KN/Prabhupada 0113 - ನಾಲಿಗೆಯನ್ನು ನಿಯಂತ್ರಿಸುವುದು ಕಠಿಣ

Revision as of 16:14, 20 June 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0113 - in all Languages Category:KN-Quotes - 1976 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 5.6.2 -- Vrndavana, November 24, 1976

ಆದ್ದರಿಂದ ರಘುನಾಥ ದಾಸ ಗೋಸ್ವಾಮಿ ಬಹಳ ಕಟ್ಟುನಿಟ್ಟಾಗಿ ಅನುಸರಿಸಿದರು. ಚೈತನ್ಯ ಮಹಾಪ್ರಭು ಕೂಡ ಬಹಳ ಕಟ್ಟುನಿಟ್ಟಾಗಿ ಅನುಸರಿಸಿದರು, ಮತ್ತು ರೂಪ-ಸನಾತನ ಗೋಸ್ವಮಿ ಬಹಳ ಕಟ್ಟುನಿಟ್ಟಾಗಿ ಅನುಸರಿಸಿದರು. ಒಬ್ಬರು ವೃಂದಾವನದಲ್ಲಿ ಚಿಕ್ಕ ಬಟ್ಟೆಯುಟ್ಟು ವಾಸಿಸುತ್ತಿದ್ದರೆ ಅವರು ರೂಪ ಗೋಸ್ವಾಮಿಯಂತೆ ಆಗಿದ್ದಾರೆ ಎಂದಲ್ಲ... ರೂಪ ಗೋಸ್ವಾಮಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು. ನಾನಾ-ಶಾಸ್ತ್ರ-ವಿಚಾರಣೈಕ-ನಿಪುಣೌ ಸದ್-ಧರ್ಮ-ಸಂಸ್ತಾಪಕೌ ಲೋಕಾನಾಂ ಹಿತ-ಕಾರಿಣೌ. ಅವರು ವೃಂದಾವನದಲ್ಲಿದ್ದರು, ಆದರೆ ಅವರು ಯಾವಾಗಲೂ ಜನರಿಗೆ, ಈ ಭೌತಿಕ ಜಗತ್ತಿಗೆ ಹೇಗೆ ಒಳ್ಳೆಯದನ್ನು ಮಾಡಬೇಕೆಂದು ಯೋಚಿಸುತ್ತಿದ್ದರು. ಪ್ರಹ್ಲಾದ ಮಹಾರಾಜರಂತೆ. ಶೋಚೇ ತತೋ ವಿಮುಖ-ಚೇತಸ (ಶ್ರೀ.ಭಾ 7.9.43). ದಾರಿ ತಪ್ಪಿದ ಭೌತಿಕ ವ್ಯಕ್ತಿಗಳ ಬಗ್ಗೆ ಯೋಚಿಸುವುದು ಸಾಧುವಿನ ಕಾಳಜಿ. ಬಳಲುತ್ತಿರುವ ಇವರನ್ನು ಹೇಗೆ ಎತ್ತರಿಸಬೇಕೆಂದು ಅವರು ಯಾವಾಗಲೂ ಯೋಚಿಸುತ್ತಿದ್ದಾರೆ, ಯೋಜಿಸುತ್ತಿದ್ದಾರೆ. ಇದು ಸಾಧು. ಲೋಕಾನಾಂ ಹಿತ-ಕಾರಿಣೌ. ಸಾಧು, "ನಾನು ನನ್ನ ಉಡುಪನ್ನು ಈ ರೀತಿ ಬದಲಾಯಿಸಿದ್ದೇನೆ, ಮತ್ತು ಮೃದುಭಾವನೆ ಜನರು ನನಗೆ ರೊಟ್ಟಿ ನೀಡುತ್ತಾರೆ, ಅದನ್ನು ತಿಂದು ಮಲಗುತ್ತೇನೆ", ಎಂದು ಅಲ್ಲ. ಅವನು ಸಾಧು ಅಲ್ಲ. ಸಾಧು... ಭಗವಾನ್, ಕೃಷ್ಣ, ಯಾರು ಸಾಧು ಎಂದು ಹೇಳುತ್ತಾನೆ. ಅಪಿ ಚೇತ್ ಸು-ದುರಾಚಾರೋ ಭಜತೇ ಮಾಮ್ ಅನನ್ಯ-ಭಾಕ್ ಸಾಧುರ್ ಏವ ಸ ಮಂತವ್ಯಃ (ಭ.