KN/Prabhupada 0028 - ಬುದ್ದ ಭಗವಂತನು

Revision as of 17:51, 1 October 2020 by Elad (talk | contribs) (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")


Lecture on Sri Isopanisad, Mantra 1 -- Los Angeles, May 3, 1970

ಗರ್ಗಮುನಿ: (ಓದುತ): "ಒಂದು ತಪ್ಪು ತಿಳುವಳಿಕೆ ಏನೆಂದರೆ ಕೇವಲ ಸಸ್ಯಾಹಾರಿ ಆಗುವದ್ದರಿಂದ ಒಬ್ಬ ವ್ಯಕ್ತಿ ತನ್ನನ್ನು ಪ್ರಾಕೃತ್ತಿಕ ನಿಯಮಗಳ ಉಲ್ಲಂಘನೆಯಿಂದ ತಪ್ಪಿಸಿಕೊಳ್ಳಬಹುದೆಂಬುದು. ತರ್ಕಾರಿಗಳಿಗೂ ಜೀವವಿದೆ. ಒಂದು ಜೀವವು ಇನ್ನೊಂದು ಜೀವಕ್ಕೆ ಆಹಾರವಾಗಿದೆ. ಇದೇ ಪ್ರಕ್ರತಿಯ ನಿಯಮ. ಒಬ್ಬ ವ್ಯಕ್ತಿಯು, ತಾನು ಕಟ್ಟುನಿಟ್ಟಾದ ಸಸ್ಯಾಹಾರಿ ಎಂದು ಗರ್ವಿಸಬಾರದು. ದೇವೋತ್ತಮ ಪರಮ ಪುರುಷನನ್ನು ತಿಳಿದುಕೊಳ್ಳುವುದು ಮೂಲ ಉದ್ದೇಶ. ಪ್ರಾಣಿಗಳ ಪ್ರಜ್ಞೆಯು ಭಗವಂತನನ್ನು ತಿಳಿದುಕೊಳ್ಳಲು ಸಾಧ್ಯವಾಗುವಷ್ಟು ಬೆಳೆದಿಲ್ಲ. ಆದರೆ ಮನುಷ್ಯನು...

