲಿ ತೊಡಗಿರುವವರು, ಅವರು ಈ ಕೃಷ್ಣ ಪ್ರಜ್ಞೆ ಚಳುವಳಿಯನ್ನು ಮೆಚ್ಚಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಆದರೆ ಇದು ಎಲ್ಲರಿಗೂ ನೀಡಿರುವ ಅವಕಾಶ. ನಾವು ಹೊಗಳುತ್ತೇವೆ, "ದಯವಿಟ್ಟು ಇಲ್ಲಿಗೆ ಬನ್ನಿ. ದಯವಿಟ್ಟು...” ಇದು ಕೃಷ್ಣನ ಪರವಾಗಿ ನಮ್ಮ ವ್ಯವಹಾರವಾಗಿದೆ. ಕೃಷ್ಣನು ವೈಯಕ್ತಿಕವಾಗಿ ಬಂದು ಭಗವದ್ಗೀತೆಯನ್ನು ಕಲಿಸಿ, ಮತ್ತು ಎಲ್ಲರನ್ನೂ ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಎಕಂ ಶರಣಮ್ ವ್ರಜ (ಭ.ಗೀ 18.66) ಎಂದು ಕೇಳುವಂತೆ, ಅದೇ ನಮ್ಮ ವ್ಯವಹಾರ.

ಆದ್ದರಿಂದ ಕೃಷ್ಣ ತುಂಬ ಮೆಚ್ಚುತ್ತಾನೆ, "ಓಹ್, ಈ ಜನರು ನನ್ನ ಪರವಾಗಿ ಮಾಡುತ್ತಿದ್ದಾರೆ. ನಾನು ಅಲ್ಲಿಗೆ ಹೋಗಬೇಕಾಗಿಲ್ಲ, ಅವರು ನನ್ನ ವ್ಯವಹಾರವನ್ನು ಕೈಗೆತ್ತಿಕೊಂಡಿದ್ದಾರೆ." ನಾವು ಏನು ವ್ಯವಹಾರವನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಕೇವಲ "ದಯವಿಟ್ಟು ಕೃಷ್ಣನಿಗೆ ಶರಣಾಗಿರಿ", ಎಂದು ಜನರನ್ನು ಕೇಳುತ್ತಿದ್ದೇವೆ. ಆದ್ದರಿಂದ ನಾವು ತುಂಬ ಪ್ರಿಯರು. ಕೃಷ್ಣನು ಹೇಳುತ್ತಾನೆ, ನ ಚ ತಸ್ಮಾನ್ ಮನುಷ್ಯೇಷು ಕಶ್ಚಿನ್ ಮೇ ಪ್ರಿಯ-ಕೃತ್ತಮಃ (ಭ.ಗೀ 18.69). ಕೃಷ್ಣನಿಂದ ಹೇಗೆ ಮಾನ್ಯತೆ ಪಡೆಯುವುದು ಎಂಬುದೇ ನಮ್ಮ ವ್ಯವಹಾರವಾಗಿದೆ.

ಕೃಷ್ಣ ಪ್ರಜ್ಞೆಯಲ್ಲಿ ಒಬ್ಬರು ಮತಾಂತರಗೊಂಡಿದ್ದಾರೋ ಇಲ್ಲವೋ ಎಂದು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಹೊಗಳುವುದು ನಮ್ಮ ಕರ್ತವ್ಯ, ಅಷ್ಟೆ. "ಮಾನ್ಯರೇ, ದಯವಿಟ್ಟು ಇಲ್ಲಿಗೆ ಬನ್ನಿ, ಕೃಷ್ಣನ ಮೂರ್ತಿಯನ್ನು ನೋಡಿ, ವಂದನೆಗಳನ್ನು ಅರ್ಪಿಸಿ, ಪ್ರಸಾದವನ್ನು ಸ್ವೀಕರಿಸಿ ಆಮೇಲೆ ಮನೆಗೆ ಹೋಗಿ.” ಆದರೆ ಜನರು ಒಪ್ಪುವುದಿಲ್ಲ. ಏಕೆ? ಪೂರ್ತಿಯಾಗಿ ಪಾಪ ಕಾರ್ಯಗಳಲ್ಲಿ ನಿರತರಾಗಿರುವ ವ್ಯಕ್ತಿಗಳು ಈ ಕೆಲಸ ಮಾಡಲಾಗುವುದಿಲ್ಲ.

ಆದ್ದರಿಂದ ಕೃಷ್ಣ ಹೇಳುತ್ತಾನೆ, ಯೇಷಾಂ ತ್ವ ಅಂತ-ಗತಂ ಪಾಪಾಂ (ಭ.ಗೀ 7.28). ತನ್ನ ಪಾಪಕಾರ್ಯಗಳನ್ನು ಸಂಪೂರ್ಣವಾಗಿ ಮುಗಿಸಿದವನು, ಯೇಷಾಂ ತ್ವ ಅಂತ-ಗತಂ ಪಾಪಾಂ ಜನಾನಾಮ್ ಪುಣ್ಯ-ಕರ್ಮಣಾಮ್ (ಭ.ಗೀ 7.28). ಪಾಪಕಾರ್ಯಗಳಿಂದ ಯಾರು ಮುಕ್ತರಾಗಬಹುದು? ಸದಾ ಧರ್ಮ ಕಾರ್ಯಗಳಲ್ಲಿ ತೊಡಗಿರುವವನು. ನೀವು ಸದಾ ಧರ್ಮ ಕಾರ್ಯಗಳಲ್ಲಿ ತೊಡಗಿದ್ದರೆ, ಪಾಪ ಕಾರ್ಯಗಳಿಗೆ ಅವಕಾಶ ಎಲ್ಲಿದೆ? ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುವುದು ಅತ್ಯಂತ ಧಾರ್ಮ ಕಾರ್ಯವಾಗಿದೆ. ನೀವು ಯಾವಾಗಲೂ ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಜಪದಲ್ಲಿ ನಿರತರಾಗಿದ್ದರೆ, ನಿಮ್ಮ ಮನಸ್ಸು ಯಾವಾಗಲೂ ಕೃಷ್ಣ ಪ್ರಜ್ಞೆಯಲ್ಲಿ ತೊಡಗಿದ್ದರೆ, ಇತರ ವಿಷಯಗಳು ನಿಮ್ಮ ಮನಸ್ಸಲ್ಲಿ ತುಂಬಲು ಜಾಗವಿಲ್ಲ. ಇದು ಕೃಷ್ಣ ಪ್ರಜ್ಞೆಯ ಪ್ರಕ್ರಿಯೆ. ನಾವು ಕೃಷ್ಣನನ್ನು ಮರೆತ ತಕ್ಷಣ, ಮಾಯೆ ಇರುವಳು, ತಕ್ಷಣ ಸೆರೆಹಿಡಿಯಲ್ಪಡುತ್ತೇವೆ.