KN/Prabhupada 0114 - ಕೃಷ್ಣ ಎಂಬ ಸಂಭಾವಿತನು ಎಲ್ಲರನ್ನೂ ನಿಯಂತ್ರಿಸುತ್ತಿದ್ದಾನೆ

Revision as of 13:28, 29 June 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0114 - in all Languages Category:KN-Quotes - 1972 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture -- Laguna Beach, September 30, 1972

ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ,

ದೇಹಿನೋ 'ಸ್ಮಿನ್ ಯಥಾ ದೇಹೇ
ಕೌಮಾರಂ ಯೌವನಂ ಜರಾ
ತಥಾ ದೇಹಾತರಂ-ಪ್ರಾಪ್ತಿರ್
ಧೀರಸ್ ತತ್ರ ನ ಮುಹ್ಯತಿ
(ಭ.ಗೀ 2.13)

ನೀವು, ನಾನು - ನಮ್ಮಲ್ಲಿ ಪ್ರತಿಯೊಬ್ಬರೂ - ಈ ದೇಹದೊಳಗೆ ಬಂಧಿಯಾಗಿದ್ದೇವೆ. ನಾನು ಆತ್ಮ; ನೀನು ಆತ್ಮ. ಅದೇ ವೈದಿಕ ಆದೇಶ, ಆಹಂ ಬ್ರಹ್ಮಾಸ್ಮಿ: "ನಾನು ಬ್ರಹ್ಮನ್." ಅಂದರೆ ಅದು ಆತ್ಮ. ಪರಬ್ರಹ್ಮನ್ ಅಲ್ಲ, ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ಪರಬ್ರಹ್ಮನ್ ಅಂದರೆ ದೇವರು. ನಾವು ಬ್ರಹ್ಮನ್, ದೇವರ ಭಾಗಾಂಶ, ತುಣುಕುಗಳು. ಆದರೆ ಪರಮಾತ್ಮನಲ್ಲ, ಪರಮ ಎಂಬುದು ವಿಭಿನ್ನ. ನೀನು ಅಮೆರಿಕನ್, ಆದರೆ ಸರ್ವೋಚ್ಚ ಅಮೆರಿಕನ್ ನಿಮ್ಮ ಅಧ್ಯಕ್ಷ, ಶ್ರೀ ನಿಕ್ಸನ್. ಆದರೆ, "ನಾನು ಅಮೇರಿಕನ್ ಆಗಿರುವುದರಿಂದ ನಾನು ನಿಕ್ಸನ್", ಎಂದು ಹೇಳಲಾಗುವುದಿಲ್ಲ. ಅದನ್ನು ನೀವು ಹೇಳಲು ಸಾಧ್ಯವಿಲ್ಲ. ಅದೇ ರೀತಿ, ನೀವು, ನಾನು, ನಮ್ಮಲ್ಲಿ ಪ್ರತಿಯೊಬ್ಬರೂ, ಬ್ರಹ್ಮನ್, ಆದರೆ ಇದರರ್ಥ ನಾವು ಪರಬ್ರಹ್ಮನ್ ಎಂದಲ್ಲ. ಕೃಷ್ಣನು ಪರಬ್ರಹ್ಮನ್. ಈಶ್ವರಃ ಪರಮಃ ಕೃಷ್ಣಃ (ಬ್ರ.