ಪ್ರಭುಪಾದ: ಅದೇ ಮುಖ್ಯ ಉದ್ದೇಶ. ಬೌದ್ಧ ಧರ್ಮದ ಅನುಯಾಯಿಗಳೂ ಕೂಡ ಸಸ್ಯಾಹಾರಿಗಳು. ಬೌದ್ಧ ಧರ್ಮತತ್ವದ ಪ್ರಕಾರ... ಇತ್ತೀಚೆಗೆ ಎಲ್ಲವೂ ಹದಗೆಟ್ಟಿದೆ, ಆದರೆ ಬುದ್ಧನ ಬೋಧನೆಯು ಕನಿಷ್ಠ ಪಕ್ಷ ಧೂರ್ತ ಜನರು ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಲಿ ಎಂಬ ಕಾರಣಕ್ಕಾಗಿ ಇತ್ತು. ಅಹಿಂಸಾ ಪರಮೋ ಧರ್ಮ. ಭಗವಾನ್ ಬುದ್ಧನ ಅವತಾರದ ಬಗ್ಗೆ ಶ್ರೀಮದ್ ಭಾಗವತಂ ಮತ್ತು ಇತರ ವೈದಿಕ ಸಾಹಿತ್ಯಗಳಲ್ಲಿ ವಿವರಿಸಲಾಗಿದೆ. ಸುರ ದ್ವಿಶಾಮ್. ಅವರು ರಾಕ್ಷಸರಿಗೆ ಮೋಸಮಾಡಲು ಬಂದರು. ರಾಕ್ಷಸರು... ರಾಕ್ಷಸರನ್ನು ಮೋಸಗೊಳಿಸುವ ನೀತಿಯನ್ನು ಅವರು ಪ್ರತಿಪಾದಿಸಿದರು. ಅವರು ಹೇಗೆ ಮೋಸ ಮಾಡಿದ್ದಾರೆ? ರಾಕ್ಷಸರು, ಅವರು ಭಗವಂತನ ವಿರುದ್ಧವಾಗಿರುತ್ತಾರೆ. ಅವರು ದೇವರನ್ನು ನಂಬುವುದಿಲ್ಲ. ಹಾಗಾಗಿ ಭಗವಾನ್ ಬುದ್ಧನು "ಹೌದು, ದೇವರೇ ಇಲ್ಲ, ಆದರೆ ನಾನು ಹೇಳುವುದನ್ನು ನೀನು ಅನುಸರಿಸು" ಎಂದು ಪ್ರಚಾರ ಮಾಡಿದರು. "ಹೌದು". ಆದರೆ ಬುದ್ಧನೇ ದೇವರು. ಇದು ಮೋಸ. ಹೌದು. ಅವರು ದೇವರನ್ನು ನಂಬುವುದಿಲ್ಲ, ಆದರೆ ಅವರು ಬುದ್ಧನನ್ನು ನಂಬುತ್ತಾರೆ ಮತ್ತು ಬುದ್ಧನು ದೇವರಾಗಿದ್ದಾನೆ. ಕೇಶವ-ಧ್ರುತಾ-ಬುದ್ಧ-ಶರೀರಾ ಜಯ ಜಗದೀಶ ಹರೇ. ಇದೇ ಒಬ್ಬ ರಾಕ್ಷಸ ಮತ್ತು ಭಕ್ತನ ನಡುವಿನ ವ್ಯತ್ಯಾಸ. ಕೃಷ್ಣ, ಕೇಶವನು ಈ ಧೂರ್ತರನ್ನು ಹೇಗೆ ಮೋಸ ಮಾಡುತ್ತಿದ್ದಾನೆ ಎಂಬುದನ್ನು ಭಕ್ತನು ನೋಡುತ್ತಾನೆ. ಭಕ್ತನು ಅರ್ಥಮಾಡಿಕೊಳ್ಳಬಲ್ಲ. ಆದರೆ ರಾಕ್ಷಸರು, "ಓ, ನಾವು ಒಳ್ಳೆಯ ನಾಯಕನನ್ನು ಪಡೆದಿದ್ದೇವೆ" ಎಂದು ತಿಳಿಯುತ್ತಾರೆ. "ಅವನು ದೇವರನ್ನು ನಂಬುವುದಿಲ್ಲ." (ನಗು) ನೋಡಿದಿರಾ? ಸಮ್ಮೊಹಾಯ ಸುರ ದ್ವಿಶಾಂ (ಶ್ರೀ. ಭಾ 1.3.24). ನಿಖರವಾದ ಸಂಸ್ಕೃತ ಪದವನ್ನು ಶ್ರೀಮದ್-ಭಾಗವತದಲ್ಲಿ ಹೇಳಲಾಗಿದೆ. ನೀವು ನೋಡಿದ್ದೀರಿ, ಓದಿದ್ದೀರಿ: ಸಮ್ಮೊಹಾಯ ಎಂದರೆ ದಿಗ್ಭ್ರಮೆಗೊಳಿಸುವ ಸುರ ದ್ವಿಶಾಂ. ಸುರ ದ್ವಿಶಾಂ ಎಂದರೆ ವೈಷ್ಣವರ ಬಗ್ಗೆ ಅಸೂಯೆ ಹೊಂದಿದವರು. ನಾಸ್ತಿಕರು, ರಾಕ್ಷಸರು, ಯಾವಾಗಲೂ ಭಕ್ತರ ಬಗ್ಗೆ ಅಸುಯೆಯನ್ನು ಹೊಂದಿರುತ್ತಾರೆ. ಇದು ಪ್ರಕೃತಿಯ ನಿಯಮ. ನೀವು ಈ ತಂದೆಯನ್ನು ನೋಡಿ. ತಂದೆ ಐದು ವರ್ಷದ ಮಗುವಿನ ವೈರಿಯಗಿದ್ದಾನೆ. ಮಗುವಿನ ತಪ್ಪೇನಿದೆ? ಅವನು ಒಬ್ಬ ಭಕ್ತನಾಗಿದ್ದ. ಅಷ್ಟೇ. ಮುಗ್ಧ ಹುಡುಗ. ಸರಳವಾಗಿ ಹೇಳುವುದಾದರೆ, ಹರೇ ಕೃಷ್ಣ ಮಂತ್ರವನ್ನು ಪಠಿಸುವುದರಲ್ಲಿ ಆಕರ್ಷಣೆಯನ್ನು ಹೊಂದಿದ್ದನು. ತಂದೆ ಸ್ವತಃ, ಮಗುವಿನ ಶತ್ರುವಾದನು: "ಈ ಹುಡುಗನನ್ನು ಸಾಯಿಸಿ". ಆದ್ದರಿಂದ ಒಬ್ಬ ತಂದೆ ಶತ್ರು ಆಗಬಹುದಾದರೆ, ಇತರರ ಬಗ್ಗೆ ಹೇಳುವುದೇನಿದೆ? ಅದ್ದರಿಂದ ನೀವು ಭಕ್ತರಾದ ಕೂಡಲೇ ಇಡೀ ಪ್ರಪಂಚವೇ ನಿಮ್ಮ ಶತ್ರುವಾಗಬಹುದೆಂದು ತಿಳಿಯಬೇಕು. ಅಷ್ಟೇ. ಆದರೆ ನೀವು ಅವರೊಂದಿಗೆ ವ್ಯವಹರಿಸಬೇಕು, ಏಕೆಂದರೆ ನೀವು ಭಗವಂತನ ಸೇವಕರಾಗಿ ನೇಮಿಸಲ್ಪಟ್ಟಿದ್ದೀರಿ. ಅವರಿಗೆ ಜ್ಞಾನೋದಯವನ್ನು ಉಂಟುಮಾಡುವುದು ನಿಮ್ಮ ಮೂಲ ಉದ್ದೇಶ. ನಿತ್ಯಾನಂದ ಪ್ರಭುಗಳಂತೆ, ಅವರು ಗಾಯಗೊಂಡಿದ್ದರು, ಆದರೂ ಅವರು ಜಗಾಯಿ -ಮಾಧಾಯಿಯನ್ನು ಉದ್ಧರಿಸಿದರು. ಅದು ನಿಮ್ಮ ತತ್ವವಾಗಿರಬೇಕು. ಕೆಲವೊಮ್ಮೆ ನಾವು ಮೋಸ ಮಾಡಬೇಕಾಗುತ್ತದೆ, ಕೆಲವೊಮ್ಮೆ ನಾವು ಗಾಯಗೊಳ್ಳಬೇಕಾಗುತ್ತದೆ - ಹಲವು ವಿಷಯಗಳು. ಜನರು ಹೇಗೆ ಕೃಷ್ಣ ಪ್ರಜ್ಞಾವಂತರಾಗಬಹುದು ಎನ್ನುವುದೊಂದೆ ಯೋಜನೆಯಾಗಿರಬೇಕು. ಅದೇ ನಮ್ಮ ಉದ್ದೇಶ. ಯಾವುದಾದರೂ ರೀತಿಯಲ್ಲಿ ಈ ಧೂರ್ತರು ಕೃಷ್ಣ ಪ್ರಜ್ಞಾವಂತರಾಗಬೇಕು, ಈ ರೀತಿಯಾಗಿ ಅಥವಾ ಆ ರೀತಿಯಾಗಿ.