ಗೀ 9.30). ಅದು ಸಾಧು ಎಂದರೆ. ಕೃಷ್ಣನಿಗಾಗಿ ತನ್ನ ಜೀವನವನ್ನು ಸಂಪೂರ್ಣವಾಗಿ ಅರ್ಪಿಸಿದವನು, ಅವನು ಸಾಧು. ಅವನಿಗೆ ಕೆಲವು ದುಷ್ಚಟಗಳಿರಬಹುದು... ದುಷ್ಚಟಗಳು, ಒಬ್ಬ ಸಾಧುವಿಗೆ ದುಷ್ಚಟಗಳಿರಲು ಸಾಧ್ಯವಿಲ್ಲ ಏಕೆಂದರೆ ಒಬ್ಬನು ಸಾಧು ಆಗಿದ್ದರೆ, ಆರಂಭದಲ್ಲಿ ಅವನಿಗೆ ಕೆಲವು ದುಷ್ಚಟಗಳಿದರು ಅದನ್ನು ಸರಿಪಡಿಸಲಾಗುತ್ತದೆ. ಶಷ್ವದ್ ಭವತಿ ಧರ್ಮಾತ್ಮಾ. ಕ್ಷಿಪ್ರಮ್ ಭವತಿ ಧರ್ಮಾತ್ಮಾ ಶಶ್ವಚ್-ಚಾಂತಿಂ ನಿಗಚ್ಚತಿ. ಅವನು ನಿಜವಾಗಿ ಸಾಧು ಆಗಿದ್ದರೆ, ಅವನ ದುಷ್ಚಟಗಳು ಶೀಘ್ರದಲ್ಲೇ ಸರಿಪಡಿಸಲಾಗುವುದು, ಶೀಘ್ರದಲ್ಲೇ. ಆದರೆ ಅವನು ತನ್ನ ದುಷ್ಚಟಗಳನ್ನು ಮುಂದುವರಿಸುತ ಸಾಧು ಆಗಲಾರನು. ಅದು ಸಾಧ್ಯವಿಲ್ಲ. ಅವನು ಸಾಧು ಅಲ್ಲ. ಬಹುಶಃ ಅವನ ಹಿಂದಿನ ಚಟಗಳಿಂದಾಗಿ, ಅವನು ಏನೋ ತಪ್ಪು ಮಾಡಿರಬಹುದು. ಅದನ್ನು ಕ್ಷಮಿಸಬಹುದು. ಆದರೆ ಅವನು, ಸಾಧುವಿನ ಹೆಸರಿನಲ್ಲಿ, ಮತ್ತು ವಿಮೋಚನೆ ಹೊಂದಿದ ವ್ಯಕ್ತಿ ಎನಿಸಿಕೊಂಡು ಎಲ್ಲಾ ಅಸಂಬದ್ಧ ಕಾರ್ಯಗಳನ್ನು ಮುಂದುವರಿಸಿದರೆ, ಅವನು ಮೋಸಗಾರ. ಅವನು ಸಾಧು ಅಲ್ಲ. ಅಪಿ ಚೇತ್ ಸು-ದುರಾಚಾರೋ. ಚೇತ್, ಯದಿ, ಒಂದು ವೇಳೆ, ಆಕಸ್ಮಿಕವಾಗಿ, ಅದು ಸಾಧ್ಯ. ಆದರೆ ಅವನು ಕೃಷ್ಣ ಪ್ರಜ್ಞೆಗೆ ಅಂಟಿಕೊಂಡರೆ, ಆಗ ಕ್ಷಿಪ್ರಮ್ ಭವತಿ ಧರ್ಮಾತ್ಮಾ ಭವತಿ ಧರ್ಮಾತ್ಮಾ ಶಶ್ವಚ್-ಚಾಂತಿಂ ನಿಗಚ್ಚತಿ. ಆರಂಭದಲ್ಲಿ ಕೆಲವು ತಪ್ಪುಗಳಿರಬಹುದು, ಆದರೆ ನಾವು ಯೋಚಿಸಬೇಕಾದದ್ದು, "ನನ್ನ ತಪ್ಪುಗಳು ಈಗ ಸರಿಪಡಿಸಿಕೊಂಡಿದ್ದೇನೆಯೇ?”, ಎಂದು. ಹಾಗೆ ಜಾಗರೂಕರಾಗಿರಬೇಕು. ಮನಸ್ಸನ್ನು ಎಂದಿಗೂ ನಂಬಬೇಡಿ. ಅದೇ ಇಲ್ಲಿಯ ಸೂಚನೆ. ಮನಸ್ಸನ್ನು ನಂಬಬಾರದು. ನನ್ನ ಗುರು ಮಹಾರಾಜರು ಹೇಳುತ್ತಿದ್ದರು, "ನಿದ್ರೆಯಿಂದ ಎದ್ದ ನಂತರ, ನೀವು ನಿಮ್ಮ ಬೂಟಿನಿಂದ ನಿಮ್ಮ ಮನಸ್ಸನ್ನು ನೂರು ಬಾರಿ ಹೊಡೆಯಿರಿ. ಇದು ನಿಮ್ಮ ಮೊದಲ ಕಾರ್ಯ. ಮತ್ತು ಮಲಗಲು ಹೋಗುವಾಗ, ಪೊರಕೆ ತೆಗೆದುಕೊಂಡು ನಿಮ್ಮ ಮನಸ್ಸನ್ನು ನೂರು ಬಾರಿ ಹೊಡೆಯಿರಿ". ಆಗ ನಿಮ್ಮ ಮನಸ್ಸನ್ನು ನೀವು ನಿಯಂತ್ರಿಸಬಹುದು. ಇಲ್ಲದಿದ್ದರೆ ಅದು ತುಂಬಾ ಕಷ್ಟ."