ಸಂ 5.1). ಈಶ್ವರ ಎಂದರೆ ನಿಯಂತ್ರಕ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ಸ್ವಲ್ಪ ಮಟ್ಟಿಗೆ ನಿಯಂತ್ರಕರಾಗಿದ್ದೇವೆ. ಒಬ್ಬನು ತನ್ನ ಕುಟುಂಬವನ್ನು ನಿಯಂತ್ರಿಸುತ್ತಿದ್ದಾನೆ, ಅವನ ಕಚೇರಿ, ವ್ಯವಹಾರವನ್ನು ನಿಯಂತ್ರಿಸುತ್ತಿದ್ದಾನೆ, ಶಿಷ್ಯರನ್ನು ನಿಯಂತ್ರಿಸುತ್ತಿದ್ದಾನೆ. ಕೊನೆಗೆ ಅವನು ನಾಯಿಯನ್ನು ನಿಯಂತ್ರಿಸುತ್ತಿದ್ದಾನೆ. ಅವನು ಯಾವುದನ್ನೂ ನಿಯಂತ್ರಿಸದಿದ್ದರೆ, ಅವನು ನಿಯಂತ್ರಿಸಲು ನಾಯಿಯನ್ನು, ಸಾಕು ನಾಯಿ, ಸಾಕು ಬೆಕ್ಕನ್ನು ಇಟ್ಟುಕೊಳ್ಳುತ್ತಾನೆ. ಆದ್ದರಿಂದ ಎಲ್ಲರೂ ನಿಯಂತ್ರಕರಾಗಲು ಬಯಸುತ್ತಾರೆ. ಅದು ಸತ್ಯ. ಆದರೆ ಪರಮ ನಿಯಂತ್ರಕ ಕೃಷ್ಣ. ಇಲ್ಲಿ ನಾಮಮಾತ್ರದ ನಿಯಂತ್ರಕರು ಬೇರೊಬ್ಬರಿಂದ ನಿಯಂತ್ರಿಸಲ್ಪಡುತ್ತಾರೆ. ನಾನು ನನ್ನ ಶಿಷ್ಯರನ್ನು ನಿಯಂತ್ರಿಸಬಹುದು, ಆದರೆ ನಾನು ಬೇರೊಬ್ಬರಿಂದ, ನನ್ನ ಆಧ್ಯಾತ್ಮಿಕ ಗುರುವಿನಿಂದ, ನಿಯಂತ್ರಿಸಲ್ಪಡುತ್ತಿದ್ದೇನೆ. ಆದ್ದರಿಂದ, "ನಾನು ಸಂಪೂರ್ಣ ನಿಯಂತ್ರಕ", ಎಂದು ಯಾರೂ ಹೇಳಲಾರರು. ಇಲ್ಲ. ಇಲ್ಲಿ ನೀವು ನಾಮಮಾತ್ರದ ನಿಯಂತ್ರಕನನ್ನು ಕಾಣಬಹುದು, ಖಂಡಿತವಾಗಿಯೂ ಸ್ವಲ್ಪ ಮಟ್ಟಿಗೆ ನಿಯಂತ್ರಕ, ಆದರೆ ಅವನೂ ಕೂಡ ನಿಯಂತ್ರಿಸಲ್ಪಡುತ್ತಿದ್ದಾನೆ. ಯಾರೊಬ್ಬನು ಕೇವಲ ನಿಯಂತ್ರಕನು ಮಾತ್ರವೋ, ಯಾರೊಬ್ಬರಿಂದಲೂ ನಿಯಂತ್ರಿಸಲ್ಪಡುತ್ತಿಲ್ಲ ಎಂದು ಕಾಣುವಿರೋ, ಅವನೇ ಕೃಷ್ಣ. ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಪ್ರತಿಯೊಬ್ಬರೂ ನಿಯಂತ್ರಿಸುತ್ತಿದ್ದಾರೆ, ನಮ್ಮಲ್ಲಿ ಪ್ರತಿಯೊಬ್ಬರೂ ಸಹ, ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಆದರೆ ಅದೇ ಸಮಯದಲ್ಲಿ ಬೇರೊಬ್ಬರಿಂದ ನಿಯಂತ್ರಿಸಲ್ಪಡುತ್ತಿದ್ದೇವೆ. ಆದರೆ ನಾವು ಕೃಷ್ಣ ಎಂಬ ಸಂಭಾವಿತನನ್ನು ಕಾಣುತ್ತೇವೆ. ಅವನು ಎಲ್ಲರನ್ನೂ ನಿಯಂತ್ರಿಸುತ್ತಿದ್ದಾನೆ, ಆದರೆ ಅವನನ್ನು ಯಾರಿಂದಲೂ ನಿಯಂತ್ರಿಸಲಾಗುವುದಿಲ್ಲ. ಅದೇ ದೇವರು ಎಂದರೆ.

