KN/Prabhupada 0104 - ಜನನ ಮತ್ತು ಮರಣದ ಚಕ್ರವನ್ನು ನಿಲ್ಲಿಸಿ

Revision as of 04:14, 10 May 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0104 - in all Languages Category:KN-Quotes - 1976 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 9.1 -- Melbourne, April 19, 1976

ಪುಷ್ಟ ಕೃಷ್ಣ: ಪ್ರಾಣಿಯ ಆತ್ಮವು ಮನುಷ್ಯನ ರೂಪಕ್ಕೆ ಹೇಗೆ ಪ್ರವೇಶಿಸುತ್ತದೆ?

ಪ್ರಭುಪಾದ: ಸೆರೆಮನೆಯಲ್ಲಿ ಕಳ್ಳನಂತೆ. ಅವನು ಹೇಗೆ ಮುಕ್ತನಾಗುತ್ತಾನೆ? ಸೆರೆಮನೆಯಲ್ಲಿ ಅವನ ಸಂಕಟದ ಅವಧಿ ಮುಗಿದ ನಂತರ, ಅವನು ಮತ್ತೆ ಸ್ವತಂತ್ರನು. ಮತ್ತೊಮ್ಮೆ ಅವನು ಅಪರಾಧಿಯಾದ್ದರೆ, ಅವನನ್ನು ಸೆರೆಮನಗೆ ಹಾಕಲಾಗುತ್ತದೆ. ಆದ್ದರಿಂದ ಮಾನವ ಜನ್ಮದ ಉದ್ದೇಶ, ನಾನು ವಿವರಿಸುತ್ತಿರುವಂತೆ, ನನ್ನ ಜೀವನದ ಸಮಸ್ಯೆ ಏನು ಎಂದು ಅರ್ಥಮಾಡಿಕೊಳ್ಳುವುದು. ನಾನು ಸಾಯಲು ಬಯಸುವುದಿಲ್ಲ; ನನ್ನನ್ನು ಕೊಲ್ಲಲಾಗುತ್ತದೆ. ನಾನು ಮುದುಕನಾಗಲು ಬಯಸುವುದಿಲ್ಲ; ನಾನು ಮುದುಕನಾಗಲು ನಿರ್ಬಂಧಿತನಾಗಿರುತ್ತೇನೆ. ಜನ್ಮ-ಮೃತ್ಯು-ಜರಾ-ವ್ಯಾಧಿ-ದುಃಖ-ದೋಷಾನುದರ್ಶನಮ್ (ಭ.ಗೀ 13.9). ಆದ್ದರಿಂದ ಅವನು... ಅದೇ ಉದಾಹರಣೆಯಂತೆ, ಒಬ್ಬ ಕಳ್ಳ. ಅವನು ಸ್ವತಂತ್ರನಾಗಿದ್ದಾಗ, ಆಲೋಚಿಸಿದರೆ, "ಆರು ತಿಂಗಳ ಸೆರೆಮನೆ ಜೀವನದ ಈ ಶೋಚನೀಯ ಸ್ಥಿತಿಗೆ ನನ್ನನ್ನು ಏಕೆ ಸೇರಿಸಲಾಯಿತು? ಅದು ತುಂಬಾ ತೊಂದರೆಯಾಗಿತ್ತು", ಎಂದು ಆಗ ಅವನು ನಿಜವಾಗಿ ಮನುಷ್ಯನಾಗುತ್ತಾನೆ. ಆದ್ದರಿಂದ ಅದೇ ರೀತಿ, ಮಾನವನಿಗೆ ಉತ್ಕೃಷ್ಟ ವಿವೇಚನಾ ಶಕ್ತಿಯು ಸಿಕ್ಕಿದೆ. "ನನ್ನನ್ನು ಈ ಶೋಚನೀಯ ಸ್ಥಿತಿಗೆ ಏಕೆ ತಳ್ಳಲಾಗಿದೆ?", ಎಂದು ಅವನು ಆಲೋಚಿಸುತ್ತಾನೆ. ಅವನು ಶೋಚನೀಯ ಸ್ಥಿತಿಯಲ್ಲಿದ್ದಾನೆ ಎಂದು ಎಲ್ಲರೂ ಒಪ್ಪಿಕೊಳ್ಳಬೇಕು. ಅವನು ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾನೆ, ಆದರೆ ಸಂತೋಷವಿಲ್ಲ. ಹಾಗಾದರೆ ಆ ಸಂತೋಷವನ್ನು ಹೇಗೆ ಸಾಧಿಸಬಹುದು? ಆ ಅವಕಾಶ ಮನುಷ್ಯ ಜನ್ಮದಲ್ಲಿದೆ. ಭೌತಿಕ ಪ್ರಕೃತಿಯ ಕರುಣೆಯಿಂದ, ನಾವು ಮನುಷ್ಯ ಜನ್ಮ ಸ್ವೀಕರಿಸಿದರೆ, ಆದರೆ ನಾವು ಅದನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ, ಈ ಅನುಗ್ರಹವನ್ನು ನಾವು ಬೆಕ್ಕುಗಳು, ನಾಯಿಗಳು, ಅಥವಾ ಇತರ ಪ್ರಾಣಿಗಳಂತೆ ದುರುಪಯೋಗಪಡಿಸಿಕೊಂಡರೆ, ನಾವು ಮತ್ತೆ ಪ್ರಾಣಿ ರೂಪವನ್ನು ಸ್ವೀಕರಿಸಬೇಕು, ಮತ್ತು ಅವಧಿ ಮುಗಿದಾಗ... ವಿಕಸನ ಪ್ರಕ್ರಿಯೆ ಇರುವುದರಿಂದ ಇದು ದೀರ್ಘ, ದೀರ್ಘಾವಧಿಯನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಅವಧಿಯು ಮುಗಿದ ನಂತರ ನೀವು ಮತ್ತೆ ಈ ಮಾನವ ರೂಪಕ್ಕೆ ಬರುತ್ತೀರಿ. ಅದೇ ಉದಾಹರಣೆ: ಕಳ್ಳ, ಅವನು ತನ್ನ ಸೆರೆವಾಸದ ಅವಧಿಯನ್ನು ಮುಗಿಸಿದಾಗ, ಅವನು ಮತ್ತೆ ಸ್ವತಂತ್ರ ಮನುಷ್ಯ. ಆದರೆ ಮತ್ತೆ ಅವನು ಅಪರಾಧವನ್ನು ಮಾಡಿದರೆ; ಮತ್ತೆ ಅವನು ಸೆರೆಮನೆಗೆ ಹೋಗುತ್ತಾನೆ. ಹಾಗೆಯೇ ಜನನ ಮತ್ತು ಮರಣದ ಚಕ್ರವಿದೆ. ನಾವು ನಮ್ಮ ಮಾನವ ಜೀವನ ವಿಧಾನವನ್ನು ಸರಿಯಾಗಿ ಬಳಸಿಕೊಂಡರೆ, ನಾವು ಜನನ ಮತ್ತು ಮರಣದ ಚಕ್ರವನ್ನು ನಿಲ್ಲಿಸುತ್ತೇವೆ. ಮತ್ತು ನಾವು ಈ ಮಾನವ ರೂಪವನ್ನು ಸರಿಯಾಗಿ ಬಳಸದಿದ್ದರೆ, ಮತ್ತೆ ನಾವು ಆ ಜನನ ಮತ್ತು ಮರಣದ ಚಕ್ರಕ್ಕೆ ಸಿಕ್ಕಿಕೊಳ್ಳುತ್ತೇವೆ.