ಆದ್ದರಿಂದ ಇದು... ಬೂಟುಗಳು ಮತ್ತು ಪೊರಕೆಯಿಂದ ಹೊಡೆಯುವುದು ಮತ್ತೊಂದು ತಪಸ್ಯ. ಮನಸ್ಸಿನ ಮೇಲೆ ನಿಯಂತ್ರಣವಿಲ್ಲದ ನಮ್ಮಂತಹ ಪುರುಷರು, ನಾವು ಮನಸ್ಸನ್ನು ಬೂಟುಗಳು ಮತ್ತು ಪೊರಕೆಯಿಂದ ಹೊಡೆಯುವ ಈ ತಪಸ್ಯವನ್ನು ಅಭ್ಯಾಸ ಮಾಡಬೇಕು. ಆಗ ಅದನ್ನು ನಿಯಂತ್ರಿಸಬಹುದು. ಮತ್ತು ಸ್ವಾಮಿ ಎಂದರೆ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿರುವವರು. ವಾಚೋ-ವೇಗಂ, ಕ್ರೋಧ- ವೇಗಂ, ಉದರ- ವೇಗಂ, ಉಪಸ್ಥ- ವೇಗಂ, ಮನಸ- ವೇಗಂ, ಕ್ರೋಧ- ವೇಗಂ, ಎತಾನ್ ವೇಗಾನ್ ಯೋ ವಿಷಹೇತ ಧೀರಃ ಪೃಥ್ವೀಮ್ ಸ ಶಿಷ್ಯಾತ್ (ಉಪದೇಶಾಮೃತ 1). ಇದು ರೂಪ ಗೋಸ್ವಾಮಿಯ ಸೂಚನೆ. ನಾವು ವಾಚೋ-ವೇಗಂ ಅನ್ನು ನಿಯಂತ್ರಿಸಿದಾಗ... (ಮಗು ಅಳುವುದು, ಪ್ರಭುಪಾದ ನಿಲ್ಲಿಸುತ್ತ…) ಇದು ಕ್ರಂದನ-ವೇಗಂ. (ನಗುತ್ತಾರೆ) ಅವುಗಳಿಗೆ ನಿಯಂತ್ರಿಸಲು ಸಾಧ್ಯವಿಲ್ಲ. ಅವುಗಳಿಗೆ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಅದು ಮಗುವು. ಮಗುವನ್ನು ಕ್ಷಮಿಸಬಹುದು, ಆದರೆ ಆಧ್ಯಾತ್ಮಿಕ ಜೀವನದಲ್ಲಿರುವ ಒಬ್ಬ ವ್ಯಕ್ತಿಯು ನಿಯಂತ್ರಿಸಲು ಸಾಧ್ಯವಿಲ್ಲವಾದರೆ, ಆಗ ಹತಾಶೆ. ಆಗ ಅವನು ನಿಷ್ಪ್ರಯೋಜಕ. ಇದನ್ನು ನಿಯಂತ್ರಿಸಬೇಕು. ವಾಚೋ-ವೇಗಂ, ಕ್ರೋಧ- ವೇಗಂ, ಉದರ- ವೇಗಂ, ಉಪಸ್ಥ- ವೇಗಂ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಉದರ- ವೇಗಂ, ಮತ್ತು ಜಿಹ್ವಾ- ವೇಗಂ. ಜಿಹ್ವಾ- ವೇಗಂ, ಇದನ್ನು ತುಂಬಾ ನಿಯಂತ್ರಿಸಬೇಕು. ಭಕ್ತಿವಿನೋದ ಠಾಕುರ ಹೇಳಿದರು, “ಎಲ್ಲಾ ಇಂದ್ರಿಯಗಳೂ ಇವೆ, ಆದರೆ ಅವುಗಳಲ್ಲಿ, ಈ ಜಿಹ್ವಾ ಬಹಳ ಅಪಾಯಕಾರಿ." ತಾ’ರ ಮಧ್ಯೇ ಜಿಹ್ವಾ ಅತಿ ಲೋಭಮೋಯ್ ಸುದುರ್ಮತಿ ತಾ’ಕೆ ಜೆತಾ ಕಠಿನ ಸಂಸಾರೆ. ನಾಲಿಗೆಯನ್ನು ನಿಯಂತ್ರಿಸುವುದು ಕಠಿಣ.