ಈಶ್ವರಃ ಪರಮಃ ಕೃಷ್ಣಃ
ಸಚ್-ಚಿದ್-ಆನಂದ ವಿಗ್ರಹಃ
ಅನಾದಿರ್ ಆದಿರ್ ಗೋವಿಂದಃ
ಸರ್ವ ಕಾರಣ ಕಾರಣಂ
(ಬ್ರ.ಸಂ 5.1).

ಆದ್ದರಿಂದ ಈ ಕೃಷ್ಣ ಪ್ರಜ್ಞೆ ಚಳುವಳಿ ಬಹಳ ವೈಜ್ಞಾನಿಕ, ಅಧಿಕೃತ, ಮತ್ತು ವಿವೇಚನೆಯುಳ್ಳ ವ್ಯಕ್ತಿಗೆ ಅರ್ಥವಾಗುವಂತಹದ್ದಾಗಿದೆ. ಆದ್ದರಿಂದ ನೀವು ಈ ಕೃಷ್ಣ ಪ್ರಜ್ಞೆ ಆಂದೋಲನದಲ್ಲಿ ದಯವಿಟ್ಟು ಆಸಕ್ತಿ ವಹಿಸಿದರೆ, ನಿಮಗೆ ಲಾಭವಾಗುತ್ತದೆ. ನಿಮ್ಮ ಜೀವನವು ಯಶಸ್ವಿಯಾಗುತ್ತದೆ. ನಿಮ್ಮ ಜೀವನದ ಗುರಿ ಸಾಧಿಸಲಾಗುವುದು. ಅದು ಸತ್ಯ. ಆದ್ದರಿಂದ ನೀವು ನಮ್ಮ ಸಾಹಿತ್ಯವನ್ನು ಓದಲು ಪ್ರಯತ್ನಿಸಬಹುದು. ನಮಲ್ಲಿ ಅನೇಕ ಪುಸ್ತಕಗಳಿವೆ. ಕೃಷ್ಣ ಪ್ರಜ್ಞೆ ಆಂದೋಲನದಲ್ಲಿ ನಮ್ಮ ವಿದ್ಯಾರ್ಥಿಗಳು ಹೇಗೆ ಮುನ್ನಡೆಯುತ್ತಿದ್ದಾರೆ ಎಂಬುದನ್ನು ನೀವು ಪ್ರಾಯೋಗಿಕವಾಗಿ ನೋಡಬಹುದು. ಸಹವಾಸದಿಂದ ನೀವು ಅವರಿಂದ ಕಲಿಯಲು ಪ್ರಯತ್ನಿಸಬಹುದು. ಒಬ್ಬನು ಯಾಂತ್ರಿಕ ತಜ್ಞನಾಗಲು ಬಯಸಿದರೆ, ಅವನು ಕಾರ್ಖಾನೆಗೆ ಪ್ರವೇಶಿಸಿ ಕೆಲಸಗಾರರು, ಯಾಂತ್ರಿಕರೊಂದಿಗೆ ಸಹವಾಸ ಮಾಡುತ್ತಾನೆ, ಮತ್ತು ಕ್ರಮೇಣ ಅವನು ಯಾಂತ್ರಿಕ, ತಂತ್ರಜ್ಞನಾಗುತ್ತಾನೆ. ಅಂತೆಯೇ, ನಾವು ಈ ಕೇಂದ್ರಗಳನ್ನು ಪ್ರತಿಯೊಬ್ಬರಿಗೂ ಕಲಿಯಲು ಅವಕಾಶ ಕೊಡಲು ತೆರೆಯುತ್ತಿದ್ದೇವೆ… ಹೇಗೆ ಹಿಂತಿರುಗಿ ಮನೆಗೆ ಹೋಗಬೇಕು.., ಹೇಗೆ ಮನೆಗೆ ಹೋಗಬೇಕು, ಮರಳಿ ಭಗವದ್ಧಾಮಕ್ಕೆ ಎಂದು. ಅದೇ ನಮ್ಮ ಧ್ಯೇಯ. ಮತ್ತು ಇದು ಬಹಳ ವೈಜ್ಞಾನಿಕ ಮತ್ತು ಅಧಿಕೃತ, ವೈದಿಕ. ನಾವು ಈ ಜ್ಞಾನವನ್ನು ದೇವೋತ್ತಮ ಪರಮ ಪುರುಷನಾದ ಕೃಷ್ಣನಿಂದ ನೇರವಾಗಿ ಸ್ವೀಕರಿಸುತ್ತಿದ್ದೇವೆ. ಅದೇ ಭಗವದ್ಗೀತೆ. ನಾವು ಭಗವದ್ಗೀತೆಯನ್ನು ಅಸಂಬದ್ಧವಾಗಿ ಟಿಪ್ಪಣಿಗಳಿದೆ ಪ್ರಸ್ತುತಪಡಿಸುತ್ತಿದ್ದೇವೆ. ಭಗವದ್ಗೀತೆಯಲ್ಲಿ ಕೃಷ್ಣ ತಾನು ದೇವೋತ್ತಮ ಪರಮ ಪುರುಷ ಎಂದು ಹೇಳುತ್ತಾನೆ. ನಾವೂ ಅದೇ ಪ್ರಸ್ತಾಪವನ್ನು ಇಡುತ್ತಿದ್ದೇವೆ, ಕೃಷ್ಣ ದೇವೋತ್ತಮ ಪರಮ ಪುರುಷ ಎಂದು. ನಾವು ಅದನ್ನು ಬದಲಾಯಿಸುತ್ತಿಲ್ಲ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, "ನನ್ನ ಭಕ್ತನಾಗು. ಯಾವಾಗಲೂ ನನ್ನ ಬಗ್ಗೆ ಯೋಚಿಸಿ. ನನ್ನನ್ನು ಆರಾಧಿಸು. ನಿನ್ನ ವಂದನೆಗಳನ್ನು ನನಗೆ ಅರ್ಪಿಸಿ.” ನಾವು ಎಲ್ಲ ಜನರಿಗೆ ಕಲಿಸುತ್ತಿದ್ದೇವೆ, “ನೀವು ಯಾವಾಗಲೂ ಕೃಷ್ಣನ ಬಗ್ಗೆ ಯೋಚಿಸುತ್ತೀರಿ - ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ.” ಈ ಹರೇ ಕೃಷ್ಣ ಮಂತ್ರವನ್ನು ಜಪಿಸುವುದರ ಮೂಲಕ, ನೀವು ಯಾವಾಗಲೂ ಕೃಷ್ಣನ ಬಗ್ಗೆ ಯೋಚಿಸುವಿರಿ.